ಚಂದನವನದಲ್ಲಿ ಈ ವಾರ ಒಟ್ಟು 9 ಸಿನಿಮಾಗಳು ತೆರೆಗೆ..!

news18
Updated:August 30, 2018, 7:29 PM IST
ಚಂದನವನದಲ್ಲಿ ಈ ವಾರ ಒಟ್ಟು 9 ಸಿನಿಮಾಗಳು ತೆರೆಗೆ..!
news18
Updated: August 30, 2018, 7:29 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ಸಿನಿಮಾಗಳದ್ದೆ ಹಬ್ಬ. ವಾರಕ್ಕೆ ಮೂರಲ್ಲ, ನಾಲ್ಕಲ್ಲ ಐದಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಹೊಸಬರ ಸಿನಿಮಾದ ಜೊತೆಗೆ ಸ್ಟಾರ್ ನಟರ ಹೊಸ ಬಗೆಯ ಚಿತ್ರಗಳು ಸಿನಿ ಪ್ರೇಕ್ಷಕರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಅಂದಹಾಗೇ ಈ ವಾರ ಎಷ್ಟು ಹಾಗೂ ಯಾವ ಸಿನಿಮಾಗಳು ತೆರೆಗೆ ಬರುತ್ತಿವೆ ಗೊತ್ತಾ?

ಕಳೆದ ವಾರವೂ ಸಿನಿಮಾಗಳಿಗೇನು ಕೊರತೆ ಇರಲಿಲ್ಲ. ಸಿನಿಮಾ ರಸಿಕರು ವಾರಪೂರ್ತಿ ಕೂತು ನೋಡುವಷ್ಟು ಅಂದರೆ ಒಟ್ಟು 8 ಚಿತ್ರಗಳು ತೆರೆಕಂಡಿದ್ದವು. ಅದರಂತೆ ಈ ವಾರವೂ ಬರೋಬ್ಬರಿ 9 ಚಿತ್ರಗಳು ತೆರೆಕಾಣುತ್ತಿದ್ದು, ಅವೆಲ್ಲವು ನವ ಪ್ರತಿಭೆಗಳ ಪ್ರಯತ್ನ ಅನ್ನೋದು ವಿಶೇಷ. ಮೊದಲಿಗೆ ಹೇಳೊದಾದರೆ ಈಗಾಗ್ಲೇ ಟ್ರೇಲರ್, ಹಾಡುಗಳ ಮೂಲಕ ಗಮನ ಸೆಳೆದಿರೋ 'ತ್ರಾಟ'ಕ ಸಿನಿಮಾ ನಾಳೆ ತೆರೆಗೆ ಬರುತ್ತಿದೆ. ಜಿಗರ್​ ಥಂಡ ಖ್ಯಾತಿಯ ಶಿವಗಣೇಶ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದೊಂದು ಕೌಟುಂಬಿಕ ಸಿನಿಮವಾಗಿದೆ.

ಇನ್ನು 'ಮೇಸ್ತ್ರಿ' ಚಿತ್ರಕೂಡ ರಿಲೀಸ್‍ಗೆ ಸಜ್ಜಾಗಿ ನಿಂತಿದೆ. 1993ರ ನೈಜ ಘಟನೆಯನ್ನೊತ್ತು ಬರುತ್ತಿರು ಈ ಸಿನಿಮಾ ಅದೃಷ್ಟ ಪರೀಕ್ಷೆಗೆ ನಿಲ್ಲಲಿದೆ. ಹಾಗೇ ಶ್ರೀಧರ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗಿರೋ 'ಆರೋಹಣ' ಚಿತ್ರ ಕೂಡ ನಿರೀಕ್ಷೆಯನ್ನೊತ್ತು ರಿಲೀಸ್ ಆಗುತ್ತಿದೆ. ಹಾಗೇ ಹೊಸಬರ 'ಅಂತತ್ರ' ಚಿತ್ರ ಪ್ರೀತಿ ಮಾಡಿ ಪಜೀತಿ ಪಡೊ ಒಂದಷ್ಟು ಸನ್ನಿವೇಶಗಳನ್ನ ಹೊತ್ತು ಬರುತ್ತಿದೆ.

'ಮೇಸ್ತ್ರಿ' ಸಿನಿಮಾದ ದೃಶ್ಯ


ಇನ್ನು ನಟ ಅನಿರುದ್ದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರೋ 'ಅಭಯ ಹಸ್ತ' ಚಿತ್ರ ಕೂಡ ತೆರೆಕಾಣುತ್ತಿದೆ. ನವೀನ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಕಾರ್ತಿಕ್ ವೆಂಕಟೇಶ್ ಹಾಗೂ ಪ್ರವೀಣ್ ಸಂಗೀತ ನೀಡಿದ್ದಾರೆ. ಇನ್ನು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊತ್ತು 'ಉದ್ದಿಶ್ಯ' ಚಿತ್ರ ಕೂಡ ಸಿನಿಪ್ರಿಯರಿಗೆ ಭಯ ಹುಟ್ಟಿಸಲು ಬರುತ್ತಿದೆ. ಹೇಮಂತ್ ಕೃಷ್ಣಪ್ಪ ಚಿತ್ರ ನಿರ್ದೇಶನ ಮಾಡಿದ್ದು, ಟ್ರೇಲರ್ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

'ಚೌಕೂರು ಗೇಟ್​' ಸಿನಿಮಾದ ಚಿತ್ರ

Loading...

'ಚೌಕೂರ್ ಗೇಟ್' ಸಹ ರಿಲೀಸ್ ಸಂತಸದಲ್ಲಿದೆ. ಒಂದು ವರ್ಷದಿಂದ ಮಂಡ್ಯ ರಾಯಚೂರಿನಲ್ಲಿ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಕೊನೆಗೂ ರಿಲೀಸ್ ಹಂತಕ್ಕೆ ಬಂದು ತಲುಪಿದೆ. ಹಾಗೇ ತಮಿಳಿನ ವಿವೇಗಂನ ಕನ್ನಡ ಡಬ್ಬಿಂಗ್ ಚಿತ್ರ 'ಕಂಮಾಂಡೊ' ಕೂಡ ತರೆಕಾಣುತ್ತಿದೆ. ಹೀಗೇ ಒರೋಬ್ಬರಿ 9 ಚಿತ್ರಗಳು ನಾಳೆ ರಿಲೀಸ್​ ಆಗುತ್ತಿದ್ದು, ಯಾವ ಸಿನಿಮಾ ನೋಡೋದು ಅನ್ನೋದನ್ನ ನೀವೆ ನಿರ್ಧರಿಸಿ. 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...