HOME » NEWS » Entertainment » THERE IS RUMORS THAT DEEPIKA PADUKONE IS THE ADMIN FOR WHATSAPP DRUG GROUP RMD

ಡ್ರಗ್ ಚಾಟ್ ವಾಟ್ಸಾಪ್ ಗ್ರೂಪ್​ಗೆ ದೀಪಿಕಾನೇ ಅಡ್ಮಿನ್?; ಮಾದಕ ನಟಿಯರ ಮೊಬೈಲ್ ವಶಕ್ಕೆ! 

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪುತ್ ಅನುಮಾನಾಸ್ಪದ ಸಾವು, ಸ್ವಚ್ಛ ಬಾಲಿವುಡ್ಗೆ ಓಂಕಾರ ಹಾಡಿದೆ. ಸುಶಾಂತ್ ಸಾವಿಗೂ ಡ್ರಗ್ಸ್ ಜಾಲಕ್ಕೂ ನಂಟಿರುವ ಅನುಮಾನದಲ್ಲಿ ಈಗಾಗಲೇ ಅವರ ಮಾಜಿ ಪ್ರಿಯತಮೆ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯನ್ನು ಬಂಧಿಸಲಾಗಿದೆ.

news18-kannada
Updated:September 27, 2020, 12:47 PM IST
ಡ್ರಗ್ ಚಾಟ್ ವಾಟ್ಸಾಪ್ ಗ್ರೂಪ್​ಗೆ ದೀಪಿಕಾನೇ ಅಡ್ಮಿನ್?; ಮಾದಕ ನಟಿಯರ ಮೊಬೈಲ್ ವಶಕ್ಕೆ! 
ದೀಪಿಕಾ ಪಡುಕೋಣೆ.
  • Share this:
ನಿನ್ನೆಯಷ್ಟೇ ಬಾಲಿವುಡ್​​ನ ಗುಳಿಕೆನ್ನೆ ಚೆಲುವೆ ಬೆಂಗಳೂರಿನವರೇ ಆದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಎನ್​ಸಿಬಿ (ಮಾದಕ ವಸ್ತು ನಿಯಂತ್ರಣ ಮಂಡಳಿ) ಅಧಿಕಾರಿಗಳು ಹಲವು ಸೆಲೆಬ್ರಿಟಿಗಳನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಮಾತ್ರವಲ್ಲ ಗಾಂಜಾ ಅಥವಾ ಇತರೆ ಡ್ರಗ್​​ಗಳಿಗೆ ಕೋಡ್ ವರ್ಡ್ ಬಳಸಲಾಗಿದೆ ಎನ್ನಲಾದ ವಾಟ್ಸಾಪ್ ಗ್ರೂಪಿನ ಅಡ್ಮಿನ್ ದೀಪಿಕಾ ಆಗಿದ್ದರು ಎನ್ನಲಾಗಿದೆ. ಹೀಗಾಗಿಯೇ ದೀಪಿಕಾ ಸೇರಿದಂತೆ ವಿಚಾರಣೆಗೆ ಹಾಜರಾದ ಎಲ್ಲ ನಟಿಯರ ಮೊಬೈಲ್​​ಗಳನ್ನು ವಶಕ್ಕೆ ಪಡೆದಿರುವ ಎನ್​ಸಿಬಿ ಅಧಿಕಾರಿಗಳು, ಅವುಗಳಲ್ಲಿನ ಕಾಲ್ ಡೀಟೇಲ್ಸ್, ವಾಟ್ಸಾಪ್ ಚಾಟ್ಸ್, ಎಸ್ಎಂಎಸ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ರಿಟ್ರೀವ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಸದ್ಯ ನಿರ್ಮಾಪಕ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್​ನ​ ಕ್ಷಿತಿಜ್ ರವಿ ಪ್ರಸಾದ್ ಸೇರಿದಂತೆ ಬಾಲಿವುಡ್ ಡ್ರಗ್ಸ್ ಜಾಲ ಪ್ರಕರಣದಲ್ಲಿ ಈಗಾಗಲೇ 18 ಮಂದಿಯನ್ನು ಬಂಧಿಸಲಾಗಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಟಿಮಣಿಯರು ಮಾತ್ರವಲ್ಲ ಕೆಲ ಸ್ಟಾರ್ ನಟರ ಹೆಸರೂ ಕೇಳಿಬಂದಿದ್ದು, ಮುಂದಿನ ದಿನಗಳಲ್ಲಿ ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ದೀಪಿಕಾ ಪಡುಕೋಣೆಯ ಮ್ಯಾನೇಜರ್ ಕರಿಷ್ಮಾ ಪ್ರಕಾಶ್, ಸೈಮೋನ್ ಖಂಬಟ್ಟಾ, ಜಯ ಸಾಹಾರನ್ನೂ ವಿಚಾರಣೆಗೆ ಒಳಪಡಿಸಿ, ಅವರ ಮೊಬೈಲ್​​ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಭರತ್ ಸಾಗರ್​: ಕಾಲವೇ ಮೋಸಗಾರ ತಂಡದಿಂದ ಪೋಸ್ಟರ್ ಉಡುಗೊರೆ!

ಸುಶಾಂತ್ ಸಿಂಗ್ ರಜಪೂತ್​ ಅವರ ಅನುಮಾನಾಸ್ಪದ ಸಾವಿನ ಕುರಿತು ಬಿಹಾರ್ ಪೊಲೀಸರು, ಮುಂಬೈ ಪೊಲೀಸರ ಜೊತೆಗೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಅದಕ್ಕೆ ತಳಕು ಹಾಕಿಕೊಂಡಿರುವ ಡ್ರಗ್ಸ್ ಜಾಲ ಪ್ರಕರಣವನ್ನು ಮುಂಬೈ ಪೊಲೀಸರ ಜೊತೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳೂ ತನಿಖೆ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಹವಾಲಾ ಕೂಡ ಶಾಮೀಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಬೇನಾಮಿ ಹಣ ವರ್ಗಾವಣೆ ಕುರಿತಂತೆ ಜಾರಿ ನಿರ್ದೇಶನಾಲಯ ಕೂಡ ವಿಚಾರಣೆ ನಡೆಸುತ್ತಿದೆ.
Youtube Video

ಮತ್ತೊಂದೆಡೆ ಕರ್ನಾಟಕದಲ್ಲೂ ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣದ ತನಿಖೆ ಭರದಿಂದ ಸಾಗಿದ್ದು, ಈಗಾಗಲೇ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಬಂಧನವಾಗಿದೆ. ಜೊತೆಗೆ ಸಿಸಿಬಿ ಪೊಲೀಸರು ದಿಗಂತ್, ಐಂದ್ರಿತಾ ರೇ ದಂಪತಿ, ಅಕುಲ್ ಬಾಲಾಜಿ, ಸಂತೋಷ್ ಕುಮಾರ್, ಅನುಶ್ರೀಯನ್ನು ವಿಚಾರಣೆಗೆ ಒಳಪಡಿಸಿದ್ದು, ಮತ್ತೊಂದೆಡೆ ಐಎಸ್​​ಡಿ (ಇಂಟರ್ನಲ್ ಸೆಕ್ಯುರಿಟಿ ಡಿಪಾರ್ಟ್ಮೆಂಟ್) ಅಧಿಕಾರಿಗಳು ನಟ ಲೂಸ್ ಮಾದ ಯೋಗಿ ಸೇರಿದಂತೆ ಹಲವಾರು ಕಿರುತೆರೆ ನಟ, ನಟಿಯರಿಂದ ಈ ಕುರಿತು ಮಾಹಿತಿ ಸಂಗ್ರಹಿಸಿದೆ. ಒಟ್ಟಾರೆ ಡ್ರಗ್ಸ್ ಜಾಲ ಪ್ರಕರಣವಂತೂ ಅಗೆದಷ್ಟೂ ಆಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಿ ನಮ್ಮ ಹೆಸರು ಬರುತ್ತೋ ಎಂದು ಹಲವು ತಾರೆಯರಲ್ಲಿ ಆತಂಕ ಮೂಡಿಸಿದೆ.
Published by: Rajesh Duggumane
First published: September 27, 2020, 12:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories