ಐಟಿ ದಾಳಿಯಿಂದ 'ಬಿಗ್​ ಬಾಸ್'ಗೆ ಬರೆ; ಈ ವಾರದ ಕಾರ್ಯಕ್ರಮದಲ್ಲಿ 'ಕಿಚ್ಚ' ಮಿಸ್ಸಿಂಗ್​?

ಒಂದೊಮ್ಮೆ ಸಂಜೆಯೋಳಗೆ ಪರಿಶಿಲನೆ ಮುಗಿಯದೆ ಇದ್ದಲ್ಲಿ ‘ಬಿಗ್ ಬಾಸ್’ ಶೂಟಿಂಗ್​ಗೆ ಸುದೀಪ ತರೆಳಲು ಸಾಧ್ಯವಿಲ್ಲ. ಹಾಗಾಗಿ ಅವರು ತೆರಳುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

Rajesh Duggumane | news18
Updated:January 4, 2019, 3:47 PM IST
ಐಟಿ ದಾಳಿಯಿಂದ 'ಬಿಗ್​ ಬಾಸ್'ಗೆ ಬರೆ; ಈ ವಾರದ ಕಾರ್ಯಕ್ರಮದಲ್ಲಿ 'ಕಿಚ್ಚ' ಮಿಸ್ಸಿಂಗ್​?
ಸುದೀಪ್​
Rajesh Duggumane | news18
Updated: January 4, 2019, 3:47 PM IST
ಬೆಂಗಳೂರು(ಜ.4) : ನಟ ಕಿಚ್ಚ ಸುದೀಪ್ ವಾರಾಂತ್ಯದಲ್ಲಿ ಎರಡು ದಿನ ಕನ್ನಡದ ‘ಬಿಗ್​ ಬಾಸ್​ 6’ ನಡೆಸಿಕೊಡುತ್ತಾರೆ. ಸ್ಪರ್ಧಿಗಳಲ್ಲಿ ಯಾರು ಎಲಿಮಿನೇಟ್​? ಯಾರು ಸೇಫ್​ ಎಂಬಿತ್ಯಾದಿ ವಿಚಾರಗಳನ್ನು ಬಹಿರಂಗ ಮಾಡುವುದರ ಜೊತೆಗೆ ಒಂದಷ್ಟು ಮನರಂಜನೆ ನೀಡುತ್ತಾರೆ ಸುದೀಪ್​. ಆದರೆ, ಈ ವಾರ ‘ಬಿಗ್​ ಬಾಸ್​’ ಕಾರ್ಯಕ್ರಮಕ್ಕೆ ಕಿಚ್ಚ ಗೈರಾಗುತ್ತಾರಾ? ಸದ್ಯ ಹೀಗೊಂದು ಪ್ರಶ್ನೆ ಸದ್ಯ ಎಲ್ಲರನ್ನು ಕಾಡಿದೆ.

ಸ್ಯಾಂಡಲ್​ವುಡ್​ ಸ್ಟಾರ್​ಗಳಾದ ಯಶ್​, ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಹಾಗೂ ಸುದೀಪ್​ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ರೇಡ್​ ಮಾಡಿದ್ದಾರೆ. ಸದ್ಯ ಐಟಿ ಕಾರ್ಯಾಚರಣೆ ಮುಂದುವರಿದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದರಿಂದ ಕನ್ನಡ 'ಬಿಗ್ ​ಬಾಸ್​' ಶೋಗೂ ಕಂಟಕ ಎದುರಾಗುವ ಸೂಚನೆ ಸಿಕ್ಕಿದೆ.

ಪ್ರತಿ ಶುಕ್ರವಾರ, ಶನಿವಾರದಂದು ಇನೋವೇಟಿವ್ ಫಿಲ್ಮಂ ಸಿಟಿಯಲ್ಲಿ ನಡೆಯುತ್ತಿದ್ದ ‘ಬಿಗ್ ಬಾಸ್’ ಶೂಟಿಂಗ್​ನಲ್ಲಿ ಸುದೀಪ್​ ಪಾಲ್ಗೊಳ್ಳುತ್ತಿದ್ದರು. ಇಂದು ಕೂಡ ಅವರು ಬಿಗ್​ ಬಾಸ್​ ಶೂಟಿಂಗ್​ಗೆ ತೆರಳಬೇಕಿತ್ತು. ಒಂದೊಮ್ಮೆ ಸಂಜೆಯೋಳಗೆ ಪರಿಶಿಲನೆ ಮುಗಿಯದೆ ಇದ್ದಲ್ಲಿ ‘ಬಿಗ್ ಬಾಸ್’ ಶೂಟಿಂಗ್​ಗೆ ಸುದೀಪ್​ ತೆರಳಲು ಸಾಧ್ಯವಿಲ್ಲ. ಹಾಗಾಗಿ ಅವರು ತೆರಳುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: ಚಂದನವನದ ನಟ, ನಿರ್ಮಾಪಕರ ಮನೆ ಮೇಲೆ ನಡೆದ ದಾಳಿಗೂ ಜಿಎಸ್​ಟಿಗೂ ಇದೆ ನೇರ ಸಂಬಂಧ!

ಈ ವಿಚಾರವಾಗಿ ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸುದೀಪ್​, ಬಿಗ್​ ಬಜೆಟ್​ ಸಿನಿಮಾ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಶಂಕೆ ಇದೆ ಎಂದಿದ್ದರು. 'ಕನ್ನಡದ 'ವಿಲನ್​', 'ಕೆಜಿಎಫ್​' ಹಾಗೂ 'ನಟಸಾರ್ವಭೌಮ' ದೊಡ್ಡ ಬಜೆಟ್​ ಸಿನಿಮಾಗಳು. ಈ ಬಗ್ಗೆ ಅನುಮಾನ ಬಂದು ಅವರು ದಾಳಿ ಮಾಡಿರಬಹುದು. ನಾನು ಯಾವುದೆ ತಪ್ಪು ಮಾಡಿಲ್ಲ. ಹಾಗಾಗಿ ನಾನು ಹೆದರುವುದಿಲ್ಲ" ಎಂದು ಅವರು ಹೇಳಿದ್ದರು.

First published:January 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ