ಬಾಲ್ಯದ ಆಲಿಯಾ ಭಟ್ ಫೋಟೋಗೆ ಅಭಿಮಾನಿಗಳು ಫುಲ್ ಫಿದಾ

news18
Updated:July 21, 2018, 10:07 PM IST
ಬಾಲ್ಯದ ಆಲಿಯಾ ಭಟ್ ಫೋಟೋಗೆ ಅಭಿಮಾನಿಗಳು ಫುಲ್ ಫಿದಾ
news18
Updated: July 21, 2018, 10:07 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​​ನ ಮುದ್ದು ಮುಖದ ಬೆಡಗಿ ಆಲಿಯಾ ಭಟ್​ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಒಂದು ಭರ್ಜರಿ ವೈರಲ್ ಆಗುತ್ತಿದೆ. ಹಿರಿಯ ನಟ ಪರೇಶ್​ ರಾವಲ್ ಅವರೊಂದಿಗೆ 1998 ರಲ್ಲಿ ಕ್ಲಿಕ್ಕಿಸಿದ ಈ ಫೋಟೋವನ್ನು ಆಲಿಯಾ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದೇ ತಡ, ಬಾಲ್ಯದ ಮುದ್ದು ಬೆಡಗಿಗೆ ಕಮೆಂಟ್​ಗಳ ಮಹಾಪೂರವೇ ಹರಿದು ಬಂದಿದೆ.
A post shared by Alia ✨⭐️ (@aliaabhatt) on


Loading...ತಂದೆ ಮಹೇಶ್​ ಭಟ್​ ನಿರ್ದೇಶನದ 'ತಮನ್ನಾ' ಚಿತ್ರದ ಶೂಟಿಂಗ್​ ಸೆಟ್​ನಲ್ಲಿ ಈ ಫೋಟೊವನ್ನು ಸೆರೆ ಹಿಡಿಯಲಾಗಿತ್ತು. ಬಾಲ್ಯದ ಸವಿ ನೆನಪಿನ ಈ ಚಿತ್ರವನ್ನು ಆಲಿಯಾ ಸಾಮಾಜಿಕ ತಾಣದಲ್ಲಿ ಅಪ್​ಲೋಡ್​ ಮಾಡಿದ್ದರು. ಇದನ್ನು ನೋಡಿದ ನಟ ಪರೇಶ್ ರಾವಲ್ ಕೂಡ ಶೇರ್ ಮಾಡಿದ್ದು, ಫೋಟೊಗೆ 'ಪ್ರತಿಭಾನ್ವಿತ ನಟಿಯ ಮೊದಲ ಸಹನಟ ಆಗಿದ್ದು ನನ್ನ ಭಾಗ್ಯ' ಎಂದು ಶೀರ್ಷಿಕೆ ನೀಡಿದ್ದರು.


ನಟ ಪರೇಶ್ ರಾವಲ್ ಅವರೊಂದಿಗೆ ಸ್ಟೂಲ್​ನಲ್ಲಿ ಕೂತಿರುವ ಈ ಫೋಟೊದಲ್ಲಿ ಆಲಿಯಾ ಗೊಂಬೆಯಂತೆ ಕಾಣುತ್ತಾಳೆ ಎಂದು ಅಕ್ಕ ಪೂಜಾ ಭಟ್​ ಹೊಗಳಿದ್ದು, ತನ್ನ ಮೊದಲ ಸಿನಿಮಾ 'ತಮನ್ನಾ' ಶೂಟಿಂಗ್​ನ ನೆನಪುಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.A post shared by Pooja B (@poojab1972) on

ತನ್ನ ಮುದ್ದಾದ ಅಭಿನಯದಿಂದಲೇ ಬಿಟೌನ್​ನಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ಆಲಿಯಾ ಸದ್ಯ ಮೇರು ನಟ ಅಮಿತಾಭ್ ಬಚ್ಚನ್​ ಅವರೊಂದಿಗೆ ನಟಿಸುತ್ತಿದ್ದಾರೆ. 'ಬ್ರಹ್ಮಾಸ್ತ್ರ' ಎಂಬ ಹೆಸರಿನ ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ಗೆ ನಾಯಕಿಯಾಗಿ ಆಲಿಯಾ ಭಟ್​ ಕಾಣಿಸಿಕೊಳ್ಳಲಿದ್ದು, ಚಿತ್ರವು 2019ರಲ್ಲಿ ತೆರೆಗೆ ಬರಲಿದೆ.
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...