Tollywood OTT Release: ಒಟಿಟಿ ಮೂಲಕ ರಿಲೀಸ್​ ಆಗಲಿವೆ ಈ ನಾಲ್ಕು ಸಿನಿಮಾಗಳು..!

ಸಂಕಷ್ಟದಲ್ಲಿರುವ ನಿರ್ಮಾಪಕರು ಬರುವಷ್ಟು ಹಣ ಬರಲಿ ಬಡ್ಡಿ ಕಟ್ಟುವುದಾದರೂ ತಪ್ಪುತ್ತದೆ ಎಂದು ತಮ್ಮ ಸಿನಿಮಾಗಳನ್ನು ಒಟಿಟಿ ಮೂಲಕ ರಿಲೀಸ್​ ಸಿದ್ಧವಾಗುತ್ತಿದ್ದಾರೆ. ಅದರಲ್ಲೂ ಒಳ್ಳೆಯ ಬೆಲೆ ಸಿಕ್ಕರೆ ಸಿನಿಮಾಗಳನ್ನು ಡಿಜಿಟಲ್​ ವೇದಿಕೆಯಲ್ಲಿ ಬಿಡುಗಡೆ ಮಾಡಲು ಕಾಯುತ್ತಿದ್ದಾರೆ.

ಒಟಿಟಿ ಮೂಲಕ ರಿಲೀಸ್ ಆಗಲಿವೆ ನಾಲ್ಕು ಟಾಲಿವುಡ್​ ಸಿನಿಮಾಗಳು

ಒಟಿಟಿ ಮೂಲಕ ರಿಲೀಸ್ ಆಗಲಿವೆ ನಾಲ್ಕು ಟಾಲಿವುಡ್​ ಸಿನಿಮಾಗಳು

  • Share this:
ಕೊರೋನಾ ಭೀತಿಯಿಂದಾಗಿ ಇನ್ನೂ ಸಹ ಚಿತ್ರಮಂದಿರಗಳಿಗೆ ಮುಕ್ತಿ ಸಿಕ್ಕಲ್ಲ. ನಾಲ್ಕೂವರೆ ತಿಂಗಳಿನಿಂದ ಬಾಗಿಲು ಮುಚ್ಚಿರುವ ಮಲ್ಟಿಪ್ಲೆಕ್ಸ್​ ಹಾಗೂ ಸಿನಿಮಾ ಮಂದಿರಗಳಿಗೆ ಈ ತಿಂಗಳ ಅಂತ್ಯದವರೆಗೂ ತೆರೆಯುವ ಭಾಗ್ಯವಿಲ್ಲ. ಇದೇ ಕಾರಣದಿಂದಾಗಿ ಸಾಲ ಮಾಡಿ ಸಿನಿಮಾ ನಿರ್ಮಿಸಿರುವ ನಿರ್ಮಾಪಕರು ಬಡ್ಡಿ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಸಂಕಷ್ಟದಲ್ಲಿರುವ ನಿರ್ಮಾಪಕರು ಬರುವಷ್ಟು ಹಣ ಬರಲಿ ಬಡ್ಡಿ ಕಟ್ಟುವುದಾದರೂ ತಪ್ಪುತ್ತದೆ ಎಂದು ತಮ್ಮ ಸಿನಿಮಾಗಳನ್ನು ಒಟಿಟಿ ಮೂಲಕ ರಿಲೀಸ್​ ಸಿದ್ಧವಾಗುತ್ತಿದ್ದಾರೆ. ಅದರಲ್ಲೂ ಒಳ್ಳೆಯ ಬೆಲೆ ಸಿಕ್ಕರೆ ಸಿನಿಮಾಗಳನ್ನು ಡಿಜಿಟಲ್​ ವೇದಿಕೆಯಲ್ಲಿ ಬಿಡುಗಡೆ ಮಾಡಲು ಕಾಯುತ್ತಿದ್ದಾರೆ.

these four Telugu movies to stream on ott soon
ವಿ ಸಿನಿಮಾದಲ್ಲಿ ನಾನಿ


ಇತ್ತೀಚೆಗಷ್ಟೆ ಕೃಷ್ಣ ಆ್ಯಂಡ್​ ಹಿಸ್​ ಲೀಲಾ ಸಿನಿಮಾ ಒಟಿಟಿ ಮೂಲಕ ರಿಲೀಸ್​ ಆಗಿತ್ತು. ಈಗ ಇದೇ ದಾರಿಯಲ್ಲಿವೆ ಟಾಲಿವುಡ್​ನ ನಾಲ್ಕು ಸಿನಿಮಾಗಳು. ಆದರೆ ಬೇರೆ ಭಾಷೆಗಳಿಗೆ ಹೋಲಿಸಿದರೆ, ತೆಲುಗು ಚಿತ್ರಗಳು ಒಟಿಟಿ ಮೂಲಕ ರಿಲೀಸ್​ ಆಗುತ್ತಿರುವ ಸಂಖ್ಯೆ ಕಡಿಮೆ ಇದೆ. ನ್ಯಾಚುರಲ್​ ಸ್ಟಾರ್ ನಾನಿ ಅಭಿನಯದ ವಿ ಸಿನಿಮಾ ಈಗ ಒಟಿಟಿ ರಿಲೀಸ್​ಗೆ ಸಜ್ಜಾಗುತ್ತಿದೆ.



ಇದರ ಜೊತೆಗೆ ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ, ರೆಡ್​, ಉಪ್ಪೆನ, ಸೋಲೊ ಬದುಕೆ ಸೋ ಬೆಟರ್​ ಚಿತ್ರಗಳೂ ಒಟಿಟಿ ಮೂಲಕ ತೆರೆ ಕಾಣಲು ಸಿದ್ಧವಾಗುತ್ತಿವೆಯಂತೆ. ಕೊರೋನಾದಿಂದಾಗಿ ಪರಿಸ್ಥಿತಿ ಇನ್ನಷ್ಟು ಕಠಿಣವಾದರೆ, ಚಿತ್ರಮಂದಿರಗಳನ್ನು ತೆರೆಯುವುದು ಮತ್ತಷ್ಟು ಮುಂದಕ್ಕೆ ಹೋಗುತ್ತದೆ. ಇದೇ ಕಾರಣದಿಂದ ಸಿನಿಮಾದ ನಿರ್ಮಾಪಕರು ಈ ನಿರ್ಧಾರಕ್ಕೆ ಬರುತ್ತಿದ್ದಾರೆ.
Published by:Anitha E
First published: