ಒಂದೆಡೆ ಸ್ಯಾಂಡಲ್ವುಡ್ ನಟ ಭಯಂಕರ ಡಾಲಿ ಧನಂಜಯ್. ಮತ್ತೊಂದೆಡೆ ಸುಕ್ಕಾ ಸಿನಿಮಾ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡುವ ನಿರ್ದೇಶಕ ಸೂರಿ. ಸದ್ಯಕ್ಕಂತು ಗಾಂಧಿನಗರದಲ್ಲಿ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ್ದೇ ಟಾಕು.
ಅದಕ್ಕೆ ಒಂದು ಕಾರಣ ಟಗರು ಸಿನಿಮಾ ಎನ್ನಬಹುದು. ಏಕೆಂದರೆ ಒಂದು ಸಣ್ಣ ಸಕ್ಸಸ್ಗಾಗಿ ಹಗಲಿರುಳು ಕನಸು ಕಾಣುತ್ತಿದ್ದ ಧನಂಜಯ್ಗೆ ಡಾಲಿ ಪಟ್ಟ ಕೊಡಿಸಿದ್ದೇ ಸೂರಿ. ಟಗರು ಚಿತ್ರದಲ್ಲಿ ಭಯಂಕರ ಪಾತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಪಟ್ಟಕೇರಿದ್ದ ಡಾಲಿಯ ಹೊಸ ಅವತಾರವೇ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ. ಹೀಗಾಗಿ ಪ್ರೇಕ್ಷಕರಿಗೆ ಚಿತ್ರದ ಮೇಲೆ ಡಬಲ್ ನಿರೀಕ್ಷೆಯಂತು ಇದೆ.
ಅದರೊಂದಿಗೆ ದುನಿಯಾ ಸೂರಿ ನಿರ್ದೇಶನದ ಸಿನಿಮಾಗಳಲ್ಲಿ ರೌಡಿಸಂ ತುಸು ಜಾಸ್ತಿಯೇ ವೈಭವಕರೀಸುತ್ತಾರೆ ಎಂಬ ಆರೋಪಗಳಿವೆ. ನಿಮ್ಮ ಪ್ರತಿ ಸಿನಿಮಾದಲ್ಲೂ ನೀವು ಹಿಂಸೆ ಕಾಮನ್ ಸಬ್ಜೆಕ್ಟ್ ಅಲ್ಲವೇ. ಯಾಕೆ ಹಾಗೆ ಎಂಬ ಪ್ರಶ್ನೆಗೆ ಸೂರಿ ಉತ್ತರಿಸಿದ್ದು ಹೀಗೆ...
ಕಾಮನ್ ವಿಷಯ ಅಂತೇನೂ ಇಲ್ಲ. ಸಿನಿಮಾ ಮೂಲಕ ಕಥೆ ಹೇಳುವಾಗ ಒಂದು ಪವರ್ಫುಲ್ ಸಬ್ಜೆಕ್ಟ್ ಒಳಗೊಂಡ ಅಂಶಗಳಿರಬೇಕಾಗುತ್ತದೆ. ಪ್ರಸ್ತುತ ಸಮಾಜದ ಪವರ್ಫುಲ್ ಅಂಶಗಳೆಂದರೆ ರಾಜಕಾರಣ, ಪೊಲೀಸ್ ಮತ್ತು ಮಾಫಿಯಾ. ಇದರಲ್ಲಿ ರಾಜಕಾರಣ ಕುರಿತಾದ ಸಿನಿಮಾ ಮಾಡಿ ನನಗೆ ಗೊತ್ತಿಲ್ಲ. ಇನ್ನುಳಿದಿರುವುದು ಪೊಲೀಸ್ ಮತ್ತು ಮಾಫಿಯಾ. ಹೀಗಾಗಿ ಈ ಎರಡು ಸಬ್ಜೆಕ್ಟ್ಗಳ ಮೇಲೆ ಸಿನಿಮಾ ಮಾಡುತ್ತಿದ್ದೇನೆ ಎಂದಿದ್ದಾರೆ ದುನಿಯಾ ಸೂರಿ.
ಈ ಹಿಂದೆ ಸೂರಿ ನಿರ್ದೇಶನದ ದುನಿಯಾ, ಜಂಗ್ಲಿ, ಟಗರು ಸಿನಿಮಾಗಳಲ್ಲಿ ರೌಡಿಸಂ ಅನ್ನು ವೈಭರೀಕರಿಸಲಾಗಿತ್ತು. ಇದೀಗ ಪಾಪ್ಕಾರ್ನ್ನಲ್ಲೂ ಅಂತದ್ದೇ ಕಥೆ ಇರಲಿದೆ ಎನ್ನಲಾಗುತ್ತಿದೆ.
ಸದ್ಯ ದುನಿಯಾ ಸೂರಿಯ ಹೊಸ ಸುಕ್ಕಾ ಪಾಪ್ಕಾರ್ನ್ ಮಂಕಿ ಟೈಗರ್ ಸಖತ್ ಸೌಂಡ್ ಮಾಡುತ್ತಿದ್ದು, ಚಿತ್ರದ ಟೀಸರ್ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಇನ್ನು ಮಂಕಿ ಚಿತ್ರದ ಚರಮ ಗೀತೆಯಂತಿರುವ ಮಾದೇವ.. ಹಾಡು ಈಗಾಗಲೇ ಭಾರೀ ವೈರಲ್ ಆಗಿದೆ. ಒಟ್ಟಿನಲ್ಲಿ ವರ್ಷಗಳ ಬಳಿಕ ಎಂಟ್ರಿ ಕೊಡುತ್ತಿರುವ ದುನಿಯಾ ಸೂರಿಯಿಂದ ಸಿನಿ ಸುಕ್ಕಾವನ್ನಂತು ನಿರೀಕ್ಷಿಸಬಹುದು.
ಇದನ್ನೂ ಓದಿ: ಮೇವಿಲ್ಲದೆ ಜಾನುವಾರುಗಳು ಕಂಗಾಲು: ಮಾನವೀಯತೆ ಮೆರೆದ ಅಭಿಮಾನಿಗಳ ದಾಸ ದರ್ಶನ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ