ಈ ವಾರ ಯಾವ ಸಿನಿಮಾ ನೋಡಬಹುದು? ಆ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಈ ವಾರ ಕನ್ನಡದಲ್ಲಿ ಐದು ಹಾಗೂ ಹಿಂದಿಯಲ್ಲಿ ಒಂದು ಚಿತ್ರ ತೆರೆಕಾಣುತ್ತಿದೆ. ಗಣೇಶ್ ಹಾಗೂ ಡಾಲಿ ಧನಂಜಯ್ ನಟನೆಯ ಚಿತ್ರಗಳು ಹೆಚ್ಚು ನಿರೀಕ್ಷೆ ಹುಟ್ಟು ಹಾಕಿವೆ.
ಬೆಂಗಳೂರು (ಡಿ.06): ಈ ವಾರಾಂತ್ಯದಲ್ಲಿ ಯಾವುದಾದರೂ ಸಿನಿಮಾ ನೋಡಬೇಕು ಎಂದು ಪ್ಲ್ಯಾನ್ ಮಾಡಿದ್ದೀರಾ? ಯಾವ ಸಿನಿಮಾ ನೋಡಬೇಕು ಎನ್ನುವ ಗೊಂದಲದಲ್ಲಿದ್ದೀರಾ? ಹಾಗಾದರೆ ಈ ಸುದ್ದಿ ಓದಿ. ಈ ವಾರ ಯಾವ ಯಾವ ಚಿತ್ರಗಳು ತೆರೆಗೆ ಬರುತ್ತಿವೆ. ಅದರ ಹಿನ್ನೆಲೆ ಏನು ಎಂಬುದರ ಮಾಹಿತಿ ಇಲ್ಲಿದೆ.
ಗಣೇಶ್ಗೆ ಲಕ್ಕಿ ಡಿಸೆಂಬರ್:
‘ಗೋಲ್ಡನ್ ಸ್ಟಾರ್’ ಗಣೇಶ್ ವೃತ್ತಿ ಬದುಕಿಗೆ ತಿರುವು ನೀಡಿದ ಚಿತ್ರ ‘ಮುಂಗಾರುಮಳೆ’. ಈ ಸಿನಿಮಾ ತೆರೆಕಂಡಿದ್ದು ಡಿಸೆಂಬರ್ನಲ್ಲಿ. ಹಾಗಾಗಿ ಡಿಸೆಂಬರ್ ಗಣೇಶ್ ಪಾಲಿಗೆ ಲಕ್ಕಿ. ಈಗ ಅವರ ಅಭಿನಯದ ‘ಆರೆಂಜ್’ ಚಿತ್ರ ಕೂಡ ಇದೇ ತಿಂಗಳಲ್ಲೇ ತೆರೆಕಾಣುತ್ತಿದೆ. ಈ ಡಿಸೆಂಬರ್ ಗಣೇಶ್ ಪಾಲಿಗೆ ಲಕ್ಕಿಯೇ ಎಂಬುದನ್ನು ಪ್ರೇಕ್ಷಕರೇ ಹೇಳಬೇಕು.
ಪ್ರಶಾಂತ್ ರಾಜ್ ಕಥೆ, ಚಿತ್ರಕಥೆ ಬರೆದು 'ಆರೆಂಜ್' ನಿರ್ದೇಶಿಸಿದ್ದಾರೆ. ‘ರಾಜ್ಕುಮಾರ್’ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದ ಪ್ರಿಯಾ ಆನಂದ್ ಈ ಚಿತ್ರದ ಮೂಲಕ ಮತ್ತೆ ಚಂದನವನದ ಕದ ತಟ್ಟಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣ, ಎಸ್.ಎಸ್.ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.ಪರಭಾಷೆಗೆ ಕಾಲಿಟ್ಟ ‘ಡಾಲಿ’ ಧನಂಜಯ್:
‘ಟಗರು’ ಚಿತ್ರ ತೆರೆಕಂಡ ನಂತರದಲ್ಲಿ ‘ಡಾಲಿ’ ಧನಂಜಯ್ ವೃತ್ತಿ ಬದುಕಿಗೆ ಮೈಲೇಜ್ ಸಿಕ್ಕಿತ್ತು. ಈಗ ಅವರು ‘ಭೈರವ ಗೀತ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದಲ್ಲಿ ಜಾತಿಜಾತಿಗಳ ನಡುವೆ ನಡೆವ ಘರ್ಷಣೆ ಮೊದಲಾದ ವಿಚಾರಗಳ ಬಗ್ಗೆ ಹೇಳಲಾಗುತ್ತಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ.
ಈ ಚಿತ್ರ ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಭಾಷೆಗಳಲ್ಲೂ ತೆರೆಕಾಣುತ್ತಿದೆ. ಸಿದ್ಧಾರ್ಥ್ ತಟೋಲು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇವರು ರಾಮ್ ಗೋಪಾಲ್ ವರ್ಮಾ ಅವರ ಶಿಷ್ಯ. ಈ ಚಿತ್ರದಲ್ಲಿ ಐರಾ ಮೋರ್ ನಾಯಕಿಯಾಗಿ ನಟಿಸಿದ್ದಾರೆ.ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ‘ನಟಸಾರ್ವಭೌಮ’ vs ‘ಸೀತಾರಾಮ ಕಲ್ಯಾಣ’?; ಚಂದನವನದಲ್ಲಿ ಬಿಗ್ ಫೈಟ್
ಹೊಸಬರ ‘ಚರಂತಿ’:
ಮಹೇಶ್ ರಾವಲ್ ನಿರ್ದೇಶನವಿರುವ ‘ಚರಂತಿ’ ಚಿತ್ರ ಹೊಸಬರ ಪ್ರಯತ್ನ. ಈ ಚಿತ್ರಕ್ಕೆ ಅವಿನಾಶ್ ಬಿ. ಸಂಗೀತ ನಿರ್ದೇಶನ, ಶಿವಾಜಿ ಛಾಯಾಗ್ರಹಣ, ವೆಂಕಿ ಸಂಕಲನ ಇದೆ. ಮಹೇಶ್ ರಾವಲ್, ಸಚಿನ್ ಪುರೋಹಿತ್ ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ವಾರ ‘ಮಟಾಶ್’:
ಎಸ್.ಡಿ. ಅರವಿಂದ್ ನಿರ್ದೇಶನದ ‘ಮಟಾಶ್’ ಚಿತ್ರಕ್ಕೆ ರಾನಿ ಅಬ್ರಾಹಿಂ ಛಾಯಾಗ್ರಹಣವಿದೆ. ಎಸ್.ಡಿ. ಅರವಿಂದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಮರ್ಥ್ ನರಸಿಂಹ ರಾಜು, ಐಶ್ವರ್ಯ ಶಿಂಡೊಗಿ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ಮುಂದಿನ ಬದಲಾವಣೆ’:
ಪ್ರವೀಣ್ಭೂಷಣ್ ನಿರ್ದೇಶನ ಮಾಡುತ್ತಿರುವ ‘ಮುಂದಿನ ಬದಲಾವಣೆ’ ಚಿತ್ರ ಹಾಸ್ಯ ಪ್ರಧಾನವಾಗಿರಲಿದೆಯಂತೆ. ಪ್ರವೀಣ್ ಭೂಷಣ್, ಸಂಗೀತ, ಸತೀಶ್ ಮೊದಲಾದವರು ತಾರಾ ಬಳಗದಲ್ಲಿದ್ದಾರೆ.
ಹಿಂದಿಯಲ್ಲಿ ‘ಕೇದಾರ್ನಾಥ್’:
2013ರಲ್ಲಿ ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಈ ವೇಳೆ ಅನೇಕರು ಪ್ರಾಣಕಳೆದುಕೊಂಡಿದ್ದರು. ಇದೇ ಘಟನೆ ಇಟ್ಟುಕೊಂಡು ನಿರ್ದೇಶಕ ಅಭಿಷೇಕ್ ಕಪೂರ್ ‘ಕೇದಾರ್ನಾಥ್’ ಚಿತ್ರ ಮಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಹಾಗೂ ಸಾರಾ ಅಲಿಖಾನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಾರಾಗಿದು ಚೊಚ್ಚಲ ಚಿತ್ರ. ಹಾಗಾಗಿ ಸಿನಿಮಾ ಮೇಲೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.
ಇದನ್ನೂ ಓದಿ: ಈ ರಾಕಿ ಗ್ಯಾಂಗ್ಸ್ಟರ್ ಅಲ್ಲ ಮಾನ್ಸ್ಟರ್; ‘ಕೆಜಿಎಫ್’ ಎರಡನೇ ಟ್ರೈಲರ್ ಬಿಡುಗಡೆ
ಗಣೇಶ್ಗೆ ಲಕ್ಕಿ ಡಿಸೆಂಬರ್:
‘ಗೋಲ್ಡನ್ ಸ್ಟಾರ್’ ಗಣೇಶ್ ವೃತ್ತಿ ಬದುಕಿಗೆ ತಿರುವು ನೀಡಿದ ಚಿತ್ರ ‘ಮುಂಗಾರುಮಳೆ’. ಈ ಸಿನಿಮಾ ತೆರೆಕಂಡಿದ್ದು ಡಿಸೆಂಬರ್ನಲ್ಲಿ. ಹಾಗಾಗಿ ಡಿಸೆಂಬರ್ ಗಣೇಶ್ ಪಾಲಿಗೆ ಲಕ್ಕಿ. ಈಗ ಅವರ ಅಭಿನಯದ ‘ಆರೆಂಜ್’ ಚಿತ್ರ ಕೂಡ ಇದೇ ತಿಂಗಳಲ್ಲೇ ತೆರೆಕಾಣುತ್ತಿದೆ. ಈ ಡಿಸೆಂಬರ್ ಗಣೇಶ್ ಪಾಲಿಗೆ ಲಕ್ಕಿಯೇ ಎಂಬುದನ್ನು ಪ್ರೇಕ್ಷಕರೇ ಹೇಳಬೇಕು.
ಪ್ರಶಾಂತ್ ರಾಜ್ ಕಥೆ, ಚಿತ್ರಕಥೆ ಬರೆದು 'ಆರೆಂಜ್' ನಿರ್ದೇಶಿಸಿದ್ದಾರೆ. ‘ರಾಜ್ಕುಮಾರ್’ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದ ಪ್ರಿಯಾ ಆನಂದ್ ಈ ಚಿತ್ರದ ಮೂಲಕ ಮತ್ತೆ ಚಂದನವನದ ಕದ ತಟ್ಟಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣ, ಎಸ್.ಎಸ್.ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.ಪರಭಾಷೆಗೆ ಕಾಲಿಟ್ಟ ‘ಡಾಲಿ’ ಧನಂಜಯ್:
‘ಟಗರು’ ಚಿತ್ರ ತೆರೆಕಂಡ ನಂತರದಲ್ಲಿ ‘ಡಾಲಿ’ ಧನಂಜಯ್ ವೃತ್ತಿ ಬದುಕಿಗೆ ಮೈಲೇಜ್ ಸಿಕ್ಕಿತ್ತು. ಈಗ ಅವರು ‘ಭೈರವ ಗೀತ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದಲ್ಲಿ ಜಾತಿಜಾತಿಗಳ ನಡುವೆ ನಡೆವ ಘರ್ಷಣೆ ಮೊದಲಾದ ವಿಚಾರಗಳ ಬಗ್ಗೆ ಹೇಳಲಾಗುತ್ತಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ.
ಈ ಚಿತ್ರ ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಭಾಷೆಗಳಲ್ಲೂ ತೆರೆಕಾಣುತ್ತಿದೆ. ಸಿದ್ಧಾರ್ಥ್ ತಟೋಲು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇವರು ರಾಮ್ ಗೋಪಾಲ್ ವರ್ಮಾ ಅವರ ಶಿಷ್ಯ. ಈ ಚಿತ್ರದಲ್ಲಿ ಐರಾ ಮೋರ್ ನಾಯಕಿಯಾಗಿ ನಟಿಸಿದ್ದಾರೆ.
Loading...