ಚಿತ್ರರಂಗದಲ್ಲಿ ಸ್ಟಾರ್ ವಾರ್ (Star War) ಇರುವುದು ಕಾಮನ್. ಸ್ಯಾಂಡಲ್ವುಡ್(Sandalwood)ನಲ್ಲಿ ಸ್ಟಾರ್ ವಾರ್ ಕಡಿಮೆ. ಆದರೆ, ಬೇರೆ ಭಾಷೆಯ ಚಿತ್ರರಂಗದಲ್ಲಿ ಇದು ಕಾಮನ್. ಅದರಲ್ಲೂ ತಮಿಳು ಸಿನಿಮಾರಂಗ(Tamil Cinema Industry)ದಲ್ಲಿ ಸ್ಟಾರ್ ವಾರ್ ಅನ್ನೋದು ಮೊದಲಿನಿಂದಲೂ ಇದೆ. ತಮಿಳುನಾಡಿನಲ್ಲಿ ಅಜಿತ್ (Ajith) ಹಾಗೂ ವಿಜಯ್ (Vijay) ಅಭಿಮಾನಿಗಳ ನಡುವಿನ ವೈರತ್ವ ಇನ್ನಾವುದೇ ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಲ್ಲ. ಅಜಿತ್ ಹಾಗೂ ವಿಜಯ್ ಅಭಿಮಾನಿಗಳದ್ದು ಸದಾ ಕಿತ್ತಾಟ. ಈ ಬಾರಿಯಂತೂ ಈ ವೈಷಮ್ಯ ಮೇರೆ ಮೀರಿದೆ. ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಅಜಿತ್ ಅಭಿಮಾನಿಗಳು. ಇದನ್ನು ಕಂಡ ನೆಟ್ಟಿಗರು ಈ ರೀತಿಯ ಸ್ಟಾರ್ ವಾರ್ ಮಾಡುವುದು ಒಳ್ಳೆಯದ್ದಲ್ಲ ಎಂದು ಹೇಳಿದ್ದಾರೆ. ಹೌದು, ಇಂದು ಬೆಳ್ಳಂಬೆಳಗ್ಗೆ ಟ್ವೀಟರ್ ಓಪನ್ ಮಾಡಿದವರಿಗೆ ಶಾಕ್ ಎದುರಾಗಿತ್ತು. ಕಾರಣ #RIPJosephVijay ಅಂತ ಟ್ಯಾಗ್ ಟ್ರೇಡಿಂಗ್ನಲ್ಲಿತ್ತು.
#RIPjosephVijay ಎಂದು ಟ್ವೀಟ್ ಮಾಡಿದ ಅಜಿತ್ ಫ್ಯಾನ್ಸ್!
ಮೊದಲಿನಿಂದಲೂ ಅಜಿತ್ ಅಭಿಮಾನಿಗಳಿಗೂ ವಿಜಯ್ ಫ್ಯಾನ್ಸ್ಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇಂದು ಟ್ವಿಟ್ಟರ್ನಲ್ಲಿ ವಿಜಯ್ ಇನ್ನಿಲ್ಲ ಎಂಬುದುವುದು ಟ್ರೆಂಡಿಂಗ್ನಲ್ಲಿದೆ. ಈ ರೀತಿ ಟ್ವೀಟ್ ಮಾಡಿ ಈ ಟ್ಯಾಗ್ ಟ್ರೆಂಡ್ ಆಗುವಂತೆ ತಲಾ ಅಜಿತ್ ಅಭಿಮಾನಿಗಳು ಮಾಡಿದ್ದಾರೆ. ಹೀಗೆ ಮಾಡಿ ಸ್ಟಾರ್ ವಾರ್ಗೆ ಮತ್ತೆ ಅವರ ಅಭಿಮಾನಿಗಳೇ ಮರುಜೀವ ನೀಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ದ್ವೇಷಿಸಿ ಈ ವಿಚಾರ ಇಡೀ ವಿಶ್ವಕ್ಕೆ ತಿಳಿಯುವತೆ ಮಾಡಿದ್ದಾರೆ.
ಅಸಲಿಗೆ ಈ ವಿವಾದ ಸೃಷ್ಟಿಯಾಗಿದ್ದು ಹೇಗೆ?
ಇತ್ತೀಚೆಗೆ ಅಂದರೆ ಫೆಬ್ರವರಿ 25ರಂದು ಅಜಿತ್ ಅಭಿನಯದ ವಲಿಮೈ ಸಿನಿಮಾ ರಿಲೀಸ್ ಆಗಿತ್ತು. ಆಗ ವಿಜಯ್ ಅಭಿಮಾನಿಗಳು ತೊಂದರೆ ಕೊಟ್ಟಿದ್ದರಂತೆ. ಎಲ್ಲವನ್ನು ಸಹಿಸಿಕೊಂಡಿದ್ದ ಅಜಿತ್ ಫ್ಯಾನ್ಸ್ ಸುಮ್ಮನಾಗಿದ್ದರಂತೆ. ಇದಾದ ಬಳಿಕ ನಿನ್ನೆಯಿಂದ ಜೀ 5ನಲ್ಲಿ ಅಜಿತ್ ನಟನೆಯ ವಲಿಮೈ ಸಿನಿಮಾ ರಿಲೀಸ್ ಆಗಿತ್ತು. ಈ ವಿಚಾರವನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಫ್ಯಾನ್ಸ್ ಕಾಮಿಡಿ ಮಾಡಿದ್ದರಂತೆ. ಚಿತ್ರಮಂದಿರದಲ್ಲಿ ರಿಲೀಸ್ ಆದ ಕೆಲವೇ ದಿನಗಳಲ್ಲಿ ಒಟಿಟಿಗೆ ಬಂದಿದೆ. ಇದ್ಯಾವ ಸ್ಟಾರ್ ಸಿನಿಮಾ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಅಜಿತ್ ಅಭಿಮಾನಿಗಳು ವಿಜಯ್ ಇನ್ನಿಲ್ಲ ಎಂದು ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾರ್ಚ್ 27ರಂದು KGF Chapter 2 ಅಭಿಮಾನಿಗಳಿಗೆ ಬಿಗ್ ಗಿಫ್ಟ್! Trailer ರಿಲೀಸ್ ಮಾಡಲಿದ್ದಾರೆ ಶಿವಣ್ಣ
ಅಸಲಿ ಕಾರಣ ಅದಲ್ಲ ಇದು ಮುಂದೆ ನೋಡಿ!
ಆರ್ಆರ್ಆರ್ ಸಿನಿಮಾದ ಬಗ್ಗೆ ವಿಜಯ್ ಅಭಿಮಾನಿಗಳು ನೆಗೆಟಿವ್ ಕಮೆಂಟ್ ಮಾಡುತ್ತಿದ್ದರಂತೆ. ಆರ್ಆರ್ಆರ್ ಭಾರತೀಯರ ಹೆಮ್ಮೆ ಎಲ್ಲರೂ ಬೆಂಬಲಿಸಬೇಕು ಎಂದು ಅಜಿತ್ ಫ್ಯಾನ್ಸ್ ಹೇಳಿದ್ದಾರೆ. ಇದಕ್ಕೆ ವಿಜಯ್ ಅಭಿಮಾನಿಗಳು #Aids_Patient-Ajit ಎಂಬ ಟ್ಯಾಗ್ ಲೈನ್ ಬಳಿಸಿಕೊಂಡು ಟ್ವೀಟ್ ಮಾಡಿ ಟ್ರೆಂಡ್ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಅಜಿತ್ ಅಭಿಮಾನಿಗಳು #RIPJosephVijay ಅಂತ ಟ್ಯಾಗ್ ಬಳಸಿ ಟ್ರೆಂಡ್ ಮಾಡಿದ್ದಾರೆ.
ಇದನ್ನೂ ಓದಿ: Instagramನಲ್ಲಿ ‘ಧನುಷ್‘ ಹೆಸರನ್ನು ತೆಗೆದು ಹಾಕಿದ ಐಶ್ವರ್ಯಾ! ಹೀಗ್ಯಾಕೆ ಮಾಡಿದರು ಗೊತ್ತಾ ರಜಿನಿ ಪುತ್ರಿ?
ಸುಳ್ಳು ಸುದ್ದಿ ನಂಬಿ ಗಾಬರಿಯಾದ ಸಿನಿರಸಿಕರು!
ನಟ ವಿಜಯ್ ಇನ್ನಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದಂತೆ ಸಿನಿರಸಿಕರು ಗಾಬರಿಯಾಗಿದ್ದರು. ಟ್ವಿಟ್ಟರ್, ಫೇಸ್ಬುಕ್ ಎಲ್ಲ ಕಡೆಯಲ್ಲೂ ಇದು ಟ್ರೆಂಡಿಂಗ್ನಲ್ಲಿತ್ತು. ನಂತರ ಅಸಲಿ ವಿಚಾರ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಯಾಕೆ ಬೇಕು ಸ್ಟಾರ್ ವಾರ್ ನಾವೆಲ್ಲ ಒಂದೇ ಇಲ್ಲಿ ಅಂತ ಕಮೆಂಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ