ಸ್ಯಾಂಡಲ್​ವುಡ್​ ಬಗ್ಗೆ ಮಾತಾಡಿದ ರಶ್ಮಿಕಾ ಬೇಸರ ಮಾಡಿಕೊಂಡಿದ್ದೇಕೆ?

ಬೆಂಗಳೂರಿನ ಖಾಸಗಿ ಶಾಲಾ ಕಾರ್ಯಕ್ರಮಕ್ಕೆ ಬಂದಿದ್ದ ರಶ್ಮಿಕಾ ಮಂದಣ್ಣ ಬಹಳ ತಿಂಗಳ ನಂತರ ಮಾಧ್ಯಮವನ್ನು ಎದುರುಗೊಂಡರು. ಈ ವೇಳೆ ಮಾತನಾಡುತ್ತಾ ರಶ್ಮಿಕಾ ಬೇಸರಗೊಳ್ಳಲೂ ಒಂದು ಕಾರಣವಿದೆ. 

Rajesh Duggumane | news18
Updated:December 22, 2018, 3:57 PM IST
ಸ್ಯಾಂಡಲ್​ವುಡ್​ ಬಗ್ಗೆ ಮಾತಾಡಿದ ರಶ್ಮಿಕಾ ಬೇಸರ ಮಾಡಿಕೊಂಡಿದ್ದೇಕೆ?
ರಶ್ಮಿಕಾ
Rajesh Duggumane | news18
Updated: December 22, 2018, 3:57 PM IST
ನಟಿ ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತ ತೆಲುಗು ಚಿತ್ರರಂಗದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಇದೆ. ಕನ್ನಡ ಚಿತ್ರವೊಂದನ್ನು ಒಪ್ಪಿಕೊಂಡು ನಂತರ ಅದರಿಂದ ಹಿಂದೆ ಸರಿದಿದ್ದು ಈ ಆರೋಪಗಳಿಗೆ ಪುಷ್ಟಿ ನೀಡಿತ್ತು. ಆಮೇಲೆ, ‘ಪೊಗರು’ ಚಿತ್ರಕ್ಕೆ ಸಹಿ ಹಾಕುವ ಮೂಲಕ ಅದನ್ನು ಸುಳ್ಳು ಮಾಡಿದ್ದರು. ಕನ್ನಡದ ಮೇಲೆ ತುಂಬ ಅಭಿಮಾನವಿದೆ ಎಂದು ರಶ್ಮಿಕಾ ಈ ಮೊದಲು ಕೂಡ ಹೇಳಿಕೊಂಡಿದ್ದರು. ಈಗ ಅವರು ಸ್ಯಾಂಡಲ್​ವುಡ್​ ಬಗ್ಗೆ ಮಾತನಾಡುತ್ತಾ ಬೇಸರಗೊಂಡರು!

ಬೆಂಗಳೂರಿನ ಖಾಸಗಿ ಶಾಲಾ ಕಾರ್ಯಕ್ರಮಕ್ಕೆ ಬಂದಿದ್ದ ರಶ್ಮಿಕಾ ಮಂದಣ್ಣ ಬಹಳ ತಿಂಗಳ ನಂತರ ಮಾಧ್ಯಮವನ್ನು ಎದುರುಗೊಂಡರು. ಈ ವೇಳೆ ಮಾತನಾಡುತ್ತಾ ರಶ್ಮಿಕಾ ಬೇಸರಗೊಳ್ಳಲೂ ಒಂದು ಕಾರಣವಿದೆ.  “ಈ ವರ್ಷ  ಕನ್ನಡದಲ್ಲಿ ನನ್ನಯಾವ  ಸಿನಿಮಾ ಕೂಡ ರಿಲೀಸ್ ಆಗಿಲ್ಲ ಎಂಬ ನೋವು ನನಗೂ ಇದೆ. ದರ್ಶನ್​ ಜೊತೆ ನಟಿಸಿರುವ ‘ಯಜಮಾನ’ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ” ಎಂದು ಬೇಸರ ತೋಡಿಕೊಂಡರು. ಈ ಮೂಲಕ ಕನ್ನಡ ಚಿತ್ರರಂಗದ ಮೇಲೆ ಇರುವ ಗೌರವ ತೋರ್ಪಡಿಸಿದ್ದಾರೆ.

ಕನ್ನಡದಲ್ಲಿ ನಟಿಸುತ್ತಿರುವ ಹೊಸ ಸಿನಿಮಾ ಬಗ್ಗೆ ಮಾತನಾಡಿರುವ ಅವರು, ‘ದರ್ಶನ್​​ ಜೊತೆ ನಟಿಸೋದು ಖುಷಿ ತಂದಿದೆ. ಅವರು ತುಂಬ ಸರಳ ವ್ಯಕ್ತಿ. ಅವರೊಂದಿಗೆ ಹೆಚ್ಚು ಸಿನಿಮಾ ಮಾಡಲು ಇಷ್ಟ ಪಡುತ್ತೇನೆ. ‘ಪೊಗರು’ ಸಿನಿಮಾ ಇಷ್ಟರಲ್ಲೇ ಆರಂಭವಾಗಲಿದೆ. ಮತ್ತೊಂದು ಕನ್ನಡ ಸಿನಿಮಾದ ಕಥೆ ಕೇಳುತ್ತಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್’​ ಮೊದಲ ದಿನದ ಗಳಿಕೆಯೆಷ್ಟು ಗೊತ್ತಾ?; ಹೊಸ ದಾಖಲೆ ಬರೆದ ಯಶ್​!

ಈ ಸಂದರ್ಭದಲ್ಲಿ ರೆಬೆಲ್​ ಸ್ಟಾರ್​ ಅಂಬರೀಶ್​ ಅವರನ್ನು ನೆನೆಪಿಸಿಕೊಂಡ ರಶ್ಮಿಕಾ, ‘ಅಂಬರೀಶ್ ನಿಧನರಾದ ಸಂದರ್ಭದಲ್ಲಿ ನಾನು ವಿದೇಶದಲ್ಲಿದ್ದೆ. ಅವರ ಸಾವು ತುಂಬಾ ನೋವು ತಂದಿತ್ತು. ವಿದೇಶದಿಂದ ಶೂಟಿಂಗ್​ ಮುಗಿಸಿ ಬೆಂಗಳೂರಿಗೆ ಬಂದ ತಕ್ಷಣ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದೆ” ಎಂದರು.

‘ಗೀತ ಗೋವಿಂದಂ’ ಸಿನಿಮಾ ತೆರೆಕಂಡ ನಂತರ ರಶ್ಮಿಕಾ ಸಂಭಾವನೆ ಹೆಚ್ಚಾಗಿದೆ ಎಂದು ಎಲ್ಲರೂ ಆರೋಪಿಸಿದ್ದರು. ಆದರೆ, ಆ ರೀತಿ ಏನೂ ಇಲ್ಲ ಎಂಬುದು ರಶ್ಮಿಕಾ ಸ್ಪಷ್ಟನೆ. ಬೆಳ್ಳಂದೂರು ಕೆರೆಯ ಬಗ್ಗೆ ಗೆಳೆಯರ ಜೊತೆ ಕೈ ಜೋಡಿಸಿ ನಡೆಸಿದ ಅಭಿಯಾನದ ಬಗ್ಗೆ ಅವರಿಗೆ ಖುಷಿ ಇದೆಯಂತೆ. ಮುಂದಿನ ದಿನಗಳಲ್ಲಿ ಅಭಿಯಾನವನ್ನು ಮುಂದುವರೆಸುವ ಯೋಚನೆ‌ ಅವರಿಗಿದೆಯಂತೆ.

ಇದನ್ನೂ ಓದಿ: ಕೆಜಿಎಫ್​ ವಿಮರ್ಶೆ: ಈ ಚಿತ್ರದಲ್ಲಿ ಯಶ್ ಒಬ್ಬರೇ ಹೀರೋ ಅಲ್ಲ!
Loading...

First published:December 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ