'KGF' ಯಶಸ್ಸಿನ ಹಿಂದೆ ಇರುವುದು ಮೂವರು 'ಮಹಿಳೆ'ಯರಂತೆ! 'ಸ್ತ್ರೀ ಶಕ್ತಿ' ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಡಿಸೆಂಬರ್ 21, 2018ರಲ್ಲಿ ಬಂದ ಕೆಜಿಎಫ್‌ ಮೊದಲ ಭಾಗ ಸಾಕಷ್ಟು ಹೆಸರು ಮಾಡಿತ್ತು. ಇದೀಗ ಏಪ್ರಿಲ್ 14ರಂದು ಕೆಜಿಎಫ್‌ ಚಾಪ್ಟರ್ 2 ರಿಲೀಸ್ ಆಗಲಿದೆ. ಇದರ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿದ್ದು, ಗಲ್ಲಾಪೆಟ್ಟಿಗೆ ದೋಚಲಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಇತಿಹಾಸ ಸೃಷ್ಟಿಸಿದ ಈ ಕೆಜಿಎಫ್ ಹಿಂದೆ ಮೂವರು ಮಹಿಳೆಯರು ಇದ್ದಾರಂತೆ.

ಕೆಜಿಎಫ್ ಸಿನಿಮಾ ನಿರ್ಮಾಣಕ್ಕೆ ಕಾರಣರಾದವರು

ಕೆಜಿಎಫ್ ಸಿನಿಮಾ ನಿರ್ಮಾಣಕ್ಕೆ ಕಾರಣರಾದವರು

  • Share this:
ಸದ್ಯ ಎಲ್ಲೆಡೆ ‘ಕೆಜಿಎಫ್‌ ಚಾಪ್ಟರ್ 2’ (KGF Chapter 2) ಸಿನಿಮಾದ ಮಾತು, ‘ರಾಕಿ ಭಾಯ್‌’ದೇ (Rocky Bhai) ಕಥೆ! ಇದೇ ಏಪ್ರಿಲ್  14ರಂದು ತೆರೆಗೆ ಅಪ್ಪಳಿಸಲು ಕೆಜಿಎಫ್‌ ಚಾಪ್ಟರ್ 2 ಸಜ್ಜಾಗಿದೆ. ಈಗಾಗಲೇ ಟೀಸರ್ (Teaser), ಲಿರಿಕಲ್ ಸಾಂಗ್ (Lyrical Song) ಹಾಗೂ ಟ್ರೇಲರ್ (Trailor) ಮೂಲಕ ಸಾಕಷ್ಟು ಕ್ಯೂರಿಯಾಸಿಟಿ (Curiosity) ಕ್ರಿಯೇಟ್ (Create) ಮಾಡಿದೆ. ಇತ್ತೀಚಿಗಷ್ಟೇ ರಿಲೀಸ್ ಆದ ಮೊದಲ ಲಿರಿಕಲ್ ಸಾಂಗ್ ‘ತೂಫಾನ್’ ಯೂಟ್ಯೂಬ್ (YouTube) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಧೂಳೆಬ್ಬಿಸುತ್ತಾ ಇದೆ. ಮತ್ತೊಂದೆಡೆ ಟ್ರೇಲರ್ ರಿಲೀಸ್ ಆಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಸಿನಿಮಾ ರಿಲೀಸ್‌ಗಾಗಿ ಚಾತಕಪಕ್ಷಿಯಂತೇ ಕಾಯುತ್ತಿದ್ದಾರೆ. ಇಷ್ಟೆಲ್ಲಾ ಹವಾ ಕ್ರಿಯೇಟ್ ಮಾಡಿದ ‘ಕೆಜಿಎಫ್‌’ ಹಾಗೂ ‘ಕೆಜಿಎಫ್‌ ಚಾಪ್ಟರ್ 2’ ಸಿನಿಮಾ ನಿರ್ಮಾಣಕ್ಕೆ ಮೂಲ ಕಾರಣ ಮೂವರು ಮಹಿಳೆಯರು ಅಂದ್ರೆ ನೀವು ನಂಬಲೇ ಬೇಕು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆಯೂ ಮಹಿಳೆ ಇರುತ್ತಾಳಂತೆ. ಆದ್ರೆ ಈ ಕೆಜಿಎಫ್ ಯಶಸ್ಸಿನ ಹಿಂದೆ ಮೂವರು ಮಹಿಳೆಯರು ಇದ್ದಾರಂತೆ. ಈ ಬಗ್ಗೆ ನಿರ್ಮಾಪಕ (Producer) ವಿಜಯ್ ಕಿರಗಂದೂರು (Vijay Kiragandur) ಅವರೇ ಇಂಟ್ರೆಸ್ಟಿಂಗ್ ಸ್ಟೋರಿ ಹೇಳಿದ್ದಾರೆ.

 ಕೆಜಿಎಫ್‌ ಯಶಸ್ಸಿನ ಹಿಂದೆ ಮೂವರು ಮಹಿಳೆಯರು

ಡಿಸೆಂಬರ್ 21, 2018ನಲ್ಲಿ ಬಂದ ಕೆಜಿಎಫ್‌ ಮೊದಲ ಭಾಗ ಸಾಕಷ್ಟು ಹೆಸರು ಮಾಡಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಆದ ಈ ಸಿನಿಮಾ ವಿಶ್ವದಾದ್ಯಂತ ಹವಾ ಕ್ರಿಯೇಟ್ ಮಾಡಿತ್ತು. ಇಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಡಬ್ ಆಗಿ ಜನಪ್ರಿಯವಾಗಿತ್ತು. ಇದೀಗ ಏಪ್ರಿಲ್ 14ರಂದು ಕೆಜಿಎಫ್‌ ಚಾಪ್ಟರ್ 2 ರಿಲೀಸ್ ಆಗಲಿದೆ. ಇದರ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿದ್ದು, ಗಲ್ಲಾಪೆಟ್ಟಿಗೆ ದೋಚಲಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಇತಿಹಾಸ ಸೃಷ್ಟಿಸಿದ ಈ ಕೆಜಿಎಫ್ ಹಿಂದೆ ಮೂವರು ಮಹಿಳೆಯರು ಇದ್ದಾರಂತೆ.

 ಸ್ತ್ರೀ ಶಕ್ತಿ ಬಗ್ಗೆ ಹೇಳಿದ ನಿರ್ಮಾಪಕ ವಿಜಯ್ ಕಿರಗಂದೂರು

ಕೆಜಿಎಫ್‌ ಯಶಸ್ಸಿನ ಹಿಂದೆ ಮೂವರು ಮಹಿಳೆಯರು ಇದ್ದಾರೆ ಅಂತ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ. ಅವರು ಯಾರು ಅಂದರೆ ನಟ, ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿಯೂ ಆಗಿರುವ ನಟಿ ರಾಧಿಕಾ ಪಂಡಿತ್, ನಿರ್ದೇಶಕ ಪ್ರಶಾಂತ್ ನೀಲ್ ಅವರ ಹೆಂಡತಿ ಲಿಖಿತಾ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಪತ್ನಿ ಅಂತ ಖುದ್ದು ಅವರೇ ಹೇಳಿದ್ದಾರೆ.

ಇದನ್ನೂ ಓದಿ: Rocking Star Yash ಫ್ಯಾನ್ಸ್‌ಗೆ KGF 2 ಚಿತ್ರತಂಡದಿಂದ ಗುಡ್ ನ್ಯೂಸ್! ಭರ್ಜರಿ ಆಫರ್ ಪಡೆಯೋಕೆ ಹೀಗೆ ಮಾಡಿ

 ಮೂವರು ಮಹಿಳೆಯರಿಗೆ ಯಶಸ್ಸಿನ ಕ್ರೆಡಿಟ್

“ಪ್ರಶಾಂತ್ ನೀಲ್ ಪತ್ನಿ ಲಿಖಿತ, ಯಶ್ ಪತ್ನಿ ರಾಧಿಕಾ ಪಂಡಿತ್ ಮತ್ತು ನನ್ನ ಪತ್ನಿ ಸಹಕಾರದಿಂದಾಗಿ ಎಂಟು ವರ್ಷಗಳ ಕಾಲ ಒಂದೇ ಸಿನಿಮಾದ ಬಗ್ಗೆ ಅಷ್ಟೂ ಶಕ್ತಿಯನ್ನು ವ್ಯಹಿಸಿದ್ದೇವೆ. ನಾವು ಕೂಲ್ ಆಗಿ ಕೆಲಸ ಮಾಡಿದ್ದೇವೆ ಎಂದರೆ, ಅದರ ಅಷ್ಟೂ ಕ್ರೆಡಿಟ್ಸ್ ಅವರಿಗೆ ಸಲ್ಲಬೇಕು’ ಎಂದಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್.

ಏಪ್ರಿಲ್ 14ಕ್ಕೆ ಕೆಜಿಎಫ್‌ ಚಾಪ್ಟರ್ 2 ರಿಲೀಸ್

ಕೆಜಿಎಫ್‌ ಚಾಪ್ಟರ್ 2 ಸಿನಿಮಾ ರೆಡಿಯಾಗಿದ್ದು, ಇದೇ ಏಪ್ರಿಲ್ 14ರಂದು ತೆರೆಗೆ ಅಪ್ಪಳಿಸಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿದ್ದು, ಭಾರತ ಸೇರಿದಂತೆ ಒಟ್ಟು 70ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಆಗಲಿದ್ಯಂತೆ.

ಇದನ್ನೂ ಓದಿ: KGF vs Beast: ಸ್ಟಾರ್​​​ ವಾರ್​ ಯಾಕೆ, ನಾವೂ ಒಂದೇ ಇಲ್ಲಿ ಎಂಬ ಸಂದೇಶ! ಕೆಜಿಎಫ್​ 2 vs ಬೀಸ್ಟ್​​ ಗುದ್ದಾಟ ಅಂತ್ಯ

 ದಾಖಲೆಯ ಮೊತ್ತಕ್ಕೆ ಟಿವಿ ರೈಟ್ಸ್ ಸೇಲ್

ಟ್ರೇಡ್ ಮೂಲಗಳ ಪ್ರಕಾರ ತೆಲುಗಿನಲ್ಲಿ ಚಿತ್ರದ ರೈಟ್ಸ್ 70 ಕೋಟಿ ರೂ.ಗೆ ಸೇಲ್​ ಆಗಿದೆ ತೆಲುಗಿನಲ್ಲಿ 70 ಕೋಟಿ ಗಳಿಸಿದ್ದು ಸಣ್ಣ ವಿಷಯವೇನಲ್ಲ. ದೊಡ್ಡ ದೊಡ್ಡ ನಾಯಕರ ಸಿನಿಮಾಗಳಿಗೆ ಆ ಮಟ್ಟದಲ್ಲಿ ಸೇಲ್​ ಆಗುವುದಿಲ್ಲ. ಟಾಲಿವುಡ್ ನಲ್ಲಿ ಎನ್ ಟಿಆರ್, ರಾಮ್ ಚರಣ್ ರಂತಹ ಹೀರೋಗಳು ಈಗ ಈ ಮಟ್ಟದ ಬಿಸಿನೆಸ್ ಮಾಡುತ್ತಿದ್ದಾರೆ. ಇದೀಗ ಕೆಜಿಎಫ್​​ 2ಗೆ ಈ ಬೆಲೆ ಬಂದಿದೆ.
Published by:Annappa Achari
First published: