ಹೆಂಡತಿಯಲ್ಲ, ಮಗಳೂ ಅಲ್ಲ, ಅಮೀರ್​ ಖಾನ್ ಜೀವನದಲ್ಲಿ ಈ ಇಬ್ಬರು ಲೇಡೀಸ್​ ತುಂಬಾ ಸ್ಪೆಷಲ್!

ಅಮೀರ್ ಅವರ ಹೆಂಡತಿ ಮತ್ತು ಮಕ್ಕಳ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಇಂದು ನಾವು ಅಮೀರ್ ಖಾನ್ ಅವರ ಜೀವನದಲ್ಲಿ ವಿಶೇಷ ಪಾತ್ರ ವಹಿಸಿರುವ ಇನ್ನೂ ಇಬ್ಬರು ಮಹಿಳೆಯರನ್ನು ನಿಮಗೆ ಪರಿಚಯಿಸಲಿದ್ದೇವೆ. ಅಮೀರ್ ಅವರ ಜೀವನದ ಈ ವಿಶೇಷ ಮಹಿಳೆಯರು ಬೇರೆ ಯಾರೂ ಅಲ್ಲ, ಅವರ ಹಿರಿಯ ಸಹೋದರಿಯರಾದ ಫರ್ಹತ್ ಮತ್ತು ನಿಖತ್. ಅಮೀರ್ ಇಬ್ಬರನ್ನೂ ತುಂಬಾ ಪ್ರೀತಿಸುತ್ತಾರೆ.

ಅಮೀರ್ ಖಾನ್

ಅಮೀರ್ ಖಾನ್

  • Share this:
ಮುಂಬೈ(ಆ.06): ಅಮೀರ್ ಖಾನ್ ತಮ್ಮ 'ಲಾಲ್ ಸಿಂಗ್ ಚಡ್ಡಾ' (Laal Singh Chaddha) ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಟಿವಿಯಿಂದ ಹಿಡಿದು OTT ಪ್ಲಾಟ್‌ಫಾರ್ಮ್​ವರೆಗೆ, ಅಮೀರ್ (Aamir Khan) ತನ್ನ ಚಿತ್ರದ ಪ್ರಚಾರದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅಮೀರ್ ಖಾನ್ 'ಕಾಫಿ ವಿತ್ ಕರಣ್ 7' ನಲ್ಲಿ (Coffee With Karan) ಕಾಣಿಸಿಕೊಂಡಿದ್ದರು. ಇಲ್ಲಿ ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡಿದರು. ಅಮೀರ್ ಅವರ ಹೆಂಡತಿಯರು ಮತ್ತು ಮಕ್ಕಳ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಇಂದು ನಾವು ಅಮೀರ್ ಖಾನ್ ಅವರ ಜೀವನದ ಇನ್ನೂ ಇಬ್ಬರು ವಿಶೇಷ ಮಹಿಳೆಯರನ್ನು ನಿಮಗೆ ಪರಿಚಯಿಸಲಿದ್ದೇವೆ.

ಹಾಗಾದ್ರೆ ಆ ಸ್ಪೆಷಲ್ ವ್ಯಕ್ತಿಗಳು ಯಾರು?

ಅಮೀರ್ ಅವರ ಜೀವನದ ಈ ವಿಶೇಷ ಮಹಿಳೆಯರು ಬೇರೆ ಯಾರೂ ಅಲ್ಲ, ಅವರ ಹಿರಿಯ ಸಹೋದರಿಯರಾದ ಫರ್ಹತ್ ಮತ್ತು ನಿಖತ್. ಅಮೀರ್ ಇಬ್ಬರನ್ನೂ ತುಂಬಾ ಪ್ರೀತಿಸುತ್ತಾರೆ. ಕಿರಿಯ ಸಹೋದರರಿಬ್ಬರಿಗೂ ಅಮೀರ್ ಖಾನ್ ಎಂದರೆ ಬಹಳ ಅಚ್ಚುಮೆಚ್ಚು. ಇಬ್ಬರಲ್ಲಿ ನಿಖತ್ ಖಾನ್ ಜನಪ್ರಿಯರಾಗಿದ್ದಾರೆ. ಅವರು 4 ಆಗಸ್ಟ್ 1962 ರಂದು ಜನಿಸಿದರು. 59 ವರ್ಷದ ನಿಖತ್ ಖಾನ್ ಓರ್ವನಟಿ. ಅವರು 'ಮಿಷನ್ ಮಂಗಲ್', 'ಸಾಂಡ್ ಕಿ ಆಂಖ್', 'ತನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:  Aamir Khan: ಮೋನಾ ಸಿಂಗ್ ಬಗ್ಗೆ ಟೀಕೆ ಮಾಡಿದವರಿಗೆ ಆಮಿರ್ ಕ್ಲಾಸ್​, ಆಕೆಯ ಕೆಲಸ ಹಾಳು ಮಾಡಬೇಡಿ ಎಂದ ನಟ

ಬಾಲಿವುಡ್‌ನ ಹೊರತಾಗಿ, ನಿಖತ್ ಖಾನ್ ಟಿವಿ ಧಾರಾವಾಹಿಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ವೆಬ್ ಸೀರೀಸ್ 'ಸ್ಪೆಷಲ್ ಆಪ್ಸ್', 'ಗಿಲ್ಟಿ ಮೈಂಡ್ಸ್', 'ಜಮೈ ರಾಜ 2.0', 'ಫೌಡಾ' ಮತ್ತು 'ಹಶ್ ಹುಶ್' ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ದಿನಗಳಲ್ಲಿ ನಿಖತ್ ಖಾನ್ ಟಿವಿ ಶೋ 'ಬನ್ನಿ ಚಾವೋ ಹೋಮ್ ಡೆಲಿವರಿ' ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಥೋಡ ಸಾ ಬದಲ್ ಥೋಡ ಸಾ ಪಾನಿ’ ಧಾರಾವಾಹಿಯಲ್ಲೂ ಕೆಲಸ ಮಾಡಿದ್ದಾರೆ.

ನಿಖತ್ ಖಾನ್ ಒಬ್ಬ ನಟಿ ಮಾತ್ರವಲ್ಲದೇ, ನಿರ್ದೇಶಕಿ, ಬರಹಗಾರ್ತಿ ಮತ್ತು ನಿರ್ಮಾಪಕಿಯೂ ಹೌದು. ಅವರು 'ತುಮ್ ಮೇರೆ ಹೋ', 'ಹಮ್ ಹೇ ರಾಹಿ ಪ್ಯಾರ್ ಕೆ' ಮತ್ತು 'ಲಗಾನ್' ಚಿತ್ರಗಳನ್ನು ನಿರ್ಮಿಸಿದರು. ನಿಖತ್ ಅವರು ಸಂತೋಷ್ ಹೆಗ್ಡೆ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ - ಸಹರ್ ಮತ್ತು ಶ್ರವಣ್. ನಿಖತ್ ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  Aamir Khan: ದಯವಿಟ್ಟು ನನ್ನ ಸಿನಿಮಾ ಬಹಿಷ್ಕಾರ ಮಾಡ್ಬೇಡಿ ಎಂದ ಆಮಿರ್ ಖಾನ್, ಟ್ವಿಟ್ಟರ್​ ಟ್ರೆಂಡ್​ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ

ಫರ್ಹಾತ್ ಖಾನ್ ಬಗ್ಗೆ ಹೇಳುವುದಾದರೆ ಅವರು ಲೈಮ್‌ಲೈಟ್‌ನಿಂದ ದೂರವಿರಲು ಇಷ್ಟಪಡುತ್ತಾರೆ. ಫರ್ಹಾತ್ ಬಗ್ಗೆ ಹೆಚ್ಚಿನ ಮಾಹಿತಿ ಸಾರ್ವಜನಿಕರಲ್ಲಿಲ್ಲ. ಅವರು ಉದ್ಯಮಿ ರಾಜೀವ್ ದತ್ತಾ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗಳು ಮತ್ತು ಮಗ. ಫರ್ಹಾತ್ ತನ್ನ ಪತಿ ಮತ್ತು ಮಕ್ಕಳೊಂದಿಗೆ ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.
Published by:Precilla Olivia Dias
First published: