Hindi Series: ಈ ವರ್ಷದ ಬೆಸ್ಟ್ ವೆಬ್ ಸೀರೀಸ್ ಗಳು ಇವು, ಮಿಸ್​ ಮಾಡ್ದೆ ಒಮ್ಮೆ ನೋಡಿ

ವಿಶೇಷವಾಗಿ ಸಿನಿಮಾಗಳಿಗಿಂತ ಈ ವೆಬ್ ಸೀರೀಸ್ ಗೆ ಜನ ಹೆಚ್ಚು ಫ್ಯಾನ್ ಆಗಿದ್ದಾರೆ ಎನ್ನಬಹುದು. ಹಾಗಾದರೆ ಓಟಿಟಿಯಲ್ಲಿ ನೀವು ನೋಡಬಹುದಾದ 2022ರ ಉತ್ತಮ ಹಿಂದಿ ವೆಬ್ ಸೀರೀಸ್ ಗಳ ಪಟ್ಟಿ ಹೀಗಿದೆ. ಅದಕ್ಕೂ ಮೊದಲು 2021ರಲ್ಲಿ ಸ್ಟ್ರೀಮ್ ಆಗಿರುವ ಸರಣಿಗಳ ಬಗ್ಗೆಯೂ ತಿಳಿದುಕೊಳ್ಳೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಓಟಿಟಿ ಪ್ಲಾಟ್‌ಫಾರ್ಮ್ (OTT Platform) ಸಿನಿ ಪ್ರೇಕ್ಷಕರ ಹೊಸ ಮನರಂಜನಾ ತಾಣವಾಗಿದೆ. ಓಟಿಟಿ ಬಂದಮೇಲೆ ಟಿವಿ ಕಾರ್ಯಕ್ರಮಗಳನ್ನು (TV Programs) ನೋಡುವವರ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದರು ತಪ್ಪೇನಿಲ್ಲ. ಹೊಸ ಹೊಸ ಸಿನಿಮಾಗಳು, ಉತ್ತಮ ವೆಬ್ ಸೀರೀಸ್ ಗಳನ್ನು (Best Web Series) ಜನ ಓಟಿಟಿಯಲ್ಲಿ ವೀಕ್ಷಿಸಲು ಶುರು ಮಾಡಿದ್ದಾರೆ. ವಿಶೇಷವಾಗಿ ಸಿನಿಮಾಗಳಿಗಿಂತ ಈ ವೆಬ್ ಸೀರೀಸ್ ಗೆ ಜನ ಹೆಚ್ಚು ಫ್ಯಾನ್ ಆಗಿದ್ದಾರೆ ಎನ್ನಬಹುದು. ಹಾಗಾದರೆ ಓಟಿಟಿಯಲ್ಲಿ ನೀವು ನೋಡಬಹುದಾದ 2022ರ ಉತ್ತಮ ಹಿಂದಿ ವೆಬ್ ಸೀರೀಸ್ ಗಳ (Hindi Web Series) ಪಟ್ಟಿ ಹೀಗಿದೆ. ಅದಕ್ಕೂ ಮೊದಲು 2021ರಲ್ಲಿ ಸ್ಟ್ರೀಮ್ (Stream) ಆಗಿರುವ ಸರಣಿಗಳ ಬಗ್ಗೆಯೂ ತಿಳಿದುಕೊಳ್ಳೋಣ.

2021ರ ಅತ್ಯುತ್ತಮ ವೆಬ್ ಸೀರೀಸ್
1)ಆಸ್ಪಿರಂಟ್ಸ್ ಟಿವಿಎಫ್ - ಯುಟ್ಯೂಬ್
ಆಸ್ಪಿರಂಟ್ಸ್ ಟಿವಿಎಫ್ ಯುಪಿಎಸ್ಸಿ ಆಕಾಂಕ್ಷಿಗಳ ಪ್ರಯಾಣದ ಕಥೆಯ ಸುತ್ತ ಕೇಂದ್ರೀಕೃತವಾಗಿದ್ದು, ಅವರ ನಡುವಿನ ಸ್ನೇಹ ಮತ್ತು ಅವರು ಹೇಗೆ ಯಶಸ್ವಿಯಾಗುತ್ತಾರೆ ಎಂಬ ಕಥಾಹಂದರ ಹೊಂದಿದ್ದು, ವೀಕ್ಷಿಸಬಹುದಾದ ಉತ್ತಮ ವೆಬ್ ಸೀರೀಸ್ ಆಗಿದೆ.

2) ತಬ್ಬರ್ – ಸೋನಿ ಲೈವ್
ದುರಂತದ ಪರಿಣಾಮಗಳಿಂದ ತನ್ನ ಕುಟುಂಬವನ್ನು ನಿವೃತ್ತ ಪೊಲೀಸ್ ಅಧಿಕಾರಿಯ ಹೇಗೆ ರಕ್ಷಿಸುತ್ತಾನೆ ಎಂಬ ಕಥೆ ಇರುವ ಈ ಸೀರೀಸ್ ಸೋನಿ ಲೈವ್ ನಲ್ಲಿ ಲಭ್ಯವಿದೆ. ಸುಪ್ರಿಯಾ ಪಾಠಕ್, ರಣವೀರ್ ಶೋರೆ, ಪವನ್ ಮಲ್ಹೋತ್ರಾ ಮತ್ತು ಕನ್ವಲ್ಜಿತ್ ಸಿಂಗ್ ನಟಿಸಿರುವ ಈ ಸರಣಿಯು ಐಎಂಡಿಬಿಯಲ್ಲೂ ಉತ್ತಮ ರೇಟಿಂಗ್ ಗಳಿಸಿದೆ.

3) ಮತ್ಸ್ಯ ಕಾಂಡ್ – ಎಂಎಕ್ಸ್ ಪ್ಲೇಯರ್
ಈ ಭಾರತೀಯ ವೆಬ್ ಸರಣಿಯು ಪ್ರಖ್ಯಾತ ಕಾನ್ ಆರ್ಟಿಸ್ಟ್ ಆಗಿರುವ ಮತ್ಸ್ಯ ಥಾಡಾ ಅವರ ಕಥೆಯನ್ನು ಆಧರಿಸಿದೆ. ರವಿ ದುಬೆ, ರವಿ ಕಿಶನ್, ಜೋಯಾ ಅಫ್ರೋಜ್, ಪಿಯೂಷ್ ಮಿಶ್ರಾ, ರಾಜೇಶ್ ಶರ್ಮಾ, ಮಧುರ್ ಮಿತ್ತಲ್ ಮತ್ತು ನಾವೇದ್ ಅಸ್ಲಾಮ್ ನಟಿಸಿದ್ದಾರೆ.

4) ಗ್ರಹನ್ – ಡಿಸ್ನಿ + ಹಾಟ್ ಸ್ಟಾರ್
ಈ ವೆಬ್ ಸರಣಿಯು 1984ರ ಸಿಖ್ ವಿರೋಧಿ ದಂಗೆಗಳ ವಿವಾದಾತ್ಮಕ ವಿಷಯದ ಮೇಲೆ ಚಿತ್ರಿತವಾಗಿದೆ. ಜೋಯಾ ಹುಸೇನ್, ಅಂಶುಮಾನ್ ಪುಷ್ಕರ್, ವಾಮಿಕಾ ಗಬ್ಬಿ ಮತ್ತು ಪವನ್ ಮಲ್ಹೋತ್ರಾ ನಟಿಸಿದ್ದು, ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡುತ್ತದೆ.

5) ದಿ ಫ್ಯಾಮಿಲಿ ಮ್ಯಾನ್ 2 – ಅಮೆಜಾನ್ ಪ್ರೈಮ್
ಐಎಂಡಿಬಿಯಲ್ಲಿ 10ಕ್ಕೆ 8.8 ರೇಟಿಂಗ್ ಗಳಿಸಿರುವ ದಿ ಫ್ಯಾಮಿಲಿ ಮ್ಯಾನ್ 2 ಹಿಂದಿಯ ಮತ್ತೊಂದು ಉತ್ತಮ ಸೀರೀಸ್. ನಟಿ ಸಮಂತಾ, ಮನೋಜ್ ಬಾಜ್‌ಪೇಯ್ ಅಭಿನಯದ ಈ ಸರಣಿಯು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.

ಇದನ್ನೂ ಓದಿ:  Vikrant Rona Day 4 Collection: ನೂರು ಕೋಟಿ ಕ್ಲಬ್ ಸೇರಿದ ವಿಕ್ರಾಂತ್ ರೋಣ, ಕಿಚ್ಚನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

6) ಜೀತ್ ಕಿ ಜಿದ್ – ಜೀ 5
ಭಾರತೀಯ ಸೇನೆಯ ನಿವೃತ್ತ ವಿಶೇಷ ಪಡೆ ಅಧಿಕಾರಿ ಮೇಜರ್ ದೀಪೇಂದ್ರ ಸಿಂಗ್ ಸೆಂಗಾರ್ ಅವರ ಜೀವನವನ್ನು ಆಧರಿಸಿರುವ ಏಳು ಭಾಗಗಳ ಈ ಮಿನಿ ವೆಬ್ ಸರಣಿಯನ್ನು ವಿಶಾಲ್ ಮಂಗಳೋರ್ಕರ್ ನಿರ್ದೇಶಿಸಿದ್ದಾರೆ. ಈ ಸರಣಿಯನ್ನು ನೀವು ಜೀ 5ನಲ್ಲಿ ವೀಕ್ಷಿಸಬಹುದು.

7) ಮಹಾರಾಣಿ – ಸೋನಿ ಲೈವ್
ಬಿಹಾರದ ಸಿಎಂ ಆಗಿರುವ ನಟ ಇಲ್ಲಿ ತನ್ನ ಹೆಂಡತಿಯನ್ನು ಪಕ್ಷದ ಉತ್ತರಾಧಿಕಾರಿಯಾಗಿ ನೇಮಿಸುವ ಮತ್ತು ಮಹಿಳೆ ಹೇಗೆ ಇಲ್ಲಿ ಯಶಸ್ವಿಯಾಗುತ್ತಾರೆ ಎಂಬ ಕಥೆಯನ್ನು ಮಹಾರಾಣಿ ಸೀರೀಸ್ ಹೊಂದಿದೆ. ಇದನ್ನು ನೀವು ಸೋನಿ ಲೈವ್ ನಲ್ಲಿ ನೋಡಬಹುದಾಗಿದೆ.

ನೀವು ನೋಡಲೇಬೇಕಾದ 2022ರ ಅತ್ಯುತ್ತಮ ವೆಬ್ ಸೀರೀಸ್
1. ರುದ್ರ: ದಿ ಎಡ್ಜ್ ಆಫ್ ಡಾರ್ಕ್ ನೆಸ್ – ಹಾಟ್ ಸ್ಟಾರ್
ಭಾರತೀಯ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಸ್ಟ್ರೀಮಿಂಗ್ ದೂರದರ್ಶನ ಸರಣಿಯಾಗಿದ್ದು, ಇದನ್ನು ಡಿಸ್ನಿ+ ಹಾಟ್‍ಸ್ಟಾರ್ ಗಾಗಿ ರಚಿಸಲಾಗಿದೆ. ಇದು ಬ್ರಿಟಿಷ್ ಸರಣಿಯ ಲೂಥರ್ನ ರೀಮೇಕ್. ಈ ಸರಣಿಯಲ್ಲಿ ಅಜಯ್ ದೇವಗನ್, ರಾಶಿ ಖನ್ನಾ ಮತ್ತು ಇಶಾ ಡಿಯೋಲ್, ಅತುಲ್ ಕುಲಕರ್ಣಿ ನಟಿಸಿದ್ದಾರೆ.

2. ರಾಕೆಟ್ ಬಾಯ್ಸ್ – ಸೋನಿ ಲೈವ್
ಭಾರತಕ್ಕೆ ಅದ್ಭುತವಾದ ಭವಿಷ್ಯವನ್ನು ನಿರ್ಮಿಸುವ ಸಂದರ್ಭದಲ್ಲಿ ಇತಿಹಾಸವನ್ನು ಸೃಷ್ಟಿಸಿದ ಡಾ. ವಿಕ್ರಮ್ ಅಂಬಾಲಾಲ್ ಸಾರಾಭಾಯ್ ಮತ್ತು ಡಾ. ಹೋಮಿ ಜಹಾಂಗೀರ್ ಭಾಭಾ ಅವರ ಜೀವನಾಧಾರಿತ ಸರಣಿ ಇದಾಗಿದೆ. ಜಿಮ್ ಸರಭ್, ಇಶ್ವಾಕ್ ಸಿಂಗ್ ಮತ್ತು ರೆಜಿನಾ ಕಸ್ಸಂದ್ರ ಪ್ರಮುಖ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

3. ಪಂಚಾಯತ್ 2 – ಅಮೆಜಾನ್ ಪ್ರೈಮ್ ವೀಡಿಯೊ
ಇದೊಂದು ಕಾಮಿಡಿ ವೆಬ್ ಸೀರೀಸ್ ಆಗಿದ್ದು, ಇಂಜಿನಿಯರಿಂಗ್ ಪದವೀಧರನಾದ ಅಭಿಷೇಕ್‌ನ ಪ್ರಯಾಣದ ಸುತ್ತ ಸುತ್ತುವ ಕಥೆ. ಉತ್ತಮ ಉದ್ಯೋಗಗಳನ್ನು ಹುಡುಕಲು ಸಾಧ್ಯವಾಗದೆ, ಪಂಚಾಯತ್ ಕಚೇರಿಯ ಕಾರ್ಯದರ್ಶಿಯಾಗಿ ಸೇರಲು ಉತ್ತರ ಪ್ರದೇಶದ ದೂರದ ಹಳ್ಳಿಗೆ ಹೋಗುವ ಅಭಿಷೇಕ್ ಎಂಬ ಪಾತ್ರವರ್ಗದ ಕಥೆ ಈ ಪಂಚಾಯತ್ 2. ಜಿತೇಂದ್ರ ಕುಮಾರ್, ನೀನಾ ಗುಪ್ತಾ, ಚಂದನ್ ರಾಯ್ ಮತ್ತು ರಘುಬೀರ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

4. ಮೈ – ನೆಟ್ ಫ್ಲಿಕ್ಸ್
ಮಗಳನ್ನು ಕೊಂದ ಅಪರಾಧಿಗಳನ್ನು ಪತ್ತೆ ಹಚ್ಚುವ ತಾಯಿಯ ಕಥೆ ಹೊಂದಿರುವ ಈ ವೆಬ್ ಸೀರೀಸ್ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ. ಸಾಕ್ಷಿ ತನ್ವರ್, ವಿವೇಕ್ ಮುಶ್ರಾನ್ ಮತ್ತು ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

5. ಗುಲ್ಲಕ್ 3 – ಸೋನಿ ಲೈವ್
ಕಾಮಿಡಿ, ಎಮೋಷನ್ ಉತ್ತಮ ಮೇಸೇಜ್ ಇರುವ ಗುಲ್ಲಕ್ 3 ಅನ್ನು ನೀವು ಸೋನಿ ಲೈವ್ ನಲ್ಲಿ ವೀಕ್ಷಿಸಬಹುದು. ಈ ವೆಬ್ ಸರಣಿಯು ಮಧ್ಯಮ ವರ್ಗದ ಕನಸುಗಳ ಕಥೆಯನ್ನು ಹೇಳುತ್ತದೆ. ಐಎಂಡಿಬಿಯಲ್ಲಿ 9.1 ರೇಟಿಂಗ್ ಇರುವ ಈ ಸರಣಿ ಫುಲ್ ಮನರಂಜನೆ ಪ್ಯಾಕ್ ಆಗಿದೆ.

6. ಹ್ಯುಮನ್ – ಹಾಟ್ ಸ್ಟಾರ್
ವೈದ್ಯಕೀಯ ಹಗರಣಗಳು ಮತ್ತು ಮಾನವ ಔಷಧ ಪರೀಕ್ಷೆಯ ಪ್ರಪಂಚದ ಅಸಲಿ ಸತ್ಯವನ್ನು ಹೊರಹಾಕುವ ಈ ಸರಣಿಯಲ್ಲಿ ಶೆಫಾಲಿ ಶಾ, ಕೀರ್ತಿ ಕುಲ್ಹಾರಿ ಮತ್ತು ವಿಶಾಲ್ ಜೇತ್ವಾ ಪ್ರಮುಖ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  Silk Smitha: ಆ ಸ್ಟಾರ್ ನಟನಿಂದ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆ ಸಾಯುವ ದಿನ ನಿಜಕ್ಕೂ ಆಗಿದ್ದೇನು?

7. ಮಾಡರ್ನ್ ಲವ್ ಮುಂಬೈ – ಅಮೆಜಾನ್ ಪ್ರೈಮ್ ವೀಡಿಯೊ
ಈ ಸರಣಿಯ ಕಥಾ ಹಂದರವು ಸ್ವಯಂ ಪ್ರೀತಿ, ಪ್ರಣಯ, ಪ್ಲಾಟೋನಿಕ್ ಸಂಬಂಧ, ಪೋಷಕರ ಸಂಬಂಧಗಳು, ಲೈಂಗಿಕ ಕಥೆಗಳು, ಕೌಟುಂಬಿಕ ಸಂಬಂಧಗಳು ಮತ್ತು ವೈವಾಹಿಕ ಸಂಬಂಧಗಳ ಪ್ರಾಮಾಣಿಕ ಚಿತ್ರಣವನ್ನು ಒಳಗೊಂಡಿದೆ. ನರೇಂದ್ರ ಖತ್ರಿ, ಅನುರಾಗ್ ಕಶ್ಯಪ್ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

8.ಹೋಮ್ ಶಾಂತಿ – ಹಾಟ್ ಸ್ಟಾರ್
ಈ ಸರಣಿಯ ಕಥಾ ಹಂದರವು ಮನೆಯನ್ನು ನಿರ್ಮಿಸಲು ಬಯಸುವ ಭಾವನಾತ್ಮಕ ಮಧ್ಯಮ ವರ್ಗದ ಕುಟುಂಬದ ಸುತ್ತ ಸುತ್ತುತ್ತದೆ. ಸುಪ್ರಿಯಾ ಪಾಠಕ್, ಮನೋಜ್ ಪಹ್ವಾ ಮತ್ತು ಚಕೋರಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 8.2 ರೇಟಿಂಗ್ ಇರುವ ಈ ಸೀರೀಸ್ ನೋಡಬಹುದಾದ ಒಂದು ಉತ್ತಮ ಚಿತ್ರವಾಗಿದೆ.

9. ಪೆಟ್ ಪುರಾಣ – ಸೋನಿ ಲೈವ್
ಅತುಲ್ ಮತ್ತು ಅದಿತಿ ಪಾತ್ರದ ಪೆಟ್ ಪುರಾಣ ನಾಯಿಯ ಕಥೆ ಸುತ್ತ ಹೆಣೆದುಕೊಂಡಿದೆ. ಮಕ್ಕಳಿಲ್ಲದ ಕಾರಣ ಅವರು ಒಂದು ನಾಯಿ ಸಾಕಿಕೊಳ್ಳುತ್ತಾರೆ. ಆದರೂ ಅವರ ಕುಟುಂಬ ಅಪೂರ್ಣವಾಗಿದೆ. ಕೊನೆಗೆ ಅವರು ತಮ್ಮ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆಯೇ? ಈ ತಮಾಷೆಯ ವೆಬ್ ಸರಣಿಯನ್ನು ವೀಕ್ಷಿಸಿ ಮತ್ತು ಏನಾಗುತ್ತದೆ ಎಂಬುದನ್ನು ಕಂಡುಕೊಳ್ಳಿ.

ಲಲಿತ್ ಪ್ರಭಾಕರ್, ಸಾಯಿ ತಮ್ಹಂಕರ್ ಮತ್ತು ಪೂರ್ಣಿಮಾ ಮನೋಹರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

10. ಫೇಮ್ ಗೇಮ್ – ನೆಟ್ ಫ್ಲಿಕ್ಸ್
ಫೇಮ್ ಗೇಮ್ ಎಂಬುದು ಫ್ಯಾಮಿಲಿ ಥ್ರಿಲ್ಲರ್ ಡ್ರಾಮಾವಾಗಿದೆ. ಶ್ರೀ ರಾವ್ ರಚಿಸಿದ ಮತ್ತು ಬಿಜಾಯ್ ನಂಬಿಯಾರ್ ಮತ್ತು ಕರಿಷ್ಮಾ ಕೊಹ್ಲಿ ನಿರ್ದೇಶಿಸಿದ ಇದು ಭಾರತದ ಅತ್ಯಂತ ಪ್ರಸಿದ್ಧ ನಟಿ ಮಾಧುರಿ ದೀಕ್ಷಿತ್ ಕಾಣೆಯಾಗಿದ್ದಾರೆ ಎಂಬ ಕಥೆಯ ಹಂದರ ಹೊಂದಿದೆ.
ಮಾಧುರಿ ದೀಕ್ಷಿತ್, ಮಾನವ್ ಕೌಲ್ ಮತ್ತು ಸಂಜಯ್ ಕಪೂರ್ ಪ್ರಮುಖ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

11. ಸಾಸ್ ಬಹು ಆಚಾರ್ ಪ್ರೈ. ಲಿಮಿಟೆಡ್ – ಜೀ 5
ಸಾಸ್ ಬಹು ಆಚಾರ್ ಪ್ರೈ. ಲಿಮಿಟೆಡ್ ತನ್ನ ಆಚಾರ್ ವ್ಯವಹಾರವನ್ನು ಸ್ಥಾಪಿಸಲು ಸತತವಾಗಿ ಹೆಣಗಾಡುತ್ತಿರುವ ಸುಮನ್ ಸುತ್ತ ಸುತ್ತುವ ಹಾಸ್ಯಮಯ ವೆಬ್ ಸರಣಿಯಾಗಿದೆ.

12. ಘರ್ ವಾಪ್ಸಿ – ಡಿಸ್ನಿ + ಹಾಟ್ ಸ್ಟಾರ್
ಅನುಷ್ಕಾ ಕೌಶಿಕ್, ಸಾದ್ ಬಿಲ್ಗ್ರಾಮಿ ಮತ್ತು ವಿಶಾಲ್ ವಶಿಷ್ಠ ಪ್ರಮುಖ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ವೆಬ್ ಸೀರೀಸ್ ಹಿಂದಿಯಲ್ಲಿ ನೋಡಬಹುದಾದ ಮತ್ತೊಂದು ಉತ್ತಮ ಡ್ರಾಮವಾಗಿದೆ, ಇದನ್ನು ವೀಕ್ಷಕರು ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ನೋಡಬಹುದು.

13. ಜೋಲಾಚಾಪ್ - ವೂಟ್
ಈ ವೆಬ್ ಸರಣಿಯು ಹಳ್ಳಿ ಹಳ್ಳಿಗಳಲ್ಲಿ ಹೊಸದಾಗಿ ಪೋಸ್ಟ್ ಮಾಡಿದ ವೈದ್ಯರ ಕಥೆಯ ಸುತ್ತ ಸುತ್ತುತ್ತದೆ. ಮೆಹಕ್ ಮನ್ವಾನಿ, ಚಿತ್ತರಂಜನ್ ತ್ರಿಪಾಠಿ ಮತ್ತು ಮುಷ್ತಾಕ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

14. ಬೆಡ್ ಸ್ಟೋರೀಸ್ - ಡಿಸ್ನಿ + ಹಾಟ್ ಸ್ಟಾರ್
8.6 ರೇಟಿಂಗ್ ಇರುವ ಬೆಡ್ ಸ್ಟೋರೀಸ್ ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದೆ. ಒಂದೇ ಹೋಟೆಲ್ ಕೊಠಡಿಯು ಹಲವಾರು ವ್ಯತಿರಿಕ್ತ ಕಥೆಗಳನ್ನು ಪ್ರಸ್ತುತ ಪಡಿಸುತ್ತದೆ. ರಾಜೇಂದ್ರ ಗುಪ್ತಾ, ಸಹರ್ಷ್ ಕುಮಾರ್ ಶುಕ್ಲಾ, ಸಂಜಯ್ ಮಿಶ್ರಾ ಮತ್ತು ತನೀಯಾ ರಾಜವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  Tiger Shroff and Disha Patani: ಟೈಗರ್ ಶ್ರಾಫ್-ದಿಶಾ ನಡುವೆ ಬ್ರೇಕಪ್ ಆಗೋದಕ್ಕೆ ಆ ಒಂದು ವಿಷಯಾನೇ ಕಾರಣವಂತೆ

ಇವಿಷ್ಟರ ಜೊತೆಗೆ ಇನ್ನೂ ಹಲವು ವೆಬ್ ಸೀರೀಸ್ ಮುಂಬರುವ ದಿನಗಳಲ್ಲಿ ಬರಲಿದ್ದು ಅವುಗಳನ್ನು ಸಹ ನೀವು ವೀಕ್ಷಿಸಬಹುದು. ರಂಗಬಾಜ್: ಡರ್ ಕಿ ರಾಜನೀತಿ ಸ್ಟೋರಿ- ಜೀ5, ಕ್ರ್ಯಾಶ್ ಕೋರ್ಸ್, ಇಂಡಿಯನ್ ಮ್ಯಾಚ್‌ಮೇಕಿಂಗ್ ಸೀಸನ್ 2- ನೆಟ್ ಫ್ಲಿಕ್ಸ್, ಡೆಲ್ಲಿ ಕ್ರೈಮ್ ಸೀಸನ್ 2, ದಿ ಫ್ಯಾಮಿಲಿ ಮ್ಯಾನ್ ಸೀಸನ್ 3, ಫಿನ್, ಇವುಗಳನ್ನು ನಿಮ್ಮ ವೀಕ್ಷಣೆಯ ಮುಂದಿನ ಪಟ್ಟಿಗೆ ಸೇರಿಸಿಕೊಳ್ಳಬಹುದು.
Published by:Ashwini Prabhu
First published: