Bollywood Couple: ಬಾಲಿವುಡ್​ನ ಈ ಸ್ಟಾರ್​ ಜೋಡಿಗೆ ಆತ್ಮವಿಶ್ವಾಸದ ಜೊತೆ ಅಹಂಕಾರನೂ ಇದ್ಯಂತೆ; ಖ್ಯಾತ ಜ್ಯೋತಿಷಿ

ಸೈಫ್ ಅಲಿ ಖಾನ್ ಅವರು ಪಟೌಡಿ ರಾಜಮನೆತನದವರು ಮತ್ತು ಮತ್ತೊಂದೆಡೆ ಕರೀನಾ ಬಾಲಿವುಡ್ ನ ಮೊದಲ ಕುಟುಂಬವಾದ ಕಪೂರ್ ಕುಟುಂಬಕ್ಕೆ ಸೇರಿದವರು. ಇವರಿಬ್ಬರ ಜೋಡಿ ಮತ್ತು ಸಂಬಂಧ ಹೇಗಿರುತ್ತದೆ ಅಂತ ಖ್ಯಾತ ಜ್ಯೋತಿಷಿ ಮತ್ತು ಬಾಡಿ ಲ್ಯಾಂಗ್ವೆಜ್ ಎಕ್ಸ್ಪರ್ಟ್ (ದೇಹಭಾಷೆ ತಜ್ಞ) ಪಂಡಿತ್ ಜಗನ್ನಾಥ್ ಗುರೂಜಿ ಅವರು ಏನು ಹೇಳಿದ್ದಾರೆ ನೋಡಿ. ಈ ದಂಪತಿಗಳ ಬಗ್ಗೆ ಕೆಲವು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದರು.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್

  • Share this:
ಬಾಲಿವುಡ್ ನಲ್ಲಿರುವ (Bollywood) ಕೆಲವು ಸ್ಟಾರ್ ಜೋಡಿಗಳು ಯಾವಾಗಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತವೆ. ಇದರಲ್ಲಿ ನಟ ಸೈಫ್ ಅಲಿ ಖಾನ್ (Saif Ali Khan) ಮತ್ತು ನಟಿ ಕರೀನಾ ಕಪೂರ್ (Kareena Kapoor) ಅವರ ಜೋಡಿ ಸಹ ಒಂದು. ನಟಿ ಕರೀನಾ ತಮ್ಮ ಯೋಗಾಭ್ಯಾಸ ಮತ್ತು ಫಿಟ್ನೆಸ್ ಸಲುವಾಗಿ ಸುದ್ದಿಯಲ್ಲಿದ್ದರೆ, ಇನ್ನೂ ಸೈಫ್ ತಮ್ಮ ಚಿತ್ರಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೊಮ್ಮೆ ಈ ತಾರಾ ಜೋಡಿ (Couples) ಸುದ್ದಿಯಲ್ಲಿದ್ದಾರೆ, ಕಾರಣ ಏನು ಅಂತ ನೀವೇ ಮುಂದೆ ಓದಿ ನಿಮಗೆ ಅರ್ಥವಾಗುತ್ತೆ. ಸೈಫ್ ಅಲಿ ಖಾನ್ ಅವರು ಪಟೌಡಿ ರಾಜಮನೆತನದವರು ಮತ್ತು ಮತ್ತೊಂದೆಡೆ ಕರೀನಾ ಬಾಲಿವುಡ್ ನ ಮೊದಲ ಕುಟುಂಬವಾದ ಕಪೂರ್ ಕುಟುಂಬಕ್ಕೆ (Family) ಸೇರಿದವರು.

ಸೈಫ್, ಕರೀನಾ ಕಪೂರ್ ಜೋಡಿಯ ಬಗ್ಗೆ ಜ್ಯೋತಿಷಿ ಏನಂದ್ರು 
ಇವರಿಬ್ಬರ ಜೋಡಿ ಮತ್ತು ಸಂಬಂಧ ಹೇಗಿರುತ್ತದೆ ಅಂತ ಖ್ಯಾತ ಜ್ಯೋತಿಷಿ ಮತ್ತು ಬಾಡಿ ಲ್ಯಾಂಗ್ವೆಜ್ ಎಕ್ಸ್ಪರ್ಟ್ (ದೇಹಭಾಷೆ ತಜ್ಞ) ಪಂಡಿತ್ ಜಗನ್ನಾಥ್ ಗುರೂಜಿ ಅವರು ಏನು ಹೇಳಿದ್ದಾರೆ ನೋಡಿ. ಈ ದಂಪತಿಗಳ ಬಗ್ಗೆ ಕೆಲವು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದರು. ಅವರ ಹಾವ ಭಾವ, ಮುಖ ಮತ್ತು ದೇಹಭಾಷೆಯನ್ನು ನೋಡಿದಾಗ, ಒಂದು ಆಘಾತಕಾರಿಯಾದ ಸಂಗತಿಯೆಂದರೆ, ದಂಪತಿಗಳು ಕೇವಲ ಆತ್ಮವಿಶ್ವಾಸ ಮಾತ್ರವಲ್ಲ, ಅಹಂಕಾರವನ್ನು ಸಹ ಹೊಂದಿದ್ದಾರೆ ಎಂದು ಗುರೂಜಿ ಬಹಿರಂಗಪಡಿಸಿದ್ದಾರೆ.

ಪಂಡಿತ್ ಜಗನ್ನಾಥ್ ಗುರೂಜಿ


"ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ತುಂಬಾ ಪ್ರಾಬಲ್ಯ ಹೊಂದಿದ್ದಾರೆ. ಅವರು ಅದನ್ನು ಸರಳವಾಗಿಡಲು ಇಷ್ಟ ಪಡುವುದಿಲ್ಲ. ಅವರ ದೇಹಭಾಷೆಯಲ್ಲಿ ನಾನು ನೋಡಬಹುದಾದ ಪ್ರಕಾರ ಅವರು ತಮ್ಮನ್ನು ತಾವು ತುಂಬಾನೇ ಪ್ರೀತಿಸುತ್ತಾರೆ. ದಂಪತಿಗಳು ಎಲ್ಲರೊಂದಿಗೂ ಸ್ಪರ್ಧಿಸಲು ಇಷ್ಟಪಡುತ್ತಾರೆ. ಅವರ ದೇಹ ಭಾಷೆ ಮತ್ತು ಭಂಗಿ ಅವರು ಪರಸ್ಪರ ಪ್ರೀತಿಸುತ್ತಾರೆ ಮತ್ತು ಇವರಿಬ್ಬರ ಮಧ್ಯೆ ಸಾಕಷ್ಟು ಪ್ರೀತಿಯಿದೆ. ಒಟ್ಟಿಗೆ ಇವರಿಬ್ಬರು ಅಸಾಧಾರಣರು. ವೈಯಕ್ತಿಕವಾಗಿ ಕರೀನಾ ದುರಹಂಕಾರಿ ಮತ್ತು ಸೈಫ್ ಕೂಡ ಆದರೆ ಅವರು ಪರಸ್ಪರರ ಬೆಂಬಲವನ್ನು ಹೊಂದಿರುವವರೆಗೆ, ಅವರು ಏನನ್ನಾದರೂ ಗೆಲ್ಲಬಹುದು" ಎಂದು ಪಂಡಿತ್ ಜಗನ್ನಾಥ್ ಗುರೂಜಿ ಹೇಳಿದ್ದಾರೆ.

ಇದನ್ನೂ ಓದಿ:  Harry Styles: ನಾನು ಏನು ಮಾಡುತ್ತಿದ್ದೆನೆಂದು ನನಗೆ ಯಾವ ಐಡಿಯಾ ಕೂಡ ಇಲ್ಲ ಎಂದ ಖ್ಯಾತ ಸಿನಿಮಾ ನಟ!

ಸಿದ್ಧಾರ್ಥ್-ಕಿಯಾರಾ ಜೋಡಿ ಬಗ್ಗೆ ಗುರೂಜಿ ಏನ್ ಹೇಳಿದ್ರು?
ಈ ಹಿಂದೆ ಗುರೂಜಿ ಬಾಲಿವುಡ್ ನ ಇನ್ನೊಬ್ಬ ನಟ ಸಿದ್ದಾರ್ಥ್ ಮತ್ತು ಕಿಯಾರಾ ಜೋಡಿಯ ಬಗ್ಗೆ ಸಹ ಹೇಳಿದ್ದರು. ಅವರ ದೇಹಭಾಷೆಯನ್ನು ಮತ್ತು ಅವರ ಬಂಧದ ಬಗ್ಗೆ ನಮಗೆ ಹೆಚ್ಚಿನ ವಿವರಗಳನ್ನು ಜಗನ್ನಾಥ್ ಗುರೂಜಿ ಅವರು ಇವರಿಬ್ಬರಿರುವ ಫೋಟೋವನ್ನು ನೋಡಿ ಕೆಲವು ಸಂಗತಿಗಳನ್ನು ತಿಳಿಸಿದ್ದರು. "ಈ ಫೋಟೋ ನೋಡಿದರೆ, ಅವರ ಕಾಲುಗಳು ಹೇಗಿವೆ ಎಂಬುದನ್ನು ಗಮನಿಸಿ, ಅವರ ಭಂಗಿಯು ಅವರ ದೇಹದ ಬಗ್ಗೆ ಮಾತ್ರವಲ್ಲದೆ ಅವರ ವೈಯಕ್ತಿಕ ವ್ಯಕ್ತಿತ್ವದ ಬಗ್ಗೆಯೂ ಸಾಕಷ್ಟು ಹೇಳುತ್ತದೆ ಗುರೂಜಿ ಹೇಳಿದ್ದರು."ಸಿದ್ಧಾರ್ಥ್ ತುಂಬಾ ವೇಗವಾಗಿ ಯಾರ ಜೊತೆಯೂ ಸಲುಗೆ ಬೆಳೆಸಿಕೊಳ್ಳುವುದಿಲ್ಲ, ಅವರು ತಮ್ಮ ಸುತ್ತಮುತ್ತಲಿನ ಜನರನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ಕಿಯಾರಾ ಅಡ್ವಾಣಿ ಕೂಡ ಹಾಗೆಯೇ ಇದ್ದಾರೆ. ಅವರ ದೇಹಭಾಷೆಯು ಅವರಿಬ್ಬರು ಖಂಡಿತವಾಗಿಯೂ ಮದುವೆಯಾಗುತ್ತಾರೆ ಎಂದು ಹೇಳುತ್ತದೆ. ಅವರಿಬ್ಬರು ತುಂಬಾ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ” ಎಂದು ಗುರೂಜಿ ಹೇಳಿದ್ದರು.

ಈ ಜೋಡಿ ಆತ್ಮವಿಶ್ವಾಸ ಮತ್ತು ಧೈರ್ಯಶಾಲಿಗಳು 
“ಸಿದ್ಧಾರ್ಥ್ ವೈಯಕ್ತಿಕವಾಗಿ ಏನನ್ನೂ ತೆಗೆದುಕೊಳ್ಳುವುದಿಲ್ಲ, ಆದರೆ ಕಿಯಾರಾ ಹೆಚ್ಚು ಅಭಿವ್ಯಕ್ತಿಶೀಲ ಮತ್ತು ಭಾವನಾತ್ಮಕ ವ್ಯಕ್ತಿಯಾಗಿರುವುದರಿಂದ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ಕಿಯಾರಾ ಒಬ್ಬ ವ್ಯಕ್ತಿಯಾಗಿ ತುಂಬಾ ಆತ್ಮವಿಶ್ವಾಸ ಮತ್ತು ಧೈರ್ಯಶಾಲಿ. ಕಿಯಾರಾ ತನ್ನ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಇಷ್ಟ ಪಡುವುದಿಲ್ಲ ಎಂದು ಹೇಳುತ್ತವೆ" ಎಂದು ಗುರೂಜಿ ಹೇಳಿದರು.

ಇದನ್ನೂ ಓದಿ:  Ponniyin Selvan: ರಜನಿಕಾಂತ್ ಕಾಲುಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ!

"ಕಿಯಾರಾ ಅವರ ಮುಖಭಾವ ನೋಡಿದರೆ ಆಕೆಯನ್ನು ತುಂಬಾನೇ ಪ್ರೀತಿಸುವ ಜನರನ್ನು ಆಕೆ ಇಷ್ಟಪಡುತ್ತಾಳೆ ಮತ್ತು ಸಿದ್ಧಾರ್ಥ್ ನನ್ನು ನೋಡಿದಾಗ, ಆ ವ್ಯಕ್ತಿ ತುಂಬಾನೇ ಸರಳವಾಗಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಒಟ್ಟಾರೆಯಾಗಿ, ಈ ಫೋಟೋ ಇವರಿಬ್ಬರ ಸಂಬಂಧದ ವಿಷಯಕ್ಕೆ ಬಂದಾಗ ಸಾಕಷ್ಟು ಸಕಾರಾತ್ಮಕತೆಯನ್ನು ಸೂಚಿಸುತ್ತದೆ" ಎಂದು ಅವರು ಹೇಳಿದರು.
Published by:Ashwini Prabhu
First published: