ಸ್ಯಾಂಡಲ್ವುಡ್ ನಲ್ಲಿ ವರ್ಷದ ಕಟ್ಟ ಕಡೆಯ ಮೂರು ಚಿತ್ರ ರಿಲೀಸ್ ಆಗುತ್ತಿವೆ. ಒಂದೊಂದು ಸಿನಿಮಾನೂ ಒಂದೊಂದು ಜಾನರ್ನಲ್ಲಿ ಇವೆ. ಜಮಾಲಿಗುಡ್ಡ (Once Upon a Time in Jamaligudda) ಸಿನಿಮಾ ಭಾವನಾತ್ಮಕ ಕಥೆ ಹೇಳುತ್ತಿದೆ. ಪದವಿ ಪೂರ್ವ (Padavi Poorva Kannada Movie) ಹುಡುಗರು ತಮ್ಮ ಟೀನೇಜ್ ಕಥೆ ಹೇಳೋಕೆ ಸಜ್ಜಾಗಿದ್ದಾರೆ. ಇದರ ಹೊರತಾಗಿ ಮೇಡ್ ಇನ್ ಬೆಂಗಳೂರು (Made in Bengaluru Movie) ಸಿನಿಮಾ ವಿಶೇಷ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಸ್ಟಾರ್ಟ್ ಅಪ್ ಕಂಪನಿಯ ಕಥೆ ಇದೆ. ಈ ಎಲ್ಲ ಕಥೆಗಳ ಸಿನಿಮಾ (Kannada Movie Release) ಇದೇ 30 ರಂದು ರಿಲೀಸ್ ಆಗುತ್ತಿವೆ. ಹೊಸ ರೀತಿಯ ಈ ಚಿತ್ರಗಳ ಬಗೆಗಿನ ಇನ್ನಷ್ಟು ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.
ಡಾಲಿಯ ಜಮಾಲಿಗುಡ್ಡದಲ್ಲಿ ಬದುಕಿನ ಅಸಲಿ ಕಥೆ
ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ ಜಮಾಲಿಗುಡ್ಡ ಸಿನಿಮಾ ವಿಶೇಷವಾಗಿಯೇ ಇದೆ. ಈ ಚಿತ್ರದಲ್ಲಿ ಹತ್ತು ಹಲವು ಪಾತ್ರಗಳೂ ಇವೆ. ಒಂದೊಂದು ಪಾತ್ರವೂ ಬದುಕಿನ ಅಸಲಿ ಸತ್ಯವನ್ನ ಬಿಂಬಿಸೋ ಹಾಗೆ ಕಾಣುತ್ತಿವೆ. ಪ್ರತಿ ಪಾತ್ರಕ್ಕೂ ಒಂದೊಂದು ಕಥೆ ಇದೆ ಅನಿಸುತ್ತಿದೆ.
ಡಾಲಿ ಧನಂಜಯ್ ಅಭಿನಯದ ಈ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶನ ಮಾಡಿದ್ದಾರೆ. ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಚಿತ್ರದ ಹಾಡುಗಳಿಗೆ ಸಂಗೀತ ಕೊಟ್ಟಿದ್ದಾರೆ. ಅನೂಪ್ ಸೀಳಿನ್ ಸಿನಿಮಾದ ಹಿನ್ನೆಲೆ ಸಂಗೀತದ ಮೇಲೆ ಕೆಲಸ ಮಾಡಿದ್ದಾರೆ.
ಜಮಾಲಿಗುಡ್ಡ ಚಿತ್ರಕ್ಕೆ ಕುಶಾಲ್ ಗೌಡ ನಿರ್ದೇಶನ
ಜಮಾಲಿಗುಡ್ಡ ಸಿನಿಮಾದ ಹಿಂದೆ ಒಳ್ಳೆ ಟೀಮ್ ಇದೆ. ಒಳ್ಳೆ ಪಾತ್ರಗಳನ್ನೇ ಡೈರೆಕ್ಟರ್ ಕುಶಾಲ್ ಗೌಡ ಸೃಷ್ಠಿ ಮಾಡಿದ್ದಾರೆ. ಅದರ ಫಲವೇ ಕಾಲ್ಪನಿಕ ಜಮಾಲಿಗುಡ್ಡ ಚಿತ್ರದಲ್ಲಿ ಹಲವಾರು ಪಾತ್ರಗಳು ಜೀವ ಪಡೆದಿವೆ. ಈ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಇದೆ.
ಪದವಿ ಪೂರ್ವ ಸಿನಿಮಾ ಇದೇ ಶುಕ್ರವಾರ ರಿಲೀಸ್
ಕನ್ನಡದಲ್ಲಿ ಕಾಲೇಜ್ ಸಿನಿಮಾಗಳು ಬರ್ತಾನೆ ಇವೆ. ಹಾಗೆ ಬಂದು ಹೀಗೆ ಹೋಗೋದು ಇದೆ. ಆದರೆ ಪದವಿ ಪೂರ್ವ ಚಿತ್ರ ಗಟ್ಟಿಯಾಗಿ ಥಿಯೇಟರ್ನಲ್ಲಿ ನಿಲ್ಲೋ ಹಾಗೆ ಕಾಣುತ್ತಿದೆ. ಈ ಚಿತ್ರದ ಮೂಲಕ ಪೃಥ್ವಿ ಶಾಮನೂರು ಮತ್ತು ಅಂಜಲಿ ಅನೀಶ್ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ.
ಪದವಿ ಪೂರ್ವ ಚಿತ್ರದಲ್ಲಿ ಹದಿಹರೆಯದ ಪ್ರೀತಿಯ ತಳಮಳಗಳೂ ಇವೆ. ಅಪ್ಪ-ಮಗನ ಬಾಂಧವ್ಯದ ಹೃದಯ ಸ್ಪರ್ಶಿ ಕಥೆ ಕೂಡ ಇದೆ. ಇದರ ಹೊರತಾಗಿ ಪದವಿ ಪೂರ್ವ ಹುಡುಗರ ಇತರ ಚೇಷ್ಠೆಗಳನ್ನೂ ಇಲ್ಲಿ ಕಾಣಬಹುದು. ಅರ್ಜುನ್ ಜನ್ಯ ಈ ಚಿತ್ರದಲ್ಲೂ ಒಳ್ಳೆ ಹಾಡುಗಳನ್ನೆ ಕೊಟ್ಟಿದ್ದಾರೆ.
ಪದವಿ ಪೂರ್ವ ಚಿತ್ರಕ್ಕೆ ದುಡ್ಡು ಹಾಕಿದ ಯೋಗರಾಜ್ ಭಟ್
ಡೈರೆಕ್ಟರ್ ಯೋಗರಾಜ್ ಭಟ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರವಿ ಶಾಮನೂರು ಕೂಡ ಈ ವಿಷಯದಲ್ಲಿ ಸಾಥ್ ಕೊಟ್ಟಿದ್ದಾರೆ. ಯೋಗರಾಜ್ ಭಟ್ರ ಶಿಷ್ಯ ಹರಿಪ್ರಸಾದ್ ಜಯಣ್ಣ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ರಾಜ್ಯದೆಲ್ಲೆಡೆ ಈ ಚಿತ್ರವೂ ಇದೇ 30 ಕ್ಕೆ ರಿಲೀಸ್ ಆಗುತ್ತಿದೆ.
ಮೇಡ್ ಇನ್ ಬೆಂಗಳೂರು-ಇದು ಹೊಸ ರೀತಿ ಸಿನಿಮಾ
ಕನ್ನಡದಲ್ಲಿ ಈ ಶುಕ್ರವಾರ ಇನ್ನೂ ಒಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದರಲ್ಲಿ ವಿಶೇಷವಾದ ಕಥೇನೆ ಇದೆ. ಇಲ್ಲಿವರೆಗೂ ಈ ವಿಷಯದ ಮೇಲೆ ಸಿನಿಮಾ ಬಂದಿಲ್ಲ ಅಂತಲೇ ಹೇಳಬಹುದು. ನಿಜ, ಸ್ಟಾರ್ಟ್ ಅಪ್ಗಳ ಮೇಲೆ ಸಿನಿಮಾ ಬಂದಿರಲಿಲ್ಲ. ಆದರೆ ಮೇಡ್ ಇನ್ ಬೆಂಗಳೂರು ಚಿತ್ರದಲ್ಲಿ ಈ ವಿಷಯವನ್ನ ಹೇಳಲಾಗಿದೆ.
ಇದನ್ನೂ ಓದಿ: Big Boss Arun Sagar: ಕಲಾಕಾರ ಅರುಣ್ ಸಾಗರ್ ಮಕ್ಕಳಿಬ್ಬರೂ ಪ್ರತಿಭಾನ್ವಿತರೇ; ಮಗ, ಮಗಳು ಏನ್ಮಾಡ್ತಿದ್ದಾರೆ ನೋಡಿ
ಪ್ರದೀಪ್ ಕೆ. ಶಾಸ್ತ್ರಿ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಹೊಸಬರ ಈ ಚಿತ್ರಕ್ಕೆ ಹಿರಿಯ ಕಲಾವಿದರಾದ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್ ಕೂಡ ಸಾಥ್ ಕೊಟ್ಟಿದ್ದಾರೆ.
ಇಡೀ ಚಿತ್ರದಲ್ಲಿ ವಿಶೇಷ ಪಾತ್ರಗಳನ್ನೆ ಮಾಡಿದ್ದಾರೆ. ಪ್ರದೀಪ್ ಶಾಸ್ತ್ರಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಈ ವಾರ ಮೂರು ಸಿನಿಮಾ ರಿಲೀಸ್ ಆಗುತ್ತಿವೆ. ಚಿತ್ರ ಪ್ರೇಮಿಗಳಿಗೆ ಮೂರು ಮೂರು ಆಪ್ಷನ್ಸ್ ಕೂಡ ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ