OTT Series: ಸಿನಿಪ್ರಿಯರಿಗೆ ವೀಕೆಂಡ್ ಧಮಾಕ- ರಿಲೀಸ್ ಆಗಿದೆ ಹೊಸ ಸಿನಿಮಾ , ಸೀರಿಸ್​- ಇಲ್ಲಿದೆ ಲಿಸ್ಟ್​

OTT Release: ಶುಕ್ರವಾರ ಕೂಡ ಒಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ 5 ಹೊಚ್ಚಹೊಸ ಸಿನಿಮಾಗಳು, ವೆಬ್ ಸೀರಿಸ್ ಗಳು ಬಿಡುಗಡೆಯಾಗಿದ್ದು ಸಿನಿ ಪ್ರಿಯರಿಗಂತೂ ಹಬ್ಬವಾಗಿದೆ.

ವೆಬ್ ಸೀರಿಸ್

ವೆಬ್ ಸೀರಿಸ್

  • Share this:
     ಹೆಮ್ಮಾರಿ ಕೊರೋನಾ ಬಂದಮೇಲೆ ಒಟಿಟಿ ಪ್ಲಾಟ್​ಫಾರ್ಮ್ (OTT Platform) ಮಹತ್ವ ಹೆಚ್ಚಾಗಿದೆ. ಲಾಕ್ ಡೌನ್ ನಲ್ಲಿ ಮನೆಯಲ್ಲೇ ಕೂತಿದ್ದ ಮಂದಿಗೆ ಮನರಂಜನೆ ಕೊಟ್ಟಿದ್ದು ಒಟಿಟಿ ಪ್ಲಾಟ್​ಫಾರ್ಮ್ ಗಳೇ. ಕೊರೋನಾ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳು, ಒಟಿಟಿ ಪ್ಲಾಟ್​ಫಾರ್ಮ್ ಗಳಲ್ಲಿ ಬಿಡುಗಡೆಗೊಂಡಿದ್ದವು. ನೆಟ್ ಫ್ಲಿಕ್ಸ್(Netflix), ಅಮೆಜಾನ್ ಪ್ರೈಮ್ ವೀಡಿಯೊ (Amazon Prime Video), ಜೀ 5 (Zee 5),  ಡಿಸ್ನಿ +  ಹಾಟ್ ಸ್ಟಾರ್( Disney+ Hotstar)  ಸೇರಿ ಹತ್ತು ಹಲವು ಅಪ್ಲಿಕೇಶನ್ ಗಳು ಒಟಿಟಿಯಲ್ಲಿ ಖ್ಯಾತಿ ಪಡೆದುಕೊಂಡಿದೆ. 

    ನಿನ್ನೆ ಶುಕ್ರವಾರ ಕೂಡ ಒಟಿಟಿ ಪ್ಲಾಟ್​ಫಾರ್ಮ್ ಗಳಲ್ಲಿ 5 ಹೊಚ್ಚಹೊಸ ಸಿನಿಮಾಗಳು, ವೆಬ್ ಸೀರಿಸ್ ಗಳು ಬಿಡುಗಡೆಯಾಗಿದೆ. ಅದರ ಪಟ್ಟಿ ಇಲ್ಲಿದೆ.

    .01. ಅಲಂತಿ ಸಿತ್ರಾಲು(ALANTI SITRALU)  – ಝೀ5 (ZEE5) 

    ತೆಲುಗು ಭಾಷೆಯ ಅವಂತಿ ಸಿತ್ರಾಲು ಸಿನಿಮಾ ಇಂದು ಝೀ5 ಅಪ್ಲಿಕೇಶನ್ ನಲ್ಲಿ ಬಿಡುಗಡೆಯಾಗುತ್ತಿದೆ.  ಚಿತ್ರದಲ್ಲಿ ಶ್ವೇತಾ ಪರಾಶರ್ (Shwetha Parashar),  ಯಶ್ ಪುರಿ‌ (Yash Puri), ಅಜಯ್ ಕತೂರ್ವರ್ (Ajay Kathurvar), ಪ್ರವಿನ್ ಯೆಂಡಮೂರಿ (Prawin Yendamuri ) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.  ಸಿನಿಮಾ ಸಂಗೀತಗಾರ, ವೇಶ್ಯೆ, ಬಾಕ್ಸರ್ ಹಾಗೂ  ಸಾಮಾನ್ಯರಂತೆ  ಜೀವನ ನಡೆಸಲು ಪ್ರಯತ್ನಿಸುವ ದರೋಡೆಕೋರನ ಸುತ್ತ ಸುತ್ತುತ್ತದೆ. ಇವರೆಲ್ಲರೂ  ಒಟ್ಟಿಗೆ ಸೇರಿದಾಗ ಇವರ ಜೀವನ ಹೇಗೆ ಸಾಗಲಿದೆ ಎಂಬುದೇ ಈ ಸಿನಿಮಾದ ಕಥಾಹಂದರ.  ಇನ್ನು ಈ ಸಿನಿಮಾಗೆ ಸುಪ್ರಿತ್ ಸಿ ಕೃಷ್ಣ ನಿರ್ದೇಶನ ಮಾಡಿದ್ದಾರೆ.

     02. ಕೋಟಾ ಫ್ಯಾಕ್ಟರಿ ಸೀಸನ್ 2 : (KOTA FACTORY S2) - ನೆಟ್ ಫ್ಲಿಕ್ಸ್(Netflix) 

    ಇಂದು ನೆಟ್ ಫ್ಲಿಕ್ಸ್ ನಲ್ಲಿ ಇಂಡಿಯಾದ ಮೊದಲ ಕಪ್ಪು ಮತ್ತು ಬಿಳಿ ವೆಬ್ ಸರಣಿಯಾದ ಕೋಟಾ ಫ್ಯಾಕ್ಟರಿ ಸೀರಿಸ್ ನ ಸೀಸನ್ 2 ಬಿಡುಗಡೆಯಾಗಲಿದೆ. ಇದು 16 ವರ್ಷದ ಬಾಲಕ ವೈಭವ್ ಜೀವನದ ಬಗ್ಗೆ ಕಥೆಯನ್ನು ಹೊಂದಿದೆ. ಪ್ರವೇಶ ಪರೀಕ್ಷೆಗೆ ತಯಾರಾಗಲು ಇಟಾರ್ಸಿಯಿಂದ ಸ್ಥಳಾಂತರಗೊಂಡ ನಂತರ ವೈಭವ್ ಕೋಟಾಗೆ ಪ್ರವೇಶಿಸಲು ಹೇಗೆ ಕಷ್ಟಪಡುತ್ತಾನೆ ಎಂಬುದನ್ನು ಕಥೆಯು ಚಿತ್ರಿಸುತ್ತದೆ. ಕೋಟಾ ಮತ್ತು ಐಐಟಿ ತಯಾರಿಕೆಯ ದೃಷ್ಟಿಕೋನವನ್ನು ಬದಲಾಯಿಸುವುದು ಕೋಟಾ ಫ್ಯಾಕ್ಟರಿಯ ಉದ್ದೇಶವಾಗಿದೆ, ಅದು ಅನೇಕ ವಿದ್ಯಾರ್ಥಿಗಳ ಜೀವನದಲ್ಲಿ ತಿರುವುಗಳನ್ನು ತರುತ್ತದೆ.  ಕೋಟ ಫ್ಯಾಕ್ಟರಿ ಸೀಸನ್ 1 , 2019ರಲ್ಲಿ ಬಿಡುಗಡೆಗೊಂಡಿತ್ತು.

    03. ದಿ ಸ್ಟಾರ್ಲಿನ್  (THE STARLIN) - ನೆಟ್ ಫ್ಲಿಕ್ಸ್  (NETFLIX)

    ಮೆಲಿಸ್ಸಾ ಮೆಕಾರ್ಥಿ (Melissa McCarthy), ಮತ್ತು ಕ್ರಿಸ್ ಒ'ಡೌಡ್ (Chris O’Dowd) ನಟನೆಯ  ಹಾಲಿವುಡ್ ಸಿನಿಮಾ ದಿ ಸ್ಟಾರ್ಲಿನ್  (THE STARLIN) ನೆಟ್ ಫ್ಲಿಕ್ಸ್ ನಲ್ಲಿ ಇಂದು ಬಿಡುಗಡೆಯಾಗುತ್ತಿದೆ.  ಸಿನಿಮಾದಲ್ಲಿ ಗಂಡ-ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ದೂರವಾಗಿರುತ್ತಾರೆ. ಈ ವೇಳೆ ಹೆಂಡತಿಗೆ ಪಕ್ಷಿಯೊಂದು ಹೇಗೆ ಜೀವನ ಪಾಠ ಕಲಿಸುತ್ತದೆ ಎಂಬುದೇ ಈ ಸಿನಿಮಾದ ಇಂಟರೆಸ್ಟಿಂಗ್ ಸಂಗತಿ. ಬಳಿಕ ಗಂಡ ಹೆಂಡತಿ ಒಂದಾಗುತ್ತಾರೆ ಎಂಬುದು ಸಿನಿಮಾ ನೋಡಿಯೇ ತಿಳಿಯಬೇಕು.

    04. ಗೋಲಿಯಾತ್  ಸೀಸನ್ - 4 (GOLIATH S4) : ಅಮೆಜಾನ್ ಪ್ರೈಮ್ ವೀಡಿಯೊ (AMAZON PRIME VIDEO) 

    ಅಮೆಜಾನ್ ಪ್ರೈಮ್ ವೀಡಿಯೊದ ಪಾಪ್ಯುಲರ್ ಶೋಗೋಲಿಯಾತ್ ನ 4ನೇ ಸೀಸನ್ ಇಂದು ರಿಲೀಸ್ ಆಗಲಿದೆ. ಈ ಸೀರಿಸ್ ನಲ್ಲಿ ಬಿಲ್ಲಿ ಮೆಕ್ ಬ್ರೈಡ್ ಎಂಬ  ವಕೀಲನ ಜೀವನ ಸುತ್ತ ನಡೆಯುವ ಘಟನೆಗಳ ಬಗ್ಗೆ ಕಥೆ ಹೆಣೆಯಲಾಗಿದೆ. ಈ ಸೀರಿಸ್ ಅಮೆಜಾನ್ ನಲ್ಲಿ ಸಖತ್ ಹೆಸರು ಮಾಡಿದೆ.ಬಿಲ್ಲಿ ಬಾಬ್ ಥಾರ್ನ್ಟನ್ (Billy Bob Thornton)  ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

    05. ಮಿಡ್ ನೈಟ್ ಮಾಸ್ (MIDNIGHT MASS)- ನೆಟ್ ಫ್ಲಿಕ್ಸ್ (NETFLIX) 

    ದಿ ಹಂಟಿಂಗ್ ಆಫ್ ಹಿಲ್ ಹೌಸ್ ನ   ಸಿನಿಮಾ ತಂಡದವರಿಂದಲೇ ಮಿಡ್ ನೈಟ್ ಮಾಸ್  ಸಿನಿಮಾ ತಯಾರಾಗಿದ್ದು, ಇಂದು ನೆಟ್ ಫ್ಲಿಕ್ಸ್ ನಲ್ಲಿ  ಬಿಡುಗಡೆಯಾಗಲಿದೆ. ಈ ಸಿನಿಮಾ ಹಾರರ್ ಕಥಾಹಂದರ ಹೊಂದಿದೆ. ಕ್ರೊಕೆಟ್ ದ್ವೀಪದ ಪ್ರತ್ಯೇಕ ಸಮುದಾಯದಲ್ಲಿ  ನಡೆಯುವ ಭಯಾನಕ ಕಥೆಗಳ ಸುತ್ತ ಸಿನಿಮಾ ಮಾಡಲಾಗಿದೆ.

    (ವರದಿ ವಾಸುದೇವ್. ಎಂ)
    Published by:Sandhya M
    First published: