ಚಿತ್ರಮಂದಿರ (Theater) ಗಳಲ್ಲಿ ದಿನಕ್ಕೆ ನಾಲ್ಕರಿಂದ ಐದು ಶೋ (Show) ಇರುವುದನ್ನು ನೀವು ನೋಡಿದ್ದೀರಾ. ಮಾಲ್ (Mall) ಗಳಲ್ಲಿ, ಮಲ್ಟಿಪ್ಲೆಕ್ಸ್ (Multiplex) ಗಳಲ್ಲಿ ಸಾಮನ್ಯವಾಗಿ ಹೆಚ್ಚಿನ ಶೋ ಇರುವುದೂ ಗೊತ್ತಿದೆ. ಮಾರ್ನಿಂಗ್ ಶೋ (Morning Show) , ಮ್ಯಾಟನಿ ಶೋ (Matinee Show) , ಫಸ್ಟ್ ಶೋ (First Show) , ಸೆಕೆಂಡ್ ಶೋ (Second Show) ಇರೋದು ಕಾಮನ್. ಸ್ಟಾರ್ ನಟ (Star Hero) ರ ಸಿನಿಮಾ ರಿಲೀಸ್ ಆದರೆ, ಒಂದು ದಿನಕ್ಕೆ ಐದರಿಂದ ಆರು ಶೋ ಮಾಡುವುದು ಸಾಮನ್ಯ. ಆದರೆ, ಇಲ್ಲೊಂದು ಸಿನಿಮಾ ಈ ವಿಚಾರದಲ್ಲಿ ಹೊಸ ದಾಖಲೆ ಮಾಡಲು ಮುಂದಾಗಿದೆ. ಈ ಹಿಂದೆ ಯಾರೂ ಮಾಡಿರದ ದಾಖಲೆ (Record) ಮಾಡುವುದಕ್ಕೆ ಈ ಸಿನಿಮಾ ಸಜ್ಜಾಗಿ ನಿಂತಿದೆ. ಈ ಹಾಲಿವುಡ್ ಸಿನಿಮಾ (Hollywood Movie) ಒಂದು ನಾಲ್ಕು ದಿನಗಳ ಕಾಲ ಸತತ 96 ಗಂಟೆ ತಮ್ಮ ಸಿನಿಮಾವನ್ನು ಬ್ಯಾಕ್-ಟು-ಬ್ಯಾಕ್ (Back to Back) ಪ್ರದರ್ಶನ ಮಾಡಲಿದೆ. ಈ ವಿಚಾರ ಕೇಳಿ ಆಶ್ಚರ್ಯ ಆಯ್ತಾ? ಆಗಲೇ ಬೇಕು. ದಾಖಲೆಯನ್ನು ಮಾಡಲು ಹೊರಟಿರುವ ಸಿನಿಮಾ ಬೇರೆ ಯಾವುದು ಅಲ್ಲ 'ಥಾರ್ ಲವ್ ಎಂಡ್ ಥಂಡರ್' (Thor Love and Thunder) ಸಿನಿಮಾ.
ಜುಲೈ 7ರಂದು ರಿಲೀಸ್ ಆಗುತ್ತಿದೆ 'ಥಾರ್ ಲವ್ ಎಂಡ್ ಥಂಡರ್' !
ಭಾರತದಲ್ಲಿ ಎಲ್ಲ ಭಾಷೆಯ ಸಿನಿಮಾ(Movie)ಗಳನ್ನು ನೋಡುತ್ತಾರೆ. ಅದರಲ್ಲೂ ಕೆಲ ಹಾಲಿವುಡ್(Hollywood) ಸಿನಿಮಾಗಳಂತೂ ಭಾರತೀಯರು ಮನಸ್ಸಿನಲ್ಲಿ ಅಚ್ಚಳಿದೆ ಕೂತಿದೆ. ಅದರಲ್ಲಿ ಹೆಸರಾಂತ ಮಾರ್ವೆಲ್ಸ್(Marvels)ನ ಥಾರ್ ಸೀರೀಸ್ ಅಂತೂ ಎಲ್ಲರ ಅಚ್ಚು ಮೆಚ್ಚು. ಮಾರ್ವೆಲ್ಸ್ ಸಿನಿಮಾ ಯಾಕೆ ಎಲ್ಲರಿಗೂ ಇಷ್ಟವಾಗುತ್ತೆ ಅಂದರೆ, ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾ ಲಿಂಕ್ ಇರುತ್ತೆ. ಇದೀಗ ಸಾಕಷ್ಟು ಕುತೂಹಲ ಮೂಡಿಸಿದ್ದ ಥಾರ್ ಲವ್ ಎಂಡ್ ಥಂಡರ್ ಸಿನಿಮಾ ಜುಲೈ 7ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ನೋಡಿಲು ಭಾರತದಲ್ಲೂ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಸತತ 96 ಗಂಟೆ ಸಿನಿಮಾ ಪ್ರದರ್ಶನ!
'ಥಾರ್; ಲವ್ ಆಂಡ್ ಥಂಡರ್' ಸಿನಿಮಾವು ಬಿಡುಗಡೆ ಆದ ದಿನದಿಂದ ಮುಂದಿನ ನಾಲ್ಕು ದಿನಗಳ ವರೆಗೆ ಸತತವಾಗಿ 96 ಗಂಟೆಗಳ ಕಾಲ ಪ್ರದರ್ಶನ ಕಾಣಲಿದೆ. ಆದರೆ ಈ ಸರಣಿ ಪ್ರದರ್ಶನ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಇರಲಿದೆ. ಜುಲೈ 7 ರಿಂದ ಜುಲೈ 10 ರವರೆಗೆ ಈ ಮ್ಯಾರಾಥಾನ್ ಪ್ರದರ್ಶನ ಇರಲಿದೆ. ಈ ರೀತಿ ಯಾವ ಚಿತ್ರತಂಡವು ಈ ಹಿಂದೆ ಮಾಡಿರಲಿಲ್ಲ. 'ಥಾರ್: ಲವ್ ಆಂಡ್ ಥಂಡರ್' ಸಿನಿಮಾದ ಒಟ್ಟು ಅವಧಿ 2 ಗಂಟೆಗಳಾಗಿದ್ದು ಸತತವಾಗಿ 24 ತಾಸು ಸಿನಿಮಾ ಓಡಿಸಿದರೆ ದಿನಕ್ಕೆ 12 ಶೋ ಪ್ರದರ್ಶನ ಮಾಡಬಹುದಾಗಿದೆ.
ಇದನ್ನೂ ಓದಿ: ಫಸ್ಟ್ ಟೈಂ ಡ್ರಾಮಾ ಜೂನಿಯರ್ಸ್ಗೆ ಬಂದ್ರು ರಿಯಲ್ ‘ಜಡ್ಜ್‘! ಲೋಕ್ ಅದಾಲತ್ ನಾಟಕದ ಬಗ್ಗೆ ಕೊಟ್ಟ ತೀರ್ಪು ಏನು?
ನಾಲ್ಕು ದಿನಕ್ಕೆ 48 ಶೋ!
ನಾಲ್ಕು ದಿನಕ್ಕೆ ಬರೋಬ್ಬರಿ 48 ಶೋ ಪ್ರದರ್ಶನಗೊಳ್ಳಲಿದೆ. ಚಿತ್ರಮಂದಿರ ಸ್ವಚ್ಛತೆ, ಪ್ರೇಕ್ಷಕರ ಆಗಮನ ನಿರ್ಮಗಮನದ ಸಮಯ ಹಿಡಿದರೆ ಒಂದೆರಡು ಶೋಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ. ಆದರೂ ಈ ರೀತಿಯ ದಾಖಲೆ ಬರೆಯೋಕೆ ಯಾರು ಮುಂದೆ ಬಂದಿರಲಿಲ್ಲ.
ಇದು ಥಾರ್ ನಾಲ್ಕನೇ ಪಾರ್ಟ್ !
ಇತ್ತೀಚೆಗೆ ಮಾರ್ವೆಲ್ಸ್ನ ಸ್ಪೈಡರ್ ಮ್ಯಾನ್, ಹಾಗೂ ಡಾಕ್ಟರ್ ಸ್ಟೇಂಜ್ ಸಿನಿಮಾಗಳು ರಿಲೀಸ್ ಆಗಿತ್ತು. ಭಾರತದ ಬಾಕ್ಸ್ಆಫೀಸ್ ರೂಲ್ ಮಾಡಿದ್ದು ಮಾತ್ರ ಸ್ಪೈಡರ್ ಮ್ಯಾನ್. ಇನ್ನೂ ಥಾರ್ ಸಿನಿಮಾ ಬಗ್ಗೆ ಕೂಡ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಅದಕ್ಕೂ ಒಂದು ಕಾರಣ ಇದೆ.
ಇದನ್ನೂ ಓದಿ: ಕನ್ನಡತಿಯ ಕ್ಯೂಟ್ ಪೋಸ್ಗೆ ನೆಟ್ಟಿಗರು ಕ್ಲೀನ್ ಬೋಲ್ಡ್, ಇಲ್ಲಿವೆ ಕೃತಿ ಶೆಟ್ಟಿ ಸೂಪರ್ ಫೋಟೋಸ್
ಥಾರ್ಗೆ ಸಿಕ್ಕಿದ್ದಾಳೆ ಹಳೇ ಗರ್ಲ್ಫ್ರೆಂಡ್!
ಹೌದು, ಥಾರ್ ಪಾರ್ಟ್ ಒನ್, ಪಾರ್ಟ್ ನಲ್ಲಿದ್ದ ಥಾರ್ ಗರ್ಲ್ಫ್ರೆಂಡ್ ಮತ್ತೆ ಈ ಪಾರ್ಟ್ನಲ್ಲಿ ಒಂದಾಗಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಹೆಚ್ಚು ಕ್ರೇಜ್ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ