‘ಕೆಜಿಎಫ್ 2’ ಚಿತ್ರದಲ್ಲಿ ಸಂಜಯ್ ದತ್ ನಟಿಸಲೂ ಇದೆ ಮುಖ್ಯ ಕಾರಣ; ಗುಟ್ಟು ಬಿಚ್ಚಿಟ್ಟ ಯಶ್

‘ಕೆಜಿಎಫ್​ 2’ ಚಿತ್ರದ ಶೂಟಿಂಗ್​ ಈಗಾಗಲೇ ಆರಂಭಗೊಂಡಿದೆ. ಸಂಜಯ್​ ದತ್​ ಚಿತ್ರದ ಸೆಟ್​ ಸೇರಿಕೊಳ್ಳಲು ಕೊಂಚ ತಡವಾಗಲಿದೆ ಎನ್ನಲಾಗಿದೆ.

Rajesh Duggumane | news18
Updated:August 3, 2019, 3:17 PM IST
‘ಕೆಜಿಎಫ್ 2’ ಚಿತ್ರದಲ್ಲಿ ಸಂಜಯ್ ದತ್ ನಟಿಸಲೂ ಇದೆ ಮುಖ್ಯ ಕಾರಣ; ಗುಟ್ಟು ಬಿಚ್ಚಿಟ್ಟ ಯಶ್
ಸಂಜಯ್​ ದತ್​-ಯಶ್​
  • News18
  • Last Updated: August 3, 2019, 3:17 PM IST
  • Share this:
ಬಾಲಿವುಡ್​ ನಟ ಸಂಜಯ್​ ದತ್​ ‘ಕೆಜಿಎಫ್​ 2’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಅಧೀರನ ಪಾತ್ರದಲ್ಲಿ ಸಂಜಯ್ ದತ್​ ನಟಿಸುತ್ತಿದ್ದು, ಅವರ ಲುಕ್​ ಕೂಡ ಬಿಡುಗಡೆ ಆಗಿದೆ. ಈ ಪಾತ್ರಕ್ಕೆ ಸಂಜಯ್​ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೂ ಇದೆಯಂತೆ.

‘ಕೆಜಿಎಫ್​’ ಚಿತ್ರದಲ್ಲಿ ಅಧೀರ ಯಾರೆಂಬುದನ್ನು ತೋರಿಸಿರಲಿಲ್ಲ. ಆದರೆ, ಆ ಪಾತ್ರ ತುಂಬಾನೇ ಪವರ್​ಫುಲ್​ ಆಗಿರಲಿದೆ ಎನ್ನುವ ಸೂಚನೆ ನೀಡಿದ್ದರು ನಿರ್ದೇಶಕ ಪ್ರಶಾಂತ್​ ನೀಲ್​. ಇದೇ ಕಾರಣಕ್ಕೆಖಡಕ್​ ಖಳನನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿತ್ತಂತೆ.

“ಪ್ರಶಾಂತ್​ ಅವರು ನನಗೆ ಸಿನಿಮಾ ಕಥೆ ಹೇಳುವಾಗ ಅಧೀರನ ಪಾತ್ರದ ಬಗ್ಗೆ ಹೇಳಿದ್ದರು. ಈ ವೇಳೆ ಅವರು ಈ ಪಾತ್ರಕ್ಕೆ ಸಂಜಯ್​ ದತ್​ ಸೂಕ್ತ ಎನ್ನುವ ಅಭಿಪ್ರಾಯ ಹೊರ ಹಾಕಿದ್ದರು. ಆದರೆ, ಮೊದಲ ಅಧ್ಯಾಯದಲ್ಲಿ ಅವರು ಕಾಣಿಸಿಕೊಳ್ಳದೇ ಇರುವುದರಿಂದ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಚಾಪ್ಟರ್​ 2 ವಿಚಾರವಾಗಿ ಅವರಿಗೆ ಹೇಳಿದಾಗ ತುಂಬಾನೇ ಇಷ್ಟಪಟ್ಟರು,”  ಎಂಬುದು ಯಶ್​ ಮಾತು.

ಇದನ್ನೂ ಓದಿ: ಅಧೀರ... ಅವೆಂಜರ್ಸ್​: ಎಂಡ್​ ಗೇಮ್​ನ ಥ್ಯಾನೋಸ್​ ಅಷ್ಟೇ ಪವರ್​ಫುಲ್​ ಪಾತ್ರವಂತೆ..!

‘ಕೆಜಿಎಫ್​’ ಯಶಸ್ಸು ಕಂಡ ನಂತರ ಸಂಜಯ್​ ದತ್​ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎನ್ನುವ ಮಾತು ಗಾಂಧಿ ನಗರದ ಅಂಗಳದಲ್ಲಿ ಕೇಳಿ ಬಂದಿದ್ದವು. ಇದಕ್ಕೆ ಯಶ್​ ಸ್ಪಷ್ಟನೆ ನೀಡಿದ್ದಾರೆ. “ಅಧೀರನ ಪಾತ್ರಕ್ಕೆ ಸಂಜಯ್​ ದತ್​ ಸೂಕ್ತ ಎಂಬುದನ್ನು ನಾವು ಸ್ಕ್ರಿಪ್ಟ್​ ಕೆಲಸ ಮಾಡುವಾಗಲೇ ನಿರ್ಧಿಸಿದ್ದೆವು. ಸಿನಿಮಾ ತೆರೆಕಂಡ ನಂತರ ಆ ಬಗ್ಗೆ ಆಲೋಚನೆ ಮಾಡಿಲ್ಲ,” ಎಂದಿದ್ದಾರೆ ಯಶ್​.

‘ಕೆಜಿಎಫ್​ 2’ ಚಿತ್ರದ ಶೂಟಿಂಗ್​ ಈಗಾಗಲೇ ಆರಂಭಗೊಂಡಿದೆ. ಸಂಜಯ್​ ದತ್​ ಚಿತ್ರದ ಸೆಟ್​ ಸೇರಿಕೊಳ್ಳಲು ಕೊಂಚ ತಡವಾಗಲಿದೆ ಎನ್ನಲಾಗಿದೆ.

First published:August 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading