Bollywoodಗೆ ವಿದಾಯ ಹೇಳಿ ಡಾಬಾದಲ್ಲಿ 150 ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದರಂತೆ ನಟ Sanjay Mishra

ಹೆಸರಾಂತ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ ಸಂಜಯ್​ ಮಿಶ್ರಾ ಅವರು ಬಾಲಿವುಡ್‍ಗೆ ನಮಸ್ಕಾರ ಹಾಕಿ, ಡಾಬಾ ಒಂದರಲ್ಲಿ 150 ರೂ. ಸಂಬಳದ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದ ಕಾಲವೊಂದಿತ್ತು.

ಬಾಲಿವುಡ್​ನ ಹಾಸ್ಯ ನಟ ಸಂಜಯ್​ ಮಿಶ್ರಾ

ಬಾಲಿವುಡ್​ನ ಹಾಸ್ಯ ನಟ ಸಂಜಯ್​ ಮಿಶ್ರಾ

  • Share this:
ಸಂಜಯ್ ಮಿಶ್ರಾ (Sanjay Mishra)... ಬಾಲಿವುಡ್‍ನ (Bollywood Actor) ಅತ್ಯುತ್ತಮ ಪೋಷಕ ನಟರಲ್ಲಿ ಒಬ್ಬರು. ಹೆಚ್ಚಾಗಿ ಹಾಸ್ಯ ಪಾತ್ರಗಳನ್ನು ನಿರ್ವಹಿಸುವ ಸಂಜಯ್​ ಮಿಶ್ರಾ, ವೀಕ್ಷಕರನ್ನು ನಕ್ಕು ನಗಿಸುವರಲ್ಲಿ ಸದಾ ಮುಂದು. ಆದರೆ ಕೆಲವೊಮ್ಮೆ ಗಂಭೀರ ಪಾತ್ರಗಳಲ್ಲಿನ ಅವರ ಅಭಿನಯ ವೀಕ್ಷಕರಲ್ಲಿ ಕಣ್ಣೀರು ತರಿಸುವಷ್ಟು ಅಮೋಘವಾಗಿ ಇದ್ದ ಉದಾಹರಣೆಗಳುಂಟು. ಹಿಪ್ ಹಿಪ್ ಹುರ್ರೆ ಸಿನಿಮಾದಲ್ಲಿನ ಅವರ ಚಂದ್ರಗುಪ್ತ ಸರ್ ಎಂಬ ಶಿಕ್ಷಕನ ಪಾತ್ರ ಅಥವಾ 'ಆಫೀಸ್ ಆಫೀಸ್' ಸಿನಿಮಾದಲ್ಲಿನ ಶುಕ್ಲಾ ಪಾತ್ರ ಸದಾ ನೆನಪಿನಲ್ಲಿ ಉಳಿಯುವಂತವು. ಅಭಿನಯ ಕ್ಷೇತ್ರದಲ್ಲಿ ಈಗಾಗಲೇ 25 ವರ್ಷಗಳನ್ನು ಪೂರೈಸಿರುವ ಮಿಶ್ರಾ ಬದುಕು, ಹೂವಿನ ಹಾಸಿಗೆಯಂತೂ ಆಗಿರಲಿಲ್ಲ. ತೆರೆಯ ಮೇಲೆ ಅಭಿಮಾನಿಗಳನ್ನು ನಕ್ಕು ನಗಿಸಿರುವ ಮಿಶ್ರಾ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು.

ಹೌದು, ಹೆಸರಾಂತ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮಿಶ್ರಾ, ಬಾಲಿವುಡ್‍ಗೆ ನಮಸ್ಕಾರ ಹಾಕಿ, ಡಾಬಾ ಒಂದರಲ್ಲಿ 150 ರೂ. ಸಂಬಳದ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದ ಕಾಲವೊಂದಿತ್ತು.


ಇದೆಲ್ಲಾ ನಡೆದದ್ದು, 'ಆಫೀಸ್ ಆಫೀಸ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ. ಆಗ ಮಿಶ್ರಾ ಆರೋಗ್ಯ ಕೈ ಕೊಟ್ಟಿತ್ತು. ಅದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಾಗಿತ್ತಂತೆ. ಅವರ ಹೊಟ್ಟೆಯಿಂದ ವೈದ್ಯರು 15 ಲೀಟರ್ ಕೀವು ತೆಗೆದಿದ್ದರಂತೆ. ಮಿಶ್ರಾ ಅವರು ಚೇತರಿಸಿಕೊಂಡು 15 ದಿನಗಳಾಗುವಷ್ಟರಲ್ಲಿ ಅವರ ತಂದೆ ತೀರಿಕೊಂಡರು.
ಆ ಸಂಗತಿ ಮಿಶ್ರಾ ಮನಸ್ಸಿಗೆ ಎಷ್ಟು ಆಘಾತ ನೀಡಿತೆಂದರೆ, ಅವರು ಮುಂಬೈಗೆ ಮರಳುವುದು ಸಾಧ್ಯವೇ ಆಗಲಿಲ್ಲ.

ಇದನ್ನೂ ಓದಿ: Rohit Shetty: 30 ರೂಪಾಯಿ ಸಂಬಳದಿಂದ ವೃತ್ತಿ ಜೀವನ ಆರಂಭಿಸಿದ್ದರಂತೆ ಈ ಸ್ಟಾರ್​ ನಿರ್ದೇಶಕ..!

“ನನಗೆ ಏಕಾಂಗಿಯಾಗಿ ಇರಬೇಕು ಎಂದೆನಿಸಿತು. ಹಾಗಾಗಿ ನಾನು ಋಷಿಕೇಶಕ್ಕೆ ಹೋಗಿ ಡಾಬಾ ಒಂದರಲ್ಲಿ, ಆಮ್ಲೆಟ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ಆ ಡಾಬಾದ ಮಾಲೀಕನಾಗಿದ್ದ ಸರ್ದಾರ್‌ಗೆ ನನ್ನ ಗುರುತು ಸಿಕ್ಕಿರಲಿಲ್ಲ. ಆದರೆ ಗ್ರಾಹಕರು ನನ್ನನ್ನು ನೋಡಿ, ‘ಗೋಲ್‍ಮಾಲ್ ಮೇ ಆಪ್ ಹೀ ತೇ ನಾ ? (ಗೋಲ್‍ಮಾಲ್‍ನಲ್ಲಿ ಇದ್ದದ್ದು ನೀವೇ ಅಲ್ಲವೇ?)’ ಎಂದು ಕೇಳುತ್ತಿದ್ದರು. ಬಳಿಕ, ನನ್ನ ಜೊತೆ ಫೋಟೋ ತೆಗೆಸಿಕೊಳ್ಳಲು ಬಯಸುತ್ತಿದ್ದರು. ಕೊನೆಗೆ, ನಾನು ಯಾರೆಂದು ಸರ್ದಾರ್ ಕೇಳಿದ. ನಾನು ನಟನಾಗಿದ್ದೆ ಎಂದು ಯಾರೋ ಅವನಿಗೆ ಹೇಳಿದ್ದರು” ಎಂದು ಹಳೇ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಸಂಜಯ್ ಮಿಶ್ರಾ.

ಮಿಶ್ರಾಗೆ, ಆಲ್ ದ ಬೆಸ್ಟ್ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚುವಂತೆ ಒತ್ತಾಯಿಸಿದ್ದು ರೋಹಿತ್ ಶೆಟ್ಟಿ. ಆ ಸಿನಿಮಾದಲ್ಲಿ ನಮ್ಮೆಲ್ಲರನ್ನು ನಕ್ಕು ನಗಿಸಿರುವ ಮಿಶ್ರಾ , ತೆರೆಯ ಹಿಂದೆ ತಮ್ಮ ವ್ಯಾನಿಟಿ ವಾನ್‍ನಲ್ಲಿ ತನ್ನ ತಂದೆಯನ್ನು ನೆನೆಸಿಕೊಂಡು ಸದಾ ಕಣ್ಣೀರಿಡುತ್ತಿದ್ದರು.
ಸಂಜಯ್ ಮಿಶ್ರಾ ಮೊದಲ ಮದುವೆ ವಿಫಲವಾಗಿತ್ತು, ತಾಯಿಯ ಒತ್ತಾಯದ ಮೇರೆಗೆ ಎರಡನೇ ಮದುವೆ ಆದರು. ಈಗ ಪತ್ನಿ ಕಿರಣ್ ಮಿಶ್ರಾ ಮತ್ತು ಮಕ್ಕಳಾದ ಪಲ್ ಮಿಶ್ರಾ ಹಾಗೂ ಲಮ್ಹಾ ಮಿಶ್ರಾ ಅವರೊಂದಿಗಿನ ಸುಖಿ ಜೀವನ ಮಿಶ್ರಾ ಅವರದ್ದು.

ಇದನ್ನೂ ಓದಿ: Pooja Hegde: ಆಲಿಯಾ-ಜಾಹ್ನವಿ ನಂತರ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ..!

ಮಿಶ್ರಾ ಎನ್‍ಎಸ್‍ಡಿ ಪದವೀಧರ ಎಂಬುವುದು ನಿಮಗೆ ಗೊತ್ತೆ? ಅಲ್ಲಿ ಮಿಶ್ರಾಗೆ ಸೀನಿಯರ್ ಆಗಿದ್ದ ಇರ್ಫಾನ್ ಖಾನ್ ತಮ್ಮ ನಟನೆಯ ಮೂಲಕ ಮಿಶ್ರಾ ಮೇಲೆ ಅಗಾಧ ಪರಿಣಾಮ ಬೀರಿದ್ದರಂತೆ. ಮಿಶ್ರಾಗೆ ಅವರ ಎನ್‍ಎಸ್‍ಡಿ ಸಹಪಾಠಿ ಆದ್ದ ತಿಗ್‍ಮಾಂಶು ಧುಲಿಯಾ ಒಂದು ಶೋನಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರು. 1991 - 1999ರ ನಡುವೆ ಅವರು ನಿರ್ದೇಶನ, ಕ್ಯಾಮರಾ ಕೆಲಸ, ಲೈಟಿಂಗ್, ಫೋಟೋಗ್ರಫಿ ಹೀಗೆ ಎಲ್ಲಾ ಕೆಲಸಗಳನ್ನು ಮಾಡಿದರು. ಆದರೂ ದಿನಕ್ಕೊಂದು ವಡಾ ಪಾವ್ ತಿಂದು ಬದುಕಬೇಕಾದ ಪರಿಸ್ಥಿತಿ ಇತ್ತು.
ಅವರ ಜೀವನ ಪಯಣ ಅಷ್ಟು ಸುಖಮಯಾಗಿರಲಿಲ್ಲ. ಆದರೂ, ಅವರು ಈ ಹಂತಕ್ಕೆ ಮಟ್ಟಕ್ಕೆ ತಲುಪಿರುವುದು ಹೆಮ್ಮೆ ಪಡುವಂತಹ ವಿಷಯ.
Published by:Anitha E
First published: