ನಾಳೆ ಯಾವೆಲ್ಲ ಚಿತ್ರಗಳು ಬಿಡುಗಡೆ ಆಗುತ್ತಿವೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಚಂದನವನ, ಬಾಲಿವುಡ್​ನಲ್ಲಿ ಈ ವಾರ ಯಾವೆಲ್ಲ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರಲ್ಲಿ ನೋಡಬಹುದಾದಂಥ ಚಿತ್ರಗಳು ಯಾವವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

news18
Updated:February 28, 2019, 3:51 PM IST
ನಾಳೆ ಯಾವೆಲ್ಲ ಚಿತ್ರಗಳು ಬಿಡುಗಡೆ ಆಗುತ್ತಿವೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಿನಿಮಾಗಳ ಪೋಸ್ಟರ್​
  • News18
  • Last Updated: February 28, 2019, 3:51 PM IST
  • Share this:
ಈ ಬಾರಿ ಕನ್ನಡದಲ್ಲಿ 'ಯಜಮಾನ' ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ  ಇಟ್ಟುಕೊಳ್ಳಲಾಗಿದೆ. ಬಾಲಿವುಡ್​ನಲ್ಲಿ 'ಸೊಂಚಿರಿಯಾ' ಹಾಗೂ 'ಲುಕಾ ಚುಪ್ಪಿ' ಚಿತ್ರಗಳು ತೆರೆಗೆ ಬರುತ್ತಿವೆ. ಈ ಸಿನಿಮಾಗಳ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

ಯಜಮಾನ:

ದರ್ಶನ್​ ಅಭಿನಯದ ‘ಯಜಮಾನ’ ಚಿತ್ರ ನಾಳೆ ರಿಲೀಸ್​ ಆಗುತ್ತಿದೆ. ವಿ. ಹರಿಕೃಷ್ಣ ಹಾಗೂ ಪಿ. ಕುಮಾರ್​ ನಿರ್ದೇಶನದ ಈ ಚಿತ್ರಕ್ಕೆ ಬಿ. ಸುರೇಶ್ ಹಾಗೂ ಶೈಲಜಾ ನಾಗ್​ ಬಂಡವಾಳ ಹೂಡುತ್ತಿದ್ದಾರೆ. ದರ್ಶನ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್​ ಕಾಣಿಸಿಕೊಂಡಿದ್ದಾರೆ. ಪರಭಾಷೆಗಳಲ್ಲಿ ಮಿಂಚಿರುವ ಅನೂಪ್​ ಠಾಕೂರ್​ ಸಿಂಗ್​ ಈ ಚಿತ್ರದ ವಿಲನ್. ‘ಡಾಲಿ’ ಧನಂಜಯ್​ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸೊಂಚಿರಿಯಾ:

ಚಂಬಲ್​ ಕಣಿವೆಯ ಕಥೆ ಹಿಡಿದು ಸಿದ್ಧಗೊಂಡಿರುವ ಚಿತ್ರ ಸೊಂಚಿರಿಯಾ. ಡಕಾಯಿತರ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಅನೂಪ್​ ಸಿಂಗ್​ ಠಾಕೂರ್​ ಹಾಗೂ ಭೂಮಿ ಪಡ್ನೇಕರ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಅಭಿಷೇಕ್​ ಛೂಬೇ ನಿರ್ದೇಶನವಿದೆ. ಮನೋಜ್​ ಬಾಜಪೇಯಿ ಸೇರಿ ಅನೇಕರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲುಕಾ ಚುಪ್ಪಿ:

ಕಾರ್ತಿಕ್​ ಆರ್ಯನ್​ ಹಾಗೂ ಕೃತಿ ಸನನ್ ಅಭಿನಯದ ‘ಲುಕಾ ಚುಪ್ಪಿ’ ಸಿನಿಮಾ ಟ್ರೈಲರ್​ ಮೂಲಕವೇ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿದೆ. ನಾಯಕ-ನಾಯಕಿ ಯಾರಿಗೂ ಗೊತ್ತಿಲ್ಲದಂತೆ ಲಿವಿಂಗ್​ ಇನ್​ ರಿಲೇಶನ್​ಶಿಪ್​ನಲ್ಲಿರುತ್ತಾರೆ. ಹೊರ ಜಗತ್ತಿಗೆ ಅದು ಗೊತ್ತಾದಾಗ ಏನೆಲ್ಲ ಆಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ಹೇಳಿದ್ದಾರೆ ನಿರ್ದೇಶಕ ಲಕ್ಷ್ಮಣ್​ ಉತೇಕರ್​. ತೆಲುಗಿನಲ್ಲಿ ನಂದಮುರಿ ಕಲ್ಯಾಣ್​ ರಾಮ್​ ನಟನೆಯ ‘118’ ಹಾಗೂ ತಮಿಳಿನಲ್ಲಿ ’90 ಎಂಎಲ್​’ ಸಿನಿಮಾ ತೆರೆಗೆ ಬರುತ್ತಿದೆ.
First published:February 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading