ಸ್ಯಾಂಡಲ್ವುಡ್ (Sandalwood) ನಟ ಕಿಚ್ಚ ಸುದೀಪ್ಗೆ (Kichcha Sudeep) ಬೆದರಿಕೆ ಪತ್ರ ಬಂದ ಕೇಸ್ ಕುರಿತು ಹೊಸ ಅಪ್ಡೇಟ್ ಸಿಕ್ಕಿದೆ. ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದು, ಸಿಸಿಬಿಯಿಂದ (CCB) ತನಿಖೆ ನಡೆಯುತ್ತಿದೆ. ಕೇಸ್ ನಲ್ಲಿ ಈಗಾಗಲೇ ಸಾಕಷ್ಟು ಮಾಹಿತಿ ಸಿಕ್ಕಿದೆ. ಅದರಂತೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಎಲ್ಲಾ ವಿಚಾರಗಳನ್ನು ಹೇಳುತ್ತೇವೆ ಎಂದಿದ್ದಾರೆ. ಸ್ಯಾಂಡಲ್ ವುಡ್ (Sandalwood) ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಕೇಸ್ ವಿಚಾರವಾಗಿ ಕೇಸ್ ರಿಜಿಸ್ಟರ್ ಆಗಿ ಎರಡು ವಾರ ಆಗಿದ್ದರೂ ಕಿಡಿಗೇಡಿಗಳ ಸುಳಿವು ಸಿಕ್ಕಿಲ್ಲ.
ಪೋಸ್ಟ್ ಆಫೀಸಲ್ಲಿ ಲೆಟರ್ ಹಾಕಿದ ಇಬ್ಬರ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಸಿಸಿ ಕ್ಯಾಮರಾಗಳಿಗೆ ಕಾಣದಂತೆ ಪಕ್ಕಾ ಪ್ಲ್ಯಾನ್ ಮಾಡಿದ ಕಿಡಿಗೇಡಿಗಳು ಸುಳಿವು ಬಿಟ್ಟುಕೊಟ್ಟಿಲ್ಲ.
ಪೋಸ್ಟ್ ಆಫೀಸಿಗೆ ಬಂದ ಕಾರು ಪತ್ತೆ
ಆದರೆ ಪೋಸ್ಟ್ ಆಫೀಸಿಗೆ ಬಂದ ಕಾರನ್ನು ಸಿಸಿಬಿ ಪತ್ತೆ ಮಾಡಿದೆ. ಕಾರು ನಂಬರ್ ಜಾಡು ಹಿಡಿದು ಸ್ವಿಫ್ಟ್ ಕಾರು ಚಾಲಕನ ವಿಚಾರಣೆಯನ್ನೂ ಮಾಡಲಾಗಿದೆ. ವಿಚಾರಣೆ ವೇಳೆ ಕಾರಿನಲ್ಲಿದ್ದದ್ದು ನಕಲಿ ನಂಬರ್ ಎನ್ನುವುದು ರಿವೀಲ್ ಆಗಿದೆ.
ನಕಲಿ ನಂಬರ್ ಪ್ಲೇಟ್
ನಕಲಿ ನಂಬರ್ ಪ್ಲೇಟ್ ಇರೋ ಕಾರಿನಲ್ಲಿ ಬಂದು ಲೆಟರ್ ಹಾಕಿರೋ ಆ ಇಬ್ಬರ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ. ಕೆಲಸ ಬಿಟ್ಟಿದ್ದ ಸುದೀಪ್ ಕಾರು ಚಾಲಕನ ತೀವ್ರ ವಿಚಾರಣೆ ಮಾಡಲಾಗಿದೆ. ಎರಡು ಬಾರಿ ನೊಟೀಸ್ ನೀಡಿ ವಿಚಾರಣೆ ಮಾಡಿದ ಸಿಸಿಬಿ ಟೀಂ ಅವರಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದೆ.
ಈ ವೇಳೆ ಕೃತ್ಯದಲ್ಲಿ ಆತನ ಭಾಗಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆತನ ಮೊಬೈಲ್ ಫೋನ್ ಕೂಡ ಪರಿಶೀಲನೆ ಮಾಡಲಾಗಿದ್ದು ಯಾವುದೇ ಸುಳಿವು ಕೂಡಾ ಸಿಕ್ಕಿಲ್ಲ. ಮೂರು ವರ್ಷಗಳ ಹಿಂದೆಯೇ ಕೆಲಸ ಬಿಟ್ಟಿದ್ದಾಗಿ ಕಾರು ಚಾಲಕ ಹೇಳಿಕೆ ಕೂಡಾ ಪಡೆಯಲಾಗಿದೆ. ಇದಾದ ಬಳಿಕ ನನಗೂ ಸುದೀಪ್ ಗೂ ಯಾವುದೇ ಸಂಪರ್ಕ ಇಲ್ಲ ಎಂದು ಚಾಲಕ ಹೇಳಿದ್ದಾನೆ.
ಹಾಗಿದ್ದರೆ ಕಾರು ಚಾಲಕನ ಕಡೆ ಬೆರಳು ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಕೂಡಾ ಮೂಡಿದೆ. ದೂರು ಕೊಟ್ಟು ಕಮೀಷನರ್ ನ ಭೇಟಿ ಮಾಡಿದ್ದ ಜಾಕ್ ಮಂಜು ಸಿಸಿಬಿಗೆ ಸಹಕಾರ ಕೊಡುತ್ತಿಲ್ಲ ಎನ್ನಲಾಗಿದೆ. ಮಾಧ್ಯಮದ ಮುಂದೆ ಯಾರು ಅಂತ ಗೊತ್ತು ಅಂದೋರು ಇದುವರೆಗೂ ಹೆಸರನ್ನೂ ಹೇಳಿಲ್ಲ ಎನ್ನಲಾಗಿದೆ.
ಕೇವಲ ಕಾರು ಚಾಲಕ ಅನ್ನೋದು ಬಿಟ್ಟರೆ ಜಾಕ್‌ಮಂಜು ಬೇರೆ ಯಾವುದೇ ಮಾಹಿತಿಯನ್ನೂ ಕೊಟ್ಟಿಲ್ಲ. ನೊಟೀಸ್ ಮಾಡಿ ಜಾಕ್ ಮಂಜುನನ್ನು ವಿಚಾರಣೆ ಮಾಡಿರೋ ಸಿಸಿಬಿ ಇದರ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.
ಈ ವೇಳೆ ಕೇಸ್ಗೆ ಸಂಬಂಧಿಸಿದ ಯಾವುದೇ ಸಾಕ್ಷಿಗಳನ್ನು ಜಾಕ್ ಮಂಜು ನೀಡಿಲ್ಲ. ಸದ್ಯ ಏನೂ ಕ್ಲೂ ಇಲ್ಲದೆ ಸಿಸಿಬಿ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಚಾಲಕನಿಗೂ ಕೇಸ್ ಗೂ ಟೆಕ್ನಿಕಲ್ ಲಿಂಕ್ ಇಲ್ಲ ಎನ್ನುವುದು ಕೂಡಾ ತಿಳಿದುಬಂದಿದೆ. ಹೀಗಾಗಿ ಈ ಕೇಸ್ ಈಗ ಸಿಸಿಬಿ ಪೊಲೀಸರ ತಲೆ ಕೆಡಿಸಿದೆ.
ಕಾರು ಸಿಕ್ಕಿದೆ. ಆರೋಪಿಗಳ ಫೋಟೋ ಸಿಕ್ಕಿದೆ. ಆರೋಪಿಗಳ ಪತ್ತೆ ಮಾತ್ರ ಇನ್ನೂ ಆಗಿಲ್ಲ ಎನ್ನುತ್ತಿದ್ದಾರೆ ಸುದೀಪ್ ಅಭಿಮಾನಿಗಳು. ಸದ್ಯ ಇಬ್ಬರೂ ಆರೋಪಿಗಳ ಪತ್ತೆಗೆ ಸಿಸಿಬಿ ತನಿಖೆ ಮುಂದುವರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ