ಈ ವಾರ ಚಂದನವನದಲ್ಲಿ ಮಕ್ಕಳ ಸಿನಿಮಾಗಳದ್ದೇ ಕಾರುಬಾರು..!

news18
Updated:August 25, 2018, 6:36 PM IST
ಈ ವಾರ ಚಂದನವನದಲ್ಲಿ ಮಕ್ಕಳ ಸಿನಿಮಾಗಳದ್ದೇ ಕಾರುಬಾರು..!
news18
Updated: August 25, 2018, 6:36 PM IST
ನ್ಯೂಸ್​ 18 ಕನ್ನಡ 

ಮಕ್ಕಳ ಸಿನಿಮಾ ದಸರಾ ಹಬ್ಬಕ್ಕೋ ಇಲ್ಲದಿದ್ದರೆ ಮಕ್ಕಳಿಗೆ ಬೇಸಿಗೆ ರಜೆ ಬಂದಾಗಲೋ ರಿಲೀಸ್ ಆಗುತ್ತವೆ. ಜಾಸ್ತಿ ದಿನ ಥಿಯೇಟರ್​ನಲ್ಲಿ ಉಳಿಯದೇ ಖಾಲಿ ಆಗುತ್ತವೆ. ಮಕ್ಕಳ ಸಿನಿಮಾ ಯಾರು ನೋಡ್ತಾರೆ ಅನ್ನೋ ಮಾತುಗಳೇ ಹೆಚ್ಚು. ಆದರೆ ಈಗ ಚಿತ್ರಮಂದಿರಗಳಲ್ಲಿ ಮಕ್ಕಳ ಸಿನಿಮಾಗಳದ್ದೇ ಹವಾ.

'ರಾಮಾ ರಾಮಾ ರೇ' ಚಿತ್ರದ ಮೂಲಕ ಗೆದ್ದಿದ್ದ ನಿರ್ದೇಶಕ ಸತ್ಯ ಮತ್ತು ಹೆಬ್ಬುಲಿ ಗೆಲುವಿನ ನಿರ್ಮಾಪಕ ಉಮಾಪತಿ ನಿರ್ಮಾಣದ ಮಕ್ಕಳ ಚಿತ್ರ 'ಒಂದಲ್ಲಾ ಎರಡಲ್ಲಾ' ವಿಮರ್ಶಕರಿಂದ ಮೆಚ್ಚುಗೆ ಗಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ದೊಡ್ಡ ಯಶಸ್ಸು ಪಡೆಯುವ ಲಕ್ಷಣಗಳಿವೆ.

ಕಿರಿಕ್‍ಪಾರ್ಟಿ ನಿರ್ದೇಶಕ ರಿಷಭ್‍ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಕೂಡ ಮೊದಲ ದಿನ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಮಕ್ಕಳ ಚಿತ್ರ ಅಲ್ಲ ಸ್ವತಃ ರಿಷಭ್ ಶೆಟ್ಟಿ ಹೇಳಿದರೂ ಗಮನ ಸೆಳೆಯುತ್ತಿದ್ದಿರೋದು ಮಕ್ಕಳ ಕಲರವ.

ಇನ್ನೊಂದು ಸಿನಿಮಾ ನೀವು ಗಮನಿಸಿರದಿದ್ದರೆ  ಅದು'ರಾಮರಾಜ್ಯ' ಅನ್ನೋ ಸಿನಿಮಾ. ಲವ್ಲೀಸ್ಟಾರ್ ಪ್ರೇಮ್ ಅವರ ಮಗ ಅಭಿನಯಿಸಿರೋ ಚಿತ್ರಕ್ಕೆ ಪ್ರಚಾರ ಕಡಿಮೆ ಸಿಕ್ಕರೂ, ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ.

 
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ