• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಈ ವಾರವೂ ಬಿಗ್​​ಬಾಸ್​ಗಿಲ್ಲ ಸುದೀಪ್ ಸಾರಥ್ಯ: ಕಿಚ್ಚನನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದ್ರೂ ಯಾವುದು?

ಈ ವಾರವೂ ಬಿಗ್​​ಬಾಸ್​ಗಿಲ್ಲ ಸುದೀಪ್ ಸಾರಥ್ಯ: ಕಿಚ್ಚನನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದ್ರೂ ಯಾವುದು?

Bigg boss 8

Bigg boss 8

  • Share this:

ಕನ್ನಡದ ಕಲರ್ಸ್​​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್​ 8ನೇ ಸೀಸನ್​​ನ ವಾರಂತ್ಯದ ಕಾರ್ಯಕ್ರಮಕ್ಕೆ ಈ ವಾರವೂ ನಟ ಸುದೀಪ್​ ಸಾರಥ್ಯವಿಲ್ಲ. ಕಳೆದ ವಾರದ ಕಾರ್ಯಕ್ರಮದಲ್ಲಿ ಕಿಚ್ಚನನ್ನು ಮಿಸ್​ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಈ ವಾರವೂ ಗುಡ್​ನ್ಯೂಸ್​ ಸಿಕ್ಕಿಲ್ಲ. ಈ ಬಾರಿಯೂ ‘ವಾರದ ಕಥೆ ಕಿಚ್ಚನ ಜೊತೆ’ ಇರೋದಿಲ್ಲ. ಈ ಬಗ್ಗೆ ಕಿಚ್ಚ ಸುದೀಪ್​ ಅವರೇ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಈ ವಾರವೂ ಬಿಗ್​ಬಾಸ್​ ನಡೆಸಿಕೊಡಲು ನನಗೆ ಸಾಧ್ಯವಾಗುತ್ತಿಲ್ಲ. ವೈದ್ಯರು ಮತ್ತಷ್ಟು ವಿಶ್ರಾಂತಿಗೆ ಸೂಚಿಸಿರುವುದರಿಂದ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.


ಅನಾರೋಗ್ಯದಿಂದ ಬಳಲುತ್ತಿರುವ ಸ್ಯಾಂಡಲ್​ವುಡ್​ ‘ರನ್ನ’ ಕಳೆದ ವಾರವೂ ವೀಕೆಂಡ್​​ ಕಾರ್ಯಕ್ರಮದ ನಿರೂಪಣೆಯಿಂದ ದೂರ ಉಳಿಸಿದ್ದರು. ಅನಾರೋಗ್ಯ ಕಾಡುತ್ತಿದ್ದು, ಗಂಟೆಗಳ ಕಾಲ ಶೂಟಿಂಗ್​ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಕಳೆದ ವಾರ ಸುದೀಪ್​​ ಅವರು ಇಲ್ಲದೆಯೇ ಎಲಿಮಿನೇಷನ್​ ಪ್ರಕ್ರಿಯೆ ಮುಗಿದಿತ್ತು. ಗಾಯಕ ವಿಶ್ವನಾಥ್​ ದೊಡ್ಡ ಮನೆಯಿಂದ ಹೊರ ಬಂದಿದ್ದರು. ಈ ವಾರ ಮತ್ತೆ ಸುದೀಪ್ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ. ನನಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಕಾರ್ಯಕ್ರಮದ ಚಿತ್ರೀಕರಣವನ್ನು ರದ್ದು ಮಾಡಲಾಗಿದೆ. ಇದಕ್ಕೆ ಬೆಂಬಲವಾಗಿ ನಿಂತಿರುವ ಕಲರ್ಸ್​​ ಕನ್ನಡ ವಾಹಿನಿಗೆ ಧನ್ಯವಾದಗಳು ಎಂದು ಟ್ವೀಟ್​ ಮಾಡಿದ್ದಾರೆ.ಸುಮಾರು 8 ವರ್ಷಗಳಿಂದ ಕನ್ನಡದ ಬಿಗ್​ಬಾಸ್​ ನಿರೂಪಣೆ ನಡೆಸಿಕೊಂಡು ಬರುತ್ತಿರುವ ಸುದೀಪ್​ ಅವರು ಮೊದಲ ಬಾರಿಗೆ ಕಳೆದ ವಾರ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಸತತ 2 ವಾರಗಳಿಂದ ಅನಾರೋಗ್ಯದ ಕಾರಣದಿಂದ ಸುದೀಪ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ್ದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಕಿಚ್ಚನನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದ್ರೂ ಯಾವುದು ಎಂಬ ದುಗುಡ ಅಭಿಮಾನಿಗಳಲ್ಲಿ ಮನೆ ಮಾಡಿದೆ.


ಇನ್ನು ಬಿಗ್​ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳು ಕಳೆದ ವಾರ ಸುದೀಪ್​​ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಎಂದು ತಿಳಿದಾಗ ಬೇಸರಗೊಂಡಿದ್ದರು. ಅವರಿಗಾಗಿ ಅಡುಗೆ ಮಾಡಿ, ಪ್ರೀತಿಯಿಂದ ಪತ್ರವೊಂದನ್ನು ಬರೆದು ಕಳುಹಿಸಿದ್ದರು. ಇದಕ್ಕೆ ಕಿಚ್ಚ ಸುದೀಪ್​ ಅವರು ಆಡಿಯೋ ಮೂಲಕ ಧನ್ಯವಾದ ತಿಳಿಸಿದ್ದರು. ಆಡಿಯೋದಲ್ಲಿ ಸುದೀಪ್​ ಅವರ ಧ್ವನಿ ಬಳಲಿದ್ದು ಅವರ ಫ್ಯಾನ್ಸ್​ಗೆ ಆತಂಕ ತಂದೊಡ್ಡಿತ್ತು. ರಾಜ್ಯದ ಹಲವೆಡೆ ಸುದೀಪ್​ ಅವರು ಬೇಗನೇ ಗುಣಮುಖರಾಗಲೆಂದು ಅಭಿಮಾನಿಗಳು ದೇಗುಲಗಳಿಗೆ ಪೂಜೆ ಸಲ್ಲಿಸಿದ್ದರು. ಟ್ವಿಟ್ಟರ್​ ಮೂಲಕವೇ ಇದಕ್ಕೆಲ್ಲಾ ಸುದೀಪ್​ ಸ್ಪಂದಿಸಿದ್ದರು.ಕಳೆದ ವಾರ ಸುದೀಪ್​​ ಬದಲು ಬೇರೊಬ್ಬ ಸ್ಟಾರ್​ ನಟ ಕಾರ್ಯಕ್ರಮದ ನಿರೂಪಣೆ ಹೊಣೆ ಹೊರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕಲರ್ಸ್​ ಕನ್ನಡ ವಾಹಿನಿ ಅವೆಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿತ್ತು. ಕಿಚ್ಚನ ಜಾಗಕ್ಕೆ ಬೇರೆ ಯಾರನ್ನೂ ತರದೆ, ಕ್ರಿಯೇಟಿವ್​ ಆಗಿ ಬಿಗ್​ಬಾಸ್​ ಎಲಿಮಿನೇಷನ್​ನ ಚಿತ್ರೀಕರಿಸಿತ್ತು. ಈ ವಾರವೂ ಮತ್ತೆ ಸುದೀಪ್​ ಜಾಗಕ್ಕೆ ಬೇರೆಯಾರಾದರೂ ಬರುತ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಳೆದ ವಾರದಂತೆ ಈ ವಾರದ ಕಾರ್ಯಕ್ರಮವನ್ನು ಸುದೀಪ್​ ಇಲ್ಲದೆಯೇ ವಿಭಿನ್ನವಾಗಿ ರೂಪಿಸುತ್ತಾರಾ ಕಾದು ನೋಡಬೇಕು. ಇನ್ನು ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್​ ಆದಷ್ಟು ಬೇಗ ಗುಣಮುಖರಾಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿ ಅನ್ನೋದು ಎಲ್ಲರ ಆಶಯ. Get well soon sudeep..

top videos
    First published: