Beast: ಸಿನಿಮಾ ಹಿಟ್​ ಅಂತ ಖರೀದಿ ಮಾಡಿಬಿಟ್ರು, ಈಗ ವರ್ಕೌಟ್​ ಆಗುತ್ತಾ ಅಂತ ಚಿಂತೆ ಮಾಡ್ತಿದ್ಯಂತೆ ನೆಟ್​ಫ್ಲಿಕ್ಸ್​!

ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಬೀಸ್ಟ್ ಚಿತ್ರವು ತೆರೆಕಂಡಿದ್ದು, ಮೊದಲ ಬಾರಿಗೆ ಪೂಜಾ ಹೆಗ್ಡೆ ವಿಜಯ್ ಜೊತೆ ನಟಿಸಿದ್ದಾರೆ. ಸೆಲ್ವರಾಘವನ್ ಮತ್ತು ಯೋಗಿ ಬಾಬು ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

ರಜನಿಕಾಂತ್​, ಸೂರ್ಯ, ವಿಜಯ್​

ರಜನಿಕಾಂತ್​, ಸೂರ್ಯ, ವಿಜಯ್​

  • Share this:
ಕಳೆದ ವರ್ಷದಿಂದ ಈ ಒಟಿಟಿ(Ott) ವೇದಿಕೆಗಳ ಆಧಾರಿತ ಮನರಂಜನೆ ಎಲ್ಲರ ಗಮನ ಸೆಳೆಯುತ್ತಿದೆ. ನೆಟ್‌ಫ್ಲಿಕ್ಸ್(Netflix), ಅಮೆಜಾನ್ ಪ್ರೈಮ್(Amazon Prime), ಡಿಸ್ನಿ+ ಹಾಟ್‌ಸ್ಟಾರ್(Disney Plus Hot star), ZEE5 ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ವೀಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೆಲವೊಂದು ಸಿನಿಮಾಗಳು ಥಿಯೇಟರ್ನಲ್ಲಿ ಕಮಾಲ್ ಮಾಡದಿದ್ದರೂ ಒಟಿಟಿ ವೇದಿಕೆಯಲ್ಲಿ ಹಿಟ್ ಆಗುತ್ತಿವೆ. ಒಟಿಟಿ ವೇದಿಕೆಯ ಜನಪ್ರಿಯತೆಯ ಆಧಾರದ ಮೇಲೆ ಕೆಲವು ಸಿನಿಮಾ ನಿರ್ಮಾಣ ಸಂಸ್ಥೆಗಳು ಒಟಿಟಿಯಲ್ಲೂ ಸ್ಟ್ರೀಮ್(OTT Stream) ಮಾಡುವ ರೀತಿಯಲ್ಲಿ ಒಪ್ಪಂದ ಮಾಡಿಕೊಂಡಿರುತ್ತಾರೆ. ಇದಕ್ಕೆ ತಮಿಳುನಾಡಿ(Tamil Nadu)ನ ಸನ್ ಪಿಕ್ಚರ್ಸ್(Sun Pictures) ಹೊರತಾಗಿಲ್ಲ, ಇವರು ಸನ್ ನೆಕ್ಸ್ಟ್‌(Sun NXT)ನಲ್ಲಿ ಬಿಡುಗಡೆಯಾಗುವ ಎಲ್ಲಾ ಚಲನಚಿತ್ರಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿಯೂ ಸಹ ಸ್ಟ್ರೀಮ್ ಮಾಡುವ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

ನೆಟ್‌ಫ್ಲಿಕ್ಸ್ನ ಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆಯಲ್ಲಿ ನಿರ್ಮಾಣವಾದ ಮೂರು ಸಿನಿಮಾಗಳು ಶೀಘ್ರವೇ ಓಟಿಟಿ ಪ್ರವೇಶಸಲಿವೆ ಎನ್ನಲಾಗಿದೆ. ಸನ್ ಪಿಕ್ಚರ್ಸ್ ಚೆನ್ನೈ ಮೂಲದ ಭಾರತೀಯ ಚಲನಚಿತ್ರ ವಿತರಣೆ ಮತ್ತು ನಿರ್ಮಾಣ ಸ್ಟುಡಿಯೋ ಆಗಿದ್ದು ಇದು ಸನ್ ಗ್ರೂಪ್ನ ಭಾಗವಾದ ಸನ್ ಟಿವಿ ನೆಟ್ವರ್ಕ್ನ ಘಟಕವಾಗಿದೆ. ಈ ಸಂಸ್ಥೆಯು ಪೆಟ್ಟಾ, ಸರ್ಕಾರ್, ಕಾಂಚನಾ 3 ಗಳಂತಹ ಸಿನಿಮಾಗಳಿಗೆ ಹೂಡಿಕೆ ಮಾಡುವುದರ ಜೊತೆಗೆ ಅಯಾನ್, ಸುರ, ಸಿಂಗಮ್ ವೇದಿ ಸೇರಿ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳಿಗೆ ವಿತರಕರಾಗಿದ್ದಾರೆ.

ಸನ್​ ನೆಕ್ಸ್ಟ್​​ನಲ್ಲಿ ರಿಲೀಸ್ ಆದ ಸಿನಿಮಾಗಳು ನೆಟ್​ಫ್ಲಿಕ್ಸ್​ನಲ್ಲೂ ಲಭ್ಯ!

ಪ್ರಸಿದ್ಧ ಸನ್ ನೆಕ್ಸ್ಟ್ OTT ಅನ್ನು ಸಹ ಹೊಂದಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಿಂದ ಈ ವೇದಿಕೆಯಲ್ಲಿ ತಮ್ಮ ಎಲ್ಲಾ ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಸನ್ ನೆಕ್ಸ್ಟ್‌ನಲ್ಲಿ ಬಿಡುಗಡೆಯಾಗುವ ಎಲ್ಲಾ ಚಲನಚಿತ್ರಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿಯೂ ಸಹ ಸ್ಟ್ರೀಮ್ ಮಾಡುವ ರೀತಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ.

ಒಟಿಟಿಯಲ್ಲಿ ಕಮಾಲ್​ ಮಾಡದ ಅಣ್ಣಾತೈ ಸಿನಿಮಾ!

ಇತ್ತೀಚೆಗೆ ಸನ್ ಪಿಕ್ಚರ್ಸ್ ಅಡಿಯಲ್ಲಿ ತೆರೆಕಂಡ ರಜಿಕಾಂತ್ ಅವರ ಅಣ್ಣಾತೈ, ಸೂರ್ಯ ಅವರ ಇಟಿ ಸಿನಿಮಾ ಸನ್ ನೆಕ್ಸ್ಟ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿವೆ ಮತ್ತು ಮೊನ್ನೆ ತಾನೇ ಬಿಡುಗಡೆಯಾದ ವಿಜಯ್ ಅಭಿನಯದ ಬೀಸ್ಟ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುವ ಮುಂದಿನ ಚಲನಚಿತ್ರವಾಗಿದೆ. ರಜನಿಕಾಂತ್ ಅಭಿನಯದ ಈ ಅಣ್ಣಾತೈ ಆಕ್ಷನ್ ಚಿತ್ರವನ್ನು ಶಿವ ನಿರ್ದೇಶಿಸಿದ್ದು, ರಜನಿಕಾಂತ್ ಜೊತೆ ನಟಿಯರಾದ ನಯನತಾರಾ, ಮೀನಾ, ಖುಷ್ಬೂ, ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಕನ್ನಡದಲ್ಲೇ ಕೆಜಿಎಫ್​ 2 ನೋಡಿದ `ತಲೈವಾ’! ರಾಕಿ ಆರ್ಭಟ ಕಂಡು ಹಿಂಗಂದ್ರು ರಜನಿಕಾಂತ್​

ಮಕಾಡೆ ಮಲಗಿದ ಸೂರ್ಯ ನಟನೆಯ ಇಟಿ ಸಿನಿಮಾ!

ಇನ್ನೂ ಪಾಂಡಿರಾಜ್ ನಿರ್ದೇಶನದ ಸೂರ್ಯ ಅಭಿನಯದ ಇಟಿ ಚಿತ್ರವು ಕಮರ್ಷಿಯಲ್ ಎಂಟರ್ಟೈನರ್ ಆಗಿದೆ, ಚಿತ್ರದಲ್ಲಿ ಪ್ರಿಯಾಂಕಾ ಅರುಲ್ ಮೋಹನ್, ವಿನಯ್ ರೈ, ಸತ್ಯರಾಜ್, ರಾಜಕಿರಣ್, ಮಧುಸೂಧನ್ ರಾವ್, ಜಯಪ್ರಕಾಶ್ ಮತ್ತು ಹರೀಶ್ ಪೆರಾಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೀಸ್ಟ್​ ಸಿನಿಮಾ ಖರೀದಿಸಿದರುವ ನೆಟ್​ಫ್ಲಿಕ್ಸ್​!

ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಬೀಸ್ಟ್ ಚಿತ್ರವು ತೆರೆಕಂಡಿದ್ದು, ಮೊದಲ ಬಾರಿಗೆ ಪೂಜಾ ಹೆಗ್ಡೆ ವಿಜಯ್ ಜೊತೆ ನಟಿಸಿದ್ದಾರೆ. ಸೆಲ್ವರಾಘವನ್ ಮತ್ತು ಯೋಗಿ ಬಾಬು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನ ಕಲಾನಿಧಿ ಮಾರನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಟಚ್​ ಮಾಡೋದಿರ್ಲಿ, ಹತ್ತಿರ ಬರಕ್ಕೂ ಆಗಲ್ಲ! 2ನೇ ದಿನದ ಕಲೆಕ್ಷನ್​ ಕಂಡು ಬೆಚ್ಚಿಬಿದ್ದ ಸಿನಿ ಇಂಡಸ್ಟ್ರಿ

ಕೆಜಿಎಫ್​ 2 ಮುಂದೆ ಬಂದು ಬೀಸ್ಟ್​​ ಊಸ್ಟ್​!

ನೆಟ್‌ಫ್ಲಿಕ್ಸ್ ಈ ಮೂರು ಸ್ಟಾರ್ ನಾಯಕರ ಚಿತ್ರಗಳ ಮೇಲೆ ಹೆಚ್ಚು ಖರ್ಚು ಮಾಡಿದ್ದು, ಭಾರಿ ಯಶಸ್ಸನ್ನು ನೀರಿಕ್ಷಿಸಿತ್ತು. ಆದರೆ ಅಣ್ಣಾತ್ತೆ, ಇಟಿ ಸಿನಿಮಾಗಳು ಥಿಯೇಟರ್ನಲ್ಲಿ ಮೆಗಾ ಫ್ಲಾಪ್ ಆಗಿದ್ದು, ನೆಟ್‌ಫ್ಲಿಕ್ಸ್​​ನಲ್ಲೂ ಕಮಾಲ್ ಮಾಡಿಲ್ಲ. ಇನ್ನೂ ಬೀಸ್ಟ್ ಏಪ್ರಿಲ್ 13ಕ್ಕೆ ಬಿಡುಗಡೆಯಾದ್ದರಿಂದ ವಾಣಿಜ್ಯ ಭವಿಷ್ಯವು ನಂತರ ತಿಳಿಯುತ್ತದೆ, ಆದರೆ ಕೆಜಿಎಫ್ ಅಬ್ಬರದಲ್ಲಿ ಬೀಸ್ಟ್ ಕಣ್ಮರೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: