ಕುತ್ತಿಗೆ ಮೇಲೆ ಚಾಕು ಹಿಡಿದು ಕೊಲ್ಲುತ್ತೇನೆ ಎಂದರು! ಭಯಾನಕ ಘಟನೆಯನ್ನು ಬಿಚ್ಚಿಟ್ಟ ನಟಿ!

Alankrita Sahai: ಮೂವರು ಕಳ್ಳರು ನನ್ನ ಮನೆಗೆ ಪ್ರವೇಶಿಸಿದ್ದರು. 6.5 ಲಕ್ಷದ ಮೌಲ್ಯದ ವಸ್ತುಗಳನ್ನು ಹಾಗೂ ನಗದನ್ನು ಕದ್ದಿದ್ದಾರೆ. ಇದು ಅತ್ಯಂತ ಕ್ರೂರವಾದ ಸಂಗತಿಯಾಗಿದೆ. ನನ್ನು ಕುತ್ತಿಗೆ ಮೇಲೆ ಚಾಕು ಹಿಡಿದಿದ್ದರು

ಅಲಂಕೃತ

ಅಲಂಕೃತ

 • Share this:
  ‘‘ನಮಸ್ತೆ ಇಂಗ್ಲೆಂಡ್’’​ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಅಲಂಕೃತ ಸಹಾಯ್​ ಅವರು ಇತ್ತೀಚೆಗೆ ಚಂಢೀಗಢದಲ್ಲಿ ವಸತಿ ಗೃಹವೊಂದನ್ನು ಬಾಡಿಗೆ ಪಡೆದಿದ್ದರು. ಸೆಪ್ಟೆಂಬರ್​ 7ರಂದು ಅಲಂಕೃತ ಇದ್ದ ಹೊಸ ಮನೆಯಗೆ ಕಳ್ಳರು ಹೊಕ್ಕಿದ್ದಾರೆ. ಈ ವೇಳೆ ಆಕೆಗೆ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದೀಗ ನಟಿ ಕಳ್ಳರಿಂದ ಬಚಾವ್ ಆದ​ ಭಯಾನಕ ದೃಶ್ಯವನ್ನು ಬಹಿರಂಗಪಡಿಸಿದ್ದಾರೆ.

  ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಕಳ್ಳರು ದರೋಡೆ ನಡೆಸಲು ಮನೆಗೆ ಹೊಕ್ಕಿದಾಗ ಅಪಾಯಕಾರಿ ಸನ್ನಿವೇಶ ನಡೆಯಿತು. ಚಾಕು ತೋರಿಸಿದ್ದರು. ಎಂದು ಹೇಳಿದ್ದಾರೆ.

  ದರೋಡೆ ಮಾಡಲು ಬಂದವರು ಪುರುಷರಾಗಿದ್ದು, ನನ್ನ ಕುತ್ತಿಗೆಗೆ ಚಾಕು ತೋರಿಸಿದ್ದಾರೆ. ಕತ್ತು ಹಿಸುಕಲು ಪ್ರಯತ್ನಿಸಿದರು. ನಂತರ ಬೆನ್ನಿಗೆ, ಹಣೆಗೆ ಮತ್ತು ಕುತ್ತಿಗೆಗೆ ಹೊಡೆದರು ಎಂದರು.

  ಮೂವರು ಕಳ್ಳರು ನನ್ನ ಮನೆಗೆ ಪ್ರವೇಶಿಸಿದ್ದರು. 6.5 ಲಕ್ಷದ ಮೌಲ್ಯದ ವಸ್ತುಗಳನ್ನು ಹಾಗೂ ನಗದನ್ನು ಕದ್ದಿದ್ದಾರೆ. ಇದು ಅತ್ಯಂತ ಕ್ರೂರವಾದ ಸಂಗತಿಯಾಗಿದೆ. ನನ್ನು ಕುತ್ತಿಗೆ ಮೇಲೆ ಚಾಕು ಹಿಡಿದಿದ್ದರು. ಕತ್ತು ಹಿಸುಕಿದರು. ಮತ್ತು ನನ್ನ ಬಾಯಿ ಮೇಲೆ ಕೈಯಿಟ್ಟರು. ಹಾಸಿಗೆ ಮೇಲೆ ಮಲಗಿಸಿ, ಬೆನ್ನು, ಕುತ್ತಿಗೆ ಮತ್ತು ಹಣೆಗೆ ಹೊಡೆದಿದ್ದಾರೆ ಎಂದು ನಡೆದ ಭಯಾನಕ ಘಟನೆಯನ್ನು ಸಂದರ್ಶನದಲ್ಲಿ ವಿವರಿಸಿದ್ದಾರೆ.

  ಇದನ್ನು ಓದಿ- WhatsApp: ಸದ್ಯದಲ್ಲೇ ವಾಯ್ಸ್ ಟ್ರಾನ್ಸ್​​ಕ್ರಿಪ್ಶನ್ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸ್ಆ್ಯಪ್! ಇದರಿಂದ ಏನು ಪ್ರಯೋಜನ ಗೊತ್ತಾ?

  ಕಳ್ಳರು ಮಲಗುವ ಕೋಣೆಗೆ ಹೋದಾಗ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಕೊಠಡಿ ಬಾಗಿಲು ಲಾಕ್​ ಮಾಡಿಕೊಂಡು ಬಾತ್​ ರೂಂ ಒಳಗೆ ಪ್ರವೇಶ ಮಾಡಿ ಅಡಗಿ ಕೂತೆ. ನಂತರ ನಾನು ಉಸ್ತುವಾರಿ ರಾಜೇಶನಿಗೆ ಕರೆ ಮಾಡಿದೆ. ಅವರು ಪೊಲೀಸರಿಗೆ ಕರೆ ಮಾಡಿದರು. ಅಷ್ಟರಲ್ಲಿ ದರೋಡೆಕೋರರು ಬಾಗಿಲು ಮುರಿದು ಕಿಟಕಿ ಒಡೆಯಲು ಆರಂಭಿಸಿದರು. ಆವಾಗ ಬಾಗಿಲು ಮುರಿಯುತ್ತದೆ ಎಂದು ಘಟ್ಟಿ ಹಿಡಿದಿದ್ದೆ, ಅವರ ವಿರುದ್ಧ ಹೋರಾಡಲು ಪ್ರಯತ್ನಿಸಿದೆ. ಕೊನೆ ಗೆ ಹೇಗಾದರು ಅವರಿಂದ ರಕ್ಷಿಸಿಕೊಂಡ ಎಂದು ಹೇಳಿದರು.


  View this post on Instagram


  A post shared by Alankrita Sahai (@ladykrita)

  ಅಲಂಕೃತ ಅವರು ಮನೆಗೆ ಪಿಠೋಪಕರಣಗಳನ್ನು ತಲುಪಿಸ ಕೆಲಸಗಾರ ಈ ದರೋಡೆಗೆ ಸೂತ್ರಧಾರ ಎಂದು ಅಂದಾಜಿಸಿದ್ದಾರೆ. ಆತ ನನ್ನ ಮನೆಯ ಕೆಲಸದಾಕೆ ಮನೆಯಿಂದ ಯಾವಾಗ ಹೊರಗೆ ಹೋಗುತ್ತಾಳೆ ಮತ್ತು ನಾನು ಮನೆಯಲ್ಲಿ ಇರುವ ಸಮಯ ಆತನಿಗೆ ತಿಳಿದಿತ್ತು ಎಂದು ಹೇಳಿದ್ದಾರೆ.

  ಮಾಹಿತಿ ಪ್ರಕಾರ ಚಂಡೀಗಡ ಸೆಟ್ಟರ್​​ 27ರಲ್ಲಿ ನಡೆದಿದೆ. ಅಪರಾಹ್ನ 12:30 ಸುಮಾರಿಗೆ ನಟಿ ಫ್ಲಾಟ್​ನಲ್ಲಿ ಒಬ್ಬರು ಇದ್ದಾರೆಂದು ತಿಳಿದು ಕಳ್ಳರು ಮನೆಗೆ ನುಗ್ಗಿದ್ದಾರೆ.

  2018ರಲ್ಲಿ ಅಲಂಕೃತ ಅವರು ಅರ್ಜುನ್​ ಕಪೂರ್​ ಅವರ ನಮಸ್ತೆ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದರು, ನಂತರ ಕೆಹ್ತಾ ಹೈ ಪಲ್​ ಪಲ್​ ತುಮ್ಸೆ, ಕೋಕಾ ಮತ್ತು ಜಸ್ಸಿ ಗಿಲ್​, ಅಲ್ಲಾ ವೇ ಮುಂತಾದ ಮ್ಯೂಸಿಕ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

  ಒಟ್ಟಿನಲ್ಲಿ ನಟಿ ಅಲಂಕೃತ ಸಾವಿನ ದರೋಡೆಯಿಂದ ಪಾರಾಗಿದ್ದಾರೆ. ಜೊತೆಗೆ ಕಳ್ಳರಿಂದ ಬಚಾವಾಗಿದ್ದಾರೆ. ತನ್ನ ರಕ್ಷಣೆಗಾಗಿ ಹೋರಾಡಿಒದ ಭಯಾನಕ ವಿಚಾರವನ್ನು ಅಲಂಕೃತ ಸಂದರ್ಶನ ಮೂಲಕ ಬಿಚ್ಚಿಟ್ಟಿದ್ದಾರೆ. ಸದ್ಯ ಅಭಿಮಾನಿಗಳಿಗೆ ಈ ವಿಚಾರ ಅಚ್ಚರಿ ಮೂಡಿಸಿದೆ.
  Published by:Harshith AS
  First published: