• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Fashion Designer: ಈ ಪೋರ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳಿಗೂ ಬಟ್ಟೆಗಳನ್ನು ಡಿಸೈನ್​ ಮಾಡ್ತಾರಂತೆ, ಇದರ ಹಿಂದಿದೆ ಸೀಕ್ರೇಟ್​!

Fashion Designer: ಈ ಪೋರ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳಿಗೂ ಬಟ್ಟೆಗಳನ್ನು ಡಿಸೈನ್​ ಮಾಡ್ತಾರಂತೆ, ಇದರ ಹಿಂದಿದೆ ಸೀಕ್ರೇಟ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈತ ಹೇಗೆ ಈ ಕಲೆ ಬೆಳೆಸಿಕೊಂಡ ಅನ್ನೋದರ ಹಿಂದೆ ಒಂದು ರೋಚಕ ಕಥೆ ಕೂಡ ಇದೆ. ಈ ಬಗ್ಗೆ ಆತನ ತಾಯಿ ಶೆರ್ರಿ ಮ್ಯಾಡಿಸನ್ ಒಂದು ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.

  • Share this:

ನಾಲ್ಕೈದು ವರ್ಷದ ಮಕ್ಕಳು ಅಂದರೆ ನಮ್ಮ ಊಹೆಗೆ ಬರೋದೇ, ಮುದ್ದು-ಮುದ್ದಾಗಿ ಮಾತನಾಡೋದು, ಆಟಿಕೆ ಹಿಡಿದು ಆಡೋದು, ರಚ್ಚೆ ಹಿಡಿಯೋದು, ಆಟ-ತುಂಟಾಟ ಮಾಡೋದು. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಇಲ್ಲೊಬ್ಬ ಹುಡುಗ ಇದ್ದಾನೆ. ಆತ ಇವನ್ನೆಲ್ಲಾ ಮುಟ್ಟೋದೇ ಇಲ್ಲಾ, ಈತನ ಕಾಯಕವೇ ಬೇರೆ ನೋಡಿ. ಹೌದು, ಮ್ಯಾಕ್ಸ್ ಅಲೆಕ್ಸಾಂಡರ್ (Alexander) ಎಂಬ ಏಳು ವರ್ಷದ ಬಾಲಕ ಈ ವಯಸ್ಸಿನಲ್ಲಿ ಏನು ಮಾಡ್ತಾನೆ ಅನ್ನೋದು ಕೇಳಿದ್ರೆ ನಿಮಗೂ ಅಚ್ಚರಿ ಆಗಬಹುದು. ಸೆಲೆಬ್ರಿಟಿಗಳಿಗೆ (Celebrity)ಬಟ್ಟೆ ಡಿಸೈನ್‌ ಮಾಡ್ತಾನೆ ಈ ಪುಟ್ಟ ಪೋರ ಮ್ಯಾಕ್ಸ್ ಅಲೆಕ್ಸಾಂಡರ್ ಈ ಪುಟ್ಟ ವಯಸ್ಸಿಗೆ ಸೆಲೆಬ್ರಿಟಿಗಳು ಸೇರಿದಂತೆ ಪ್ರಪಂಚದಾದ್ಯಂತದ ಜನರಿಗೆ ಬಟ್ಟೆಗಳನ್ನು ಡಿಸೈನ್‌ (Design) ಮಾಡುತ್ತಾರಂತೆ. ಈ ಹವ್ಯಾಸ ಈಗಿನದಲ್ಲ ಈತ ನಾಲ್ಕು ವರ್ಷ ಇದ್ದಾಗಿನಿಂದಲೂ ಬಟ್ಟೆಗಳನ್ನು ವಿನ್ಯಾಸಗೊಳಿಸುವ ಗೀಳು ಇಟ್ಟುಕೊಂಡಿದ್ದಾನೆ.


ತನ್ನನ್ನು ಗುಸ್ಸಿಯೊ ಗುಸ್ಸಿ ಎಂದು ಭಾವಿಸುತ್ತಾನೆ ಮ್ಯಾಕ್ಸ್
ಈತ ಹೇಗೆ ಈ ಕಲೆ ಬೆಳೆಸಿಕೊಂಡ ಅನ್ನೋದರ ಹಿಂದೆ ಒಂದು ರೋಚಕ ಕಥೆ ಕೂಡ ಇದೆ. ಈ ಬಗ್ಗೆ ಆತನ ತಾಯಿ ಶೆರ್ರಿ ಮ್ಯಾಡಿಸನ್ ಒಂದು ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.


ಇದನ್ನೂ ಓದಿ: ಮೆಕ್‌ಡೊನಾಲ್ಡ್ ಚಿಕನ್​ನಿಂದಾಗಿ 4 ವರ್ಷದ ಮಗುವಿಗೆ ಸುಟ್ಟಗಾಯ, ಕೇಸ್ ದಾಖಲಿಸಿದ ಪೋಷಕರು


ಇದು ಲಾಕ್‌ಡೌನ್‌ ಸಮಯದಲ್ಲಿ ಅಂದರೆ 2020ರಲ್ಲಿ ಆದ ಘಟನೆ. ರಾತ್ರಿ ಊಟ ಸಮಯದಲ್ಲಿ ಕುಟುಂಬದವರೆಲ್ಲಾ ಕುಳಿತಿದ್ದಾಗ, ಒಂದೇ ಬಾರಿ ತುಂಬಾ ಗಂಭೀರವಾಗಿ ನಾನು ಗುಸ್ಸಿ, ನಾನು ಡ್ರೆಸ್‌ಗಳನ್ನು ವಿನ್ಯಾಸ ಮಾಡುತ್ತೇನೆ, ನನಗೆ ಒಂದು ಮನುಷ್ಯಾಕೃತಿ ಬೇಕು ಎಂದನಂತೆ. ಇದನ್ನು ಕೇಳಿದ ಮನೆಯವರು ಅಚ್ಚರಿ ಪಟ್ಟಿದ್ದಾರೆ. ಆದರೆ ಕುಟುಂಬ ಇದನ್ನು ಬೆಂಬಲಿಸಿ ಮ್ಯಾಕ್ಸ್‌ಗೆ ಹೊಲಿಗೆ ತರಬೇತಿಯನ್ನು ನೀಡಿದರಂತೆ.‌


ಗುಸ್ಸಿ ಬ್ರ್ಯಾಂಡ್‌ಗೆ ಎಲ್ಲರಿಗೂ ಗೊತ್ತು, ಇದೊಂದು ಜಗತ್ಪ್ರಸಿದ್ಧ ಬ್ರ್ಯಾಂಡ್‌ ಆಗಿದ್ದು, ಗುಸ್ಸಿಯೊ ಗುಸ್ಸಿ ಇದರ ಸ್ಥಾಪಕರು. ಈಗಲೂ ಸಹ ಅತ್ಯಂತ ಡಿಮ್ಯಾಂಡ್‌ ಹೊಂದಿರುವ ಬ್ರ್ಯಾಂಡ್‌ ಇದಾಗಿದೆ. ಮ್ಯಾಕ್ಸ್‌ ಅಜ್ಜಿ-ಅಮ್ಮ ಎಲ್ಲಾ ಫ್ಯಾಶನ್‌ ಕ್ಷೇತ್ರದಲ್ಲಿ ಇದ್ದವರು. ಆದರೆ ಇದರ ಬಗ್ಗೆ ಬಾಲಕನಿಗೆ ಅರಿವೇ ಇರಲಿಲ್ಲ. ಹೊಲಿಗೆ ತರಗತಿಗೆ ಸೇರಿಸಿದ ಕೆಲವೇ ವಾರಗಳಲ್ಲಿ ಆತ ಅದರಲ್ಲಿ ಪರಿಣಿತಿ ಹೊಂದಿದ ಎಂದು ಶೆರ್ರಿ ವಿವರಿಸಿದರು. ನಂತರ ಮ್ಯಾಕ್ಸ್‌ ಅನ್ನು ಹೊಲಿಗೆ ಅಂಗಡಿಗೆ ಸೇರಿಸಿದ ತಾಯಿ ಅವನಿಗೆ ಬೆಂಬಲವಾಗಿ ನಿಂತರು.


ಇದನ್ನೂ ಓದಿ: ಈ ರೆಸ್ಟೋರೆಂಟ್​ಗೆ ಹೋಗ್ಬೇಕಾದ್ರೆ ಬಟ್ಟೆ ತೆಗಿಲೇಬೇಕು! ತೂಕ ಹೆಚ್ಚಿದ್ರೂ ಎಂಟ್ರಿ ಇಲ್ವಂತೆ ಗುರೂ


ಮ್ಯಾಕ್ಸ್ ಹೊಲಿಗೆಯನ್ನು ಕರಗತ ಮಾಡಿಕೊಂಡ ನಂತರ, ಅವನ ತಾಯಿ ತನ್ನ ಹುಡುಗನ ಆಸಕ್ತಿ ಮತ್ತು ಫ್ಯಾಶನ್ ಅನ್ನು ರಚಿಸುವ ಸೃಜನಶೀಲತೆಯನ್ನು ಗಮನಿಸಿ ಬೆಂಬಲ ನೀಡಿದ ಕುಟುಂಬ ಆತನ ಬೆನ್ನಾಗಿ ನಿಂತಿದ್ದಾರೆ. ಅವನು ಕೆಲಸಲದಲ್ಲಿ ಶಿಸ್ತು ಮತ್ತು ಬದ್ಧತೆ ತೋರಿಸುತ್ತಾನೆ. ಲಾಕ್‌ಡೌನ್‌ ಸಮಯದಲ್ಲಿ ಆತನಿಗೆ 4 ವರ್ಷ, ಈಗಲೂ ಅದೇ ಗೀಳನ್ನು ಮುಂದುವರೆಸಿದ್ದಾನೆ ಎಂದು ತಾಯಿ ಹೆಳಿದರು.


ಫ್ಯಾಶನ್‌ ಶೋಗಳನ್ನೂ ನಡೆಸುತ್ತಾನೆ ಪೋರ
ಈ ಪುಟ್ಟ ಪ್ರತಿಭೆ ಈಗಾಗಲೇ ತನ್ನ ಬಟ್ಟೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಿದ್ದಾನೆ, ಫ್ಯಾಶನ್ ಶೋಗಳನ್ನು ಸಹ ಆಯೋಜನೆ ಮಾಡುತ್ತಿದ್ದಾನೆ. ತಾನು ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಪ್ರದರ್ಶಿಸುವ ನಿಮಿತ್ತ ಫ್ಯಾಶನ್‌ ಶೋಗಳನ್ನು ಹಮ್ಮಿಕೊಳ್ಳುತ್ತಾನೆ. ಸೆಲೆಬ್ರಿಟಿ ಸೇರಿ ಅನೇಕರಿಗೆ ಬಟ್ಟೆಗಳನ್ನು ಡಿಸೈನ್‌ ಮಾಡ್ತಾನೆ ಮ್ಯಾಕ್ಸ್.
ಮ್ಯಾಕ್ಸ್‌ ಶರೋನ್ ಸ್ಟೋನ್‌ಗಾಗಿ ಜಾಕೆಟ್ ಅನ್ನು ವಿನ್ಯಾಸ ಮಾಡಿದ್ದಾನೆ.




ಮ್ಯಾಕ್ಸ್‌ ಮುಂದಿನ ಕನಸೇನು?
ಮ್ಯಾಕ್ಸ್ ಮುದೊಂದು ದಿನ ಗುಸ್ಸಿಯ ಮುಖ್ಯಸ್ಥನಾಗಲು ಅಥವಾ ತನ್ನದೇ ಆದ ಕೌಚರ್ ಟು ದಿ ಮ್ಯಾಕ್ಸ್ ಇಟಾಲಿಯನ್ ಹೆಸರಿನ ಅಟೆಲಿಯರ್ ಅನ್ನು ಹೊಂದುವ ಹೆಬ್ಬಯಕೆ ಹೊಂದಿದ್ದಾನೆ. ನಾಲ್ಕು ವರ್ಷವಿದ್ದಾಗಿನಿಂದ ಈ ಹುಡುಗ ಈ ಕಲೆ ಬೆಳೆಸಿಕೊಂಡಿದ್ದು, ಮುಂದೆ ಭವಿಷ್ಯದಲ್ಲಿ ಇದರಲ್ಲಿ ಭಾರಿ ಯಶಸ್ಸು ಕಾಣುವ ಇಂಗಿತ ವ್ಯಕ್ತಪಡಿಸಿದ್ದಾನೆ.

top videos
    First published: