Super Hit Songs: ಶ್ರೀದೇವಿಯವರು ಅಭಿನಯಿಸಿರುವ ಸೂಪರ ಹಿಟ್ ಹಾಡುಗಳಿವು!

ಭಾರತ ಸಿನಿಮಾ ಕಂಡ ದಿ ಬೆಸ್ಟ್‌ ನಟಿ ಎಂದರೆ ಶ್ರೀದೇವಿ.  ಪಡ್ಡೆ ಹುಡುಗರು ಈಗಲೂ ಆಕೆಯನ್ನು ಬಾಲಿವುಡ್‌ ಬೆಡಗಿ, ನಮ್ಮ ಮನದರಸಿ, ಹೀಗೆ ಹಲವು ರೀತಿಯಲ್ಲಿ ಆರಾಧಿಸುತ್ತಾರೆ. ಈಗಲೂ ಅವರ ಜನಪ್ರಿಯತೆ ಸ್ವಲ್ಪವೂ ಕುಗ್ಗಿಲ್ಲ ಎಂದರೆ ಅವರು ಅಭಿಮಾನಿಗಳನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ ಎಂದು ನಾವು ತಿಳಿಯಬಹುದು.

ಶ್ರೀದೇವಿ

ಶ್ರೀದೇವಿ

  • Share this:
ಭಾರತ ಸಿನಿಮಾ ಕಂಡ ದಿ ಬೆಸ್ಟ್‌ ನಟಿ ಎಂದರೆ ಶ್ರೀದೇವಿ (Sridevi).  ಪಡ್ಡೆ ಹುಡುಗರು ಈಗಲೂ ಆಕೆಯನ್ನು ಬಾಲಿವುಡ್‌ ಬೆಡಗಿ, ನಮ್ಮ ಮನದರಸಿ, ಹೀಗೆ ಹಲವು ರೀತಿಯಲ್ಲಿ ಶ್ರೀದೇವಿ ಯವರ ಸೌಂದರ್ಯವನ್ನು (Beauty) ಮತ್ತು ನಟನಾ ಕೌಶಲ್ಯವನ್ನು (Acting skills) ಆರಾಧಿಸುತ್ತಾರೆ. ಈಗಲೂ ಅವರ ಜನಪ್ರಿಯತೆ (popularity) ಸ್ವಲ್ಪವೂ ಕುಗ್ಗಿಲ್ಲ ಎಂದರೆ ಅವರು ಅಭಿಮಾನಿಗಳನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ ಎಂದು ನಾವು ತಿಳಿಯಬಹುದು. ಇವರು ಹಿಂದಿ ಚಿತ್ರರಂಗದ (Hindi cinema) ಅತ್ಯುತ್ತಮ ನಟಿಯರಲ್ಲಿ ಶ್ರೀದೇವಿ ಯವರು ಒಬ್ಬರು ಎಂದು ಹೇಳಬಹುದು. ಇವರು ನಟಿಯಾದ ನಂತರ ಬೆಳ್ಳಿತೆರೆಯಲ್ಲಿ ಹಲವಾರು ಅಪ್ರತಿಮ ಪಾತ್ರಗಳಿಗೆ ಬಣ್ಣ ಹಚ್ಚಿ ಅವುಗಳಿಗೆ ಜೀವ ತಂದಿದ್ದಾರೆ. ಇವರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ.

ಯಾವ ಪಾತ್ರವೇ ಇರಲಿ, ಅದು ತಾಯಿ ಅಥವಾ ಪ್ರೇಮಿ ಅಥವಾ ಸ್ನೇಹಿತೆ ಯಾವುದೇ ಪಾತ್ರ ಇದ್ದರೂ ಕೂಡ ಲೀಲಾಜಾಲವಾಗಿ ಆ ಪಾತ್ರವನ್ನು ನಿರ್ವಹಿಸುವ ಕಲೆ ಅವರಿಗೆ ಸಿದ್ದಿಯಾಗಿತ್ತು ಎಂದು ಅವರ ನಟನೆಯನ್ನು ನೋಡಿದ ಯಾರಿಗಾದರೂ ಅದು ತಿಳಿಯುತ್ತಿತ್ತು. ಆದರೆ, ದುರದೃಷ್ಟವಶಾತ್, ಅವರ 2017 ರ ಚಲನಚಿತ್ರ MOM ಬಿಡುಗಡೆ ಕಂಡ ಕೆಲವು ತಿಂಗಳ ನಂತರ, ಈ ನಟಿ ಫೆಬ್ರವರಿ 2018 ರಲ್ಲಿ ದುಬೈನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ ಆಗ ಕೇವಲ 59 ವರ್ಷ ವಯಸಾಗಿತ್ತು. ಈಗ ನಾವು ಅವರು ನಟಿಸಿದ ಸಿನಿಮಾಗಳ ಎಲ್ಲ ಹಾಡುಗಳನ್ನು ಒಂದೇ ಕಡೆ ಸಿಗುವಂತೆ ಮಾಡಿದ್ದೇವೆ, ಆ ಹಾಡುಗಳು ನಿಮ್ಮನ್ನು ಮತ್ತೆ ಶ್ರೀದೇವಿ ಅವರ ಲೋಕಕ್ಕೆ ಕರೆದುಕೊಂಡು ಹೋಗಬಹುದು.

ಹವಾ ಹವಾಯಿ ಹಾಡು ಯಾವಾಗಲೂ ಎಲ್ಲರ ಹಾಟ್‌ ಫೇವರೆಟ್‌
ಮಿಸ್ಟರ್ ಇಂಡಿಯಾ ಚಿತ್ರದ ಹಿಟ್ ಟ್ರ್ಯಾಕ್‌ನಲ್ಲಿ ಅಸಾಧಾರಣ ನೃತ್ಯ ಪ್ರದರ್ಶನವನ್ನು ನೀಡುವಾಗ ನಟಿ ಶ್ರೀದೇವಿ ಅಕ್ಷರಶಃ ದೇವತೆಯಂತೆ ಕಾಣುತ್ತಿದ್ದರು. ಈ ಸಿನಿಮಾದ ಗಾಯಕಿ ಕವಿತಾ ಕೃಷ್ಣಮೂರ್ತಿಯವರ ಸುಮಧುರ ಗಾಯನವು ಈ ಸಿನಿಮಾಕ್ಕೆ ಪ್ಲಸ್‌ ಪಾಯಿಂಟ್‌ ಆಗಿತ್ತು. ಲಕ್ಷ್ಮೀಕಾಂತ್-ಪ್ಯಾರೇಲಾಲ್ ಸಂಯೋಜಿಸಿದ, ಹವಾ ಹವಾಯಿ ಹಾಡು ಯಾವಾಗಲೂ ಎಲ್ಲರ ಹಾಟ್‌ ಫೇವರೆಟ್‌.

ಇದನ್ನೂ ಓದಿ:  Sita Ramam: ದುಲ್ಖರ್ ಜೊತೆ ರಶ್ಮಿಕಾ ಮೊದಲ ಸಿನಿಮಾ 50 ಕೋಟಿ ಗಳಿಕೆ! ಸೀತಾರಾಮಂ ಸೂಪರ್ ಹಿಟ್

ಮೇರೆ ಹಾಥೋಂ ಮೇ ನೌ ನೌ ಚುರಿಯನ್ ಹಾಡು
ನೈಟಿಂಗೇಲ್ ಆಫ್ ಇಂಡಿಯಾ, ದಿವಂಗತ ಗಾಯಕಿ ಲತಾ ಮಂಗೇಶ್ಕರ್, ಮೇರೆ ಹಾಥೋನ್ ಮೇ ನೌ ನೌ ಚುರಿಯನ್ ಹಾಡನ್ನು ಹಾಡಿದ್ದಾರೆ. ಐಕಾನಿಕ್ ಚಲನಚಿತ್ರ ಚಾಂದಿನಿಯ ಟ್ರ್ಯಾಕ್‌ಲಿಸ್ಟ್‌ನಲ್ಲಿ ಲತಾ ಮಂಗೇಶ್ಕರ್‌ ಕಾಣಿಸಿಕೊಂಡಿದ್ದಾರೆ. ಹಿಟ್ ಹಾಡನ್ನು ಸಂಗೀತ ಜೋಡಿ ಶಿವ-ಹರಿ ಸಂಯೋಜಿಸಿದ್ದಾರೆ.

ಕೇತ್‌ ನಹಿಂ ಕತ್‌ ತೇ ಹಾಡು
ಸಿನಿಮಾದ ಗಲ್ಲಾಪೆಟ್ಟಿಗೆಯಲ್ಲಿ ಮ್ಯಾಜಿಕ್ ಸೃಷ್ಟಿಸಿದ ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಶ್ರೀದೇವಿ ಮತ್ತು ಅನಿಲ್ ಕಪೂರ್ ಅವರ ಜೊತೆಗಿನ ಕೇತ್‌ ನಹಿಂ ಕತ್‌ ತೆ ಸಕತ್‌ ಸೌಂಡ್‌ ಮಾಡಿತ್ತು. ಲಕ್ಷ್ಮೀಕಾಂತ್-ಪ್ಯಾರೇಲಾಲ್ ಸಂಯೋಜಿಸಿದ ಈ ಹಾಡನ್ನು ಅಲಿಶಾ ಚಿನೈ ಅವರ ಸಹಯೋಗದೊಂದಿಗೆ ಗಾಯಕ ಕಿಶೋರ್ ಕುಮಾರ್ ಹಾಡಿದ್ದಾರೆ. ಜಾವೇದ್ ಅಖ್ತರ್ ಅವರು ಹಾಡಿನ ಸಿಜ್ಲಿಂಗ್ ಸಾಹಿತ್ಯವನ್ನು ರಚಿಸಿದ್ದಾರೆ.

ಇದನ್ನೂ ಓದಿ:  Prashanth Neel: ಸಾಧನೆ ಶಿಖರ ಏರಿದ್ದರೂ ಹುಟ್ಟೂರು ಮರೆಯದ ಪ್ರಶಾಂತ್ ನೀಲ್, ಕಣ್ಣಿನ ಆಸ್ಪತ್ರೆಗೆ 50 ಲಕ್ಷ ಕೊಟ್ಟ ಕೆಜಿಎಫ್ ಡೈರೆಕ್ಟರ್!

ಹೀಗೆ ಇನ್ನು ಮುಂತಾದ ಹಾಡುಗಳ ಸಂಗ್ರಹಣೆಯನ್ನು ಶ್ರೀದೇವಿ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಅವರಿಗೆ ಗಿಫ್ಟ್‌ ಆಗಿ ನೀಡಲಿದ್ದಾರೆ. ಈ ಹಾಡುಗಳ ಸಂಗ್ರಹವನ್ನು ಎಲ್ಲ ಸಿನಿ ಪ್ರಿಯರು ಕೂಡ ಕೇಳಿ ಆನಂದ ಪಡೆಯಬಹುದು.
Published by:Ashwini Prabhu
First published: