Suniel Shetty: ಸುನೀಲ್ ಶೆಟ್ಟಿಯವರ ಈ ಒಂದು ಅಭ್ಯಾಸ ಮ್ಯಾಜಿಕ್ ಮಾಡ್ತಿದ್ಯಂತೆ., ಜೊತೆಗೆ ಮನಸ್ಸಿಗೆ ನೆಮ್ಮದಿನೂ ಸಿಗ್ತಿದ್ಯಂತೆ!

ಕೆಲವರಿಗೆ ಆ 24 ಗಂಟೆಗಳು ಹೇಗೆ ಕಳೆಯುವುದು ಅಂತ ದೊಡ್ಡ ಚಿಂತೆಯಾಗಿರುತ್ತದೆ. ಮೈ ತುಂಬಾ ಕೆಲಸ ಇದ್ದವರಿಗೆ ಸಮಯ ಯಾವತ್ತಿಗೂ ಕಡಿಮೆಯೇ ಆಗಿರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ವ್ಯಕ್ತಿಗಳಿಗೆ ಅವರು ಜೀವನದಲ್ಲಿ ರೂಢಿಸಿಕೊಂಡ ಅಭ್ಯಾಸಗಳು ಅವರ ಕಾರ್ಯಕ್ಷಮತೆಯ ಮೇಲೆ ತುಂಬಾನೇ ಪರಿಣಾಮವನ್ನು ಬೀರುತ್ತವೆ. ಇಲ್ಲೊಬ್ಬ ಬಾಲಿವುಡ್ ನಟನಿಗೆ ಅವರು ಜೀವನದಲ್ಲಿ ರೂಢಿಸಿಕೊಂಡ ಒಂದು ಅಭ್ಯಾಸ ತುಂಬಾನೇ ಮ್ಯಾಜಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ ಅಂತ ಹೇಳಿಕೊಂಡಿದ್ದಾರೆ ನೋಡಿ.

ನಟ ಸುನೀಲ್ ಶೆಟ್ಟಿ

ನಟ ಸುನೀಲ್ ಶೆಟ್ಟಿ

  • Share this:
 ಕೆಲವೊಬ್ಬರಿಗೆ ದಿನದ 24 ಗಂಟೆಗಳು ಸಹ ಕೆಲಸ (Work) ಮಾಡಲು ಸಾಕಾಗುವುದಿಲ್ಲ, ‘ಅರೇ ದಿನ ಇಷ್ಟು ಬೇಗ ಮುಗಿತಾ’ ಅಂತ ಪರಿತಪಿಸುತ್ತಾ ಇರುವುದನ್ನು ನಾವು ನೋಡಿರುತ್ತೇವೆ. ಅದೇ ಇನ್ನೂ ಕೆಲವರಿಗೆ ಆ 24 ಗಂಟೆಗಳು ಹೇಗೆ ಕಳೆಯುವುದು ಅಂತ ದೊಡ್ಡ ಚಿಂತೆಯಾಗಿರುತ್ತದೆ. ಮೈ ತುಂಬಾ ಕೆಲಸ ಇದ್ದವರಿಗೆ ಸಮಯ ಯಾವತ್ತಿಗೂ ಕಡಿಮೆಯೇ ಆಗಿರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ವ್ಯಕ್ತಿಗಳಿಗೆ(Person) ಅವರು ಜೀವನದಲ್ಲಿ ರೂಢಿಸಿಕೊಂಡ ಅಭ್ಯಾಸಗಳು (Habits) ಅವರ ಕಾರ್ಯಕ್ಷಮತೆಯ ಮೇಲೆ ತುಂಬಾನೇ ಪರಿಣಾಮವನ್ನು ಬೀರುತ್ತವೆ.  ಇಲ್ಲೊಬ್ಬ ಬಾಲಿವುಡ್ ನಟನಿಗೆ (Bollywood actor) ಅವರು ಜೀವನದಲ್ಲಿ ರೂಢಿಸಿಕೊಂಡ ಒಂದು ಅಭ್ಯಾಸ ತುಂಬಾನೇ ಮ್ಯಾಜಿಕ್ (Magic) ರೀತಿಯಲ್ಲಿ ಕೆಲಸ ಮಾಡುತ್ತದೆ ಅಂತ ಹೇಳಿಕೊಂಡಿದ್ದಾರೆ ನೋಡಿ.

ಸಮಯ ನಿರ್ವಹಣೆಯ ಬಗ್ಗೆ ನಟ ಏನು ಹೇಳುತ್ತಾರೆ?
ಸಮಯ ನಿರ್ವಹಣೆ ಎಂಬುದು ಒಂದು ನಿರ್ಣಾಯಕ ಕೌಶಲ್ಯವಾಗಿರುವುದರಿಂದ, ಬಹು-ಶತಕೋಟಿ ಡಾಲರ್ ಕಂಪನಿಗಳ ಸಿಇಒಗಳು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಅವರು ಹೇಗೆ ಎದ್ದೇಳುತ್ತಾರೆ ಎಂಬುದರ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಪ್ರಪಂಚದಲ್ಲಿ ಎಷ್ಟೋ ಜನರು ಇನ್ನೂ ಹಾಸಿಗೆಯಲ್ಲಿರುವಾಗಲೇ, ಇವರು ಎದ್ದು ಹೇಗೆ ಸಾಕಷ್ಟು ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳುತ್ತಾರೆ ಎಂದು ನಟ ಸುನೀಲ್ ಶೆಟ್ಟಿ ಅವರು ಹೇಳುತ್ತಾರೆ ನೋಡಿ.

ಒಂದು ದಿನದಲ್ಲಿ ಗರಿಷ್ಠ ಕೆಲಸ ಮಾಡುವುದು ಹೇಗೆ?
ಇತ್ತೀಚಿನ ಲಿಂಕ್ಡ್ಇನ್ ಪೋಸ್ಟ್ ನಲ್ಲಿ ನಟ, ನಿರ್ಮಾಪಕ, ಉದ್ಯಮಿ ಮತ್ತು ಫಿಟ್ನೆಸ್ ಉತ್ಸಾಹಿ ಸುನೀಲ್ ಶೆಟ್ಟಿ ಅವರು ಉತ್ಪಾದಕತೆ ಮತ್ತು ಒಂದು ದಿನದಲ್ಲಿ ಗರಿಷ್ಠ ಕೆಲಸವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಅವರು ದಿನವನ್ನು ಬೇಗನೆ ಪ್ರಾರಂಭಿಸಲು ಗಮನ ಹರಿಸುವುದು, ನಂತರ ದಿನದ ಕೆಲಸವನ್ನು ವಿಭಾಗಿಸುವುದು, ಕೆಲಸವನ್ನು ನಿಯೋಜಿಸುವುದು ಮತ್ತು ಯಾರ ಬಗ್ಗೆಯೂ ದೂರು ನೀಡದೆ ಇರುವುದು ಅವರಿಗೆ ಸಹಾಯ ಮಾಡುವ ವಿಷಯಗಳಾಗಿವೆ ಎಂದು ಅವರು ಹೇಳುತ್ತಾರೆ.

ನಟನ ಮನಸ್ಸಿಗೆ ಖುಷಿ ನೀಡುವ ವಿಷಯ ಅಂದ್ರೆ ಇದೇ ಅಂತೆ 
"ನಾನು ನನ್ನ ಮನಸ್ಸಿಗೆ ಖುಷಿ ನೀಡುವ ಯೋಗ, ನನ್ನ ತಾಯಿಯೊಂದಿಗೆ ಟೀ ಕುಡಿಯುತ್ತಾ, ಕುಟುಂಬದೊಂದಿಗೆ ಸಮಯ ಮತ್ತು ನನ್ನ ನಾಯಿಗಳೊಂದಿಗೆ ನನ್ನ ಬೆಳಿಗ್ಗೆಯ ಸಮಯವನ್ನು ಕಳೆಯುತ್ತೇನೆ" ಎಂದು ಅವರು ಬರೆಯುತ್ತಾರೆ. ಬೆಳಿಗ್ಗೆ ಈ ಗ್ಯಾಜೆಟ್ ಗಳು ಅಥವಾ ಟಿವಿ ಸ್ಕ್ರೀನ್ ಗಳಿಂದ ದೂರವಿರುವುದು ಸಹ ನನಗೆ ಸಾಕಷ್ಟು ಸಹಾಯ ಮಾಡಿದೆ ಎಂದು ಅವರು ಬರೆಯುತ್ತಾರೆ.



ಇದನ್ನೂ ಓದಿ:  Pushpa 2 ಚಿತ್ರದಲ್ಲಿ ಶೈನ್ ಆಗಲಿದ್ದಾರೆ ಸಾಯಿ ಪಲ್ಲವಿ! ಆ ಇಂಟ್ರಸ್ಟಿಂಗ್ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ!

ದಿನದ ಕೆಲಸವನ್ನು ವಿಭಾಗಿಸುವ ವಿಷಯದಲ್ಲಿ, ಅವರು "ನಾನು ವಯಸ್ಸಾದಂತೆ, ನಾನು ದುರಾಸೆಗೆ ಒಳಗಾಗುತ್ತಿದ್ದೇನೆ, ನಾನು ಹೆಚ್ಚು ಆರೋಗ್ಯಕರವಾಗಿರಲು ಬಯಸುತ್ತೇನೆ, ನನ್ನ ಎಲ್ಲಾ ಉದ್ಯಮಗಳು ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ, ನಾನು ಭೇಟಿಯಾಗುವ ಪ್ರತಿಯೊಬ್ಬ ಆಸಕ್ತಿದಾಯಕ ವ್ಯಕ್ತಿಯೊಂದಿಗೆ ಸಹಕರಿಸಲು ಬಯಸುತ್ತೇನೆ, ನನ್ನ ದಾರಿಯಲ್ಲಿ ಬರುವ ಪ್ರತಿಯೊಂದು ಅವಕಾಶವನ್ನು ಅನ್ವೇಷಿಸಲು ನಾನು ಬಯಸುತ್ತೇನೆ ಮತ್ತು ನಾನು ಒಬ್ಬ ಅತ್ಯುತ್ತಮ ವ್ಯಕ್ತಿಯಾಗಲು ಬಯಸುತ್ತೇನೆ. ಇದೆಲ್ಲವನ್ನೂ ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಬಯಸುವುದು ಎಂದರೆ ನನ್ನ ದಿನದಲ್ಲಿರುವ ಸಮಯವನ್ನು ಸಣ್ಣ ಸಣ್ಣ ಕೆಲಸಗಳಿಗೆ ಚಿಕ್ಕಪುಟ್ಟ ವಿಭಾಗಗಳಾಗಿ ವಿಭಜಿಸುವುದು ಸಹಾಯಕ್ಕೆ ಬರುತ್ತದೆ."



ಕೆಲಸದ ನಿಯೋಜನೆಯ ಪ್ರಾಮುಖ್ಯತೆ ಏನು? 
ನೀವು ಪ್ರಸ್ತುತ ತೊಡಗಿಸಿಕೊಂಡಿರುವ ವಿಷಯಗಳಿಗೆ ನಿಮ್ಮ ಸಂಪೂರ್ಣವಾಗಿ ಸಮಯ ನೀಡುವ ಪ್ರಾಮುಖ್ಯತೆಯ ಬಗ್ಗೆ ಅವರು "ನಿಮ್ಮ ಸಮಯದ ಬೇಡಿಕೆಗಳು ಹೆಚ್ಚಾದಂತೆ, ಇದು ಕಾರ್ಯನಿರ್ವಹಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ" ಎಂದು ಅವರು ಬರೆಯುತ್ತಾರೆ.

ಕೆಲಸದ ನಿಯೋಜನೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ ಅವರು "ಕೆಲಸವನ್ನು ನಿಯೋಜಿಸಲು ಮತ್ತು ನಿಭಾಯಿಸಲು ಎಂದಿಗೂ ಹೆದರಬೇಡಿ. ನೀವು ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡಿ ಮುಗಿಸಲು ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ನಿಯೋಜನೆಯು ದೀರ್ಘಾವಧಿಯಲ್ಲಿ ಕೆಲಸಗಳನ್ನು ಮಾಡಲು ಒಂದು ಸ್ಮಾರ್ಟ್ ಮಾರ್ಗವಾಗುತ್ತದೆ. ನಿಯಂತ್ರಣ ಮೀರಿದ ಸನ್ನಿವೇಶಗಳು ಬರುತ್ತವೆ ಮತ್ತು ಅದರಿಂದ ನಿಮ್ಮನ್ನು ನೀವು ದೂರವಿಡುವ ಬದಲು, ಉತ್ತಮ ಕಾರ್ಯಸಾಧ್ಯವಾದ ಪರಿಹಾರವನ್ನು ಕಂಡು ಹಿಡಿಯಲು ಅದರ ಮೇಲೆ ಕೆಲಸ ಮಾಡಲು ಅವರು ಸೂಚಿಸುತ್ತಾರೆ.

ಸುನೀಲ್ ಶೆಟ್ಟಿಯವರು ಹೇಗೆ ಸಮಯ ನಿರ್ವಹಣೆ ಮಾಡುತ್ತಾರೆ?
ಮುಂಬೈ ಸಂಚಾರ ದಟ್ಟನೆಯ ಬಗ್ಗೆ ಉಲ್ಲೇಖಿಸಿ, ಅವರು "ಸರಾಸರಿ, ನಾನು ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ನನ್ನ ಕಾರಿನಲ್ಲಿ ಕಳೆಯುತ್ತೇನೆ, ಕೆಲವೊಮ್ಮೆ ಮೂರು ಗಂಟೆಗಳನ್ನು ಕಳೆಯುತ್ತೇನೆ. ಅದು ನಿರಾಶಾದಾಯಕವಾಗಿರುವುದರಿಂದ, ನಾನು ಆ ಸಮಯವನ್ನು ಬಳಸಿಕೊಂಡು ದಿನಚರಿಯನ್ನು ನಿರ್ಮಿಸಿದ್ದೇನೆ, ಆ ಸಮಯವನ್ನು ಕರೆಗಳನ್ನು ಮಾಡಲು ಉಪಯೋಗಿಸುತ್ತೇನೆ ಎಂದು ಸುನೀಲ್ ಹೇಳುತ್ತಾರೆ.

ಇದನ್ನೂ ಓದಿ: Amitab Bachchan: ಬಿಗ್ ಬಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತೆಲುಗು ನಟ ಜೂನಿಯರ್ ಎನ್‌ಟಿಆರ್; ಏನಂದ್ರು ನೋಡಿ

"ಎಲ್ಲದರ ಮಧ್ಯೆ ನೀವು ಐದು ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳಿ! ನೀವು ಹೆಚ್ಚು ಇಷ್ಟಪಡುವ ಕೆಲಸವನ್ನು ಆ ಸಮಯದಲ್ಲಿ ಮಾಡಿ. ಒಬ್ಬ ಸ್ನೇಹಿತನನ್ನು ಕರೆಯಿರಿ, ಏನನ್ನಾದರೂ ಓದಿ, ಕಚೇರಿಯ ಸುತ್ತಲೂ ಒಂದು ವಾಕ್ ಹೋಗಿ ಬನ್ನಿ, ಒಂದು ಬಾಟಲ್ ನೀರು ಕುಡಿಯಿರಿ ಹೀಗೆ ಏನೇ ಆಗಲಿ, ಅದು ನಿಮ್ಮ ಮನಸ್ಸನ್ನು ತೃಪ್ತಿ ಪಡಿಸುವಂತದ್ದಾಗಿರಲಿ" ಎಂದು ನಟ ಹೇಳುತ್ತಾರೆ.
Published by:Ashwini Prabhu
First published: