ಸೈಫ್ ಅಲಿ ಖಾನ್ ಕೆನ್ನೆಗೆ ಹೊಡೆದಾಗ ತಾಯಿ ಶರ್ಮಿಳಾ ಟ್ಯಾಗೋರ್​ ಪ್ರತಿಕ್ರಿಯೆ ಹೀಗಿತ್ತು..!

ಸುಚಿತ್ರಾ ಪಿಳ್ಳೈ ದಿಲ್ ಚಾಹ್ತಾ ಹೈ ಚಿತ್ರದ ದೃಶ್ಯವೊಂದರಲ್ಲಿ ತಾವು ಸೈಫ್ ಅಲಿ ಖಾನ್ ಕೆನ್ನೆಗೆ ಹೊಡೆದಾಗ, ಸೈಫ್ ತಾಯಿ ಶರ್ಮಿಳಾ ಟ್ಯಾಗೋರ್ ಅವರು ಹೇಗೆ ಪ್ರತಿಕ್ರಿಯಿಸಿದ್ದರು ಎಂಬ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಅಮ್ಮನ ಜೊತೆ ನಟ ಸೈಫ್ ಅಲಿ ಖಾನ್​

ಅಮ್ಮನ ಜೊತೆ ನಟ ಸೈಫ್ ಅಲಿ ಖಾನ್​

  • Share this:
ಆಗಸ್ಟ್ 10ಕ್ಕೆ ನಟ, ನಿರ್ದೇಶಕ ಹಾಗೂ ಗಾಯಕ ಫರ್ಹಾನ್ ಅಖ್ತರ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ದಿಲ್ ಚಾಹ್ತಾ ಹೈ ಸಿನಿಮಾ ಬಿಡುಗಡೆಯಾಗಿ 20 ವರ್ಷಗಳು ಕಳೆದಿವೆ. ಭಾರತೀಯ ಚಿತ್ರರಂಗದಲ್ಲಿ ಭಿನ್ನ ಅಲೆಯನ್ನು ಎಬ್ಬಿಸಿದ ಸಿನಿಮಾ ಅದು. ಮೂರು ಜನ ಸ್ನೇಹಿತರು ಮತ್ತು ತಮ್ಮನ್ನು ತಾವು ಕಂಡುಕೊಳ್ಳಲು ಅವರು ನಡೆಸುವ ಹೋರಾಟದ ಕಥೆ ಹೊಂದಿದ್ದ ಈ ಚಿತ್ರ 2001ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ  ಕಥಾ ಹಂದರ ಮತ್ತು ಮುಖ್ಯ ಪಾತ್ರಗಳ ನಟನೆಯನ್ನು ಇಂದಿಗೂ ಶ್ಲಾಘಿಸಲಾಗುತ್ತದೆ. ದಿಲ್ ಚಾಹ್ತಾ ಹೈ ಚಿತ್ರದ ಹಾಡುಗಳಂತೂ ಇಷ್ಟು ವರ್ಷಗಳ ನಂತರವೂ ಜನಪ್ರಿಯತೆ ಉಳಿಸಿಕೊಂಡಿವೆ. ಅಮೀರ್ ಖಾನ್, ಅಕ್ಷಯ್ ಖನ್ನಾ, ಸೈಫ್ ಅಲಿ ಖಾನ್, ಪ್ರೀತಿ ಜಿಂಟಾ, ಸೋನಾಲಿ ಕುಲಕರ್ಣಿ, ಡಿಂಪಲ್ ಕಪಾಡಿಯಾ ಮತ್ತು ಸುಚಿತ್ರಾ ಪಿಳ್ಳೈ ಅಭಿನಯದ ಈ ಚಿತ್ರ ಇಂದಿಗೂ ಸ್ಫೂರ್ತಿದಾಯಕ ಹಾಗೂ ಒಂದು ಬೆಚ್ಚನೆಯ ಅನುಭೂತಿ ನೀಡುವಂತಹ ಸಿನಿಮಾ ಇದಾಗಿದೆ.

ದಿಲ್ ಚಾಹ್ತಾ ಹೈ ಮತ್ತು ಜಿಂದಗಿ ನಾ ಮಿಲೇಗಾ ದೊಬಾರಾ ಚಿತ್ರಗಳ ಯಶಸ್ಸಿನ ಬಳಿಕ ನಟ ಫರ್ಹಾನ್ ಅಖ್ತರ್ ಅವರು ಜೀ ಲೇ ಜರಾ ಎಂಬ ಚಿತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ ಜೋನಾಸ್, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್​ ಅವರೊಂದಿಗೆ ಕೈ ಜೋಡಿಸಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾ ಕುರಿತಾದ ಪ್ರಕಟಣೆ ಹೊರ ಬಿದ್ದಿದೆ.

Dil chahta hai, Sharmila Tagore, Suchitra Pillai, ದಿಲ್ ಚಾಹತಾ ಹೈ, ಶರ್ಮಿಳಾ ಠಾಗೋರ್, ಸುಚಿತ್ರಾ ಪಿಳ್ಳೈ, This is How Sharmila Tagore Reacted to Son Saif Ali Khan Being Slapped in Dil Chahta Hai
ಜೀ ಲೇ ಜರಾ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಸ್, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್​


ಇತ್ತೀಚೆಗೆ ಸುಚಿತ್ರಾ ಪಿಳ್ಳೈ ದಿಲ್ ಚಾಹ್ತಾ ಹೈ ಚಿತ್ರದ ದೃಶ್ಯವೊಂದರಲ್ಲಿ ತಾವು ಸೈಫ್ ಅಲಿ ಖಾನ್ ಕೆನ್ನೆಗೆ ಹೊಡೆದಾಗ, ಸೈಫ್ ತಾಯಿ ಶರ್ಮಿಳಾ ಟ್ಯಾಗೋರ್ ಅವರು ಹೇಗೆ ಪ್ರತಿಕ್ರಿಯಿಸಿದ್ದರು ಎಂಬ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಸುಚಿತ್ರಾ ಈ ಚಿತ್ರದಲ್ಲಿ ಸೈಫ್ ಪ್ರೇಯಸಿಯ ಪಾತ್ರದಲ್ಲಿ ನಟಿಸಿದ್ದರು. ಯಾವುದೋ ಸಮಾರಂಭದಲ್ಲಿ ಶರ್ಮಿಳಾ ಟ್ಯಾಗೋರ್​ರನ್ನು ಭೇಟಿಯಾದಾಗ, ತಾವು ಅವರ ಮಗನ ಕೆನ್ನಗೆ ಬಾರಿಸಿದ ಮಹಿಳೆ ಎಂಬುದಾಗಿ ಪರಿಚಯಿಸಿಕೊಂಡದ್ದನ್ನು ಸುಚಿತ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಸುದೀಪ್​ ಮಾಡಿದ ತಪ್ಪು ಹುಡುಕಿ ಬುದ್ಧಿ ಹೇಳಿದ ನೆಟ್ಟಿಗ: ಕಿಚ್ಚನ ಪ್ರತಿಕ್ರಿಯೆ ಹೀಗಿದೆ..!

ಮಗನ ಕೆನ್ನೆಗೆ ಬಾರಿಸಿದ ವಿಷಯ ಹೇಳಿದಾಗ ಸಿಟ್ಟು ಮಾಡಿಕೊಳ್ಳುವ ಬದಲು, ಶರ್ಮಿಳಾ ಟ್ಯಾಗೋರ್ ಅವರು ಬಲ ಕೆನ್ನೆಗೋ ಅಥವಾ ಎರಡಕ್ಕೂ ಹೊಡೆದೆಯಾ ಎಂದು ಕೇಳಿದ್ದರಂತೆ. ಆಗ ಇಬ್ಬರೂ ಮಹಿಳೆಯರು ಜೋರಾಗಿ ನಕ್ಕಿದ್ದರಂತೆ. ಕೆನ್ನೆಗೆ ಹೊಡೆಯುವ ದೃಶ್ಯ ಸಿನಿಮಾದ ಮೊದಲಾರ್ಧದಲ್ಲಿ, ಸೈಫ್ ಅಲಿ ಖಾನ್ ಮತ್ತು ಸುಚಿತ್ರಾ ನಡುವೆ ಜಗಳವಾಗಿ ಅವರಿಬ್ಬರ ಸಂಬಂಧ ಮುರಿದು ಬೀಳುವಾಗ ನಡೆಯುತ್ತದೆ. ಸೈಫ್‍ಗೆ ಆ ದೃಶ್ಯ ಚೆನ್ನಾಗಿ ಮೂಡಿ ಬರಬೇಕು ಎಂಬ ಆಸೆಯಿತ್ತಂತೆ. ಹಾಗಾಗಿ ತನಗೆ ಸರಿಯಾಗಿ ಕೆನ್ನೆಗೆ ಹೊಡೆಯಿರಿ ಎಂದು ಸೈಫ್ ಪ್ರೋತ್ಸಾಹ ನೀಡಿದ್ದರು ಎಂದು ಹೇಳಿದ್ದಾರೆ ಸುಚಿತ್ರಾ.

ಇದನ್ನೂ ಓದಿ: Kichcha Sudeep: ಕಿಚ್ಚನ ಡಿಜಿಟಲೈಸ್ಡ್ ಅಕ್ಷರ ಕ್ರಾಂತಿ: ಶಾಲಾ ಮಕ್ಕಳಿಗೆ ಸುದೀಪ್ ಕಡೆಯಿಂದ ಉಡುಗೊರೆ

ದಿಲ್ ಚಾಹ್ತಾ ಹೈ ಚಿತ್ರಕ್ಕೆ ಬಹಳಷ್ಟು ಮಂದಿಯ ಹೃದಯದಲ್ಲಿ ವಿಶೇಷ ಸ್ಥಾನವಿದೆ ಮತ್ತು ಆ ಚಿತ್ರ ಇಂದಿಗೂ ಪ್ರಸ್ತುತವಾಗಿದೆ. ಆ ಸಿನಿಮಾ ಉತ್ಕಟತೆಯ ಭಾವವನ್ನು ಹೊಂದಿದ್ದು, ಎಷ್ಟು ಬಾರಿ ನೋಡಿದರೂ ಪ್ರತಿ ಬಾರಿ ಹೊಸತನದ ಅನುಭವ ಕೊಡುತ್ತದೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕುಳಿತು ಯಾವಾಗ ಬೇಕಾದರೂ ನೋಡುವಂತಹ ಸಿನಿಮಾಗಳಲ್ಲಿ ಇದು ಕೂಡ ಒಂದು.
Published by:Anitha E
First published: