ಮೊದಲ ಬಾರಿಗೆ ಬ್ಯಾಟ್​ ಹಿಡಿದ ಲಿಲ್ಲಿ: 'ಡಿಯರ್​ ಕಾಮ್ರೆಡ್' ಚಿತ್ರದಲ್ಲಿ ಬಹಿರಂಗವಾಯಿತು ರಶ್ಮಿಕಾ ಪಾತ್ರ

'ಡಿಯರ್​ ಕಾಮ್ರೆಡ್'​ ಸಿನಿಮಾದ ಮತ್ತೊಂದು ಕನ್ನಡ ಹಾಡು ಬಿಡುಗಡೆಯಾಗಿದೆ. ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡರ ರೊಮ್ಯಾನ್ಸ್​ ಈ ಹಾಡಲ್ಲೂ ಮುಂದುವರೆದಿದೆ. ಈ ಹಾಟ್​ ಸಾಂಗ್​ನಲ್ಲೂ ಇದೆ ಒಂದು ವಿಶೇಷತೆ ಹಾಗೂ ಲಿಲ್ಲಿ ಅಭಿಮಾನಿಗಳಿಗೆ ಸಹಿ ಸುದ್ದಿ...

Anitha E | news18
Updated:May 15, 2019, 5:48 PM IST
ಮೊದಲ ಬಾರಿಗೆ ಬ್ಯಾಟ್​ ಹಿಡಿದ ಲಿಲ್ಲಿ: 'ಡಿಯರ್​ ಕಾಮ್ರೆಡ್' ಚಿತ್ರದಲ್ಲಿ ಬಹಿರಂಗವಾಯಿತು ರಶ್ಮಿಕಾ ಪಾತ್ರ
'ಡಿಯರ್​ ಕಾಮ್ರೆಡ್​'ನಲ್ಲಿ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ
Anitha E | news18
Updated: May 15, 2019, 5:48 PM IST
- ಅನಿತಾ ಈ, 

'ಡಿಯರ್ ಕಾಮ್ರೇಡ್'... ಹೆಸರು ಕೇಳಿದ ಕೂಡಲೇ ಕಣ್ಮುಂದೆ ಬರೋದೇ ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣರ ಹಾಟ್​ ಹಾಟ್ ರೊಮ್ಯಾನ್ಸ್​. ಹೌದು, ಈ ಸಿನಿಮಾದಲ್ಲಿ ರಶ್ಮಿಕಾ ಲಿಲ್ಲಿಯಾದರೆ, ವಿಜಯ್​ ದೇವರಕೊಂಡ ಬಾಬಿಯಾಗಿದ್ದಾರೆ.

ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಸಿನಿಮಾದಲ್ಲಿ ಲಿಲ್ಲಿ-ಬಾಬಿ ರೊಮ್ಯಾನ್ಸ್​ ಎಲ್ಲರ ಕಣ್ಣು ಕುಕ್ಕುವಂತಿದೆ. ಹೌದು, ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್​, ಟ್ರೈಲರ್​ ಹಾಗೂ ಹಾಡಿನಲ್ಲಿ ಇವರಿಬ್ಬರ ನಡುವಿನ ರೊಮ್ಯಾಂಟಿಕ್​ ಸೀನ್​ ನೋಡುಗರಿಗೆ ಹುಚ್ಚು ಹಿಡಿಸುತ್ತಿದೆ.

ಇದನ್ನೂ ಓದಿ: ಬಿ-ಟೌನ್​ನಲ್ಲಿ ಮತ್ತೆ ವಿಲನ್​ ಆದ ಸುದೀಪ್​: ಬೇರ್​ ಬಾಡಿ ಫೈಟ್​ನಲ್ಲಿ ಸಲ್ಲು ಜತೆ ಕೈ ಮಿಲಾಯಿಸಿದ ಕಿಚ್ಚ​..!

ಈ ಸಿನಿಮಾದ ಕನ್ನಡದ ಹೊಸ ರೊಮ್ಯಾಂಟಿಕ್​ ಲಿರಿಕಲ್​ ಹಾಡೊಂದು ಬಿಡುಗಡೆಯಾಗಿದ್ದು, ಇದರಲ್ಲಿ ರಶ್ಮಿಕಾ ಮಾಡುತ್ತಿರುವ ಪಾತ್ರ ರಿವೀಲ್​ ಆಗಿದೆ. ಹೌದು, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕ್ರಿಕೆಟ್​ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

 

ಇಲ್ಲಿಯವರೆಗೆ ರಶ್ಮಿಕಾ ಅವರ ಪಾತ್ರದ ಹೆಸರು ಮಾತ್ರ ರಿವೀಲ್​ ಆಗಿದ್ದು, ಈಗ ಅವರ ಪಾತ್ರ ಏನು ಎಂದೂ ಬಹಿರಂಗವಾಗಿದೆ. ಈ ಸಿನಿಮಾದಲ್ಲಿ ಅಬಿನಯಿಸುವ ಮುನ್ನ ರಶ್ಮಿಕಾ ಮಂದಣ್ಣ ಗಂಟೆಗಟ್ಟಲೆ ಜಿಮ್​ನಲ್ಲಿ ಬೆವರಿಳಿಸುತ್ತಿದ್ದರು. ಆಗಲೇ ಅವರು ಕ್ರೀಡಾಪಟು ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಆದರೆ ಈಗ ಆ ಸಿನಿಮಾ 'ಡಿಯರ್​ ಕಾಮ್ರೆಡ್​' ಎಂದು ಗೊತ್ತಾಗಿದೆ.

ಇದನ್ನೂ ಓದಿ: ತಮಿಳಿನ ರೌಡಿ ಬೇಬಿ, ಕನ್ನಡದಲ್ಲಿ ಪೊಲೀಸ್ ಬೇಬಿ : ಶ್ರದ್ಧಾ ಜೊತೆ ಶಿವರಾಜ್‍ಕುಮಾರ್ ಸಖತ್ ಸ್ಟೆಪ್​ !

ಭರತ್ ಕಮ್ಮಾ ನಿರ್ದೇಶನದ ಈ ಚಿತ್ರದ ಹೊಸ ಕನ್ನಡದ ಹಾಡು ಈಗ ಪಡ್ಡೆಗಳ ನಿದ್ದೆಗೆಡಿಸಿದೆ. 'ಕಡಲಂತೆ ಕಾದ ಕಣ್ಣು....' ಹಾಡು ಮಳೆಯಲ್ಲಿ ಚಿತ್ರೀಕರಿಸಲಾಗಿದ್ದು, ಇಲ್ಲೂ ಸಹ ಈ ಜೋಡಿ ಮುತ್ತಿನ ಮಳೆಯನ್ನೇ ಸುರಿಸಿದೆ . ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್ ಆಗ್ತಿದೆ. ಜಸ್ಟಿನ್ ಪ್ರಭಾಕರನ್ ನೀಡಿರುವ ಸಂಗೀತ ಕೇಳುಗರನ್ನ ತನ್ನತ್ತ ಸೆಳೆಯುತ್ತಿದೆ.  ಈ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪೋಸ್ಟ್​ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.  ಸಿನಿಮಾ ಜುಲೈ 26ಕ್ಕೆ ನಾಲ್ಕೂ ಭಾಷೆಗಳಲ್ಲಿ ತೆರೆಗೆ ಬರಲಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

PHOTOS: ಹೊಸ ಅವತಾರದಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ..! 

 
First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ