ಎಲ್ಲೆಲ್ಲೂ 'ನಟಸಾರ್ವಭೌಮ'ನ ಕ್ರೇಜ್​; ಊರ್ವಶಿಯಲ್ಲಿ ಮೊದಲ ಶೋನ ಎಲ್ಲಾ ಟಿಕೆಟ್​ ಖರೀದಿಸಿದ ಅಭಿಮಾನಿ ಬಳಗ!

ಶುಕ್ರವಾರದಿಂದ ‘ನಟಸಾರ್ವಭೌಮ’ ಚಿತ್ರದ ಟಿಕೆಟ್​ಅನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗಿದೆ. ಶಿವು ಅಡ್ಡ ಹಾಗೂ ರಾಜ್​ ಡೈನಾಸ್ಟಿ ಹೆಸರಿನ ಅಭಿಮಾನಿ ಬಳಗ ಊರ್ವಶಿ ಚಿತ್ರಮಂದಿರದ ಮುಂಜಾನೆಯ ನಾಲ್ಕು ಗಂಟೆ ಶೋನ ಎಲ್ಲ ಟಿಕೆಟ್​ ಕಾಯ್ದಿರಿಸಿದೆ.

Rajesh Duggumane | news18
Updated:February 2, 2019, 11:57 AM IST
ಎಲ್ಲೆಲ್ಲೂ 'ನಟಸಾರ್ವಭೌಮ'ನ ಕ್ರೇಜ್​; ಊರ್ವಶಿಯಲ್ಲಿ ಮೊದಲ ಶೋನ ಎಲ್ಲಾ ಟಿಕೆಟ್​ ಖರೀದಿಸಿದ ಅಭಿಮಾನಿ ಬಳಗ!
ಪುನೀತ್​
Rajesh Duggumane | news18
Updated: February 2, 2019, 11:57 AM IST
ಕೆಲ ಅಭಿಮಾನಿಗಳು ನೆಚ್ಚಿನ ನಟನಿಗೋಸ್ಕರ ಏನು ಬೇಕಾದರೂ ಮಾಡಲೂ ಸಿದ್ಧರಿರುತ್ತಾರೆ. ಕೆಲ ಅಭಿಮಾನಿಗಳು ಇಷ್ಟದ ಹೀರೋನ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಸಿನಿಮಾ ಬಿಡುಗಡೆ ವೇಳೆ ಆಳೆತ್ತರದ ಕಟೌಟ್​ ನಿಲ್ಲಿಸಿ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಾರೆ. ಈ ಕ್ರೇಜ್​ಗೆ ‘ಪವರ್​ ಸ್ಟಾರ್​’  ಪುನೀತ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದೇನು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪುನೀತ್​ ರಾಜ್​ಕುಮಾರ್​ ನಟನೆಯ ‘ನಟಸಾರ್ವಭೌಮ’ ಚಿತ್ರ ತೆರೆಕಾಣಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ವಾರಕ್ಕೆ ಮೊದಲೇ ಆನ್​ಲೈನ್​ನಲ್ಲಿ ಅಡ್ವಾನ್ಸ್​ ಬುಕಿಂಗ್​ ಆರಂಭಗೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಈ ಮಧ್ಯೆ, ರಾಜ್​ಕುಮಾರ್​ ಕುಟುಂಬದ ಅಭಿಮಾನಿ ಬಳಗವೊಂದು ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಮೊದಲ ಶೋನ ಎಲ್ಲಾ ಟಿಕೆಟ್​ ಕಾಯ್ದಿರಿಸಿ ಅಚ್ಚರಿ ಮೂಡಿಸಿದೆ.

ಶಿವು ಅಡ್ಡ ಹಾಗೂ ರಾಜ್​ ಡೈನಾಸ್ಟಿ ಹೆಸರಿನ ಅಭಿಮಾನಿ ಬಳಗ ಊರ್ವಶಿ ಚಿತ್ರಮಂದಿರದಲ್ಲಿ ಮುಂಜಾನೆಯ ನಾಲ್ಕು ಗಂಟೆ ಶೋನ ಸಂಪೂರ್ಣ ಟಿಕೆಟ್​ ಬುಕ್​ ಮಾಡಿದೆ. ಅಭಿ, ಪ್ರಿನ್ಸ್​ ಮನು, ಕಿರಣ್​, ದರ್ಶನ್​, ದೀಪಕ್​ ರಾಜ್​, ಮನೋಜ್​​ ರಾಜರತ್ನ, ಸುಹಾಸ್,​ ವಿನೋದ್​, ದಿನೇಶ್​ ಇಷ್ಟು ಮಂದಿ ಸೇರಿ ಈ ಕಾರ್ಯ ಮಾಡಿದ್ದಾರೆ.ಇದನ್ನೂ ಓದಿ: 'ನಟಸಾರ್ವಭೌಮ' ಟ್ರೈಲರ್​ ರಿಲೀಸ್​; ಪುನೀತ್​ಗೆ ಕಿಚ್ಚ ಸುದೀಪ್​ ಹೇಳಿದ್ದೇನು?

ಅಷ್ಟಕ್ಕೂ ಹೀಗೆ ಮಾಡಿರುವುದರ ಹಿಂದಿನ ಉದ್ದೇಶವೇನು..? ಎನ್ನುವ ಪ್ರಶ್ನೆಗೆ ಉತ್ತರಿಸುವ ಅಭಿ, “ನಾವು 2.60 ಲಕ್ಷ ರೂ. ಕೊಟ್ಟು ಎಲ್ಲಾ ಟಿಕೆಟ್​ ಕಾಯ್ದಿರಿಸಿದ್ದೇವೆ. ರಾಜ್​ ಕುಟುಂಬದ ಅಭಿಮಾನಿಗಳು ಒಂದೆಡೆ ಸೇರಲು ಇದು ಒಳ್ಳೆಯ ಅವಕಾಶ. ಈ ಹಿನ್ನೆಲೆಯಲ್ಲಿ ನಾವು ಮೊದಲ ಶೋನ ಅಷ್ಟೂ ಟಿಕೆಟ್​ ಕಾಯ್ದಿರಿಸಿದ್ದೇವೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ಊರ್ವಶಿಯಲ್ಲಿ ಮೊದಲ ದಿನ ಫ್ಯಾನ್​ ಶೋ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ” ಎನ್ನುತ್ತಾರೆ. ಇನ್ನು, ಪುನೀತ್​ ಕಟೌಟ್​ ನಿಲ್ಲಿಸಿ ಹಾಲಿನ ಅಭಿಷೇಕ ಮಾಡುವ ಯೋಚನೆಯನ್ನೂ ಇವರು ಇಟ್ಟುಕೊಂಡಿದ್ದಾರಂತೆ.ಶುಕ್ರವಾರದಿಂದ ‘ನಟಸಾರ್ವಭೌಮ’ ಚಿತ್ರದ ಟಿಕೆಟ್​ಅನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗಿದೆ. ಕೆಲ ಚಿತ್ರಮಂದಿರಗಳಲ್ಲಿ ಈಗಾಗಲೇ ಟಿಕೆಟ್​ ಸೋಲ್ಡ್​ಔಟ್​ ಕೂಡ ಆಗಿದೆ. ಅಭಿಮಾನಿಗಳು ತಾಮುಂದು ನಾಮುಂದು ಎಂದು ಟಿಕೆಟ್​  ಬುಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಕಿಕ್ಕೇರಿಸಲು ಬಂದಿದೆ 'ನಟಸಾರ್ವಭೌಮ'ನ ಎಣ್ಣೆ ಗೀತೆ

‘ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಇದೇ ಮೊದಲ ಬಾರಿಗೆ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಸಾಕಷ್ಟು​ ಕುತೂಹಲ ಸೃಷ್ಟಿಸಿದೆ. ಪುನೀತ್​ ಫೋಟೋ ಜರ್ನಲಿಸ್ಟ್​ ಆಗಿ ಕಾಣಿಸಿಕೊಂಡಿದ್ದು, ನಿರ್ದೇಶಕ ಪವನ್​ ಒಡೆಯರ್​ ಸಿನಿಮಾದಲ್ಲಿ ಪ್ರೇತಗಳ ವಿಚಾರವನ್ನೂ ಹೇಳುತ್ತಿದ್ದಾರಂತೆ. ರಾಕ್​ಲೈನ್​ ವೆಂಕಟೇಶ್​ ನಿರ್ಮಾಣದ ಈ ಚಿತ್ರದಲ್ಲಿ ರಚಿತಾ ರಾಮ್​, ಅನುಪಮಾ ಪರಮೇಶ್ವರಂ ನಾಯಕಿರಾಗಿ ನಟಿಸಿದ್ದಾರೆ.

First published:February 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ