KGF Chapter 2: `ರಣ ಬೇಟೆಗಾರ’ ರಾಕಿ ಭಾಯ್​ ರಣಾರ್ಭಟ, ಕೆಜಿಎಫ್​ 2 ಹಿಟ್​ ಆಗಲು ಈ 5 ಶಕ್ತಿಗಳೇ ಕಾರಣ!

ಈ ಚಿತ್ರಕ್ಕೆ ಪರಭಾಷೆಯ ಕಲಾವಿದರು ಕೂಡ ಫಿದಾ ಆಗಿದ್ದಾರೆ. ಕೆಜಿಎಫ್ ಯಶಸನ್ನು ಕಂಡು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ಕೆಜಿಎಫ್​2 ಸಿನಿಮಾ ಬಗ್ಗೆಯೆ ಮಾತು. ಈ ಸಿನಿಮಾ ಎಕ್ಸ್​ಪೆಕ್ಟೆಷನ್​ಗೂ ಹೆಚ್ಚು ಸದ್ದು ಮಾಡಲು ಈ 5 ಶಕ್ತಿಗಳೇ ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ.

ರಾಕಿಂಗ್ ಸ್ಟಾರ್​ ಯಶ್​

ರಾಕಿಂಗ್ ಸ್ಟಾರ್​ ಯಶ್​

 • Share this:
  ಕಳೆದೆರೆಡು ದಿನಗಳಿಂದ ಇಡೀ ವಿಶ್ವದ ಜನರ ಬಾಯಲ್ಲೂ ಒಂದೇ ಪದ.. ಕೆಜಿಎಫ್​ 2(KGF 2). ಹೌದು, ಇಡೀ ವಿಶ್ವ(World)ವನ್ನೇ ರಾಕಿ ಭಾಯ್​ ಅಲ್ಲಾಡಿಸಿಬಿಟ್ಟಿದ್ದಾರೆ. ಬಾಕ್ಸಾ ಆಫೀಸ್(Box Office)​​ ಲೂಟಿ ಮಾಡಿಬಿಟ್ಟಿದ್ದಾರೆ ರಾಕಿಂಗ್​ ಸ್ಟಾರ್(Rocking Star)​. ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ ‘ಕೆಜಿಎಫ್ ಚಾಪಕ್ಟರ್ 2’(KGF Chapter 2) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಕೆಜಿಎಫ್ 2’ ಬಹುಭಾಷೆಯಲ್ಲಿ ತೆರೆಗೆ ಬಂದಿದೆ. ಕನ್ನಡ(Kannada), ಹಿಂದಿ(Hindi), ತೆಲುಗು(Telugu), ತಮಿಳು(Tamil) ಮತ್ತು ಮಲಯಾಳಂ(Malayalam)ನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ ರಾಕಿಂಗ್​ ಸ್ಟಾರ್​ ಯಶ್(Rocking Star Yash)​ ಸಿನಿಮಾ. ಇದು ಕನ್ನಡಿಗರ ಹೆಮ್ಮೆ. ಕನ್ನಡ ಸಿನಿಮಾರಂಗದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ ಕೆಜಿಎಫ್​ ಸಿನಿಮಾ. ಸಿನಿಮಾ ಪ್ರೇಕ್ಷಕರು ’ಕೆಜಿಎಫ್ 2’ ಸಿನಿಮಾಗೆ ಜೈ ಕಾರ ಹಾಕುತ್ತಾ ಇದ್ದಾರೆ. ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ನೋಡುತ್ತಿದ್ದಾರೆ.

  ಕೆಜಿಎಫ್​ 2 ಗೆಲ್ಲೋಕೆ ಈ 5 ಶಕ್ತಿಗಳೇ ಕಾರಣ!

  ಎಲ್ಲಾ ಭಾಷೆಯಲ್ಲಿ ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಪ್ರೇಕ್ಷಕರು ಮಾತ್ರ ಅಲ್ಲ. ಈ ಚಿತ್ರಕ್ಕೆ ಪರಭಾಷೆಯ ಕಲಾವಿದರು ಕೂಡ ಫಿದಾ ಆಗಿದ್ದಾರೆ. ಕೆಜಿಎಫ್ ಯಶಸನ್ನು ಕಂಡು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ಕೆಜಿಎಫ್​2 ಸಿನಿಮಾ ಬಗ್ಗೆಯೆ ಮಾತು. ಈ ಸಿನಿಮಾ ಎಕ್ಸ್​ಪೆಕ್ಟೆಷನ್​ಗೂ ಹೆಚ್ಚು ಸದ್ದು ಮಾಡಲು ಈ 5 ಶಕ್ತಿಗಳೇ ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ. ಯಾವುದಪ್ಪ ಆ 5 ಶಕ್ತಿಗಳು ಅಂತೀರಾ? ಮುಂದೆ ನೀವೇ ನೋಡಿ..

  ಮೊದಲ ಶಕ್ತಿ ನಿರ್ದೇಶಕ ಪ್ರಶಾಂತ್​ ನೀಲ್-ರಾಕಿಂಗ್​ ಸ್ಟಾರ್​!

  ಪ್ರಶಾಂತ್ ನೀಲ್​... ಇವರ ಹೆಸರು ಈಗ ಇಡಿ ವಿಶ್ವದ ಜನರಿಗೆ ಗೊತ್ತಾಗಿದೆ. ಕೆಜಿಎಫ್​ 2 ಸಿನಿಮಾದ ನಿರ್ದೇಶಕರು. ಉಗ್ರಂ ಮೂಲಕ ಸ್ಯಾಂಡಲ್​ವುಡ್​ಗೆ ಪರಿಚಯವಾಗಿದ್ದ ಪ್ರಶಾಂತ್​ ನೀಲ್​ ತಮ್ಮ ಎರಡನೇ ಸಿನಿಮಾದ ಮೂಲಕವೇ ಭಾರತ ಸಿನಿಮಾರಂಗದ ಟಾಪ್​ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದರು. ಪ್ರಶಾಂತ್​ ನೀಲ್​ ಅವರ ಕಲ್ಪನೆ ಕೆಜಿಎಫ್​ 2 ಸಿನಿಮಾಗೆ ದೊಡ್ಡ ಶಕ್ತಿ. ಇವರಿಗೆ ಜೊತೆಯಾದ ರಾಕಿಂಗ್​ ಸ್ಟಾರ್​ ಯಶ್​ ಕೂಡ ದೊಡ್ಡ ಶಕ್ತಿ.

  ಇದನ್ನೂ ಓದಿ: KGF Chapter 2 ನೋಡಿ ಹಣ, ಸಮಯ ವ್ಯರ್ಥ ಎಂದ ನಟ; ಈತನಿಗೇಕೆ ಹೊಟ್ಟೆಕಿಚ್ಚು?

  ಎರಡನೇ ಶಕ್ತಿ ರಮಿಕಾ ಸೇನ್​ ಪಾತ್ರ!

  ಕೆಜಿಎಫ್​ ಚಾಪ್ಟರ್​ ಒಂದರ ಕ್ಲೈಮ್ಯಾಕ್ಸ್​ನಲ್ಲಿ ರಾಕಿ ಭಾಯ್​ಗೆ ಡೆತ್​ ವಾರೆಂಟ್ ಕೊಟ್ಟಿದ್ದ ರಮಿಕಾ ಸೇನ್ ಪಾತ್ರ ಸಖತ್​ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಕೆಜಿಎಫ್​ 2 ಸಿನಿಮಾದಲ್ಲಿ ರಮಿಕಾ ಸೇನ್​ ಪಾತ್ರ ಎಷ್ಟು ಪವರ್​ ಫುಲ್​ ಆಗಿದೆ ಎಲ್ಲರಿಗೂ ಗೊತ್ತಿದೆ. ಈ ಪಾತ್ರದಲ್ಲಿ ರವಿನಾ ಟಂಡನ್​ ಮಿಂಚಿದ್ದಾರೆ. ರವೀನಾ ಟಂಡನ್​ ರಮೀಕಾ ಸೇನ್​ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಇವರಿಗೆ ಸುಧಾರಾಣಿ ವಾಯ್ಸ್​ ನೀಡಿರುವುದು ಕೆಜಿಎಫ್​ ಸಿನಿಮಾದ ಎರಡನೇ ಶಕ್ತಿ ಎನ್ನಬಹುದು.

  ಮೂರನೇ ಶಕ್ತಿ ‘ಅಧೀರ’ ಸಂಜಯ್​ ದತ್​!

  ಮೊದಲ ಚಾಪ್ಟರ್​ನಲ್ಲಿ ಅಧೀರ ಪಾತ್ರ ಅಷ್ಟಾಗಿ ಸದ್ದು ಮಾಡಿರಲಿಲ್ಲ.. ಆದರೆ, ಕೆಜಿಎಫ್​ 2 ನಲ್ಲಿ ಈ ಪಾತ್ರದಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್​ ಸಂಜಯ್​ ದತ್​ ನಟಿಸುತ್ತಿದ್ದಾರೆ ಅಂತ ತಿಳಿದ  ಮೇಲೆ ಅಭಿಮಾನಿಗಳು ಫುಲ್​ ಥ್ರಿಲ್​ ಆಗಿದ್ದರು. ಅದರಂತೆ ಅಧೀರನ ಪಾತ್ರಕ್ಕೆ ಸಂಜು ಬಾಬಾ ಜೀವ ತುಂಬಿದ್ದಾರೆ. ರಾಕಿ ಭಾಯ್ ಎದುರು ಆರ್ಭಟಿಸಿದ್ದಾರೆ.

  ಇದನ್ನೂ ಓದಿ:ರಾಕಿಭಾಯ್ ಆರ್ಭಟಕ್ಕೆ ಎಲ್ಲಾ ದಾಖಲೆ ಪೀಸ್ ಪೀಸ್, ಮೊದಲ ದಿನ ಕಲೆಕ್ಷನ್ ಇಷ್ಟಾಗಿದ್ದು ಹೌದಾ?

  ನಾಲ್ಕನೇ ಶಕ್ತಿ ರಾಕಿ ಭಾಯ್​ ತಾಯಿ ಅರ್ಚನಾ!

  ಶಾಂತಿ... ರಾಕಿ ಭಾಯ್ ತಾಯಿ.. ಹೌದು, ಕೆಜಿಎಫ್​ ಎರಡೂ ಚಾಪ್ಟರ್​​ಗಳಲ್ಲೂ ಅರ್ಚನಾ ಅವರ ಪಾತ್ರವೇ ಹೈಲೆಟ್. ​ರಾಕಿಭಾಯ್ ತಾಯಿ ಪಾತ್ರದಲ್ಲಿ ಅರ್ಚನಾ ಎಲ್ಲರ ಗಮನೆ ಸೆಳೆದಿದ್ದಾರೆ. ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಕಿ ಏನೆಲ್ಲಾ ಮಡ್ತಾನೆ ಅನ್ನೋದು ಕಥೆ. ಹೆಚ್ಚು ಹೊತ್ತು ತೆರೆ ಮೇಲೆ ತಾಯಿ ಪಾತ್ರ ಕಾಣಿಸಿಕೊಳ್ಳದಿದ್ದರು, ಆ ಪಾತ್ರ ಎಲ್ಲರ ಮನಸ್ಸಲ್ಲೂ ಅಚ್ಚಳಿಯದೆ ಉಳಿದು ಬಿಟ್ಟಿದೆ.

  ಐದನೇ ಶಕ್ತಿ ರವಿ-ಭುವನ್​-ಉಜ್ಚಲ್​!

  ಸಿನಿಮಾ ಈ ಮಟ್ಟಕ್ಕೆ ಸೌಂಡ್ ಮಾಡುತ್ತಿದೆ ಅಂದರೆಮ, ಅದರ ಹಿಂದೆ ಸಾವಿರಾರು ಟೆಕ್ನಿಷಿಯನ್​ಗಳ ಪರಿಶ್ರಮ ಇದೆ. ಕೆಜಿಎಫ್​2 ಸಿನಿಮಾದ ಪ್ರತಿಯೊಂದು ಫ್ರೇಮ್​ ಫೆನ್ಟಾಸ್ಟಿಕ್​​. ಅದರ ಕ್ರೆಡಿಟ್ಸ್​​ ಸಂಪೂರ್ಣ ಭುವನ್​ ಗೌಡ ಅವರಿಗೆ ಸೇರಬೇಕು. ಇನ್ನೂ ಸಿನಿಮಾ ಸಾಂಗ್ಸ್​​, ಬ್ಯಾಗ್ರೌಂಡ್​ ಮಾತ್ರ ಅಬ್ಬಬ್ಬಾ ರವಿ ಬಸ್ರೂರ್​ ಬಿಟ್ಟರೆ ಇನ್ಯಾರ ಕೈಯಲ್ಲೂ ಈ ಮ್ಯಾಜಿಕ್​ ಸಾಧ್ಯವಿಲ್ಲ. ಸಿನಿಮಾದವನ್ನು ಅದ್ಭುತವಾಗಿ ಎಡಿಟ್ ಮಾಡಿರುವ ಉಜ್ವಲ್ ಕುಲಕರ್ಣಿಗೆ ಇನ್ನೂ 20 ವರ್ಷವೂ ಆಗಿಲ್ಲ. ಆಗಲೇ ತನ್ನ ಕೆಲಸದಿಂದ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದಾನೆ.
  Published by:Vasudeva M
  First published: