ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ರ 'ಯುವರತ್ನ' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಪುನೀತ್ ಕಾಲೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಲೇಜ್ಗೆ ಹೋಗೋಕೆ ಪುನೀತ್ ಬಳಸೋ ಸ್ಟೈಲಿಷ್ ಬೈಕ್ನ ನಂಬರ್ ಪ್ಲೇಟ್ನಲ್ಲೇ ಒಂದು ವಿಶೇಷತೆ ಇದೆ. ಅದು ವೈರಲ್ ಕೂಡ ಆಗಿದೆ.
ಇದನ್ನೂ ಓದಿ: ನನ್ನ ಮುತ್ತು, ನನ್ನ ಇಷ್ಟ: ವಿಜಯ್ ದೇವರಕೊಂಡ ಜತೆ ಲಿಪ್ಲಾಕ್ ಮಾಡಿದ್ದಕ್ಕೆ ಟ್ರೋಲ್ ಮಾಡಿದವರಿಗೆ ರಶ್ಮಿಕಾ ತಿರುಗೇಟು..!
'ಯುವರತ್ನ'ದಲ್ಲಿ ಅಪ್ಪು ಮತ್ತಷ್ಟು ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ಸೂಪರ್ ಬೈಕ್ನಲ್ಲಿ ಸ್ಟೈಲಿಷ್ ಪೋಸ್ ಕೊಟ್ಟಿದ್ದಾರೆ. ಈ ಬೈಕ್ನ ನಂಬರ್ ಪ್ಲೇಟ್ ಗಮನಿಸಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೆಎ 01 ಪಿಎಸ್ 0029 ನಂಬರ್ ಪ್ಲೇಟ್ ಇಲ್ಲಿದ್ದು, ಇದರರ್ಥ ಕರ್ನಾಟಕದ ನಂಬರ್ 1 ನಟ ಪವರ್ಸ್ಟಾರ್ 29ನೇ ಸಿನಿಮಾ ಅಂತ ಅರ್ಥೈಸಿಕೊಂಡು ಕೊಂಡಾಡಿದ್ದಾರೆ.
#Yuvarathnaa 3rd schedule started from today 🙌 pic.twitter.com/g52cTTqCwj
— Santhosh Ananddram (@SanthoshAnand15) March 22, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ