Thiruchitrambalam Movie Review: ಪ್ರೇಕ್ಷಕನ ಕೂತೂಹಲ ಕೆರಳಿಸುತ್ತಲೇ ಸಾಗುತ್ತೆ ತಿರುಚಿತ್ರಾಂಬಲಂ! ನಿತ್ಯಾ ಮೆನನ್-ಧನುಷ್ ಜೋಡಿಯ ಮ್ಯಾಜಿಕ್

ಮಿತ್ರನ್ ಆರ್ ಜವಾಹರ್ ಅವರಿಂದ ನಿರ್ದೇಶಿಸಲ್ಪಟ್ಟ ತಿರುಚಿತ್ರಾಂಬಲಂ ತಮಿಳು ಚಿತ್ರವು ಮುಖ್ಯ ತಾರಾಗಣದಲ್ಲಿ ಧನುಶ್, ಪ್ರಕಾಶ್ ರಾಜ್ ಹಾಗೂ ನಿತ್ಯಾ ಮೆನನ್ ಅವರನ್ನು ಒಳಗೊಂಡಿದೆ. ಅಲ್ಲದೆ, ರಾಶಿ ಖನ್ನಾ, ಪ್ರಿಯಾ ಭವಾನಿ ಶಂಕರ್ ಹಾಗೂ ಭಾರತಿರಾಜ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  

ತಿರುಚಿತ್ರಾಂಬಲಂ

ತಿರುಚಿತ್ರಾಂಬಲಂ

  • Share this:
ಮಿತ್ರನ್ ಆರ್ ಜವಾಹರ್ ಅವರಿಂದ ನಿರ್ದೇಶಿಸಲ್ಪಟ್ಟ ತಿರುಚಿತ್ರಾಂಬಲಂ (Thiruchitrambalam) ತಮಿಳು ಚಿತ್ರವು (Tamil Movie) ಮುಖ್ಯ ತಾರಾಗಣದಲ್ಲಿ ಧನುಶ್, ಪ್ರಕಾಶ್ ರಾಜ್ ಹಾಗೂ ನಿತ್ಯಾ ಮೆನನ್ ಅವರನ್ನು ಒಳಗೊಂಡಿದೆ. ಅಲ್ಲದೆ, ರಾಶಿ ಖನ್ನಾ, ಪ್ರಿಯಾ ಭವಾನಿ ಶಂಕರ್ ಹಾಗೂ ಭಾರತಿರಾಜ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಧನುಶ್ (Dhanush) ಈ ಚಿತ್ರದಲ್ಲಿ ಫುಡ್ ಡೆಲಿವರಿ ಬಾಯ್ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ರಾಜ್ ಧನುಶ್ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದು ಈ ಒಟ್ಟಾರೆ ಚಿತ್ರವು ಅಪ್ಪ-ಮಗನ ಸಂಬಂಧದ ಮೇಲೆ ಕೇಂದ್ರೀಕೃತವಾಗಿದೆ. ಹಿಂದೊಮ್ಮೆ ನಡೆದಿರುವ ಯಾವುದೋ ಒಂದು ಅಹಿತಕರ ಘಟನೆಯಿಂದಾಗಿ ಮಗನಾದ ಧನುಶ್ ಹಾಗೂ ಅಪ್ಪನ (Father) ಪಾತ್ರದಲ್ಲಿರುವ ಪ್ರಕಾಶ್ ರಾಜ್ ಮಧ್ಯೆ ಸಂಬಂಧವೂ ಚೆನ್ನಾಗಿರುವುದಿಲ್ಲ. ಆದಾಗ್ಯೂ, ಇಬ್ಬರು ಹೇಗೆ ಮತ್ತೆ ಪರಸ್ಪರ ಹತ್ತಿರವಾಗುತ್ತಾರೆ ಎಂಬುದೇ ಕಥೆಯ (Story) ಮೂಲ ತಿರುಳು.

ಚಿತ್ರದ ಸಂಕ್ಷಿಪ್ತ ರೂಪ

ಚಿತ್ರದ ಮೊದಲಾರ್ಧ ಭಾಗವು ಸಾಕಷ್ಟು ಚಲನಶೀಲತೆಯಿಂದ ಕೂಡಿದ್ದು ವಾಸ್ತವಿಕ ನೆಲೆಗಟ್ಟಿನಲ್ಲಿ ತೃಪ್ತಿದಾಯಕವಾದಂತಹ ಅನುಭವ ನೀಡುತ್ತದೆ. ಮೊದಲರ್ಧ ಭಾಗವು ಪ್ರೇಕ್ಷಕರು ತಮ್ಮಾಅಸನ ಬಿಟ್ಟು ಎಲ್ಲೂ ಕದಲದಂತೆ ಮಾಡುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ ಎನ್ನಬಹುದು. ಸಂಭಾಷಣೆಗಳನ್ನು ಉತ್ತಮವಾಗಿ ಬರೆಯಲಾಗಿದ್ದು ಮನಸ್ಸಿಗೆ ನಾಟುವಂತಿವೆ. ನೈಜ ಸ್ಥಳಗಳಲ್ಲಿ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದ್ದು ಚಿತ್ರದ ಯಾವ ಭಾಗಗಳೂ ಸಹ ಕೃತಕ ಎನ್ನಿಸುವುದಿಲ್ಲ.

ಧನುಶ್ ತಮ್ಮ ಅಭಿನಯದಿಂದ ಮನ ಗೆಲ್ಲುತ್ತಾರೆ. ಅವರು ಎದುರಿಸುವ ಹಲವು ಕಷ್ಟಕರ ಪ್ರಸಂಗಗಳನ್ನು ನೋಡುತ್ತಾ ಹೋದಾಗ ಅವರ ಮೇಲೆ ಕನಿಕರ ಉಂಟಾಗುವಂತಹ ಭಾವನೆ ಮೂಡಿದರೂ ಅಚ್ಚರಿ ಪಡಬೇಕಾಗಿಲ್ಲ. ಇನ್ನು ನಾಯಕನ ಪಾತ್ರಕ್ಕೆ ನ್ಯಾಯ ಒದಗಿಸುವಂತಹ ಎರಡು ಬಲಶಾಲಿ ಪೋಷಕ ಪಾತ್ರಗಳಲ್ಲಿ ಧನುಶ್ ಗೆಳತಿಯಾಗಿ ನಿತ್ಯಾ ಮೆನನ್ ಹಾಗೂ ಧನುಶ್ ಅಜ್ಜನಾಗಿ ಭಾರತಿರಾಜ್ ಗಮನಸೆಳೆಯುತ್ತಾರೆ. ಇವರೆಲ್ಲರೊಂದಿಗೆ ಸಂಯೋಜಿಸಲ್ಪಟ್ಟ ಹಾಗೂ ತಿರುಚಿತ್ರಾಂಬಲಂ ಕೇಂದ್ರ ಸ್ಥಾನದಲ್ಲಿರುವಂತಹ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿವೆ.

ಚಿತ್ರದಲ್ಲಿರುವ ಪ್ರಮುಖ ಅಂಶಗಳಾವುವು?
ಸಾಕಷ್ಟು ನೆನಪಿನಲ್ಲುಳಿಯುವಂತಹ ಪ್ರಸಂಗಗಳು ಚಿತ್ರದಲ್ಲಿದ್ದು ಅಪ್ಪ-ಮಗನ ನಡುವಿನ ಬೆಸುಗೆಯ ಪ್ರಸಂಗಗಳೂ ಸಹ ಸಾಕಷ್ಟು ಚೆನ್ನಾಗಿ ಸೆರೆಹಿಡಿಯಲ್ಪಟ್ಟಿವೆ. ಅದರಲ್ಲೂ ಅಪ್ಪ-ಮಗ ಪರಸ್ಪರ ಮತ್ತೆ ಹತ್ತಿರವಾಗುವಲ್ಲಿ ನಡೆಯುವಂತಹ ಪ್ರಸಂಗಗಳು ಮನಕ್ಕೆ ಮುದ ನೀಡುತ್ತವೆ. ಆದರೆ ಕಥೆ ನಡೆಯುತ್ತಿರುವಾಗಲೆಲ್ಲ ಏನೋ ಒಂದು ಕೊರತೆ ಇದೆ ಅಂತನಿಸುತ್ತಲೇ ಇರುತ್ತದೆ ಹಾಗೂ ಈ ಕಥೆ ಮುಂದೆ ಎಲ್ಲಿಗೆ ಸಾಗಬಹುದು ಎಂಬ ಗುಮಾನಿ ಸಹ ಮೂಡುತ್ತದೆ.

ಇದನ್ನೂ ಓದಿ:  Jacqueline Fernandez: 200 ಕೋಟಿ ವಂಚನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಜಾಕಿ! ನಟಿ ಹೇಳಿದ್ದೇನು?

ಚಿತ್ರದ ಮೊದಲಾರ್ಧ ಭಾಗವು ಚೆನ್ನಾಗಿ ಮೂಡಿಬಂದಿದ್ದರೂ ಕೊನೆಯಾರ್ಧದಲ್ಲಿ ಕೆಲ ಕೊರತೆಗಳು ಕಂಡುಬರುತ್ತವೆ. ವಿರಾಮದ ನಂತರ ಚಿತ್ರ ಕೊನೆಯಾಯಿತೇನೋ ಎಂಬಂತಹ ಅನುಭವ ಮೂಡುತ್ತದೆ ಹಾಗೂ ಕೊನೆಯ 45 ನಿಮಿಷಗಳು ಚಿತ್ರ ಎತ್ತ ಸಾಗುತ್ತಿದೆ ಎಂಬ ಯಾವ ಸುಳಿವೂ ಪ್ರೇಕ್ಷಕನಿಗೆ ಗೊತ್ತಾಗುವುದೇ ಇಲ್ಲ. ಪ್ರಿಯಾ ಭವಾನಿ ಶಂಕರ್ ಅವರ ಪಾತ್ರ ಅನವಶ್ಯಕವಾಗಿದೆ ಎಂದು ತೋರಬಹುದು, ಏಕೆಂದರೆ ಅವರ ಪಾತ್ರವಿಲ್ಲದಿದ್ದರೂ ಚಿತ್ರದಲ್ಲಿ ಯಾವುದೇ ಪರಿಣಾಮಗಳು ಉಂಟಾಗದು ಎಂದು ಹೇಳಬಹುದು. ಇನ್ನು ಧನುಶ್ ಮತ್ತು ನಿತ್ಯಾ ಮಧ್ಯೆ ವಿಕಸಿತವಾಗುವ ಬಂಧವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡಲು ಚಿತ್ರ ಯಶಸ್ವಿಯಾಗಿಲ್ಲ.

ನಟನಾ ವಿಭಾಗ
ನಟನೆಯಲ್ಲಿ ಧನುಶ್ ಎಂದಿನಂತೆ ತಮ್ಮ ಅದ್ಭುತ ಸ್ವಾಭಾವಿಕ ನಟನೆಯಿಂದ ಮಿಂಚುತ್ತಾರೆ. ಅವರಿಗೆ ಪೂರಕವಾಗಿ ನಿತ್ಯಾ ಮೆನೆನ್ ಅವರ ಅಭಿನಯವೂ ಸಾಕಷ್ಟು ಪ್ರಬುದ್ಧವಾಗಿದೆ. ರಾಶಿ ಖನ್ನಾ ಅವರು ತಮಗೆ ಸಿಕ್ಕ ಚಿಕ್ಕ ಪಾತ್ರದಲ್ಲಿ ಸಾಕಷ್ಟು ಶ್ರಮಪಟ್ಟು ಉತ್ತಮ ಅಭಿನಯ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಚೆಲುವೆಯಾಗಿ ಪ್ರಿಯಾ ಭವಾನಿ ಆಕರ್ಷಕರಾಗಿ ಕಂಡುಬರುತ್ತಾರಾದರೂ ಈ ಮುಂಚೆ ಹೇಳಿರುವಂತೆ ಅವರ ಪಾತ್ರದ ಅವಶ್ಯಕತೆಯೇ ಇಲ್ಲವೆಂದೆನಿಸುತ್ತದೆ. ಪ್ರಕಾಶ್ ರಾಜ್ ಒಬ್ಬ ಪ್ರತಿಭಾವಂತ ಕಲಾಕಾರರಾಗಿದ್ದು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದಾಗ್ಯೂ ಚಿಕ್ಕ ಪುಟ್ಟ ಕೊರತೆ ಕಾಣಬಹುದೇನೋ ಎಂದೆನಿಸಬಹುದು. ಇನ್ನು ನಿತ್ಯಾ ಹೊರತುಪಡಿಸಿದರೆ ಪೋಷಕ ಪಾತ್ರದಲ್ಲಿ ಭಾರತಿರಾಜ್ ಎರಡನೇ ಆಧಾರ ಸ್ಥಂಬವಾಗಿ ಮಿಂಚುತ್ತಾರೆ.

ಇದನ್ನೂ ಓದಿ:  Gaalipata 2: ಗೆದ್ದ ಖುಷಿಯಲ್ಲಿ 'ಗೋಲ್ಡನ್​' ಗ್ಯಾಂಗ್​; ಗಾಳಿಪಟ 3 ಹಾರಿಸಲು ಸಜ್ಜಾಗ್ತಿದೆ ಭಟ್ರ ಟೀಮ್​

ಸಂಗೀತಕ್ಕೆ ಸಂಬಂಧಿಸಿದಂತೆ ಚಿತ್ರವು ಡಿಸೆಂಟ್ ಆದ ಸಂಗೀತ ಹೊಂದಿದೆ. ಅನಿರುಧ್ ಅವರು ಅತ್ಯುತ್ತಮ ಅನ್ನುವುದಕ್ಕಿಂತಲೂ ಉತ್ತಮ ಸಮಾಧಾನಕರ ಎಂಬಂತಹ ಸಂಗೀತ ಸಂಯೋಜನೆ ಚಿತ್ರಕ್ಕೆ ಮಾಡಿದ್ದಾರೆ. ಓಂ ಪ್ರಕಾಶ್ ಅವರ ಛಾಯಾಗ್ರಹಣ ಉತ್ತಮವಾಗಿದೆ. ವೈವಿಧ್ಯಮಯ ಕೋನಗಳಲ್ಲಿ ಚಿತ್ರಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ತೀರ್ಪು
ಜೀವನದ ಪಯಣವನ್ನು ಪರಿಣಾಮಕಾರಿಯಾಗಿ ತೋರಿಸುವ ಅದ್ಭುತ ಪೀಸ್ ಆಗಿ ಚಿತ್ರದ ಮೊದಲ ಅರ್ಧ ಕಂಗೊಳಿಸಿದರೆ ಕೊನೆಯರ್ಧ ಭಾಗವು ಮೊದಲನೆಯ ಭಾಗಕ್ಕೆ ಸರಿಸಮಾನವಾಗಿ ನಿಂತಿಲ್ಲ.
Published by:Ashwini Prabhu
First published: