Video: ನಟ ಜಾಕಿ ಶ್ರಾಫ್​ ಬೆಳ್ಳಿ ತೆರೆಯಿಂದ ಸೀದಾ ರಸ್ತೆಗಿಳಿದು ಟ್ರಾಫಿಕ್​ ನಿಯಂತ್ರಿಸಿದ ವಿಡಿಯೋ ವೈರಲ್​!

news18
Updated:July 23, 2018, 4:17 PM IST
Video: ನಟ ಜಾಕಿ ಶ್ರಾಫ್​ ಬೆಳ್ಳಿ ತೆರೆಯಿಂದ ಸೀದಾ ರಸ್ತೆಗಿಳಿದು ಟ್ರಾಫಿಕ್​ ನಿಯಂತ್ರಿಸಿದ ವಿಡಿಯೋ ವೈರಲ್​!
news18
Updated: July 23, 2018, 4:17 PM IST
ನ್ಯೂಸ್ 18 ಕನ್ನಡ

ನಟ ಜಾಕಿಶ್ರಾಫ್​ ಇತ್ತಿಚೆಗೆ ಸಿನಿಮಾ ಮಾಡೋದನ್ನು ಬಿಟ್ಟು ರಸ್ತೆಗಿಳಿದು ಟ್ರಾಫಿಕ್​ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಹೌದು ಇದಕ್ಕೆ ಸಾಕ್ಷಿಯಾಗಿ ಅವರೇ ತಮ್ಮ ಟ್ವಿಟರ್​ನಲ್ಲಿ ಒಂದು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಜಾಕಿ ಇತ್ತೀಚೆಗೆ ಲಕನೌನ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ನಿಂದಾಗಿ ಜನರು ಪರದಾಡುತ್ತಿದ್ದರು. ಅದೇ ದಾರಿಯಲ್ಲಿ ಬಂದ ಜಾಕಿ ತಕ್ಷಣ ಕಾರಿನಿಂದ ಇಳಿದು ಟ್ರಾಫಿಕ್​ ಕ್ಲಿಯರ್​ ಮಾಡಿ, ತಮ್ಮ ಕಾರು ಹತ್ತಿ ಮುಂದೆ ಸಾಗಿದ್ದಾರೆ.

ಜಾಕಿ ಶೇರ್​ ಮಾಡಿರುವ ಈ ವಿಡಿಯೋ ಅಂತರ್ಜಾಲದಲ್ಲಿ ದೂಳೆಬ್ಬಿಸುತ್ತಿದೆ. ಆ ವಿಡಿಯೋ ನಿಮಗಾಗಿ

Lucknow Traffic Control... pic.twitter.com/axCnD3DYQy


Loading...

ತೆಲುಗಿನ ಕಟ್ಟ ದೇವ ಅವರ ನಿರ್ದೇಶನದ 'ಪ್ರಸ್ಥಾನಂ' ಸಿನಿಮಾದ ಹಿಂದಿ ರಿಮೇಕ್​ನಲ್ಲಿ ಸಂಜಯ್​ ದತ್ ಜತೆ ಜಾಕಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣದ ಲಕನೌನಲ್ಲಿ ನಡೆಯುತ್ತಿದ್ದು, ಅದಕ್ಕೆ ಹೋಗುವಾಗ ಈ ಘಟನೆ ನಡೆದಿದೆ.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ