Film News: ಮತ್ತೆ ತೆರೆ ಮೇಲೆ ಧೂಳೆಬ್ಬಿಸಲು ಬರ್ತಿದ್ದಾರೆ ಬಿಗ್ ಬಿ, ಕಿಂಗ್ ಖಾನ್; ಸಿನಿ ಜಗತ್ತಿನ ಲೇಟೆಸ್ಟ್ ನ್ಯೂಸ್ ನಿಮಗಾಗಿ

ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ವರೆಗಿನ ಬಿಸಿಬಿಸಿ ಸುದ್ದಿಗಳನ್ನು ನಾವಿಲ್ಲಿ ಇಂದು ಹೊತ್ತು ತಂದಿದ್ದೇವೆ. ಯಾರು ಯಾವ ಸಿನಿಮಾ ಮಾಡ್ತಿದ್ದಾರೆ, ಲವ್, ಅಫೇರ್ ಎಲ್ಲಾ ಹೇಗೆ ನಡಿತಾ, ಸಿನಿಮಾ ಜಗತ್ತಿನ ಸಮಾಚಾರ ಏನು ಅಂತಾ ನೀವೂ ತಿಳಿಬೇಕಾ ಹಾಗಿದ್ರೆ ಈ ಲೇಟೆಸ್ಟ್ ಸಮಾಚಾರಗಳ ಒಮ್ಮೆ ಕಣ್ಣಾಡಿಸಿ ಬರೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಟ-ನಟಿಯರ (Actors and Actress) ಬದುಕಲ್ಲಿ ಏನಾಗುತ್ತಿದೆ, ಯಾವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಚರು ಯಾವ ಸಿನೆಮಾಗಳಲ್ಲಿ (Cinema) ಅಂತಾ ತಿಳ್ಕೋಳೋ ಕೂತೂಹಲ ಜನರಿಗೆ ಸರ್ವೇ ಸಾಮಾನ್ಯ. ಸ್ಯಾಂಡಲ್ ವುಡ್ (Sandalwood) ನಿಂದ ಹಿಡಿದು ಬಾಲಿವುಡ್ (Bollywood) ವರೆಗಿನ ಬಿಸಿಬಿಸಿ ಸುದ್ದಿಗಳನ್ನು ನಾವಿಲ್ಲಿ ಇಂದು ಹೊತ್ತು ತಂದಿದ್ದೇವೆ. ಯಾರು ಯಾವ ಸಿನಿಮಾ ಮಾಡ್ತಿದ್ದಾರೆ, ಲವ್ (Love), ಅಫೇರ್ (Affair) ಎಲ್ಲಾ ಹೇಗೆ ನಡಿತಾ, ಸಿನಿಮಾ ಜಗತ್ತಿನ ಸಮಾಚಾರ ಏನು ಅಂತಾ ನೀವೂ ತಿಳಿಬೇಕಾ ಹಾಗಿದ್ರೆ ಈ ಲೇಟೆಸ್ಟ್ ಸಮಾಚಾರಗಳ (Latest News) ಒಮ್ಮೆ ಕಣ್ಣಾಡಿಸಿ ಬರೋಣ.

ಮತ್ತೆ ತೆರೆ ಮೇಲೆ ಧೂಳೆಬ್ಬಿಸಲು ಬರ್ತಿದ್ದಾರೆ ಬಿಗ್ ಬಿ, ಕಿಂಗ್ ಖಾನ್
ಮೊದಲಿಗೆ ಬಾಲಿವುಡ್ ನ ಬಿಸಿ ಬಿಸಿ ಸುದ್ದಿ ಏನೆಂದರೆ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ. ಮುಂಬರುವ 'ಡಾನ್ 3' ಸಿನಿಮಾದಲ್ಲಿ ಇಬ್ಬರು ನಟ ಭಯಂಕರರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಂತೆ. ಇಬ್ಬರು ಒಟ್ಟಿಗೆ ನಟಿಸಿದ ಹಿಂದಿನ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಕಭಿ ಖುಷಿ ಕಭಿ ಗಮ್, ಮೊಹಬತೇ, ಬದ್ಲಾ ಸೇರಿ ಇನ್ನೂ ಅನೇಕ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿದ್ದರು. ಇಬ್ಬರ ಕೆಮಿಸ್ಟ್ರಿ ಸಿನಿಪ್ರಿಯರಿಗೂ ಸಹ ಕಿಕ್ ನೀಡಿದ್ದವು.

ಇದನ್ನೂ ಓದಿ: Nayanthara: ನಯನತಾರಾ - ವಿಘ್ನೇಶ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಕೇಳಿದ್ರೆ ಪಕ್ಕಾ ಶಾಕ್ ಆಗ್ತಿರಾ!

ಪ್ರಸ್ತುತ ಮುಂಬರುವ 'ಡಾನ್ 3'ನಲ್ಲಿ ಇಬ್ಬರನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದು, ಇಬ್ಬರು ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಸಹ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಡಾನ್ ಸಿನಿಮಾದ ಮೊದಲ ಭಾಗವು 2006ರಲ್ಲಿ ತೆರೆಗೆ ಬಂದಿತ್ತು. 2011ರಲ್ಲಿ ಆಕ್ಷನ್ ಥ್ರಿಲ್ಲರ್ ಚಲನಚಿತ್ರ 2ನೇ ಭಾಗ ಬಿಡುಗಡೆಯಾಗಿತ್ತು. ಇದೀಗ ಡಾನ್ 3 ಚಿತ್ರ ಸೆಟ್ಟೇರಲಿದ್ದು, ಪರ್ಹಾನ್ ಅಖ್ತರ್ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ನಟಿ ಜೊತೆ ನಾಗ ಚೈತನ್ಯ ಡೇಟಿಂಗ್
ಬಾಲಿವುಡ್ ನಂತರ ಟಾಲಿವುಡ್ ನಲ್ಲಿ ಸಕತ್ ಗುಲ್ ಆಗುತ್ತಿರುವ ವಿಷವೆಂದರೆ ನಾಗ ಚೈತನ್ಯ ಮತ್ತು ಶೋಭಿತ ದುಲಿಪಾಲಾ ನಡುವಿನ ಲವ್ವಿ-ಡವ್ವಿ. ವಿಚ್ಛೇದನ ಘೋಷಿಸಿ ಎಂಟು ತಿಂಗಳ ನಂತರ ತೆಲುಗು ನಟ ನಾಗ ಚೈತನ್ಯ ಬಗ್ಗೆ ಹೊಸ ರೂಮರ್ಸ್ ಕೇಳಿಬರುತ್ತಿದೆ. ಶೋಭಿತ ದುಲಿಪಾಲಾ ಜೊತೆಗೆ ನಟ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ತುಂಬಾ ಹರಿದಾಡುತ್ತಿದೆ. ಸ

ಮಂತಾ ರುತ್ ಪ್ರಭು ಜೊತೆ ಯಾವುದೇ ಉತ್ತಮ ಸಂಬಂಧ ಸರಿಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ‘ಮೇಜರ್’ ಸಿನಿಮಾ ಖ್ಯಾತಿಯ ನಟಿ ಶೋಭಿತ ದುಲಿಪಾಲಾ ಹಾಗೂ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಶೋಭಿತ ದುಲಿಪಾಲಾ ಹಾಗೂ ನಾಗ ಚೈತನ್ಯ ಕೆಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶೋಭಿತಾ ದುಲಿಪಾಲಾ ಅವರು ತಂಗಿರುವ ಹೋಟೆಲ್ಲಿಗೆ ನಾಗ ಚೈತನ್ಯ ಬಹಳಷ್ಟು ಬಾರಿ ಭೇಟಿಕೊಟ್ಟಿದ್ದಾರಂತೆ

ಬಾಲಿವುಡ್ ನತ್ತ ರಾಮ್ ಚರಣ್
ಬಾಲಿವುಡ್ ತಾರೆಯರು ಸೌತ್ ಫಿಲ್ಮ್ ಇಂಡಸ್ಟ್ರಿಗೆ ಕಾಲಿಟ್ಟ ನಂತರ, ಈಗ ರಾಮ್ ಚರಣ್ ಬಾಲಿವುಡ್ ನತ್ತ ಮುಖಮಾಡಿದ್ದಾರೆ. ಸಲ್ಮಾನ್ ಖಾನ್ ಅವರ 'ಕಭಿ ಈದ್ ಕಭಿ ದೀಪಾವಳಿ'ಯಲ್ಲಿ RRR ಸಿನಿಮಾದ ಹ್ಯಾಂಡ್ಸಮ್ ಹಂಕ್ ರಾಮ್ ಚರಣ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕಭಿ ಈದ್ ಕಭಿ ದೀಪಾವಳಿ ಮುಂಬರುವ ಆಕ್ಷನ್ ಹಾಸ್ಯ ಚಿತ್ರವಾಗಿದ್ದು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ವೆಂಕಟೇಶ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Pooja Hegde: ಬೀಸ್ಟ್​ ನಿರ್ಮಾಪಕರು ಕೊಟ್ಟ ಗಿಫ್ಟ್​ ಕಂಡು ಪೂಜಾ ಕಕ್ಕಾಬಿಕ್ಕಿ! ದೌಲತ್ತು ಇಳಿಸಿದ್ದಾರೆ ಬಿಡಿ ಅಂತಿದ್ದಾರೆ ನೆಟ್ಟಿಗರು

ನವೆಂಬರ್ 18ಕ್ಕೆ 'ದೃಶ್ಯಂ 2'
ಅಜಯ್ ದೇವಗನ್ ಮರ್ಡರ್ ಮಿಸ್ಟರಿ 'ದೃಶ್ಯಂ 2' ನ ಮುಂದುವರಿದ ಭಾಗದೊಂದಿಗೆ ಮತ್ತೆ ದೊಡ್ಡ ಪರದೆಯ ಮೇಲೆ ಬರುತ್ತಿದ್ದಾರೆ. ಚಿತ್ರವು ನವೆಂಬರ್ 18ರಂದು ಬಿಡುಗಡೆಯಾಗಲಿದೆ ಎಂದು ದೇವಗನ್ ತಿಳಿಸಿದ್ದಾರೆ. ಟಬು, ಶ್ರಿಯಾ ಸರನ್, ರಜತ್ ಕಪೂರ್ ಮತ್ತು ಇಶಿತಾ ದತ್ತಾ ಅವರ ಪಾತ್ರಗಳೊಂದಿಗೆ ಅಜಯ್ ಕಾಣಿಸಿಕೊಳ್ಳಲಿದ್ದಾರೆ. ಈ ಸೀಕ್ವೆಲ್‌ಗೆ ಅಕ್ಷಯ್ ಖನ್ನಾ ಕೂಡ ಆಯ್ಕೆಯಾಗಿದ್ದಾರೆ. ನಿರ್ದೇಶಕ ಅಭಿಷೇಕ್ ಪಾಠಕ್ ಮತ್ತೊಂದು ಥ್ರಿಲ್ಲರ್ ಸಿನಿಮಾದ ಭರವಸೆ ನೀಡಿದ್ದಾರೆ.
Published by:Ashwini Prabhu
First published: