KGF Chpater ಒಂದರಲ್ಲಿದ್ದ ಈ 4 ಪಾತ್ರಗಳು ಪಾರ್ಟ್​ 2ನಲ್ಲಿ ಮಾಯ! ಅನಂತ್ ನಾಗ್​ ಮಾತ್ರ ಮಿಸ್ಸಿಂಗ್​ ಅಲ್ಲ

ನರಾಚಿಯೆಂಬ ನರಕದಲ್ಲಿಯೇ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳ ಸೃಷ್ಟಿಯಾಗಿತ್ತು, ಅವುಗಳಲ್ಲಿ ಹಲವು ಪಾತ್ರಗಳು ‘ಕೆಜಿಎಫ್ 2’(KGF 2) ಸಿನಿಮಾದಲ್ಲಿ ಉಳಿದುಕೊಂಡಿವೆ. ಆದರೆ, ಇನ್ನೂ ಕೆಲ ಪಾತ್ರಗಳು ಕೆಜಿಎಫ್​ ಚಾಪ್ಟರ್​ 2 ನಿಂದ ಮಿಸ್​ ಆಗಿದೆ. ಅದು ಯಾಕೆ ಅಂತ ಮುಂದೆ ನೋಡಿ..

ಕೆಜಿಎಫ್​ 2ನಲ್ಲಿ ಮರೆಯಾದ ಪಾತ್ರಗಳು

ಕೆಜಿಎಫ್​ 2ನಲ್ಲಿ ಮರೆಯಾದ ಪಾತ್ರಗಳು

  • Share this:
ಕೆಜಿಎಫ್​ 2(KGF 2).. ಕೆಜಿಎಫ್​ 2.. ಎಲ್ಲೆಲ್ಲೂ ಇದರದ್ದೆ ಸೌಂಡ್​, ದರ್ಬಾರ್​. ಕನ್ನಡ ಚಿತ್ರರಂಗದ ಹೆಮ್ಮೆ ಈ ಕೆಜಿಎಫ್​​ 2 ಸಿನಿಮಾ. ಕೆಜಿಎಫ್​ ಚಾಪ್ಟರ್​​ 1(KGF Chapter 1) ಕನ್ನಡ(Kannada) ಸಿನಿಮಾದ ಗತ್ತನ್ನು ತೋರಿಸಿಕೊಟ್ಟಿತ್ತು.ಕೆಜಿಎಫ್​ 2 ಸಿನಿಮಾ ಕನ್ನಡಿಗರು ತಾಕತ್ತೇನು ಎಂಬುದನ್ನು ಇಡೀ ವಿಶ್ವ(World)ಕ್ಕೆ ತೋರಿಸಿಕೊಟ್ಟಿದೆ.  ಕೆಜಿಎಫ್ 2 (KGF 2) ಚಿತ್ರ ಈಗಾಗಲೇ ಬಿಡುಗಡೆ ಆಗಿ ವಿಶ್ವದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿದೆ.ಅಲ್ಲದೇ ಬಾಕ್ಸ್​ ಆಫೀಸ್​(Box Office)ನಲ್ಲಿ ರಾಕಿ ಭಾಯ್​ ಧೂಳೆಬ್ಬಿಸುತ್ತಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್​ ಮಾಡುತ್ತಿದೆ. ಕೆಜಿಎಫ್​ ಸಿನಿಮಾದ ಯಶಸ್ಸಿಗೆ ತಾರಾಗಣವೂ ಪ್ರಮುಖ ಪಾತ್ರ ವಹಿಸುತ್ತೆ. ನರಾಚಿಯೆಂಬ ನರಕದಲ್ಲಿಯೇ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳ ಸೃಷ್ಟಿಯಾಗಿತ್ತು, ಅವುಗಳಲ್ಲಿ ಹಲವು ಪಾತ್ರಗಳು ‘ಕೆಜಿಎಫ್ 2’(KGF 2) ಸಿನಿಮಾದಲ್ಲಿ ಉಳಿದುಕೊಂಡಿವೆ. ಆದರೆ, ಇನ್ನೂ ಕೆಲ ಪಾತ್ರಗಳು ಕೆಜಿಎಫ್​ ಚಾಪ್ಟರ್​ 2 ನಿಂದ ಮಿಸ್​ ಆಗಿದೆ. ಅದು ಯಾಕೆ ಅಂತ ಮುಂದೆ ನೋಡಿ..

ಅನಂತ್​ ನಾಗ್ ಅವರ ಜಾಗಕ್ಕೆ ಪ್ರಕಾಶ್​ ರೈ!

ಕೆಜಿಎಫ್ ಚಾಪ್ಟರ್​​ ಒಂದರ ಸಿನಿಮಾದಲ್ಲಿ ಬಹಳ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಅನಂತ್‌ನಾಗ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಿಲ್ಲ. ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತ್​ ನಾಗ್​ ನಟಿಸಿದ್ದರು. ಅನಂತ್​ ನಾಗ್​ ಪಾರ್ಟ್ 2ನಲ್ಲಿ ಇಲ್ಲ ಎಂಬುಂದು ಸಿನಿಮಾ ಚಿತ್ರೀಕರಣ ನಡೆಯುವಾಗಲೇ ಗೊತ್ತಾಗಿತ್ತು. ಆದರೆ, ಆನಂದ್ ಇಂಗಳಗಿ ಪಾತ್ರ ಮುಂದುವರೆದಿದೆ. ಆದರೆ, ಈ ಪಾತ್ರದಲ್ಲಿ ಅನಂತ್​ ನಾಗ್  ಇಲ್ಲ. ಆನಂದ್​ ಇಂಗಳಗಿ ಮಗನ ಪಾತ್ರದಲ್ಲಿ ಪ್ರಕಾಶ್​ ರೈ ನಟಿಸಿದ್ದಾರೆ. ನರಾಚಿಯ ಕರಾಳ ಮುಖವನ್ನು ಪ್ರಕಾಶ್​ ರೈ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕುಲಕರ್ಣಿ ಪಾತ್ರ ಕೆಜಿಎಫ್​ ಚಾಪ್ಟರ್ 2ನಲ್ಲಿ ಮಿಸ್ಸಿಂಗ್​!

ಕೆಜಿಎಫ್​ ಚಾಪ್ಟರ್​ 1 ಸಿನಿಮಾದಲ್ಲಿ ಕುಲಕರ್ಣಿ ಎಂಬ ಪಾತ್ರವೊಂದಿತ್ತು. ಸದಾ ಗರುಡನ ಜೊತೆ ಇರುತ್ತಿದ್ದ ಪಾತ್ರವೇ ಕುಲಕರ್ಣಿ. ಕೊನೆಗೆ ಗರುಡನ ಜೊತೆಯಾಗಿದ್ದುಕೊಂಡೆ ಅವನನ್ನು ಹೊಡೆಯಲು ಸ್ಕೆಚ್ ಹಾಕಿದ್ದ ತಂಡಕ್ಕೆ ಬೆಂಬಲ ನೀಡುತ್ತಿತ್ತು. ಈ ಪಾತ್ರದಲ್ಲಿ ಅಶ್ವತ್ಥ್ ನೀನಾಸಂ ನಟಿಸಿದ್ದರು. ಆದರೆ ಈ ಪಾತ್ರ ಸಹ 'ಕೆಜಿಎಫ್ 2' ಸಿನಿಮಾದಲ್ಲಿ ಇಲ್ಲ. ಈ ಪಾತ್ರದ ಕತೆ ಏನಾಯ್ತು ಎಂಬ ಕಾರಣವೂ ಇಲ್ಲ.

ಇದನ್ನೂ ಓದಿ: KGF 2 ಜಸ್ಟ್​ ಗ್ಯಾಂಗ್​ಸ್ಟರ್​ ಸಿನಿಮಾ ಅಲ್ಲ.. ಬಾಲಿವುಡ್​ ಮಂದಿಗೆ ಭಯ ಹುಟ್ಟಿಸೋ ಹಾರರ್​ ಚಿತ್ರ ಎಂದ RGV

ರಣ ಬೇಟೆಗಾರನ ಕತೆ ಹೇಳುವ ಹುಚ್ಚ ನಿಧನ!

‘ಕೆಜಿಎಫ್; ಚಾಪ್ಟರ್ 1’ ಸಿನಿಮಾದಲ್ಲಿ ಕತೆ ಹೇಳುವ ಹುಚ್ಚನೊಬ್ಬನಿದ್ದ. ಈ ಹುಚ್ಚನ ‘ಕೆಜಿಎಫ್ 2’ ಸಿನಿಮಾದಲ್ಲಿಲ್ಲ. 'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಹುಚ್ಚನ ಪಾತ್ರದಲ್ಲಿ ನಟಿಸಿದ್ದ ವ್ಯಕ್ತಿ ನಿಧನ ಹೊಂದಿದ ಕಾರಣ ಅವನ ಪಾತ್ರವನ್ನು ಮುಂದುವರೆಸಲು ನಿರ್ದೇಶಕರಿಂದ ಸಾಧ್ಯವಾಗಲಿಲ್ಲ. ‘ಕೆಜಿಎಫ್; ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಅನಾರೋಗ್ಯದಿಂದ ಆ ವ್ಯಕ್ತಿ ಮೃತ ಪಟ್ಟಿದ್ದರು.

ಇದನ್ನೂ ಓದಿ: ಕನ್ನಡದಲ್ಲೇ ಕೆಜಿಎಫ್​ 2 ನೋಡಿದ `ತಲೈವಾ’! ರಾಕಿ ಆರ್ಭಟ ಕಂಡು ಹಿಂಗಂದ್ರು ರಜನಿಕಾಂತ್​

ಕೆಜಿಎಫ್​ 2 ಸಿನಿಮಾದಲ್ಲಿ ಬಿ ಸುರೇಶ್​ ಪಾತ್ರ ಮಿಸ್ಸಿಂಗ್!

ಕೆಜಿಎಫ್​ ಮೊದಲ  ಭಾಗದಲ್ಲಿ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸಿದ್ದು ಬಿ.ಸುರೇಶ್. ನರಾಚಿಯ ನರಕದಲ್ಲಿಯೇ ಬಹಳ ವರ್ಷಗಳ ಕಾಲದಿಂದಲೂ ಇದ್ದು, ಅಲ್ಲಿನ ಜನರಿಗೆ ತಕ್ಕಮಟ್ಟಿಗೆ ಸಹಾಯ ಮಾಡುತ್ತಾ, ಆ ನತದೃಷ್ಟ ಜನಗಳ ಮುಂದಾಳತ್ವ ವಹಿಸಿರುವ ವಿಠಲ್ ಪಾತ್ರದಲ್ಲಿ ನಟಿಸಿದ್ದರು. ಆದರೆ 'ಕೆಜಿಎಫ್ 2' ಸಿನಿಮಾದಲ್ಲಿ ಬಿ ಸುರೇಶ್ ನಟಿಸಿಲ್ಲ. ಅವರ ಪಾತ್ರ ಏನಾಯಿತು ಎಂಬ ಕಾರಣವನ್ನೂ ಸಹ ನಿರ್ದೇಶಕರು ನೀಡಿಲ್ಲ. ಇವರ ಬದಲಾಗಿ ಕೆಜಿಎಫ್​ ಮೊದಲ ಭಾಗದಲ್ಲಿ ಬಿ ಸುರೇಶ್​ ಪಾತ್ರದ ಜೊತೆ ಇದ್ದ ಟಿ ಎನ್​ ನರಸಿಂಹಮೂರ್ತಿ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
Published by:Vasudeva M
First published: