Vishnuvardhan Fan: ನೂರೊಂದು ನೆನಪು ಎಂದು ಕೈಯಲ್ಲಿ ಗ್ಲಾಸ್ ಹಿಡಿದ ಜರ್ಮನಿ ಬಾಲಕ; ಪುಟ್ಟ ವಿಷ್ಣು ಅಭಿನಯಕ್ಕೆ ನೆಟ್ಟಿಗರು ಫಿದಾ!

ನೂರೊಂದು ನೆನಪು ಎದೆಯಾಳದಿಂದ ಹಾಡಿಗೆ ಜರ್ಮನಿ ಬಾಲಕ ಮಾಡಿರೋ ರೀಲ್ಸ್​ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ವಿಷ್ಣು ಅಭಿಮಾನಿಯಾಗಿರೋ ಈ ಜರ್ಮನಿ ಬಾಲಕನ ಅಭಿನಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಜರ್ಮನಿ ಬಾಲಕ ವಿಷ್ಣು ಅಭಿಮಾನಿ

ಈ ಜರ್ಮನಿ ಬಾಲಕ ವಿಷ್ಣು ಅಭಿಮಾನಿ

  • Share this:
ಕನ್ನಡ ಚಿತ್ರರಂಗದ (Kannada Cinema)  ದಿಗ್ಗಜ ನಟರಲ್ಲಿ ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯ ಹಾಗೂ ವಿದೇಶಗಳಲ್ಲೂ ಡಾ. ವಿಷ್ಣುವರ್ಧನ್​ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರೋ ನಾಗರಹಾವು ಖ್ಯಾತಿಯ ರಾಮಚಾರಿ ಅಭಿಮಾನಿಗಳ ಮನದಲ್ಲಿ ಎಂದಿಗೂ ಶಾಶ್ವತವಾಗಿದ್ದಾರೆ. ಜರ್ಮನಿಯಲ್ಲಿರೋ (Germany) ಡಾ. ವಿಷ್ಣುವರ್ಧನ್​ ಅವರ ಪುಟ್ಟ ಅಭಿಮಾನಿಯೊಬ್ಬ (Vishnuvardhan Fan) ವಿಭಿನ್ನ ರೀತಿಯಲ್ಲಿ ತನ್ನ ಅಭಿಮಾನ ತೋರಿಸಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 

ಸೂಪರ್​ ಡೂಪರ್​ ಚಿತ್ರ ಬಂಧನ

1984ರಲ್ಲಿ ಬಿಡುಗಡೆಯಾದ ಬಂಧನ ಸಿನಿಮಾ ಸೂಪರ್​ ಡೂಪರ್​ ಹಿಟ್​ ಚಿತ್ರ. ವಿಷ್ಣುವರ್ಧನ್​ ಅವರು ಈ ಚಿತ್ರದ ಮೂಲಕ ಬಹಳ ಜನಪ್ರಿಯರಾದ್ರು. ಹೆಣ್ಣು ಮಕ್ಕಳ ಮನಗೆದ್ದ ವಿಷ್ಣು ದಾದಾ, ಆ ಕಾಲಕ್ಕೆ ಹೆಂಗಳೆಯರ ಹಾಟ್​ ಫೆವರೆಟ್​ ಆಗಿದ್ದರು.  ಬಂಧನ ಚಿತ್ರದ ಕೇಂದ್ರಬಿಂದು ಡಾ.ಹರೀಶ್ ಪಾತ್ರ. ಒಂದು ಸೈಡ್ ಲವರ್ ಆಗಿ, ಭಗ್ನಪ್ರೇಮಿಯಾಗಿ, ತನ್ನ ಕಾರಣದಿಂದಲೇ ಬೇರೆಯಾದ ನಂದಿನಿ-ಬಾಲು ಅವರನ್ನು ಒಟ್ಟುಗೂಡಿಸುವ ಕರುಣಾಮಯಾಗಿದ್ದ ಹರೀಶ್​ ಪಾತ್ರದಲ್ಲಿ ವಿಷ್ಣು ಮಿಂಚಿಂದ್ರು.

ಹೆಣ್ಣು ಮಕ್ಕಳ ಮನಗೆದ್ದ ಡಾಕ್ಟರ್​ ಹರೀಶ್​

ಚಿತ್ರದ ಕೊನೆಗೆ ಟ್ರ್ಯಾಜಿಡಿ ನಾಯಕನಾಗಿ ಹಲವು ತರದ ಅಭಿನಯಗಳನ್ನು ಏಕಕಾಲಕ್ಕೆ ವಿಷ್ಣುವರ್ಧನ್ ಅವರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ. ಈ ಚಿತ್ರ ನೂರೊಂದು ನೆನಪು ಎದೆಯಾಳದಿಂದ ಹಾಡು ಇಂದಿಗೂ ಅನೇಕ ಅಚ್ಚುಮೆಚ್ಚಿನ ಗೀತೆಯಾಗಿದೆ. ಈ ಹಾಡಿಗೆ ಜರ್ಮನಿ ಬಾಲಕನೊಬ್ಬ ವಿಷ್ಣುವರ್ಧನರಂತೆ ಅಭಿನಯಿಸಿದ್ದಾನೆ.

ಜರ್ಮನಿ ಬಾಲಕನ ಅಭಿನಯ ಸೂಪರ್​

ನೂರೊಂದು ನೆನಪು ಎದೆಯಾಳದಿಂದ ಹಾಡಿಗೆ ಜರ್ಮನಿ ಬಾಲಕ ಮಾಡಿರೋ ರೀಲ್ಸ್​ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ವಿಷ್ಣು ಅಭಿಮಾನಿಯಾಗಿರೋ ಈ ಜರ್ಮನಿ ಬಾಲಕನ ಅಭಿನಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಅನೇಕರು ವಿಡಿಯೋ ಶೇರ್​ ಮಾಡಿದ್ದಾರೆ.

ಭಗ್ನಪ್ರೇಮಿಯಂತೆ ಫುಲ್​ ಫೀಲ್​ ಆದ ಬಾಲಕ

ಚಿತ್ರದಲ್ಲಿರೋ ವಿಷ್ಣುವರ್ಧನ್​ ಅವರಂತೆ ಕೋಟ್​ ಧರಿಸಿರೋ ಬಾಲಕ ಕೈ ಯಲ್ಲಿ ಮದ್ಯದ  ಗ್ಲಾಸ್​ ಹಿಡಿದಿದ್ದು, ಸೇಮ್​ ಬಂಧನ ಚಿತ್ರದ ಹರೀಶ್​ ರಂತೆಯೇ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾನೆ. ತುಟಿ ಮೇಲೆ ಬಂದಂತ ಮಾತೊಂದೆ ಒಂದು, ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು ಎಂದು ಭಗ್ನಪ್ರೇಮಿಯಂತೆ ಫುಲ್​ ಫೀಲ್​ ಆಗಿ ಹಾಡುತ್ತಾ ಅಭಿನಯಿಸಿದ್ದಾನೆ.

ಇದನ್ನೂ ಓದಿ: Pushpa: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಪುಷ್ಪ' ಪ್ರದರ್ಶನ; ವಿದೇಶದಲ್ಲೂ ಅಲ್ಲು ಅರ್ಜುನ್​ ಹವಾ!

32 ನೇ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ಬಂಧನ

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಬಂಧನ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ  32 ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಹಾಗೇ ನಾಯಕ ವಿಷ್ಣುವರ್ಧನ್ ಮತ್ತು ಸಂಗೀತ ನಿರ್ದೇಶಕ ಎಂ. ರಂಗಾರಾವ್ ರವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.

ವಿಷ್ಣುವರ್ಧನ್​ ಅತ್ಯುತ್ತಮ ಚಿತ್ರಗಳಲ್ಲಿ ಬಂಧನ  ಕೂಡ ಒಂದು

ತನ್ನ ಹತ್ತಿರ ಕೆಲಸ ಮಾಡುವ ವೈದ್ಯಕೀಯ ವಿದ್ಯಾರ್ಥಿಯೋರ್ವಳನ್ನು ಪ್ರೀತಿಸುವ ವೈದ್ಯ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹೊತ್ತಿಗೆ ಅವಳ ಮದುವೆ ನಿಶ್ಚಯವಾಗುತ್ತದೆ. ಅವಳ ಕೊರಗಿನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಹರೀಶ್ ಕೊನೆಗೆ ಅವಳ ಮಗುವನ್ನು ಈ ಭೂಮಿಗೆ ಬರಮಾಡಿ ಕೊನೆಯುಸಿರೆಳೆಯುತ್ತಾನೆ. ಕನ್ನಡದ ಹಾಗೂ ವಿಷ್ಣುವರ್ಧನ್ ಸಿನಿಜೀವನದ ಅತ್ತ್ಯುತ್ತಮ ಚಿತ್ರಗಳಲ್ಲಿ ಇದೊಂದು.
Published by:Pavana HS
First published: