Tourist Places: ಬಾಲಿವುಡ್ ತಾರೆಯರ ಹೃದಯಗೆದ್ದ ಆಕರ್ಷಕ ರಜಾ ಸ್ಥಳಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ

ನ್ನು ಈ ಪ್ರವಾಸ ಎಂಬುದು ಸಾಮಾನ್ಯ ಮನುಷ್ಯರಿಂದ ಹಿಡಿದು ಸೆಲಿಬ್ರಿಟಿಗಳವರೆಗೂ ಎಲ್ಲರೂ ಇಷ್ಟಪಡುವ ಚಟುವಟಿಕೆಯಾಗಿದೆ. ಅಂಥದ್ದರಲ್ಲಿ ಬಾಲಿವುಡ್ ಚಿತ್ರ ತಾರೆಗಳೆಂದರೇ ಕೇಳಬೇಕೆ? ಸತತವಾಗಿ ಚಿತ್ರೀಕರಣದಲ್ಲಿ ತೊಡಗುವ ಈ ತಾರೆಗಳು ಸಾಕಷ್ಟು ಒತ್ತಡ ಅನುಭವಿಸುತ್ತಾರೆ.

ಆಲಿಯಾ ಭಟ್

ಆಲಿಯಾ ಭಟ್

  • Share this:
ಒಂದೇ ರೀತಿಯ ಜೀವನಶೈಲಿಯಿಂದ (Life style) ಒಮ್ಮೊಮ್ಮೆ ಸಾಕಷ್ಟು ಬೇಸರ ಮೂಡುತ್ತದೆ, ಜೀವನದಲ್ಲಿ ಉತ್ಸಾಹವೇ ಇಲ್ಲದಂತಾಗುತ್ತದೆ. ಪ್ರತಿನಿತ್ಯ ಅದೇ ಕೆಲಸ ಕಾರ್ಯಗಳು ಮನೆ-ಮನ ಹಿಂಡುವಂತೆ ಮಾಡುತ್ತದೆ ಎಂದರೂ ತಪ್ಪಿಲ್ಲ. ಆಗ ನಮಗೆ ಖಂಡಿತವಾಗಿಯೂ ಸ್ವಲ್ಪ ಬ್ರೆಕ್ (Break) ಬೇಕೇ ಬೇಕಾಗುತ್ತದೆ. ಹೀಗೆ ಪಡೆಯುವ ಅಲ್ಪ ವಿಶ್ರಾಂತಿ ನಮಗೆ ಸಾಕಷ್ಟು ನೆಮ್ಮದಿ ತರುವುದರಲ್ಲಿ ಸಂಶಯವಿಲ್ಲ. ಆದರೆ, ಪ್ರತಿಯೊಬ್ಬರೂ ಕೇವಲ ವಿಶ್ರಾಂತಿ (Relax) ಪಡೆಯಲೆಂದು ಮನೆಯಲ್ಲೇ (Home) ಇರಲು ಬಯಸುವುದಿಲ್ಲ. ಕೆಲವರು ಪ್ರವಾಸದಂತಹ (Tour) ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಅವರಿಗೆ ಎಲ್ಲಿಲ್ಲದ ಉತ್ಸಾಹ, ಹುರುಪು ಮತ್ತೆ ಒಡಮೂಡುತ್ತದೆ.

ಇನ್ನು ಈ ಪ್ರವಾಸ ಎಂಬುದು ಸಾಮಾನ್ಯ ಮನುಷ್ಯರಿಂದ ಹಿಡಿದು ಸೆಲಿಬ್ರಿಟಿಗಳವರೆಗೂ ಎಲ್ಲರೂ ಇಷ್ಟಪಡುವ ಚಟುವಟಿಕೆಯಾಗಿದೆ. ಅಂಥದ್ದರಲ್ಲಿ ಬಾಲಿವುಡ್ ಚಿತ್ರ ತಾರೆಗಳೆಂದರೇ ಕೇಳಬೇಕೆ? ಸತತವಾಗಿ ಚಿತ್ರೀಕರಣದಲ್ಲಿ ತೊಡಗುವ ಈ ತಾರೆಗಳು ಸಾಕಷ್ಟು ಒತ್ತಡ ಅನುಭವಿಸುತ್ತಾರೆ.

ಹಾಗಾಗಿ ಅವರಿಗೆ ಕೊಂಚ ವಿರಾಮ ಸಿಕ್ಕರೆ ಸಾಕು ತಮ್ಮ ಬ್ಯಾಕ್ ಪ್ಯಾಕ್ ರೆಡಿ ಮಾಡಿಕೊಂಡು ಪ್ರವಾಸಕ್ಕೆ ತೆರಳಿ ಬಿಡುತ್ತಾರೆ. ಆದರೆ, ಒಂದು ವ್ಯತ್ಯಾಸವೆಂದರೆ ಈ ಚಿತ್ರ ತಾರೆಗಳು ನಮ್ಮ ನಿಮ್ಮೆಲ್ಲರಂತೆ ದೇಶದಲ್ಲೇ ಪ್ರವಾಸ ಮಾಡುವುದು ಬಲು ವಿರಳ. ಅವರೇನಿದ್ದರೂ ಪ್ರಪಂಚದಲ್ಲಿರುವ ಕೆಲ ಆಕರ್ಷಕ ಸ್ಥಳಗಳಿಗೆ ಭೇಟಿ ನೀಡಲು ಬಹು ಇಷ್ಟಪಡುತ್ತಾರೆ. ಹಾಗಾದರೆ, ಬನ್ನಿ ಈ ಲೇಖನದ ಮೂಲಕ ಬಾಲಿವುಡ್ ತಾರೆಯರು ಹೆಚ್ಚು ಇಷ್ಟಪಡುವ ಕೆಲವು ಅದ್ಭುತ ಸ್ಥಳಗಳು ಯಾವುವು ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ರಣವೀರ್ ಸಿಂಗ್ : ಬ್ಯಾಂಡ್ ಬಾಜಾ ಬಾರಾತ್ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರಸ್ತುತ ಹಿಂದಿ ಚಿತ್ರರಂಗದ ಜನಪ್ರೀಯ ತಾರೆಗಳಲ್ಲೊಬ್ಬರಾಗಿರುವ ರಣವೀರ್ ಸಿಂಗ್ ಅವರಿಗೆ ಇಷ್ಟವಾಗುವ ಸ್ಥಳವೆಂದರೆ ಸ್ವಿಟ್ಜರ್ಲ್ಯಾಂಡ್. ಸ್ವಿಟ್ಜರ್ಲ್ಯಾಂಡ್ ಮೊದಲಿನಿಂದಲೂ ವಿಶ್ವದಲ್ಲೇ ತನ್ನ ಆಕರ್ಷಕ ಪ್ರಕೃತಿ ಸೌಂದರ್ಯದಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಗುರುತಿಸಲ್ಪಟ್ಟಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಇಲ್ಲಿನ ಆ ಅದ್ಭುತ ಪರ್ವತಗಳು, ಮನಮೋಹಕ ಹಸಿರು, ಶಾಂತ ವಾತಾವರಣ ರಣವೀರ್ ಅವರಿಗೆ ಉತ್ತಮವಾದ ಹಾಗೂ ಮತ್ತೆ ಉತ್ಸಾಹಭರಿತರನ್ನಾಗಿ ಮಾಡುವಂತಹ ಅನುಭವ ನೀಡುತ್ತವಂತೆ.

ಇದನ್ನೂ ಓದಿ: Beauty Tips: ಬಿಸಿಲಿನಿಂದ ಚರ್ಮದ ಮೇಲೆ ಬಿದ್ದ ಕಲೆ ತೆಗೆಯಲು ಎಲ್ಲೂ ಹೋಗಬೇಡಿ! ಮನೆಯಲ್ಲಿಯೇ ಈ ಮದ್ದು ಮಾಡಿ, ಕಡಿಮೆಯಾಗುತ್ತೆ ನೋಡಿ

ಪ್ರಿಯಾಂಕಾ ಚೋಪ್ರಾ : ನಮ್ಮ ದೇಸಿ ಗರ್ಲ್ ಎಂದೇ ಪ್ರಖ್ಯಾತರಾಗಿರುವ ಹಾಗೂ ಹಾಲಿವುಡ್ ಚಿತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರುವ ಬಾಲಿವುಡ್ ನಟಿ ಹಾಗೂ ನಿಕ್ ಜೋನಸ್ ಅವರ ಪತ್ನಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ಇಟಲಿ ದೇಶದ ಟಸ್ಕನಿ ಎಂದರೆ ಸಾಕಷ್ಟು ಇಷ್ಟವಂತೆ. ಅವಕಾಶ ಸಿಕ್ಕಾಗಲೆಲ್ಲ ಅವರು ಅಲ್ಲಿಗೆ ಭೇಟಿ ನೀಡಲು ಮರೆಯುವುದಿಲ್ಲ ಎಂದು ಹೇಳಲಾಗುತ್ತದೆ.

ಶಾರುಕ್ ಖಾನ್ : ಬಾಲಿವುಡ್ ಅಂಗಳದಲ್ಲಿ ಕಿಂಗ್ ಖಾನ್ ಎಂತಲೇ ಚಿರಪರಿಚಿತರಾಗಿರುವ ಶಾರುಕ್ ಖಾನ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ. ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಶಾರುಕ್ ಅವರಿಗೆ ರಜೆಯ ಮೋಜನ್ನು ದುಬೈನಲ್ಲಿ ಅನುಭವಿಸುವುದು ತುಂಬ ಇಷ್ಟವಂತೆ. ಹಾಗಾಗಿ ಅವರು ಆಗಾಗ ರಜಾ ಹಾಗೂ ಅವಕಾಶ ಸಿಕ್ಕಾಗಲೆಲ್ಲ ದುಬೈಗೆ ತೆರಳುತ್ತಾರೆನ್ನಲಾಗಿದೆ.

ಮಲೈಕಾ ಅರೋರಾ : ಮುಂಚೆ ಶಾರುಕ್ ಜೊತೆ "ಚಯ್ಯಾ ಚಯ್ಯಾ" ಹಾಗೂ ಕೊನೆಯಲ್ಲಿ ಸಲ್ಮಾನ್ ಜೊತೆ "ಮುನ್ನಿ ಬದನಾಮ್ ಹುಯಿ" ಎಂಬ ಸಖತ್ ಹಿಟ್ ಐಟಮ್ ಹಾಡುಗಳಲ್ಲಿ ತಮ್ಮ ಬಳಲುವ ಸೊಂಟದ ಮೂಲಕ ನೃತ್ಯದ ಮೋಡಿ ತೋರಿಸಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡ ಹಾಗೂ ಸದಾ ಫಿಟ್ ಆಗಿ ಕಂಡು ಬರುವ ಮಲೈಕಾ ಅರೋರಾ ಅವರಿಗೆ ಇಂಡೋನೇಷಿಯಾದ ಬಾಲಿ ತುಂಬ ಇಷ್ಟವಾಗುವ ಪ್ರವಾಸಿ ಸ್ಥಳವಂತೆ.

ಆಲಿಯಾ ಭಟ್ : ಖ್ಯಾತ ತಾರೆಯಾದ ರಣಬೀರ್ ಕಪೂರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ಡಿನ ಮತ್ತೊಬ್ಬ ಪ್ರಖ್ಯಾತ ತಾರಾ ನಟಿಯಾದ ಆಲಿಯಾ ಭಟ್ ಅವರಿಗೆ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ತುಂಬ ಇಷ್ಟವಾಗುವ ಸ್ಥಳವಾಗಿದ್ದು ಅವಕಾಶ ಸಿಕ್ಕಾಗಲೆಲ್ಲ ಅವರು ಅಲ್ಲಿಗೆ ತೆರಳಿ ಅಲ್ಲಿನ ಸುಂದರ ಕಡಲ ತೀರಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆನ್ನಲಾಗಿದೆ.

ಇದನ್ನೂ ಓದಿ: Indian Tourism: ಮಳೆಗಾಲದಲ್ಲಿ ಟೂರ್ ಹೋಗಲು ಪ್ಲ್ಯಾನ್ ಮಾಡ್ತಾ ಇದ್ರೆ ಈ ಪ್ರವಾಸಿ ತಾಣಗಳಿಗೆ ಹೋಗಿ ಬನ್ನಿ

ಮಾಲ್ಡೀವ್ಸ್ ದ್ವೀಪಗಳ ಗುಚ್ಛವಾಗಿದ್ದು ಅದು ತನ್ನಲ್ಲಿರುವ ಮನಮೋಹಕ ಕಡಲ ಕಿನಾರೆಗಳು, ಹಸಿರಿನಿಂದ ಕಂಗೊಳಿಸುವ ವನ್ಯಸಿರಿ ಮತ್ತು ಹವಳದ ದಿಬ್ಬಗಳಿಗೆ ಬಲು ಹೆಸರುವಾಸಿಯಾಗಿದೆ. ಚಿತ್ರರಂಗದ ಹಲವು ಕಲಾವಿದರ ಮೆಚ್ಚಿನ ಸ್ಥಳವಾಗಿದೆ ಮಾಲ್ಡೀವ್ಸ್ ದ್ವೀಪಗಳು.
Published by:Ashwini Prabhu
First published: