• Home
  • »
  • News
  • »
  • entertainment
  • »
  • Five Film Friday: ಒಂದೇ ದಿನ ಐದು ಸಿನಿಮಾ, ಈ ವಾರವೂ ಕನ್ನಡ ಸಿನಿಮಾಗಳ ರಿಲೀಸ್ ಅಬ್ಬರ!

Five Film Friday: ಒಂದೇ ದಿನ ಐದು ಸಿನಿಮಾ, ಈ ವಾರವೂ ಕನ್ನಡ ಸಿನಿಮಾಗಳ ರಿಲೀಸ್ ಅಬ್ಬರ!

ಐದೈದು ಸಿನಿಮಾಗಳ ಮಧ್ಯೆ ಕನ್ನಡದ "ಅಬ್ಬರ"ದ ಅಬ್ಬರ!

ಐದೈದು ಸಿನಿಮಾಗಳ ಮಧ್ಯೆ ಕನ್ನಡದ "ಅಬ್ಬರ"ದ ಅಬ್ಬರ!

ಈ ಶುಕ್ರವಾರವೂ ಐದು ಸಿನಿಮಾ ರಿಲೀಸ್ ಆಗುತ್ತಿವೆ. ಹೊಸಬರು ಮತ್ತು ಹಳಬರ ಸಿನಿಮಾಗಳ ಅಬ್ಬರ ಈ ಶುಕ್ರವಾರ ಬಲು ಜೋರಾಗಿಯೇ ಇದೆ. ಯಾರ ಅದೃಷ್ಟ ಹೇಗೆ ಅನ್ನೋದೇ ಈಗೀನ ಕುತೂಹಲ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದ ಅಲೆ ಬದಲಾಗಿದೆ. ಕಾಂತಾರ ಸಿನಿಮಾ ಗುಂಗಿನಲ್ಲಿ ಜನ ಇದ್ದಾರೆ. ಆದರೆ ಥಿಯೇಟರ್​ಗೆ ನುಗ್ಗಿ ಬರ್ತಾಯಿಲ್ಲ ಅಷ್ಟೆ. ಆದರೂ (New Cinema Release) ಸಿನಿಮಾ ಓಡ್ತಿದೆ. ಹಾಗಂತ ಇತರ ಸಿನಿಮಾಗಳಿಗೆ ಈ ವಾರವೂ ಚಾನ್ಸ್ ಇಲ್ವೇ ಅನ್ಕೋಬೇಡಿ. ಕಾಂತಾರದ (Kantara Film) ದೈವ ಕನ್ನಡ ಸಿನಿಮಾಗಳಿಗೆ ದಾರಿ ಮಾಡಿಕೊಟ್ಟಿದೆ. ಕಳೆದ ವಾರ ಒಂದು ಹಂತಕ್ಕೆ ಕಾಂತಾರ ಕ್ರೇಜ್ ಕಡಿಮೆ ಆಗಿತ್ತು. ಆಗ ಹೆಚ್ಚು ಕಡಿಮೆ ಐದಾರು ಸಿನಿಮಾ ರಿಲೀಸ್ ಆಗಿದ್ದವು. ಈ ಶುಕ್ರವಾರವೂ (Friday) ಒಂದಷ್ಟು ಸಿನಿಮಾಗಳು ಇವೆ. ಇವುಗಳ ಲೆಕ್ಕ ಕೂಡ ಹೆಚ್ಚು ಕಡಿಮೆ ಐದೇ ಇದೆ. ಇವುಗಳ ಒಂದಷ್ಟು (New Film Details) ಡಿಟೈಲ್ಸ್ ಮುಂದಿದೆ ಓದಿ.


ಐದೈದು ಸಿನಿಮಾಗಳ ಮಧ್ಯೆ ಕನ್ನಡದ "ಅಬ್ಬರ"ದ ಅಬ್ಬರ!
ಕನ್ನಡ ಸಿನಿಮಾರಂಗ ಬೆಳೆಯುತ್ತಲೇ ಇದೆ. ಕಾಂತಾರ ಮತ್ತು ಕೆಜಿಎಫ್ ನಂತಹ ಎರಡು ಸಿನಿಮಾಗಳು ಕನ್ನಡವನ್ನ ಬೇರೆ ಲೆವಲ್​ಗೆ ತೆಗೆದುಕೊಂಡು ಹೋಗಿವೆ. ಇಂತಹ ದಿನಗಳಲ್ಲಿ ಕಂಟೆಂಟ್ ಸಿನಿಮಾಗಳೂ ಓಡ್ತವೆ ಅನ್ನೋ ನಂಬಿಕೆ ಈಗ ಬಲವಾಗಿದೆ.


ಕನ್ನಡದಲ್ಲಿ ಒಳ್ಳೆ ಸಿನಿಮಾಗಳೂ ಬರ್ತವೆ ಅಂತ ಈಗಾಗಲೇ ಪ್ರೂ ಆಗಿದೆ. ಆ ನಂಬಿಕೆ ಮೇಲೆನೆ ನಾಯಕ ನಟ ಪ್ರಜ್ವಲ್ ದೇವರಾಜ್ ತಮ್ಮ ಅಬ್ಬರದ ಮೂಲಕ ಈ ವಾರ ಬೆಳ್ಳಿತೆರೆಗೆ ಅಬ್ಬರಿಸಲು ಬರುತ್ತಿದ್ದಾರೆ.


This week Five Kannada Film going to Release
ಹೊಸಬರು ತೆರೆಯುತ್ತಿರೋ ಖಾಸಗಿ ಪುಟಗಳು!


ಅಬ್ಬರದ ಅಬ್ಬರ ಪ್ರಜ್ವಲ್ ದೇವರಾಜ್ ಹೊಸ ಅಬ್ಬರ
ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರದಲ್ಲಿ ಮೂವರು ಹೀರೋಯಿನ್​​ಗಳಿದ್ದಾರೆ. ರಾಶಿ ಪೊನ್ನಪ್ಪ, ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಅಂತಹ ನಾಯಕಿಯರು ಇಲ್ಲಿ ಪ್ರಜ್ವಲ್​​ ಗೆ ಜೋಡಿ ಆಗಿದ್ದಾರೆ. ಮೂವರು ಹೀರೋಯಿನ್​ಗಳ ಕಥೆಯಲ್ಲಿ ಪ್ರಜ್ವಲ್ ಹೆಚ್ಚು ಕಡಿಮೆ ಮೂರು ಗೆಟಪ್​​ನಲ್ಲಿಯೇ ಕಾಣಿಸಿಕೊಂಡಿದ್ದಾರೆ.ಡೈರೆಕ್ಟರ್ ರಾಮನಾರಾಯಣ್ ಈ ಮೂಲಕ ಹೊಸದೊಂದು ಕಥೆ ಹೇಳೋಕೆ ಬರ್ತಿದ್ದಾರೆ. ಇದೇ ಚಿತ್ರದಲ್ಲಿ ಕಥೆಗೆ ರಿಲೇಟ್ ಆಗೋ ಒಂದು ಎಪಿಕ್ ಎಪಿಸೋಡ್ ಕೂಡ ಬರುತ್ತದೆ. ಇದು ಈ ಚಿತ್ರದ ಇನ್ನೂ ಒಂದು ಅಬ್ಬರ ಅನ್ನೋ ಅರ್ಥದಲ್ಲಿಯೇ ರಾಮನಾರಾಯಣ್ ಹೇಳಿಕೊಳ್ತಾರೆ.


ಅಬ್ಬರ ಚಿತ್ರಕ್ಕೆ ರವಿ ಬಸ್ರೂರು ಸಂಗೀತದ ಅಬ್ಬರ
ಚಿತ್ರಕ್ಕೆ ಕೆಜಿಎಫ್​​ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದಲ್ಲಿ ಮಾಸ್ ಹಾಡುಗಳನ್ನ ಜನ ಕೇಳಿದ್ದಾರೆ. ಆದರೆ ಅಬ್ಬರ ಚಿತ್ರದ ವಿಷಯದಲ್ಲಿ ಮಾಧುರ್ಯದ ಸ್ಪರ್ಶ ಕೂಡ ಇದೆ. ರವಿ ಬಸ್ರೂರು ತಮ್ಮ ಸಂಗೀತದ ಅಲೆಯನ್ನ ಇಲ್ಲಿ ಬೇರೆ ಲೆವಲ್​​ಗೆ ಹರಿಸಿದ್ದಾರೆ.


"ಮಠ"ದ ಅಂಗಳದ ಹಸಿ-ಬಿಸಿ ಸತ್ಯದ ಚಿತ್ರಣ
ಕನ್ನಡದ ಸಿನಿ ಪ್ರೇಕ್ಷಕರಿಗೆ ಈ ವಾರ ಮಠ ಚಿತ್ರದ ಆಪ್ಷನ್ ಕೂಡ ಇದೆ. ಈ ಚಿತ್ರದಲ್ಲಿ ಹಾಸ್ಯ ಕಲಾವಿದರೇ ಇರೋದು. ಸಾಧು ಕೋಕಿಲ, ತಬಲಾ ನಾಣಿ, ಮಂಡ್ಯ ರಮೇಶ್, ಇವರ ಮಧ್ಯೆ ಮಠ ಚಿತ್ರದ ಡೈರೆಕ್ಟರ್ ಗುರು ಪ್ರಸಾದ್ ಕೂಡ ಅಭಿನಯಿಸಿದ್ದಾರೆ.


This week Five Kannada Film going to Release
"ಮಠ"ದ ಅಂಗಳದ ಹಸಿ-ಬಿಸಿ ಸತ್ಯದ ಚಿತ್ರಣ!


ರವೀಂದ್ರ ವಂಶಿ ನಿರ್ದೇಶನದ ಈ ಚಿತ್ರದಲ್ಲಿ ಮಠದ ಅಸಲಿ ಕಥೆನೇ ಇದೆ. ರಾಜ್ಯದಲ್ಲಿರೋ 25 ಜಿಲ್ಲೆಯ 5 ಸಾವಿರಕ್ಕೂ ಹೆಚ್ಚು ಮಠಗಳ ಚಿತ್ರಣ ಈ ಚಿತ್ರದಲ್ಲಿದೆ. ಸಿನಿಮಾದ ಟ್ರೈಲರ್ ವೀಕ್ಷಿಸಿ ಕಾಳಿ ಮಠದ ಸ್ವಾಮಿಜಿ ರಿಷಿಕುಮಾರ್ ಸ್ವಾಮಿಜಿ ರೊಚ್ಚಿಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ದಿನವೇ ಚಿತ್ರವನ್ನ ರಿಷಿ ಕುಮಾರ್ ಸ್ವಾಮಿ ವೀಕ್ಷಿಸಲಿದ್ದಾರೆ. ಮುಂದೇನು ನೋಡ್ಬೇಕು.


ಹೊಸಬರು ತೆರೆಯುತ್ತಿರೋ ಖಾಸಗಿ ಪುಟಗಳು
ಖಾಸಗಿ ಪುಟಗಳು ಸಿನಿಮಾ ಕಂಪ್ಲೀಟ್ ಹೊಸಬರ ಸಿನಿಮಾನೇ ಆಗಿದೆ. ಕಾಲೇಜಿನ ಕಥೆ ಹೇಳುವ ಈ ಚಿತ್ರದಲ್ಲಿ ಲವ್ ಸ್ಟೋರಿ ಕೂಡ ಇದೆ. ಲಿಯೋನಿಲ್ಲಾ ಶ್ವೇತಾ ಡಿಸೋಜಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಇದನ್ನೂ ಓದಿ: 777Charlie In Thailand: ಥಾಯ್ಲೆಂಡ್​ನಲ್ಲಿ 777ಚಾರ್ಲಿ ರಿಲೀಸ್!


ನವ ನಟ ವಿಶ್ವ ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ. ಅಪ್ಪ-ಮಗನ ಸೆಂಟಿಮೆಂಟ್​​ ಅನ್ನೂ ಹೊಂದಿರೋ ಈ ಚಿತ್ರವನ್ನ ಸಂತೋಷ್ ಶ್ರೀಕಾಂತಪ್ಪ ಡೈರೆಕ್ಟ್​ ಮಾಡಿದ್ದಾರೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.


ಆವರ್ತ ಎಂಬ ಕನ್ನಡದ ಹಾರರ್ ಸಿನಿಮಾ!
ಡೈರೆಕ್ಟರ್ ವೇಮಗಲ್ ಜಗನ್ನಾಥ್ ರಾವ್ ಹಾರರ್ ಚಿತ್ರಗಳಿಗೆ ಹೆಸರುವಾಸಿನೇ ಆಗಿದ್ದಾರೆ. ಕಪ್ಪು-ಬಿಳುಪು ಟೈಮ್ ಅಲ್ಲಿಯೇ ತುಳಸೀದಳ ಅನ್ನೋ ಹಾರರ್ ಕಂಟೆಂಟ್ ಇರೋ ಚಿತ್ರದ ಮಾಡಿದ್ದರು.


ತುಂಬಾ ದಿನಗಳ ಬಳಿಕ ಈಗ ಆವರ್ತ ಚಿತ್ರದ ಮೂಲಕ ಬಂದಿದ್ದಾರೆ. ಅನುಭವಿ ನಿರ್ದೇಶಕರಾದ ವೇಮಗಲ್ ಜಗನ್ನಾಥ್ ರಾವ್ ಅವರ ಈ ಚಿತ್ರದಲ್ಲಿ ಹೊಸಬರೇ ಅಭಿನಯಿಸಿದ್ದಾರೆ. ಹೊಸಬರ ಮತ್ತು ಹಳಬರ ಸಿನಿಮಾಗಳ ನಡುವೆ ಕುಳ್ಳನ ಹೆಂಡತಿ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು ಐದು ಸಿನಿಮಾಗಳು ಕನ್ನಡದಲ್ಲಿ ತೆರೆಗೆ ಬರುತ್ತಿವೆ.

First published: