ತುಚ್ಛವಾಗಿ ಮಾತನಾಡಿದ ರಣವೀರ್​ಗೆ ಕ್ಲಾಸ್​ ತೆಗೆದುಕೊಂಡ ಅನುಷ್ಕಾ ಶರ್ಮಾ, ವಿಡಿಯೋ ವೈರಲ್​

ಅನುಷ್ಕಾ ಹಾಗೂ ರಣವೀರ್​ ಇತ್ತೀಚೆಗೆ ‘ಕಾಫಿ ವಿತ್​ ಕರಣ್​’  ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಮಾತನಾಡುತ್ತಾ, ರಣವೀರ್​ ಸಿಂಗ್​ ಕರೀನಾ ಹಾಗೂ ಅನುಷ್ಕಾ​ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ.

ರಣವೀರ್​, ಅನುಷ್ಕಾ

ರಣವೀರ್​, ಅನುಷ್ಕಾ

  • News18
  • Last Updated :
  • Share this:
ಕರಣ್​ ಜೋಹರ್​ ನಡೆಸಿಕೊಡುವ ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಹಾರ್ದಿಕ್​ ಪಾಂಡ್ಯಾ ವಿವಾದ ಸೃಷ್ಟಿಸಿದ್ದರು. ಈಗ ರಣವೀರ್​ ಸಿಂಗ್​ ಕೂಡ ಇದೇ ಹಾದಿ ತುಳಿದಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ಕರೀನಾ ಬಗ್ಗೆ ರಣವೀರ್​  ತುಚ್ಛವಾಗಿ ಮಾತನಾಡಿದ್ದಾರೆ. ರಣವೀರ್​ ಮಾತನ್ನು ಕೇಳಿ ಎದುರಿದ್ದ ಅನುಷ್ಕಾ ಒಂದು ಕ್ಷಣ ದಂಗಾಗಿ ಹೋಗಿದ್ದರು. ರಣವೀರ್​ ಹೇಳಿಕೆಗೆ ಟ್ವಿಟ್ಟರ್​ನಲ್ಲಿ ವಿರೋಧ ಕೇಳಿ ಬಂದಿದೆ. ಈ ಬಗ್ಗೆ ಅನುಷ್ಕಾ ಕೂಡ ಕ್ಲಾಸ್​​ ತೆಗೆದುಕೊಂಡಿದ್ದಾರೆ.

ಅನುಷ್ಕಾ ಹಾಗೂ ರಣವೀರ್​ ಇತ್ತೀಚೆಗೆ ‘ಕಾಫಿ ವಿತ್​ ಕರಣ್​’  ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಮಾತನಾಡುತ್ತಾ, ರಣವೀರ್​ ಸಿಂಗ್​ ಕರೀನಾ ಕಪೂರ್​ ಬಗ್ಗೆ ಮಾತನಾಡಿದ್ದಾರೆ. ಅವರ ತುಚ್ಛ ಮಾತಿಗೆ ಕರಣ್​ ಜೋಹರ್​ ಒಮ್ಮೆ ಇರಿಸುಮುರಿಸುಗೊಂಡರು! “ಕರೀನಾ ಕಪೂರ್​ ಈಜುಕೊಳಕ್ಕೆ ಸ್ವಿಮ್​ ಮಾಡಲು ಬರುತ್ತಿದ್ದರು. ನಾನು ಆಗ ಚಿಕ್ಕವನಿದ್ದೆ. ಕರೀನಾ ಸ್ವಿಮ್ಮಿಂಗ್ ಮಾಡುವುದನ್ನು​ ನೋಡುತ್ತಾ ನಾನು ಪ್ರೌಢಾವಸ್ಥೆಗೆ ಬಂದೆ” ಎಂದರು ರಣವೀರ್​.

ಇದನ್ನೂ ಓದಿ: Uri Movie Review: ದ್ವೇಷ, ದೇಶಾಭಿಮಾನದ ಕಥೆ ಹೇಳುವ ‘ಉರಿ’ಇದಕ್ಕೆ ಉತ್ತರಿಸಿದ್ದ ಕರಣ್​, “ನೀನೊಬ್ಬ ಡರ್ಟಿ ಬಾಯ್​. ಕರೀನಾ ನನ್ನ ಸಹೋದರಿ ಇದ್ದಂತೆ. ನನ್ನೆದುರೇ ಅವಳ ಬಗ್ಗೆ ಹೀಗೆ ಮಾತನಾಡುತ್ತೀಯಲ್ಲ” ಎಂದರು. ಇದಕ್ಕೆ ಉತ್ತರಿಸಿದ ರಣವೀರ್​, ನನಗೆ ಅನಿಸಿದ್ದನು ಹೇಳಿದೆ. ಅದರಲ್ಲೇನಿದೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ನಂತರ ರಣವೀರ್​ ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದಲ್ಲಿ ಅನುಷ್ಕಾ ಜೊತೆ ಫ್ಲರ್ಟ್ ಮಾಡಿದ್ದಾರೆ! ರಣವೀರ್​ ಹೇಳಿಕೆ ಕೇಳಿ ಒಮ್ಮೆ ದಂಗಾದರು ಅನುಷ್ಕಾ. ನಂತರ “ನೀನು ನನ್ನ ಬಳಿ ಆರೀತಿ ಮಾತನಾಡಬಾರದು ಎಂದು” ರಣವೀರ್​ಗೆ ಹುಸಿ ಪೆಟ್ಟು ನೀಡಿದ್ದಾರೆ. ಈ ವೇಳೆ ರಣವೀರ್​ ಅವರು ಅನುಷ್ಕಾ ಬಳಿ ಕ್ಷಮೆ ಕೇಳಿದರು.

ಇದನ್ನೂ ಓದಿ: ದ್ವೇಷ, ದೇಶಾಭಿಮಾನದ ಕಥೆ ಹೇಳುವ ‘ಉರಿ’ಇತ್ತೀಚೆಗೆ ಪಾಂಡ್ಯಾ ಕೂಡ ಈ ಶೋನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮ ಲೈಂಗಿಕ ಜೀವನದ ಬಗ್ಗೆ ಮಾತನಾಡುತ್ತಾ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದರು. ಟ್ವಿಟ್ಟರ್​ನಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

First published: