Rashmika Mandanna ಈ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇದ್ದಿದ್ದು ಒಳ್ಳೆದಾಯ್ತು! ಅಟ್ಟರ್​ ಫ್ಲಾಪ್ ರೀ​

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಶ್ಮಿಕಾ ವಿರಾಜಮಾನಳಾಗಿದ್ದಾರೆ. ಹಿಂದಿ (Hindi) ಯಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಕಾದಿವೆ.

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

  • Share this:
ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ(Rashmika Mandanna)  ಕನ್ನಡ (Kannada) ಮತ್ತು ತೆಲುಗು (Telugu) ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. `ಕಿರಿಕ್ ಪಾರ್ಟಿ' (Kirik Party) ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿಯೇ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ (Modeling) ಕ್ಷೇತ್ರಕ್ಕೆ ಇಳಿದ ಇವರು ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದರು. ಇದಾದ ಬಳಿಕ ಇವರು ಹಿಂದೆ ತಿರುಗಿ ನೋಡಿಲ್ಲ. ಸಿನಿಮಾಗೆ ಬಂದ ಕೆಲ ತಿಂಗಳಿನಲ್ಲೇ ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಶ್ಮಿಕಾ ವಿರಾಜಮಾನಳಾಗಿದ್ದಾರೆ. ಹಿಂದಿ (Hindi) ಯಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಕಾದಿವೆ.

ರಶ್ಮಿಕಾ ಮಂದಣ್ಣ ರಿಜೆಕ್ಟ್​ ಮಾಡಿದ ಸಿನಿಮಾ ಫ್ಲಾಪ್​!

ಬಾಲಿವುಡ್ ದಂತ ಕಥೆ, ಬಿಗ್ ಬಿ ಅಮಿತಾಭ್ ಬಚ್ಚನ್ (Big B Amitabh Bhachchan) ಸೇರಿದಂತೆ ಖ್ಯಾತನಾಮರ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ. ಇದರ ಜೊತೆಗೆ ರಶ್ಮಿಕಾ ತುಂಬಾ ಚ್ಯೂಸಿ . ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಈ ಬ್ಯೂಟಿ. ಸಂಬಾವನೆ ಹೆಚ್ಚು ಕೊಟ್ಟರು ನೋ ಅಂತಾರೆ ಈ ಕಿರಿಕ್​ ಬ್ಯೂಟಿ. ಈಕೆಗೆ ಸಂಭಾವನೆ ಮುಖ್ಯ ಅಲ್ಲ. ಸಿನಿಮಾ ಹಿಟ್​ ಆಗುವುದು ಮುಖ್ಯ. ರಶ್ಮಿಕಾ ಮಂದಣ್ಣ ನಟಿಸಿದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್​​ನಲ್ಲಿ ಕಮಾಲ್​ ಮಾಡಿವೆ. ಕೆಲ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ರಿಜೆಕ್ಟ್​ ಮಾಡಿದ್ದರು. ಆ ಸಿನಿಮಾಗಳು ನೆಲಕಚ್ಚಿವೆ.

ಆಚಾರ್ಯ ಸಿನಿಮಾದಲ್ಲಿ ನೋ ಎಂದಿದ್ದ ರಶ್ಮಿಕಾ!

ಮೆಗಾಸ್ಟಾರ್​ ಚಿರಂಜೀವಿ ಹಾಗೂ ರಾಮ್​ಚರಣ್​ ಅಭಿನಯದ ಆಚಾರ್ಯ ಸಿನಿಮಾ ರಿಲೀಸ್​ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೊದಲು ರಶ್ಮಿಕಾ ಮಂದಣ್ಣ ಅವರು ನಟಿಸಿಬೇಕಿತ್ತು. ಕೆಲ ಕಾರಣಗಳಿಂದ ಈ ಸಿನಿಮಾವನ್ನು ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದರು. ಈ ಸಿನಿಮಾ ಈಗ ಸೋತಿದೆ. ಹೀರೋಯಿನ್​ ಪಾತ್ರಕ್ಕೂ ಅಷ್ಟು ಪ್ರಾ,ಮುಖ್ಯತೆ ಇಲ್ಲ

ಇದನ್ನೂ ಓದಿ: ವರ್ಕೌಟ್​ ಆಗ್ಲಿಲ್ವಂತೆ ಅಪ್ಪ-ಮಗನ ಕಾಂಬೋ! ಹಳೆ ಬಾಟ್ಲಿಗೆ ಹೊಸ ನೀರು ತುಂಬಿದ್ದಾರೆ ಅಂತ ಫ್ಯಾನ್ಸ್​ ಗರಂ

ಹಿಂದಿ ಜೆರ್ಸಿ ಸಿನಿಮಾ ರಿಜೆಕ್ಟ್​ ಮಾಡಿದ್ದ ಬ್ಯೂಟಿ!

ಟಾಲಿವುಡ್​  ನ್ಯಾಚುರಲ್​ ಸ್ಟಾರ್​ ನಾನಿ ನಟಿಸಿದ್ದ ಜೆರ್ಸಿ ಸಿನಿಮಾ ಸಖತ್ ಸೌಂಡ್​ ಮಾಡಿತ್ತು.  ಈ ಸಿನಿಮಾ ಬಾಲಿವುಡ್​ಗೆ ರಿಮೇಕ್​ ಆಗಿದೆ. ಬಾಲಿವುಡ್​ ನಟ ಶಾಹಿದ್​ ಕಪೂರ್​, ನಾನಿ ನಟಿಸಿದ್ದ ಸಿನಿಮಾದಲ್ಲಿ ನಟಿಸಿದ್ದಾರೆ.ಜೆರ್ಸಿ ಎಂಬ ಹೆಸರಿನಲ್ಲೇ ಕಳೆದ ವಾರ ರಿಲೀಸ್​ ಅಗಿತ್ತು. ಈ ಚಿತ್ರಕ್ಕೂ ಮೊದಲು ರಶ್ಮಿಕಾ ಮಂದಣ್ಣ ಅವರಿಗೆ ಕೇಳಲಾಗಿತ್ತು. ಆದರೆ, ಈ ಸಿನಿಮಾವನ್ನು ರಶ್ಮಿಕಾ ಮಂದಣ್ಣ ರಿಜೆಕ್ಟ್​ ಮಾಡಿದ್ದರು. ಜೆರ್ಸಿ ಸಿನಿಮಾ ಹೇಳಿಕೊಳ್ಳುವಂತ ಕಲೆಕ್ಷನ್​ ಮಾಡಿಲ್ಲ.

ಇದನ್ನೂ ಓದಿ: ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ಯಶ್​! 'ಗುಟ್ಕಾ ಗ್ಯಾಂಗ್'​ ಸೇರ್ಲಿಲ್ಲ ರಾಕಿ, ನೀವೇ ನಿಜವಾದ ಸುಲ್ತಾನ

ಬೀಸ್ಟ್​ ಸಿನಿಮಾಗೂ ನೋ ಎಂದಿದ್ದ ಮಂದಣ್ಣ!

ಕೆಜಿಎಫ್​ ಚಾಪ್ಟರ್​ 2 ಎದುರು ತೊಡೆ ತಟ್ಟಿದ್ದ ಬೀಸ್ಟ್​ ಊಸ್ಟ್​ ಆಗಿತ್ತು. ಈ ಸಿನಿಮಾದಲ್ಲೂ ಪೂಜಾ ಹೆಗ್ಡೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿಬೇಕಿತ್ತು. ಹಲವು ಕಾರಣಗಳಿಂದ ಸಿನಿಮಾವನ್ನು ರಶ್ಮಿಕಾ ಮಂದಣ್ಣ ರಿಜೆಕ್ಟ್​ ಮಾಡಿದ್ದರು. ಈ ನಿರ್ಧಾರ ತೆಗೆದುಕೊಂಡಿದ್ದು ಅವರಿಗೆ ಲಾಭ.
Published by:Vasudeva M
First published: