• Home
  • »
  • News
  • »
  • entertainment
  • »
  • Weekend Planner: ಸ್ಪೆಷಲ್ ಶುಕ್ರವಾರ! ಅನಂತ್ ಜೊತೆ ದೂದ ಪೇಡ ದಿಗಂತ್ ಮೋಡಿ!

Weekend Planner: ಸ್ಪೆಷಲ್ ಶುಕ್ರವಾರ! ಅನಂತ್ ಜೊತೆ ದೂದ ಪೇಡ ದಿಗಂತ್ ಮೋಡಿ!

ಧರಣಿ ಮಂಡಲ ಮಧ್ಯದೊಳಗೆ ಚಿತ್ರವೂ ರಿಲೀಸ್ ಆಗ್ತಿದೆ

ಧರಣಿ ಮಂಡಲ ಮಧ್ಯದೊಳಗೆ ಚಿತ್ರವೂ ರಿಲೀಸ್ ಆಗ್ತಿದೆ

ಅಜ್ಜ ಮತ್ತು ಅಜ್ಜಿಯ ಕಥೆಗಳು ಬಂದಿವೆ. ಅಜ್ಜಿ ಮತ್ತು ಮೊಮ್ಮಗಳು ಇಲ್ಲವೇ ಮೊಮ್ಮಗನ ಮೇಲೆ ಕೆಲವು ಸಿನಿಮಾಗಳಿವೆ. ಕನ್ನಡದ ತಿಮ್ಮಯ್ಯ & ತಿಮ್ಮಯ್ಯ ಸಿನಿಮಾ ಇದನ್ನೆಲ್ಲ ಮೀರಿದಂತಿದೆ. ತರ್ಲೆ, ತುಂಟ ಅಜ್ಜನ ಮತ್ತು ಸೀರಿಯಸ್ ಮೊಮ್ಮಗನ ಕಥೆ ಇಲ್ಲಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಮತ್ತೊಂದು ಶುಕ್ರವಾರ (Friday) ಹೊಸ ಭರವಸೆ ಮೂಡಿಸಿದೆ. ಕಳೆದ ಮೂನ್ನಾಲ್ಕು ವಾರಗಳಿಂದಲು ಐದಾರು ಸಿನಿಮಾಗಳು ಬರ್ತಾನೆ ಇವೆ. ಹಾಗೇನೆ ಬಂದು ಮುಂದಿನ ಚಿತ್ರಕ್ಕೆ (Film Theater) ಥಿಯೇಟರ್ ಬಿಟ್ಟುಕೊಡ್ತಾನೇ ಇವೆ. ಕಾಂತಾರ (Kantar) ಸಿನಿಮಾ ಮತ್ತು ಗಂಧದ ಗುಡಿ ಸಿನಿಮಾದ ಮಂದಿರದಲ್ಲಿ ಗಟ್ಟಿಯಾಗಿಯೇ ಕೆಲವು ಥಿಯೇಟರ್​​ನಲ್ಲಿವೆ. ಆದರೆ ಹೊಸ ಹೊಸ ಸಿನಿಮಾಗಳ ಭರಾಟೆ ಪ್ರತಿ ವಾರ ಇದ್ದೇ ಇದೆ.ಈ ವಾರ ಒಂದಷ್ಟು ಹಳಬರ ಮತ್ತು ಹೊಸಬರ (Newcomer Cinema) ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಟ್ಟು ಈ ಶುಕ್ರವಾರ ಹೆಚ್ಚು ಕಡಿಮೆ ಕನ್ನಡದ  5 ಸಿನಿಮಾಗಳು ರಿಲೀಸ್ ಆಗುತ್ತಿವೆ. ಇವುಗಳಲ್ಲಿ ಯಾವ ಸಿನಿಮಾದಲ್ಲಿ ಏನೆಲ್ಲ ಇದೆ ಅನ್ನೋ ಡಿಟೈಲ್ಸ್ ಇಲ್ಲಿದೆ ಓದಿ.


ತಿಮ್ಮಯ್ಯ & ತಿಮ್ಮಯ್ಯ ಎಂಬ ತಾತ-ಮೊಮ್ಮಗನ ಕಥೆ
ಅಜ್ಜ ಮತ್ತು ಅಜ್ಜಿಯ ಕಥೆಗಳು ಬಂದಿವೆ. ಅಜ್ಜಿ ಮತ್ತು ಮೊಮ್ಮಗಳು ಇಲ್ಲವೇ ಮೊಮ್ಮಗನ ಮೇಲೆ ಕೆಲವು ಸಿನಿಮಾಗಳಿವೆ. ಕನ್ನಡದ ತಿಮ್ಮಯ್ಯ & ತಿಮ್ಮಯ್ಯ ಸಿನಿಮಾ ಇದನ್ನೆಲ್ಲ ಮೀರಿದಂತಿದೆ. ತರ್ಲೆ, ತುಂಟ ಅಜ್ಜನ ಮತ್ತು ಸೀರಿಯಸ್ ಮೊಮ್ಮಗನ ಕಥೆ ಇಲ್ಲಿದೆ. ಇದುವೇ ಈ ವಾರದ ಸ್ಪೆಷಲ್ ಅನಿಸುತ್ತಿದೆ.


This Friday Five Kannada movies Are going to Release
ತಿಮ್ಮಯ್ಯ & ತಿಮ್ಮಯ್ಯ ಈ ವಾರದ ಬಹು ನಿರೀಕ್ಷಿತ ಚಿತ್ರ


ತಿಮ್ಮಯ್ಯ & ತಿಮ್ಮಯ್ಯ ಸಿನಿಮಾದ ಟ್ರೈಲರ್ ಭಾರೀ ಭರವಸೆ ಮೂಡಿಸಿದೆ. ಹಾಡುಗಳು ಕಥೆಗೆ ತಕ್ಕನಾಗಿಯೇ ಇವೆ ಅನಿಸುತ್ತಿದೆ. ಚಿತ್ರದಲ್ಲಿರೋ ಪಾತ್ರದಲ್ಲಿ ಏನೋ ವಿಶೇಷ ಇದೆ ಅನಿಸುತ್ತದೆ. ತಿಮ್ಮಯ್ಯ & ತಿಮ್ಮಯ್ಯ ಹೆಸರಿನ ಪಾತ್ರದಲ್ಲಿ ಅನಂತ್​ ನಾಗ್ ಮತ್ತು ದಿಗಂತ್ ಅಭಿನಯಿಸಿದ್ದಾರೆ.


ತಿಮ್ಮಯ್ಯ & ತಿಮ್ಮಯ್ಯ ಈ ವಾರದ ಬಹು ನಿರೀಕ್ಷಿತ ಚಿತ್ರ
ತಿಮ್ಮಯ್ಯ & ತಿಮ್ಮಯ್ಯ ಚಿತ್ರದಲ್ಲಿ ಒಂದ್ ಒಳ್ಳೆ ಕಥೆ ಇದ್ದಂತೆ ಕಾಣುತ್ತಿದೆ. ನಿರ್ದೇಶಕ ಸಂಜಯ್ ಶರ್ಮಾ ತಮ್ಮ ಒಂದು ಚಿತ್ರದಲ್ಲಿ ಒಳ್ಳೆ ಕಾಸ್ಟಿಂಗ್ ಮಾಡಿದ್ದಾರೆ. ತಾತನಾಗಿ ಅನಂತ್​ ನಾಗ್ ಈ ಸಿನಿಮಾದ ಹೈಲೈಟ್ಸ್ ಅನಿಸುತ್ತದೆ.




ಅನಂತ್ ನಾಗ್ ಯಾವುದೇ ಪಾತ್ರದಲ್ಲಾದ್ರೂ ಪ್ರವೇಶಿಸಿ ಬಿಡುತ್ತಾರೆ. ಇಲ್ಲಿ ತಾತನಾಗಿಯೇ ನಿಮ್ಮನ್ನ ವಿಶೇಷವಾಗಿಯೇ ರಂಜಿಸಲು ಬರ್ತಿದ್ದಾರೆ. ಮೊಮ್ಮಗನ ರೋಲ್​​ ನಲ್ಲಿ ದೂದ್​ ಪೇಡ ದಿಗಂತ್ ಅಜ್ಜನ ತರ್ಲೆಗಳೆಲ್ಲವನ್ನು ಸಹಿಸಿಕೊಳ್ಳುವ ಪಾತ್ರಧಾರಿಯಾಗಿಯೇ ಕಾಣಿಸಿಕೊಂಡಿದ್ದಾರೆ.


ತಿಮ್ಮಯ್ಯ & ತಿಮ್ಮಯ್ಯ ಚಿತ್ರದಲ್ಲಿ ಇಬ್ಬರು ನಾಯಕಿಯುರು
ಶುಭ್ರಾ ಅಯ್ಯಪ್ಪ-ಐಂದ್ರಿತಾ ರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೀನಿಯರ್ ತಿಮ್ಮಯ್ಯ ಮತ್ತು ಜೂನಿಯರ್ ತಿಮ್ಮಯ್ಯ ಅಂತ ದಿಗಂತ್ ಹಾಗೂ ಅನಂತ್​ನಾಗ್ ಇಲ್ಲಿ ಕಾಣಿಸಿಕೊಂಡ್ರೆ, ದಿಗಂತ್​ಗೆ ಜೋಡಿಯಾಗಿ ಶುಭ್ರಾ ಮತ್ತು ಐಂದ್ರಿತಾ ಕೂಡ ಇದ್ದಾರೆ.


ಅನೂಪ್ ಸಿಳೀನ್ ಸಂಗೀತ ಈ ಚಿತ್ರದ ವಿಶೇಷತೆಗಳಲ್ಲಿ ಒಂದಾಗಿದೆ. ಇದೇ ಡಿಸೆಂಬರ್​-02 ರಂದು ರಾಜ್ಯದೆಲ್ಲೆಡೆ ತಿಮ್ಮಯ್ಯ & ತಿಮ್ಮಯ್ಯ ರಿಲೀಸ್ ಆಗುತ್ತಿದೆ. ನಿರೀಕ್ಷೆಯನ್ನೂ ಅಷ್ಟೇ ಹುಟ್ಟುಹಾಕಿದೆ.


ಧರಣಿ ಮಂಡಲ ಮಧ್ಯದೊಳಗೆ ಚಿತ್ರವೂ ರಿಲೀಸ್ ಆಗ್ತಿದೆ
ಗುಳ್ಟು ಚಿತ್ರ ಖ್ಯಾತಿಯ ಯುವ ನಟ ನವೀನ್ ಶಂಕರ್ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಮಾಡಿದ್ದಾರೆ. ಐಶಾನಿ ಶೆಟ್ಟಿ ಅವರ ಪಾತ್ರ ಕೂಡ ಇಲ್ಲಿ ವಿಶೇಷವಾಗಿಯೇ ಇದೆ. ಇಲ್ಲಿವರೆಗೂ ಇರದೇ ಇರೋ ಪಾತ್ರದಲ್ಲಿಯೇ ಐಶಾನಿ ಶೆಟ್ಟಿ ಇಲ್ಲಿ ಅಭಿನಯಿಸಿದ್ದಾರೆ.


This Friday Five Kannada movies Are going to Release
ತಿಮ್ಮಯ್ಯ & ತಿಮ್ಮಯ್ಯ ಚಿತ್ರದಲ್ಲಿ ಇಬ್ಬರು ನಾಯಕಿಯುರು


ನಿರ್ದೇಶಕ ಶ್ರೀಧರ್ ಶಿಕಾರಿಪುರ ಈ ಚಿತ್ರದಲ್ಲಿ ಚೈಲ್ಡ್ ಹಾರ್ವೆಸ್ಟಿಂಗ್ ದಂಧೆಯ ಕರಾಳ ಮುಖವನ್ನ ತೋರಿದಂತೆ ಕಾಣುತ್ತಿದೆ. ಚಿತ್ರದ ಟ್ರೈಲರ್ ಆ ಸತ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಯಶ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿ ತಮ್ಮ ಎಂದಿನ ಅಭಿನಯವನ್ನ ತೋರಿದಂತೆ ಕಾಣುತ್ತಿದೆ.


ಇದನ್ನೂ ಓದಿ: Abhishek Ambareesh: ಅವಿವ ಜೊತೆ ಅಭಿಷೇಕ್ ನಿಶ್ಚಿತಾರ್ಥ? ತನಗಿಂತ ವಯಸ್ಸು ಹೆಚ್ಚಾಗಿದ್ರೂ ಓಕೆ ಅಂದ್ರಾ ಯಂಗ್​ ರೆಬಲ್​ಸ್ಟಾರ್?


ಕಾರ್ತಿಕ್ ಚೆನ್ನೋಜಿ ರಾವ್ ಸಂಗೀತದ ಈ ಚಿತ್ರದಲ್ಲಿ ವಿಚಿತ್ರ ಜಗತ್ತಿನ ಅಸಲಿ ಸತ್ಯಗಳ ಮೇಲೆ ಕಥೆ ಇದೆ ಅಂತಲೇ ಅನಿಸುತ್ತಿದೆ. ಸಿನಿಮಾದಲ್ಲಿ ಲವ್ ಜೊತೆಗೆ ಅದರ ಇನ್ನೂ ಒಂದು ಮುಖವೂ ಇದ್ದಂತೆ ಕಾಣುತ್ತಿದೆ. ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ಒಳ್ಳೆ ಡೈಲಾಗ್​​ಗಳೂ ಇರೋದು ವಿಶೇಷವೇ ಆಗಿದೆ. ರಾಜ್ಯದೆಲ್ಲೆಡೆ ಈ ಶುಕ್ರವಾರ ಈ ಚಿತ್ರವೂ ರಿಲೀಸ್ ಆಗುತ್ತಿದೆ.


ಇನ್ನೂ ಒಂದಷ್ಟು ಸಿನಿಮಾಗಳೂ ರಿಲೀಸ್ ಆಗ್ತಿವೆ
ಸೆಕೆಂಡ್​ ಹ್ಯಾಂಡ್​ ಲೈಫ್, ವಾಸಂತಿ ನಲಿದಾಗ, ಫ್ಲಾಟ್ ನಂಬರ್-09 ಚಿತ್ರವೂ ಇದೇ ಶುಕ್ರವಾರ ರಿಲೀಸ್ ಆಗುತ್ತಿವೆ. ಒಟ್ಟಾರೆ, ಕನ್ನಡದಲ್ಲಿ ಐದು ಸಿನಿಮಾ ಬರುತ್ತಿವೆ. ಯಾವ ಚಿತ್ರದ ಅದೃಷ್ಟ ಹೇಗೆ ಅನ್ನೋದು ಸದ್ಯದ ಕುತೂಹಲವೇ ಆಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು