Samantha Ruth Prabhu ಫೇವರಿಟ್ ತಿಂಡಿ ಅಂತೆ ಈ ಸ್ಪೆಷಲ್ ಇಡ್ಲಿ, ನೀವೂ ಒಮ್ಮೆ ಟ್ರೈ ಮಾಡಿ

ಓಟ್ಸ್ ಒಂದು ಆರೋಗ್ಯಕರ ಧಾನ್ಯಗಳಲ್ಲಿ ಒಂದಾಗಿದೆ. ಈ ಪೌಷ್ಟಿಕ ಆಹಾರ ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಓಟ್ಸ್‌ ಫಿಟ್ ಆಗಿರಲು ಬಯಸುವವರಿಗೆ ಒಂದು ಉತ್ತಮ ಆಹಾರ ಎನ್ನುತ್ತಾರೆ ತಜ್ಞರು. ಹೀಗಾಗಿ ಸಮಂತಾ ಕೂಡ ಓಟ್ಸ್ ನಲ್ಲಿ ತಯಾರಾಗುವ ಈ ಇಡ್ಲಿಯನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರಂತೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಮಂತಾ, ತೆಲುಗು (Telugu) ಮತ್ತು ತಮಿಳು ಸಿನಿಮಾ ಕ್ಷೇತ್ರದಲ್ಲಿ ಬಹುಬೇಡಿಕೆ ನಟಿ. ನಟನೆ, ಸೌಂದರ್ಯ ಹೇಗೆ ಎಲ್ಲದಕ್ಕೂ ಸೈ ಎನಿಸಿಕೊಂಡಿರುವ ಬೋಲ್ಡ್ ಬ್ಯೂಟಿ (Bold Beauty) ತನ್ನ ಫಿಟ್ ನೆಸ್ ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಡಯಟ್ (Diet) ವಿಚಾರಕ್ಕೆ ಬಂದರೆ ಸಮಂತಾ ತುಂಬಾ ಕಟ್ಟುನಿಟ್ಟಿನ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರಂತೆ. ಡಯಟ್ ನಲ್ಲಿದ್ದರೂ ಸಮಂತಾಗೆ (Samantha) ಭಾರತೀಯ ಉಪಾಹಾರಗಳಲ್ಲಿ ತುಂಬಾ ಫೇಮಸ್ ಆಗಿರುವ ಇಡ್ಲಿ (Idli) ಅಂದರೆ ತುಂಬಾ ಇಷ್ಟ ಅಂತೆ. ಅದನ್ನು ಕೂಡ ಓಟ್ಸ್, ಕ್ಯಾರೆಟ್ ನಂತಹ ಆರೋಗ್ಯಕರ (Healthy) ಪದಾರ್ಥಗಳನ್ನು ಹಾಕಿ ತಯಾರಿಸಿಕೊಳ್ಳುತ್ತಾರಂತೆ.

ಓಟ್ಸ್ ಒಂದು ಆರೋಗ್ಯಕರ ಧಾನ್ಯಗಳಲ್ಲಿ ಒಂದಾಗಿದೆ. ಈ ಪೌಷ್ಟಿಕ ಆಹಾರ ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಓಟ್ಸ್‌ ಫಿಟ್ ಆಗಿರಲು ಬಯಸುವವರಿಗೆ ಒಂದು ಉತ್ತಮ ಆಹಾರ ಎನ್ನುತ್ತಾರೆ ತಜ್ಞರು. ಹೀಗಾಗಿ ಸಮಂತಾ ಕೂಡ ಓಟ್ಸ್ ನಲ್ಲಿ ತಯಾರಾಗುವ ಈ ಇಡ್ಲಿಯನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರಂತೆ.

ನಟಿ ಸಮಂತಾ ಅವರ ಇಷ್ಟದ ಓಟ್ಸ್,ರವೆ, ಕ್ಯಾರೆಟ್ ಮಿಶ್ರಣದ ಈ ಇಡ್ಲಿಯನ್ನು ಹೇಗೆ ಮಾಡೋದು, ಏನೆಲ್ಲಾ ಪದಾರ್ಥಗಳು ಬೇಕು? ಪಾಕ ಪದ್ಧತಿ ಏನು ನೋಡೋಣ ಬನ್ನಿ.

ಬೇಕಾಗಿರುವ ಪದಾರ್ಥಗಳು

  • ಎಣ್ಣೆ - ½ ಚಮಚ

  • ಸಾಸಿವೆ - ½ ಟೀಚಮಚ

  • ಜೀರಿಗೆ - ½ ಟೀಚಮಚ

  • ಉದ್ದಿನಬೇಳೆ - ½ ಟೀಚಮಚ

  • ಕಡ್ಲೆ ಬೇಳೆ - 1 ಟೀಸ್ಪೂನ್

  • ಇಂಗು - 1 ಚಿಟಿಕೆ

  • ಕತ್ತರಿಸಿದ ಹಸಿ ಮೆಣಸಿನಕಾಯಿ – 1

  • ಕತ್ತರಿಸಿದ ಕೊತ್ತಂಬರಿ ಸೊಪ್ಪು

  • ಕತ್ತರಿಸಿದ ಕರಿಬೇವಿನ ಎಲೆಗಳು

  • ತುರಿದ ಕ್ಯಾರೆಟ್ - 1

  • ಪೌಡರ್ ಓಟ್ಸ್ - 1 ಕಪ್

  • ರವೆ - ½ ಕಪ್

  • ನೀರು - 1 ಕಪ್

  • ರುಚಿಗೆ ಉಪ್ಪು


ಓಟ್ಸ್ ಇಡ್ಲಿ ಮಾಡುವ ವಿಧಾನ
ಹಂತ 1: ಒಲೆ ಮೇಲೆ ಬಾಣಲೆ ಇರಿಸಿ ಸ್ವಲ್ಪ ಎಣ್ಣೆ ಹಾಕಿ. ಅದು ಕಾದ ನಂತರ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಸೇರಿಸಿ ಅವುಗಳನ್ನು ಸ್ವಲ್ಪ ಹುರಿದುಕೊಳ್ಳಿ ನಂತರ ಆ ಮಿಶ್ರಣಕ್ಕೆ ಇಂಗು ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳು ಸೇರಿಸಿ ಸ್ವಲ್ಪ ಹುರಿದುಕೊಳ್ಳಿ.

ಇದನ್ನೂ ಓದಿ:  Keto Diet Plan: ಕೀಟೊ ಡಯಟ್ ಪ್ಲಾನ್ ಫಾಲೋ ಮಾಡಿ ತೂಕ ಇಳಿಸಿದ ಸೆಲೆಬ್ರಿಟಿಗಳು ಮತ್ತು ಆರೋಗ್ಯ

ಹಂತ 2: ನಂತರ ಆ ಮಿಶ್ರಣಕ್ಕೆ ರವೆ ಸೇರಿಸಿ ಮತ್ತು ಮಿಶ್ರಣವು ಸುವಾಸನೆ ಬರುವ ತನಕ ಹುರಿಯಿರಿ.

ಹಂತ 3 : ಹುರಿದ ರವೆ ಇರುವ ಮಿಶ್ರಣಕ್ಕೆ ಈಗ ತುರಿದ ಕ್ಯಾರೆಟ್ ಸೇರಿಸಿ ಮತ್ತೆ ಸ್ವಲ್ಪ ಹೊತ್ತು ಚೆನ್ನಾಗಿ ಹುರಿಯಿರಿ.

ಹಂತ 4: ಕೊನೆಗೆ ಪುಡಿಮಾಡಿದ ಓಟ್ಸ್ ಸೇರಿಸಿ ಹುರಿದುಕೊಳ್ಳಿ. ನಂತರ ಒಲೆ ಆಫ್ ಮಾಡಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ.

ಹಂತ 5: ತಣ್ಣಗಾದ ಓಟ್ಸ್ ಮಿಶ್ರಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪಿನೊಂದಿಗೆ ಸ್ವಲ್ಪ ನೀರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 20 ನಿಮಿಷಗಳ ಕಾಲ ಹಾಗೆ ಬಿಡಿ.

ಹಂತ 6: ಈಗ ಒಲೆ ಮೇಲೆ ಇಡ್ಲಿ ಪಾತ್ರೆ ಅಥವಾ ಕುಕ್ಕರ್ ನಲ್ಲಿ
ನೀರು ಬಿಸಿಯಾಗಲು ಬಿಡಿ. ಸ್ಟೀಮರ್ ಸಿದ್ಧವಾದ ನಂತರ, ಓಟ್ಸ್-ಇಡ್ಲಿ ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ ಮುಚ್ಚಳ ಮುಚ್ಚಿ.

ಹಂತ 7: ಸುಮಾರು 15 ರಿಂದ 20 ನಿಮಿಷಗಳ ಕಾಲ ಇಡ್ಲಿಗಳನ್ನು ಸ್ಟೀಮ್ ಮಾಡಿ. ಟೂತ್‌ಪಿಕ್ ಅಥವಾ ಪೋರ್ಕ್ ತೆಗೆದುಕೊಂಡು ಇಡ್ಲಿಗಳಿಗೆ ಚುಚ್ಚಿ ನೋಡಿ. ಹಿಟ್ಟು ಇವುಗಳಿಗೆ ಅಂಟಿಕೊಳ್ಳದಿದ್ದರೆ ಇಡ್ಲಿ ಸಂಪೂರ್ಣ ಬೆಂದಿದೆ ಎಂದು ಅರ್ಥ.

ಹಂತ 8: ನಂತರ ಎಲ್ಲಾ ಇಡ್ಲಿಗಳನ್ನು ತೆಗೆದು ನೀವು ಬೇಕಿದ್ದಲ್ಲಿ ಹಾಟ್ ಬಾಕ್ಸ್ ನಲ್ಲಿ ಇರಿಸಬಹುದು. ಈ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ತಿಂದರಂತೂ ಅದ್ಭುತವಾಗಿರುತ್ತದೆ.

ಇದನ್ನೂ ಓದಿ: Parenting Tips: ಮಗಳ ಜೊತೆ ಹೇಗಿರ್ತಾರೆ ಐಶ್ವರ್ಯಾ ರೈ? ಬಾಲಿವುಡ್ ನಟಿ ಕೊಟ್ಟಿದ್ದಾರೆ ಬೆಸ್ಟ್ ಟಿಪ್ಸ್

ನೀವೂ ಇಡ್ಲಿ ಮಾಡಲು ಪ್ಲ್ಯಾನ್ ಮಾಡುತ್ತಿದ್ದರೆ ಸಮಂತಾಳ ಇಷ್ಟದ ಈ ಹೆಲ್ತಿ ರೆಸಿಪಿಯನ್ನು ಒಮ್ಮೆ ಮಾಡಿ ನೋಡಿ.
Published by:Ashwini Prabhu
First published: