ಕನ್ನಡ ಬಿಗ್ಬಾಸ್ ಸೀಸನ್ (Bigg Boss) 9 ಮುಗಿದಿದೆ. ಟಫ್ ಕಾಂಪಿಟೇಷನ್ ನಂತರ ರೂಪೇಶ್ ಶೆಟ್ಟಿ (Roopesh Shetty) ಅವರು ಬಿಗ್ಬಾಸ್ (Bigg Boss) ವಿನ್ನರ್ ಆಗಿ ಹೊರಹೊಮ್ಮಿದ್ದು ಟ್ರೋಫಿ (Trophy) ಗೆದ್ದುಕೊಂಡು ಹೊರಬಂದಿದ್ದಾರೆ. ಸೀಸನ್ ಕೊನೆಯಲ್ಲಿ ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಅವರು ಇದ್ದರು. ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು. ಈಗ ರೂಪೇಶ್ ಶೆಟ್ಟಿ ಗೆದ್ದು ಟ್ರೋಫಿ ಎತ್ತಿದ್ದಾರೆ. ಈ ಗೆಲುವಿನ ನಂತರ ಈಗ ರೂಪೇಶ್ ಶೆಟ್ಟಿ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ರಿವೀಲ್ ಆಯ್ತು ಸೀಕ್ರೆಟ್
ವಿಡಿಯೋದಲ್ಲಿ ಒಂದು ಸೀಕ್ರೆಟ್ ರಿವೀಲ್ ಆಗಿದೆ. ರೂಪೇಶ್ ಶೆಟ್ಟಿ ಅವರು ಯುವತಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದು ಇದರಲ್ಲಿ ತಮ್ಮ ಗೆಲುವಿಗೆ ಯಾರು ಕಾರಣ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ವಿಡಿಯೋದಲ್ಲಿ ಒಂದು ಸತ್ಯ, ಇದನ್ನು ರೂಪೇಶ್ ಯಾರಿಗೂ ಹೇಳಿಲ್ಲ
ಒಂದು ಸತ್ಯ ಇದೆ. ಅದು ಯಾರಿಗೂ ಹೇಳಿಲ್ಲ ನಾನು. ವಿಡಿಯೋ ಮೂಲಕ ಹೇಳುತ್ತಿದ್ದೇವೆ. ವರ್ಷಿಣಿ ಅವರು ಇಂಟರ್ವ್ಯೂ ತೆಗೆದುಕೊಳ್ತಾ ಇದ್ದರು. ಸೀಸನ್ 9 ಒಟಿಟಿ ಮುಗಿಸಿಕೊಂಡು ಬರುವಾಗ ಇವರು ಇಂಟರ್ವ್ಯೂ ತೆಗೆದುಕೊಳ್ಳುತ್ತಿದ್ದರು. ನಾನು ಇಂಟರ್ವ್ಯೂ ತೆಗೆದುಕೊಂಡಿದ್ದಕ್ಕೆ ನೀವು ಒಟಿಟಿ ವಿನ್ ಆಗಿದ್ದೀರಿ, ಈಗ ಇಲ್ಲಿ ನೀವು ನನಗೆ ಇಂಟರ್ವ್ಯೂ ಕೊಟ್ಟರೆ ಇಲ್ಲಿ ಕೂಡಾ ಸೀಸನ್ 9 ವಿನ್ ಆಗುತ್ತೀರಿ ಎಂದಿದ್ದರು. ನಾನು ಹೇಳದೆ ಕೇಳದೆ ಜಾಸ್ತಿ ಮಾತನಾಡಿಬಿಟ್ಟೆ. ಥಾಂಕ್ಯೂ ಸೋ ಮಚ್, ಇವರಿಂದಲೇ ನಾನು ವಿನ್ ಆಗಿದ್ದು ಎಂದಿದ್ದಾರೆ ರೂಪೇಶ್ ಶೆಟ್ಟಿ.
View this post on Instagram
ಇದನ್ನೂ ಓದಿ: Sanya Iyer-Roopesh Shetty: ಬಿಟ್ಟೋದಾಗ್ಲೆ ಬೆಲೆ ಗೊತ್ತಾಗೋದು! ರೂಪೇಶ್-ಸಾನ್ಯ ಬಗ್ಗೆ ದೀಪಿಕಾ ಯಾಕೆ ಹೀಗಂದ್ರು?
ಕಂಗ್ರಾಜುಲೇಷನ್ಸ್ ರೂಪೇಶ್ ಶೆಟ್ಟಿ. ನೀವು ತುಂಬಾ ಸ್ವೀಟ್. ನಾವು ಬಹಳಷ್ಟು ಜನರು ರಾಕೇಶ್ ಗೆಲ್ಲಬೇಕೆಂದು ಬಯಸಿದ್ದೆವು. ಆದರೆ ಇದೇ ಮೊದಲ ಬಾರಿಗೆ ನೀವು ಗೆದ್ದಾಗಲೂ ನಾವು ಈಕ್ವಲ್ ಆಗಿ ಖುಷಿಯಾಗಿದ್ದೇವೆ. ನೀವು ಕಳೆದ 5 ತಿಂಗಳಿಂದ ಹಂಚಿಕೊಂಡ ಸುಂದರವಾದ ಸ್ನೇಹದ ಫಲಿತಾಂಶ ಇದು ಎಂದು ಕ್ಯಾಪ್ಶನ್ನಲ್ಲಿ ಬರೆಯಲಾಗಿದೆ.
ಬಿಗ್ಬಾಸ್ನಲ್ಲಿ ಗೆಲುವಿನ ನಗೆ ಬೀರಿದ ರೂಪೇಶ್
ಬಿಗ್ ಬಾಸ್ ವಿನ್ನರ್ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ರೂಪೇಶ್ ಶೆಟ್ಟಿ ಅಭಿನಯದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಗೀತಾ ಭಾರತಿ ಭಟ್ ಹಾಗೂ ಪಂಚಮಿ ರಾವ್ ಈ ಚಿತ್ರದಲ್ಲಿ ರೂಪೇಶ್ಗೆ ಜೋಡಿ ಆಗಿದ್ದಾರೆ.
ಮಂಕು ಭಾಯ್ ಫಾಕ್ಸಿ ರಾಣಿ ಮೂಲಕವೇ ನವ ನಟಿ ಪಂಚಮಿ ರಾವ್ ಇಂಡಸ್ಟ್ರೀಗೆ ಕಾಲಿಟ್ಟಿದ್ದಾರೆ. ಇದು ಇವರ ಮೊದಲ ಸಿನಿಮಾನೇ ಆಗಿದೆ. ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೆ ಮಾಡಿದ್ದಾರೆ. ಮೂರು ವರ್ಷದ ಹಿಂದೆ ಈ ಚಿತ್ರ ಚಿತ್ರೀಕರಣ ಆಗಿದೆ. ಆದರೆ ಈಗ ಈ ಚಿತ್ರ ರಿಲೀಸ್ಗೆ ರೆಡಿ ಆಗಿದೆ.
ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ಯಕ್ಷಗಾನದಲ್ಲಿ ಸಿಂಹದ ವೇಷ ಹಾಕೋ ಹುಡುಗನ ಪಾತ್ರವನ್ನೆ ಮಾಡಿದ್ದಾರೆ. ಇಲ್ಲಿ ಕಥೆನೆ ಹೀರೋ ಅಂತಲೇ ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ. ಗೀತಾ ಭಾರತಿ ಭಟ್ ಇಲ್ಲಿವರೆಗೂ ಸಪೋರ್ಟಿಂಗ್ ಪಾತ್ರಗಳನ್ನೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ಚಿತ್ರದಲ್ಲಿ ಗೀತಾ ಲೀಡ್ ರೋಲ್ ಮಾಡಿದ್ದಾರೆ. ಆ ಖುಷಿಯನ್ನ ಕೂಡ ಈಗ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ