ಮಳೆಯಲ್ಲಿ ಫುಟ್ಬಾಲ್ ಆಡಿದ ಅಮೀರ್​ ಖಾನ್​ ಮಗನ ಫೋಟೋಗಳು ವೈರಲ್​ 

news18
Updated:June 27, 2018, 9:11 PM IST
ಮಳೆಯಲ್ಲಿ ಫುಟ್ಬಾಲ್ ಆಡಿದ ಅಮೀರ್​ ಖಾನ್​ ಮಗನ ಫೋಟೋಗಳು ವೈರಲ್​ 
news18
Updated: June 27, 2018, 9:11 PM IST
ನ್ಯೂಸ್​ 18 ಕನ್ನಡ

ಪೊಲೀಸ್ ಮಗ ಕಳ್ಳ ಆಗುತ್ತಾನೆ, ಮೇಷ್ಟ್ರ ಮಗ ದಡ್ಡ ಆಗುತ್ತಾನೆ ಅಂತಾರೆ. ಆದರೆ ಹೆಚ್ಚೂ ಕಡಿಮೆ ಸಿನಿಮಾ ನಟ-ನಟಿಯರ ಮಕ್ಕಳು ಮಾತ್ರ ಸಿನಿಮಾ ಕಲಾವಿದರೇ ಆಗುತ್ತಾರೆ. ಆದರ ಈಗ ಅಮೀರ್ ಖಾನ್ ಪುತ್ರ ಪುಟಾಣಿ ಆಜಾದ್ ರಾವ್ ಖಾನ್ ಮಾತ್ರ ಫುಟ್ಬಾಲ್ ಆಟಗಾರನಾಗೋ ಸೂಚನೆ ನೀಡುತ್ತಾನೆ.

ಈಗ ಎಲ್ಲೆಲ್ಲೂ ಫುಟ್ಬಾಲ್ ಕ್ರೇಜ್. ರಷ್ಯಾದಲ್ಲಿ ನಸೆಯುತ್ತಿರೋ ಫಿಫಾ ವಿಶ್ವಕಪ್ ಫುಟ್ಬಾಲ್ ಕ್ರೇಜ್ ಭಾರತದಲ್ಲೇನೂ ಕಡಿಮೆಯಿಲ್ಲ. ಸ್ಟಾರ್ ಸೂಪರ್​ಸ್ಟಾರ್​ಗಳೇ ಶೂಟಿಂಗ್ ಮುಗಿಸಿ ಮನೆಗೋಡಿ ಬಂದು ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದಾರೆ, ತಮ್ಮ ಅಚ್ಚುಮೆಚ್ಚಿನ ತಾರೆಯರ ಆಟ ನೋಡೋಕೆ.

ಅಮೀರ್​ ಖಾನ್​ ಪುತ್ರ ಆಜಾದ್‍ ರಾವ್ ಖಾನ್‍ಗೆ ಈಗ ಕೇವಲ ಆರು ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್ ಅಂದರೆ ಸಿಕ್ಕಾಪಟ್ಟೆ ಇಷ್ಟಪಡೋ ಪುಟಾಣಿ, ಅಮೀರ್​ ಅವರ ಬಾಡಿಗಾರ್ಡ್​ಗಳ ಜೊತೆ ಮುಂಬೈನ ಸುರಿಯೋ ಮಳೆಯಲ್ಲೇ ಫುಟ್ಬಾಲ್ ಆಡಿದ್ದಾನೆ. ಆ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 
ಈ ಹಿಂದೆ ಕೂಡ ಬಾಲಿವುಡ್ ಕ್ರೀಡಾಪ್ರಿಯರು ಫುಟ್ಬಾಲ್ ಅಂಗಣದಲ್ಲಿ ಸೇರಿಕೊಂಡಿದ್ದೂ ಇದೆ. ಅದರಲ್ಲೂ ನಟ ಜಾನ್​ ಅಬ್ರಹಂ ಸಹ ಒಳ್ಳೆಯ ಫುಟ್ಬಾಲ್​ ಆಟಗಾರ. ಆದರೆ ಈಗ ಈ ಪುಟಾಣಿ ಸೂಪರ್​ಸ್ಟಾರ್​ಗಳ ಎದುರಲ್ಲೇ ತನಗಿರೋ ಫುಟ್ಬಾಲ್ ಕ್ರೇಜ್ ಪ್ರದರ್ಶಿಸಿದ್ದಾನೆ. ಆರನೇ ವಯಸ್ಸಿನಲ್ಲೇ ಫುಟ್ಬಾಲ್ ಕ್ರೀಡೆಯನ್ನು ಇಷ್ಟು ಇಷ್ಟಪಡುವ ಅಮೀರ್​ ಪುತ್ರ ಭವಿಷ್ಯದಲ್ಲಿ ಭಾರತ ಫುಟ್ಬಾಲ್‍ನಲ್ಲಿ ಮಿಂಚಿದರೂ ಅಚ್ಚರಿಯಿಲ್ಲ.#AamirKhan's son #AzadRaoKhan plays football in the Mumbai rains


A post shared by *GR8Stars* (@gr8.stars) on


ಸಿನಿಮಾ ಅತ್ಯಂತ ಕಲರ್​ಫುಲ್ ದುನಿಯ. ಈ ಕ್ಷೇತ್ರ ರಾಜಕೀಯ ಮತ್ತು ಕ್ರೀಡೆ ಎರಡೂ ಕ್ಷೇತ್ರಕ್ಕಿಂತಲೂ ಆಕರ್ಷಕ. ಆದರೆ ಅಭಿಷೇಕ್ ಬಚ್ಚನ್ ಸಿನಿಮಾಗಿಂತಲೂ ಫುಟ್ಬಾಲ್ ಮತ್ತು ಕಬಡ್ಡಿಯನ್ನೇ ಹೆಚ್ಚು ಇಷ್ಟಪಡ್ತಾರೆ. ಅಮಿತಾಬ್ ಬಚ್ಚನ್‍ಗೆ ಕ್ರಿಕೆಟ್​ ಎಂದರೆ ತುಂಬಾ ಇಷ್ಟ. ಯಾರಿಗೆ ಗೊತ್ತು ಯಾರ ಖುಷಿ ಎಲ್ಲೆಲ್ಲಿದೆಯೋ.
First published:June 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ