Kannada Movie: ಸಿನಿಮಾ ಮೂಲಕ ನೋಡ್ಬಹುದು ಸೇಂಟ್ ಅಲೋಶಿಯಸ್ ಚಾಪೆಲ್‌ನ ಗತ ವೈಭವ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರಿನ ಸೇಂಟ್ ಅಲೋಶಿಯಸ್ ಚಾಪೆಲ್ ಕರ್ನಾಟಕದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿದೆ. ಇದೀಗ ಇದರ ಅತ್ಯದ್ಭುತ ಕಲಾ ವೈಭವವನ್ನು ತೆರೆಮೇಲೆ ತರುವುದಕ್ಕೆ ಕನ್ನಡ ಸಿನಿಮಾವೊಂದು ಸಜ್ಜಾಗುತ್ತಿದೆ.

  • Share this:

ಮಂಗಳೂರಿನ ಸೇಂಟ್ ಅಲೋಶಿಯಸ್ ಚಾಪೆಲ್ (Mangaluru St Aloysius chapel) ಕರ್ನಾಟಕದಲ್ಲಿ ನೆಲೆಗೊಂಡಿರುವ ಐತಿಹಾಸಿಕ ಚಾಪೆಲ್, ಒಂದು ಪ್ರಮುಖ ಪ್ರಾರ್ಥನಾ ಮಂದಿರ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಚಾಪೆಲ್ ಕರ್ನಾಟಕದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿದೆ. ಇದೀಗ ಇದರ ಅತ್ಯದ್ಭುತ ಕಲಾ ವೈಭವವನ್ನು ತೆರೆಮೇಲೆ ತರುವುದಕ್ಕೆ ಕನ್ನಡ ಸಿನಿಮಾವೊಂದು (Cinema) ಸಜ್ಜಾಗುತ್ತಿದೆ. ಹೌದು, ಸ್ಯಾಂಡಲ್‌ವುಡ್‌ನ ಮರ್ಫಿ ಸಿನಿಮಾ (Murphy Cinema) ತಂಡವು ಈ ಸಾಹಸಕ್ಕೆ ಕೈ ಹಾಕಿ ಯಶಸ್ವಿ ಕೂಡ ಆಗಿದೆ.


ಮರ್ಫಿ ಸಿನಿಮಾ ಬಗ್ಗೆ


ಚಂದನವನದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಮರ್ಫಿ ಸಿನಿಮಾಕ್ಕೆ ಮೊದಲ ಅವಕಾಶ ದೊರೆತಿದೆ. ಈ ಸಿನಿಮಾವನ್ನು ಉರ್ವಿ ಚಿತ್ರದ ಖ್ಯಾತಿಯ ಪ್ರದೀಪ್ ವರ್ಮ ಎಂಬುವವರು ನಿರ್ದೇಶಿಸುತ್ತಿದ್ದು, ಪ್ರಭು ಮುಂಡ್ಕರ್ ನಾಯಕ ನಟನಾಗಿ, ನಿಶ್ವಿಕಾ ನಾಯ್ಡು ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


ಯಾರು ನಿರ್ಮಿಸಿದರು?


ಮರ್ಫಿ ಸಿನಿಮಾದ ಕೇಂದ್ರ ಬಿಂದುವಾಗಿರುವ ಸೇಂಟ್ ಅಲೋಶಿಯಸ್ ಕಾಲೇಜಿನ ಒಂದು ಆವರಣದ ಭಾಗವಾಗಿರುವ ಚಾಪೆಲ್ ಅನ್ನು 1880ರಲ್ಲಿ ಜೆಸ್ಯೂಟ್ ಮಿಷನರಿಗಳು ನಿರ್ಮಾಣ ಮಾಡಿ ಕರ್ನಾಟಕಕ್ಕೆ ಒಂದು ಉತ್ತಮ ಕೊಡುಗೆ ನೀಡಿದ್ದಾರೆ.


ಇದನ್ನೂ ಓದಿ: ಹೊಸ ಸ್ಟೈಲ್, ಶೈನಿ ಲುಕ್: ಹೊಸ ಸೀರಿಯಲ್​ನಲ್ಲಿ ದೀಪಿಕಾ ದಾಸ್!


ಚಾಪೆಲ್‌ನ ಒಳಾಂಗಣ ತುಂಬಾ ಸುಂದರವಾಗಿದ್ದು, ಇದನ್ನು 1878ರ ಮಂಗಳೂರು ಮಿಷನ್ ನಿರ್ಮಾಣ ಸಮಯದಲ್ಲಿ ಇಟಲಿಯನ್ ಕ್ರೈಸ್ತ ಧರ್ಮಭೋಧಕ-ಕಲಾವಿದ ಆಂಟೋನಿಯೊ ಮೊಸ್ಚೆನಿ ಅವರು 1899ರಲ್ಲಿ ಚಿತ್ರಿಸಿದರು. ಸೇಂಟ್ ಅಲೋಶಿಯಸ್ ಚಾಪೆಲ್‌ನ ವಿನ್ಯಾಸವು ರೋಮ್‌ನಲ್ಲಿರುವ ವಿಶ್ವಪ್ರಸಿದ್ಧ ಸಿಸ್ಟೈನ್ ಚಾಪೆಲ್‌ನ ಪ್ರತಿರೂಪವಾಗಿದೆ ಎಂದು ಹೇಳಲಾಗುತ್ತದೆ.


ಚಾಪೆಲ್‌ನ ಒಳಾಂಗಣ ವಿನ್ಯಾಸ ಹೇಗಿದೆ?


ಪ್ರಾರ್ಥನಾ ಮಂದಿರವಾದ ಚಾಪೆಲ್‌ನ ಒಳಾಂಗಣ ವರ್ಣ ಚಿತ್ರಗಳು ಸೇಂಟ್ ಅಲೋಶಿಯಸ್ ಗೋಂಝಗಾ (ಬಡವರ ಉದ್ದಾರಕ್ಕಾಗಿ ತನ್ನ ಸಂಪತ್ತನ್ನು ತ್ಯಜಿಸಿದ್ದಾನೆಂದು ಹೇಳಲಾಗುವ ಶ್ರೀಮಂತ ಕ್ರಿಶ್ಚಿಯನ್) ಮತ್ತು ಅವನ ಜೀವನ ಘಟನೆಗಳನ್ನು ಯೇಸುಕ್ರಿಸ್ತನ ಜೀವನ ಘಟನೆಗಳಾದ ಜನನ, ಬ್ಯಾಪ್ಟಿಸಮ್, ವಿವಾಹ ಭೋಜನ ಮತ್ತು ಯೇಸುವಿನ ಶಿಲುಬೆಗೇರಿಸುವಿಕೆ ಇತ್ಯಾದಿ ಅಂಶಗಳನ್ನು ಪ್ರದರ್ಶಿಸುತ್ತವೆ ಎಂದು ಹೇಳಲಾಗುತ್ತದೆ.


ಇಂತಹ ಭವ್ಯ ಪರಂಪರೆ ಹೊಂದಿರುವ ಚಾಪೆಲ್ ಅನ್ನು ಸಿನಿಮಾ ಚಿತ್ರೀಕರಣಕ್ಕಾಗಿ ನೀಡಿರುವುದು ಇದೇ ಮೊದಲು. ಇದು ಕೊನೆಯೂ ಆಗಬಹುದು. ಹೌದು ಅದರಲ್ಲೂ ಸ್ಯಾಂಡಲ್‌ವುಡ್‌ನ ಚಿತ್ರೀಕರಣಕ್ಕೆ ಅವಕಾಶ ನೀಡಿರುವುದು ಇನ್ನೊಂದು ಹೆಮ್ಮೆಯ ಸಂಗತಿ.


ಮೊದಲು ಮತ್ತು ಕೊನೆ


ಕಾಲೇಜಿನ ಗೌರವಾನ್ವಿತ ಅಧಿಕಾರಿಗಳು ನಮ್ಮ ಸಿನಿಮಾ ತಂಡಕ್ಕೆ ಅಪರೂಪದ ಅವಕಾಶ ನೀಡಿದ್ದು, ಪ್ರಾರ್ಥನಾ ಮಂದಿರದ ಒಳಗೆ ಇದೇ ಮೊದಲು ಚಿತ್ರೀಕರಣಕ್ಕೆ ಅನುಮತಿಸಲಾಗಿದ್ದು, ಬಹುಶಃ ಕೊನೆಯ ಚಿತ್ರೀಕರಣವೂ ಇದೇ ಆಗಬಹುದು ಎಂದು ಚಿತ್ರದ ನಾಯಕ ನಟ ಪ್ರಭು ಮುಂಡ್ಕೂರ್ ಹೇಳಿದ್ದಾರೆ.


ಅನುಭವ ಹಂಚಿಕೊಂಡ ಪ್ರಭು


ಪ್ರಭು ಮುಂಡ್ಕೂರು ಇಂತಹ ಇತಿಹಾಸ ಪ್ರಸಿದ್ಧ ಪ್ರಾರ್ಥನಾ ಮಂದಿರದೊಳಗೆ ಯಾವ ರೀತಿಯಲ್ಲಿ ಕಾಲೇಜು ಆಡಳಿತ ಮಂಡಳಿಯಿಂದ ಅನುಮತಿ ಪಡೆದುಕೊಂಡಿರುವುದರ ಬಗ್ಗೆ ಹಾಗೂ ಇಲ್ಲಿನ ಅಪರೂಪದ ವರ್ಣಚಿತ್ರಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ಹಂಚಿಕೊಂಡಿದ್ದಾರೆ.


ಮೊದಲು ಪ್ರಾರ್ಥನಾ ಮಂದಿರದ ಪಾವಿತ್ರ್ಯತೆಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಚಿತ್ರೀಕರಣ ಮಾಡುವುದಾಗಿ ಹೇಳಿ ಅನುಮತಿಯನ್ನು ಪಡೆದುಕೊಂಡೆವು. ಅದಕ್ಕಿಂತ ಹೆಚ್ಚಾಗಿ ನನ್ನ ವಿದ್ಯಾಭ್ಯಾಸ ನಡೆದಿದ್ದು ಮಂಗಳೂರಿನ ಇದೇ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ.


ಸಾಂದರ್ಭಿಕ ಚಿತ್ರ


ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ನಾನು ನನ್ನ ಶಿಕ್ಷಕರಿಗೂ ಚಿರಪರಿಚಿತನಾಗಿದ್ದೆ. ಇದು ಅನುಮತಿ ಪಡೆಯುವುದಕ್ಕೆ ಹೆಚ್ಚಿನ ಸಹಾಯವಾಯಿತು ಎಂದು ಹೇಳಿದ ಅವರು ಈ ಪ್ರಾರ್ಥನಾ ಮಂದಿರವು ಕಾಲೇಜು ದಿನಗಳಲ್ಲಿ ನಮಗೆ ಸಾಂತ್ವನದ, ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿತ್ತು.


ಇದರ ಬಗ್ಗೆ ಅರಿವಿದ್ದ ನನಗೆ ಚಿತ್ರೀಕರಣದ ವೇಳೆ ಯಾವುದೇ ರೀತಿಯಲ್ಲೂ ಹಾನಿ ಸಂಭವಿಸದಂತೆ ಎಚ್ಚರ ವಹಿಸುವುದಾಗಿ, ಅತ್ಯಂತ ಕಾಳಜಿ ಹಾಗೂ ಮುತುವರ್ಜಿಯಿಂದ ಚಿತ್ರೀಕರಣ ಮುಗಿಸುವುದಾಗಿ ಭರವಸೆ ನೀಡಿದೆವು. ಇದಾದ ಬಳಿಕ ಕಾಲೇಜು ಆಡಳಿತ ಮಂಡಳಿ ನಮ್ಮ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿತು ಎಂದು ಅನುಭವ ಶೇರ್ ಮಾಡಿದ್ದಾರೆ.
ನಾಲ್ಕು ದಿನ ಚಿತ್ರೀಕರಣ

top videos


    ಈ ಸಿನಿಮಾದಲ್ಲಿ ನಟನೆಯ ಜೊತೆಗೆ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಇವರು, ನಾನು, ರೋಶನಿ ಪ್ರಕಾಶ್ ಮತ್ತು ಇಳಾ ವೀರಮಲ್ಲ ಒಳಗೊಂಡ ಪ್ರಮುಖ ದೃಶ್ಯಗಳನ್ನು ಕಾಲೇಜು ಮತ್ತು ಚಾಪೆಲ್‌ನಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಿಸಲಾಯಿತು. ಮರ್ಫಿ ಎಂಬ ಚಿತ್ರದ ಮೂಲಕ ಪ್ರಾರ್ಥನಾ ಮಂದಿರದ ವೈಭವವನ್ನು ನೋಡುವ ಅವಕಾಶವನ್ನು ಪ್ರೇಕ್ಷಕರಿಗೆ ತೋರಿಸಲು ಶ್ರಮವಹಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಪ್ರಭು ಹೇಳಿದರು.

    First published: