• Home
  • »
  • News
  • »
  • entertainment
  • »
  • Rashmika Mandanna on Kantara: ನಾ ಇನ್ನೂ ಕಾಂತಾರ ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣ! ಜಾಲತಾಣದಲ್ಲಿ ಜನ್ಮ ಜಾಲಾಡಿದ ನೆಟ್ಟಿಗರು!

Rashmika Mandanna on Kantara: ನಾ ಇನ್ನೂ ಕಾಂತಾರ ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣ! ಜಾಲತಾಣದಲ್ಲಿ ಜನ್ಮ ಜಾಲಾಡಿದ ನೆಟ್ಟಿಗರು!

"ಕಾಂತಾರ ನೋಡಿಲ್ಲ" ಎಂದ ರಶ್ಮಿಕಾ ಮಂದಣ್ಣ

"ಕಾಂತಾರ ನೋಡಿಲ್ಲ" ಎಂದ ರಶ್ಮಿಕಾ ಮಂದಣ್ಣ

ಭಾರತೀಯ ಚಿತ್ರರಂಗದ ಖ್ಯಾತನಾಮರು 'ಕಾಂತಾರ' ಸಿನಿಮಾ ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ನಟಿ ರಶ್ಮಿಕಾ ಮಂದಣ್ಣ ಮಾತ್ರ "ನಾ ಇನ್ನೂ ಕಾಂತಾರ ಸಿನಿಮಾ ನೋಡಿಲ್ಲ" ಎಂದಿದ್ದಾರೆ!

  • Share this:

ಕಾಂತಾರ… ಸದ್ಯ ಭಾರತೀಯ ಚಿತ್ರರಂಗದಲ್ಲಿ (Indian film industry) ಕೇಳಿ ಬರುತ್ತಿರುವ ಒಂದೇ ಹೆಸರು ಕಾಂತಾರ (Kantara). ಕನ್ನಡ ಅಷ್ಟೇ ಅಲ್ಲ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಕಾಂತಾರ ಸದ್ದು ಜೋರಾಗುತ್ತಲೇ ಇದೆ. ಸದ್ಯ ಬಾಕ್ಸ್ ಆಫೀಸ್‌ನಲ್ಲಿ (Box Office) ಕಾಂತಾರದ ನಾಗಾಲೋಟಕ್ಕೆ ಬ್ರೇಕ್ ಬೀಳುವ ಲಕ್ಷಣಗಳೂ ಇಲ್ಲ. ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಕಾಂತಾರ ನೋಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅಭಿನಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಆದರೆ ರಿಷಬ್ ನಿರ್ದೇಶನದ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಇದೀಗ ನ್ಯಾಷನಲ್ ಕ್ರಶ್ (National Crush) ಆಗಿ ಬೆಳೆದಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna( ಮಾತ್ರ ಇನ್ನೂ ಸಿನಿಮಾ ನೋಡಿಲ್ಲವಂತೆ! ಈ ಬಗ್ಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತನಾಡಿದ್ದು, ಕಿರಿಕ್ ಬೆಡಗಿ ಮಾತಿಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.


“ನಾ ಇನ್ನೂ ಕಾಂತಾರ ನೋಡಿಲ್ಲ” ಎಂದ ರಶ್ಮಿಕಾ ಮಂದಣ್ಣ


ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಂತಾರ ಸಿನಿಮಾದ ಕುರಿತಂತೆ ಮಾತನಾಡಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಸೇರಿದಂತೆ ವಿವಿಧ ಭಾಷೆಯ ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಖ್ಯಾತ ನಾಮರು ಕಾಂತಾರ ಸಿನಿಮಾ ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ನಟಿ ರಶ್ಮಿಕಾ ಮಂದಣ್ಣ ಮಾತ್ರ ನಾ ಇನ್ನೂ ಕಾಂತಾರ ಸಿನಿಮಾ ನೋಡಿಲ್ಲ ಎಂದಿದ್ದಾರೆ.


“ಬೆಂಗಳೂರಿಗೆ ಹೋದ ಮೇಲೆ ಕಾಂತಾರ ನೋಡುತ್ತೇನೆ”


ಸಂದರ್ಶನವೊಂದರಲ್ಲಿ ನಾನು ಕಾಂತಾರ ಸಿನಿಮಾ ಇನ್ನೂ ನೋಡಿಲ್ಲ ಎಂದಿರುವ ರಶ್ಮಿಕಾ ಮಂದಣ್ಣ, ತಮ್ಮ ಹೇಳಿಕೆಗೆ ಕಾರಣವನ್ನೂ ನೋಡಿದ್ದಾರೆ. ನಾನು ಕಾಂತಾರ ಸಿನಿಮಾ ನೋಡಿಲ್ಲ. ಹಾಗಂತ ನೋಡಬಾರದು ಅಂತಲ್ಲ. ಸದ್ಯ ಬೆಂಗಳೂರಿನಿಂದ ಹೊರಗಿದ್ದೇನೆ. ಬೆಂಗಳೂರಿಗೆ ಹೋದ ಮೇಲೆ ಕಾಂತಾರ ಸಿನಿಮಾ ನೋಡುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ: Kantara Movie Varaha Roopam Song: ವರಾಹ ರೂಪಂ ಹಾಡು ಬಳಸಬಹುದು, ಆದರೆ..! ತೈಕ್ಕುಡಂ ಬ್ರಿಡ್ಜ್​ ತಂಡ ಹೇಳಿದ್ದೇನು?


ರಶ್ಮಿಕಾ ಮಂದಣ್ಣ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿ


ಇನ್ನು ರಶ್ಮಿಕಾ ಮಂದಣ್ಣ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಫ್ಯಾನ್ಸ್ ಹಾಗೂ ನೆಟ್ಟಿಗರು ಕಿಡಿ ಕಾರಿದ್ದಾರೆ. ತಮ್ಮ ಮೊದಲ ಸಿನಿಮಾ ನಿರ್ದೇಶಕನ ಚಿತ್ರ ಹೇಗಿದೆ ಎಂದು ಹೇಳುವ ನಿಯತ್ತು ಕೂಡ ಇಲ್ವಾ ಎಂದು ಫ್ಯಾನ್ಸ್ ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿನಿಮಾರಂಗಕ್ಕೆ ಕರೆದುಕೊಂಡು ಬಂದವರನ್ನೇ ನೀವು ಮರೆತು ಬಿಟ್ಟಿದ್ದೀರಿ ಅಂತ ಗರಂ ಆಗಿದ್ದಾರೆ.


ಮೊದಲ ಸಿನಿಮಾ ಬಗ್ಗೆ ಗೌರವ ತೋರಿಸದ ರಶ್ಮಿಕಾ


ಈ ಹಿಂದೆ ಸಂದರ್ಶನವೊಂದರಲ್ಲಿ ರಶ್ಮಿಕಾ ತಮ್ಮ ಚಿತ್ರರಂಗ ಪ್ರವೇಶದ ಬಗ್ಗೆ ಮಾತನಾಡಿದ್ದರು. ಕರ್ಲಿ ಟೇಲ್ಸ್ ಎನ್ನುವುದು ಫೇಮಸ್ ಶೋನಲ್ಲಿ ನಿರೂಪಕಿ ರಶ್ಮಿಕಾ ಅವರಲ್ಲಿ ಅವರ ಸಿನಿಮಾ ಎಂಟ್ರಿ, ಆ ಜರ್ನಿ ಹೇಗೆ ಶುರುವಾಯಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ಫ್ರೆಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಭಾಗವಹಿಸಲು ನನಗೆ ಮನಸಿರಲಿಲ್ಲ. ಶಿಕ್ಷಕರು ಹೇಳಿದ ಕಾರಣ ಸ್ಪರ್ಧಿಸಿದ್ದೆ. ನಂತರ ಇದರಲ್ಲಿ ವಿಜೇತೆಯಾಗಿ ಹೊರಹೊಮ್ಮಿದೆ. ಅದರಲ್ಲಿ ಲೆವೆಲ್​ಗಳಿದ್ದವು. ನಂತರ ನನ್ನ ಫೋಟೊ ಹಾಗೂ ಟೈಟಲ್ ಪೇಪರ್​​ನಲ್ಲಿ ಪ್ರಕಟಿಸಲಾಯಿತು ಎಂದಿದ್ದರು.


ಇದನ್ನೂ ಓದಿ: Kantara For Oscars: ಆಸ್ಕರ್ ಅಂಗಳಕ್ಕೆ ಹೋಗುತ್ತಾ ಕಾಂತಾರ? ಅಭಿಮಾನಿಗಳಿಂದ ಶುರುವಾಗಿದೆ ಕ್ಯಾಂಪೇನ್!


ರಶ್ಮಿಕಾ ವಿರುದ್ಧ ಭುಗಿಲೆದ್ದಿದ್ದ ಆಕ್ರೋಶ


ಟೈಮ್ಸ್ ಆಫ್ ಇಂಡಿಯಾದ ಮೊದಲ ಪುಟದಲ್ಲಿ ಇದನ್ನು ಪಬ್ಲಿಷ್ ಮಾಡಲಾಯಿತು. ನಾನು ನಂತರ ನನ್ ಕಾಲೇಜು ಲೈಫ್​​ಗೆ ಹಿಂದಿರುಗಿದೆ. ಹಾಗೆಯೇ ಹೋಗುತ್ತಿತ್ತು. ಆಗ ನನಗೆ ಈ ಪ್ರೊಡಕ್ಷನ್ ಹೌಸ್​ನಿಂದ ಕಾಲ್ ಬಂತು ಎಂದು ಹೇಳಿದ್ದಾರೆ. ಈ ಸಂದರ್ಭ ರಶ್ಮಿಕಾ ವ್ಯಂಗ್ಯವಾಗಿ ಎರಡು ಕೈಯನ್ನು ಎತ್ತಿ ವ್ಯಂಗ್ಯ ಸಿಂಬಲ್ ಕೊಟ್ಟಿದ್ದು, ಭಾರೀ ಟೀಕೆಗೆ ಕಾರಣವಾಗಿತ್ತು.

Published by:Annappa Achari
First published: