Scream Artist: ಈ ಮಹಿಳೆಗೆ ಕಿರುಚೋದೇ ಕೆಲಸವಂತೆ! ಅರೇ ಇದೇನಂತ ಯೋಚ್ನೆ ಮಾಡ್ತಾ ಇದ್ದೀರಾ? ಇಲ್ಲಿದೆ ನೋಡಿ

ಸಮಾಜದಲ್ಲಿ ಹೇಗೆ ಪ್ರತಿಷ್ಠಿತ ಉದ್ಯೋಗಳಿವೆಯೋ ಅದರ ಜೊತೆ ಕೆಲವು ವಿಚಿತ್ರ ಎನಿಸುವ ಕೆಲಸ ಕೂಡ ಇವೆ. ಹೊಸದಾಗಿ ಅವುಗಳ ಬಗ್ಗೆ ಕೇಳುವ ನಮಗೆ ಈ ಕೆಲಸಕ್ಕೆ ಸಂಬಳ ಕೊಡ್ತಾರಾ? ಇಂಥದ್ದೊಂದು ಕೆಲಸ ಇದಿಯಾ ಅನ್ನಿಸಬಹುದು. ಹೌದು, ವಿಚಿತ್ರ ಎನಿಸುವ ಕೆಲಸದಲ್ಲಿ ಇಲ್ಲೊಬ್ಬ ಮಹಿಳೆಯ ಜೀವನ ನಡೆಯುತ್ತಿದೆ ನೋಡಿ. ಏನದು ಅಂತೀರಾ, ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ.

ಆಶ್ಲೇ ಪೆಲ್ಡನ್

ಆಶ್ಲೇ ಪೆಲ್ಡನ್

  • Share this:
ದುಡಿದು, ನಾಲ್ಕ್ ಕಾಸು ಸಂಪಾದಿಸಬೇಕು ಅಂದರೆ ಜಗತ್ತಿನಲ್ಲಿ ನಾನಾ ಉದ್ಯೋಗಗಳಿವೆ. ದಿನಗೂಲಿಯಿಂದ ಹಿಡಿದು ಸಿಇಒವರೆಗೆ ಹಲವಾರು ಹುದ್ದೆಗಳನ್ನು ನೋಡಬಹುದು. ಸಮಾಜದಲ್ಲಿ (Society) ಹೇಗೆ ಪ್ರತಿಷ್ಠಿತ ಉದ್ಯೋಗಳಿವೆಯೋ ಅದರ ಜೊತೆ ಕೆಲವು ವಿಚಿತ್ರ ಎನಿಸುವ ಕೆಲಸ (work) ಕೂಡ ಇವೆ. ಹೊಸದಾಗಿ ಅವುಗಳ ಬಗ್ಗೆ ಕೇಳುವ ನಮಗೆ ಈ ಕೆಲಸಕ್ಕೆ ಸಂಬಳ (Salary) ಕೊಡ್ತಾರಾ? ಇಂಥದ್ದೊಂದು ಕೆಲಸ ಇದಿಯಾ ಅನ್ನಿಸಬಹುದು. ಹೌದು, ವಿಚಿತ್ರ ಎನಿಸುವ ಕೆಲಸದಲ್ಲಿ ಇಲ್ಲೊಬ್ಬ ಮಹಿಳೆಯ (women) ಜೀವನ ನಡೆಯುತ್ತಿದೆ ನೋಡಿ. ಏನದು ಅಂತೀರಾ, ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ. ಸಾಮಾನ್ಯವಾಗಿ ಯಾರಾದರೂ ದೊಡ್ಡದಾಗಿ ಮಾತನಾಡಿದ್ರೆ, ಕಿರುಚಿದ್ರೆ, ಎಷ್ಟು ದೊಡ್ಡ ಬಾಯಿ ನಿಂದು, ಕಿರುಚು (Scream) ಬೇಡ ಸುಮ್ನಿರು ಅಂತೀವಿ. ಆದರೆ ನಿಮಗೆ ಗೊತ್ತಾ ಇಲ್ಲೊಂದು ಮಹಿಳೆಗೆ ಕಿರುಚೋದೆ ಒಂದು ಉದ್ಯೋಗವಂತೇ.

ಕಿರುಚಾಟದ ದೃಶ್ಯಗಳಿಗೆ ಧ್ವನಿ ಮೂಲಕ ಜೀವ ತುಂಬುತ್ತಾಳೆ ಆಶ್ಲೇ
ಆಶ್ಲೇ ಪೆಲ್ಡನ್, ವೃತ್ತಿಯಲ್ಲಿ "ಸ್ಕ್ರೀಮ್ ಆರ್ಟಿಸ್ಟ್". ಚೆನ್ನಾಗಿ ಬಾಯಿ ಹರಿದು ಹೋಗುವಂತೆ ಕಿರುಚೋದೆ ಇವಳ ಕೆಲಸ ಮತ್ತು ಉದ್ಯೋಗ. ಬಿಟ್ಟಿ ಏನು ಕಿರುಚಲ್ಲ ಅದಕ್ಕೆ ತಕ್ಕಂತೆ ಸಂಬಳ ಕೂಡ ಪಡೆಯುತ್ತಾಳೆ. ಮೈಕ್ ಮುಂದೆ ಗಂಟೆಗಟ್ಟಲೆ ಕಿರುಚುತ್ತಾ ವಿವಿಧ ಶಬ್ದಗಳನ್ನು ರೆಕಾರ್ಡ್ ಮಾಡುತ್ತಾಳೆ. ಆಶ್ಲೇ ಪೆಲ್ಡನ್ ಮಾಡುವ ಈ ರೆಕಾರ್ಡಿಂಗ್‌ಗಳನ್ನು ನಂತರ ಟಿವಿ ಕಾರ್ಯಕ್ರಮ, ಚಲನಚಿತ್ರಗಳು, ಇತ್ಯಾದಿಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ಸಿನಿಮಾ, ಟಿವಿ ಶೋಗಳಲ್ಲಿ ಡಬ್ಬಿಂಗ್, ವಾಯ್ಸ್ ಓವರ್ ಅಂತಾ ಮಾಡುತ್ತಾರೆ. ಕೆಲವು ಸಿನಿಮಾ, ಟಿವಿ ಶೋಗಳು ಕಿರುಚಾಟದ ದೃಶ್ಯಗಳನ್ನು ಹೊಂದಿರುತ್ತವೆ. ಅಂತಹ ಧ್ವನಿಗೆ ಈಕೆ ತನ್ನ ಧ್ವನಿ ನೀಡಿ ಡಬ್ ಮಾಡುತ್ತಾಳೆ.

ಸಿನಿಮಾಗಳಲ್ಲಿ ಕೆಲವು ಕೂಗಿಕೊಳ್ಳುವ ಸನ್ನಿವೇಶಗಳಿಗೆ ಈಕೆಯದ್ದೇ ಧ್ವನಿಯಂತೆ
ಭೂತ-ಪ್ರೇತದಂತ ಸಿನಿಮಾಗಳಲ್ಲಿ, ಹೊಡೆದಾಡುವ ದೃಶ್ಯ, ಭಯದಿಂದ ಕೂಗುವ ಸನ್ನಿವೇಶ ಹೀಗೆ ಹೆಚ್ಚಿನ ಸೀನ್ ಗಳಲ್ಲಿ ಹಾಕಿಕೊಳ್ಳುವ ಕಿರುಚಾಟದ ದೃಶ್ಯಗಳಿಗೆ ಆಶ್ಲೇ ಪೆಲ್ಡನ್ ಧ್ವನಿಯನ್ನು ಡಬ್ ಮಾಡಲಾಗುತ್ತದೆ. ಈ ಮೂಲಕ ಸಿನಿಮಾಗಳಿಗೆ ಸ್ಕ್ರೀಮ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಳೆ ಆಶ್ಲೇ ಪೆಲ್ಡನ್.

ಇದನ್ನೂ ಓದಿ: Hair Cut: 3 ಲಕ್ಷ ರೂ. ದುಬಾರಿ ಎಂದು ಟರ್ಕಿಗೆ ತೆರಳಿ 17 ಲಕ್ಷ ರೂ ಖರ್ಚು ಮಾಡಿ ಹೇರ್ ಕಟ್ ಮಾಡಿಸಿದ ಮಹಿಳೆ

ಆಶ್ಲೇ ಸ್ಕ್ರೀಮಿಂಗ್ ಕಲೆಯಲ್ಲಿ ಪರಿಣತಿ ಪಡೆದಿದ್ದಾರೆ. ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ, ಸ್ಕ್ರೀಮ್ ಆರ್ಟಿಸ್ಟ್ ಕೆಲಸವು ಸ್ಟಂಟ್‌ ಮಾಸ್ಟರ್ ಕೆಲಸಕ್ಕೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ವಿವರಿಸಿದರು. ಅವರು ಹೇಳಿದರು, “ನಾವು ಸ್ಟಂಟ್ ಮಾಸ್ಟರ್ ಅಂತೆಯೇ, ನಟರ ಧ್ವನಿಗೆ ಅಥವಾ ವ್ಯಾಪ್ತಿಯಿಂದ ಹೊರಗಿರುವ ಕಠಿಣವಾದ ಕೆಲಸವನ್ನು ಮಾಡುತ್ತೇವೆ. 2015ರ ಜುರಾಸಿಕ್ ವರ್ಲ್ಡ್ ಚಲನಚಿತ್ರದಲ್ಲಿ ಡೈನೋಸಾರ್‌ಗಳು ದಾಳಿ ಮಾಡಿದಾಗ ಮತ್ತು ಜನರು ಓಡುತ್ತಿರುವುದನ್ನು ನೀವು ನೋಡಿರಬಹುದು. ಅಲ್ಲಿ ನಿಮಗೆ ಆ ಕಿರುಚಾಟಗಳು ಹೇಗಿವೆ ಎಂಬುವುದು ಗೊತ್ತು. ನಾನು ಕೂಡ ಆ ಕಿರುಚಾಟದ ಧ್ವನಿಯಲ್ಲಿ ಭಾಗವಾಗಿದ್ದೆ” ಎನ್ನುತ್ತಾರೆ ಆಶ್ಲೇ.

ಕಿರುಚಾಟದ ಧ್ವನಿಯನ್ನು ಡಬ್ ಮಾಡುವಾಗ ರೋಷ ಬರಿಸಿಕೊಳ್ಳಬೇಕು
"ಕಿರುಚಾಟದ ಧ್ವನಿಯನ್ನು ಡಬ್ ಮಾಡುವಾಗ ನಾನು ಸಹ ಭಾವುಕವಾಗಬೇಕು, ರೋಷ ಬರಿಸಿಕೊಳ್ಳಬೇಕು. ದೃಶ್ಯಗಳಿಗೆ ಜೀವ ತುಂಬಲು ನನ್ನ ಧ್ವನಿಯಲ್ಲಿಯೇ ಎಲ್ಲಾ ಶಕ್ತಿ ಮತ್ತು ಚಲನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತೇನೆ. ದೃಶ್ಯ ನೋಡುತ್ತಿದ್ದಂತೆ ಸ್ವಾಭಾವಿಕವಾಗಿ ಬಂದು ಬಿಡುತ್ತದೆ’’ ಎಂದು ಅವರು ಹೇಳಿದರು.

ಇದನ್ನೂ ಓದಿ: Meghana Raj: ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎಂದ ರಾಯನ್, ಚಿರು ಮಗನ ಮುದ್ದಾದ ವಿಡಿಯೋ ನೋಡಿ

ಆಶ್ಲೇ 7 ವರ್ಷ ವಯಸ್ಸಿನಿಂದಲೂ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಆನ್-ಸ್ಕ್ರೀನ್ ನಟಿಯಾಗಿ ಪ್ರಾರಂಭಿಸಿ ನಂತರ ಮಧ್ಯ 20ರ ಪ್ರಾಯದಲ್ಲಿ, ವಾಯ್ಸ್ ಓವರ್ ಕಲಾವಿದರಾದರು. ಆಶ್ಲೇ ಸಂದರ್ಶನದಲ್ಲಿ, “ಕೆಲಸ ಮುಗಿಸಿ ಮನೆಗೆ ಹೋದ ನಂತರ ಸಾಧ್ಯವಾದಷ್ಟು ಶಾಂತಿ ಇಂದ ಇರಲು ಪ್ರಯತ್ನಿಸುತ್ತೇನೆ’’ ಎಂದಿದ್ದಾರೆ. 2015ರ ಜುರಾಸಿಕ್ ವರ್ಲ್ಡ್ ಸಿನಿಮಾ ಸೇರಿ ಆಶ್ಲೇ ಫ್ರೀ ಗೈ, ಪ್ಯಾರಾನಾರ್ಮಲ್ ಆಕ್ಟಿವಿಟಿ ಮತ್ತು ಸ್ಕ್ರೀಮ್ (2022) ನಂತಹ ಚಲನಚಿತ್ರಗಳಿಗಾಗಿ ಆಶ್ಲೇ ತನ್ನ ಕಿರುಚಾಟದ ಧ್ವನಿಯನ್ನು ನೀಡಿದ್ದಾಳೆ.
Published by:Ashwini Prabhu
First published: