ಈ ವಾರ ಸ್ಯಾಂಡಲ್​ವುಡ್​ಗಿಂತ ಬಾಲಿವುಡ್​ನಲ್ಲೇ ಹೆಚ್ಚಿದೆ ನಿರೀಕ್ಷೆ ​

ಈ ವಾರ ಸ್ಯಾಂಡಲ್​ವುಡ್​ನಲ್ಲಿ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬಾಲಿವುಡ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿದೆ.

Rajesh Duggumane | news18
Updated:January 10, 2019, 3:54 PM IST
ಈ ವಾರ ಸ್ಯಾಂಡಲ್​ವುಡ್​ಗಿಂತ ಬಾಲಿವುಡ್​ನಲ್ಲೇ ಹೆಚ್ಚಿದೆ ನಿರೀಕ್ಷೆ ​
ಸಾಂದರ್ಭಿಕ ಚಿತ್ರ
Rajesh Duggumane | news18
Updated: January 10, 2019, 3:54 PM IST
ಸದ್ಯ ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ತನ್ನ ನಾಗಾಲೋಟ ಮುಂದುವರಿಸಿದೆ. ಈ ಮಧ್ಯೆ ಪರಭಾಷಾ ಚಿತ್ರಗಳ ಹವಾ ಕೂಡ ಜೋರಾಗಿದೆ. ಹಾಗಾಗಿ ಸ್ಯಾಂಡಲ್​ವುಡ್​ನಲ್ಲಿ ಯಾವ ನಿರ್ಮಾಪಕರೂ ಸಿನಿಮಾ ಬಿಡುಗಡೆ ಮಾಡುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಈ ವಾರ ಸ್ಯಾಂಡಲ್​ವುಡ್​ನಲ್ಲಿ ಕೇವಲ ಎರಡು ಚಿತ್ರಗಳು ತೆರೆಕಾಣುತ್ತಿವೆ. ಬಾಲಿವುಡ್​ನಲ್ಲಿ ‘ಉರಿ’ ಹಾಗೂ ‘ದಿ ಆ್ಯಕ್ಸಿಡೆಂಟಲ್​ ಪ್ರೈಮಿನಿಸ್ಟರ್​’ ಚಿತ್ರ ತೆರೆಗೆ ಬರುತ್ತಿದೆ.

‘ಸಿದ್ಲಿಂಗು’ ಮಾದರಿಯ ‘ಲಂಬೋದರ’


ನಟ ಯೋಗೇಶ್​ ಅಭಿನಯದ ‘ಲಂಬೋದರ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ‘ಸಿದ್ಲಿಂಗು’ ಚಿತ್ರದ ನಂತರ ಅವರು ನಟಿಸಿರುವ ಪೂರ್ಣ ಪ್ರಮಾಣದ ಕಾಮಿಡಿ ಚಿತ್ರ ಇದಾಗಿದೆಯಂತೆ. ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಸಿದ್ಲಿಂಗು’ ಚಿತ್ರದ ಮಾದರಿಯಲ್ಲೇ ಈ ಸಿನಿಮಾ ಮೂಡಿ ಬಂದಿದೆಯಂತೆ. ಹಾಗಾಗಿ, ಸಿನಿಮಾ ಗೆಲ್ಲಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಯೋಗಿ. ಅವರಿಗೆ ಜೊತೆಯಾಗಿ ಸಂಗೀತಾ ಕಾಣಿಸಿಕೊಂಡಿದ್ದಾರೆ. ಯೋಗಿ ಗೆಳೆಯನ ಪಾತ್ರದಲ್ಲಿ ಧರ್ಮಣ್ಣ ಕಡೂರು ಕಾಣಿಸಿಕೊಂಡಿದ್ದಾರೆ.  ನಾಗರಾಜ್​ ಉಪ್ಪುಂದ ನಿರ್ದೇಶನದ ‘ಗಿಣಿ ಹೇಳಿದ ಕಥೆ’  ಚಿತ್ರ ಕೂಡ ಈ ವಾರ ತೆರೆಗೆ ಬರುತ್ತಿದೆ.

ಸರ್ಜಿಕಲ್​ ಸ್ಟ್ರೈಕ್​ ಕಥೆ ಹೇಳುವ ಉರಿ


‘ರಾಝಿ’ ಚಿತ್ರ ದ ನಂತರ ಮತ್ತೆ ವಿಕ್ಕಿ ಕೌಶಲ್​ ಮತ್ತೆ ಮಿಲಿಟರಿ ಉಡುಗೆ ತೊಟ್ಟಿದ್ದಾರೆ. ಅವರ ನಟನೆಯ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. 2016ರಲ್ಲಿ ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿತ್ತು. ಈ ಘಟನೆ ಆಧರಿಸಿ ನಿರ್ದೇಶಕ ಆದಿತ್ಯ ಧಾರ್​ ‘ಉರಿ’ ಸಿನಿಮಾ ಮಾಡಿದ್ದಾರೆ. ಯಾಮಿ ಗೌತಮ್​, ಪರೇಶ್​ ರಾವಲ್​, ಕೀರ್ತಿ ಕುಲ್ಹಾರಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.
Loading...

ಇದನ್ನೂ ಓದಿ: Petta Movie Review: ಮೊದಲ ಗತ್ತಿನಲ್ಲಿ ಕಂಬ್ಯಾಕ್​ ಮಾಡಿದ 'ಸೂಪರ್​ ಸ್ಟಾರ್​' ರಜನಿ

ಆ್ಯಕ್ಸಿಡೆಂಟಲ್​ ಪ್ರೈಮಿನಿಸ್ಟರ್​

ಸಂಜಯ್ ಬಾರು ಅವರು ಬರೆದ ‘ದಿ ಆ್ಯಕ್ಸಿಡೆಂಟಲ್​ ಪ್ರೈ ಮಿನಿಸ್ಟರ್​’ ಪುಸ್ತಕ ಆಧರಿಸಿ ಈ ಚಿತ್ರ ಸಿದ್ಧಗೊಂಡಿದೆ. ವಿಜಯ್​ ರತ್ನಾಕರ್​ ಗುಟ್ಲೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮನಮೋಹನ್​ ಸಿಂಗ್​ ಪ್ರಧಾನಿಯಾದ ಸಂದರ್ಭದಲ್ಲಿ ಏನೆಲ್ಲ ಆಗಿತ್ತು ಎಂಬುದನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ​ ಮನಮೋಹನ್​ ಸಿಂಗ್​ ಪಾತ್ರದಲ್ಲಿ ಅನುಪಮ್​ ಖೇರ್​ ಕಾಣಿಸಿಕೊಂಡಿದ್ದಾರೆ. ಅಕ್ಷಯ್​ ಖನ್ನಾ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಬಿಡುಗಡೆಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದೆ.

ತೆಲುಗಿನಲ್ಲಿ ‘ಬೆಟಾಲಿಯನ್​ 609’ ಸೇರಿ ಮೂರ್ನಾಲ್ಕು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ತಮಿಳಿನಲ್ಲಿ ರಜನಿಕಾಂತ್​ ನಟನೆಯ ‘ಪೆಟ್ಟಾ’ ಸಿನಿಮಾ ಬಿಡುಗಡೆ ಆದ ಕಾರಣ ಈ ವಾರ ಯಾವ ಚಿತ್ರಗಳೂ ತೆರೆಗೆ ಬರುತ್ತಿಲ್ಲ.

ಇದನ್ನೂ ಓದಿ: 'ಬೆಲ್​ ಬಾಟಂ' ಟ್ರೈಲರ್​ನಲ್ಲಿ 80ರ ದಶಕದ ಕಂಪು ​; ಹೊಸ ಅವತಾರದಲ್ಲಿ ರಿಷಬ್​

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ