Darshan: ಕುರುಕ್ಷೇತ್ರ ನೋಡೋಕೆ ಇಲ್ಲಿವೆ 9 ಕಾರಣಗಳು..!

Kurukshetra: ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಹಾಗೂ ಭಾರೀ ಬಜೆಟ್​ನ ಸಿನಿಮಾ ಕುರುಕ್ಷೇತ್ರ ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ನೋಡಲೇ ಬೇಕು ಎನ್ನುವವರಿಗೆ ಇಲ್ಲಿವೆ ಸೂಕ್ತ ಕಾರಣಗಳು...

Anitha E | news18
Updated:August 8, 2019, 7:53 PM IST
Darshan: ಕುರುಕ್ಷೇತ್ರ ನೋಡೋಕೆ ಇಲ್ಲಿವೆ 9 ಕಾರಣಗಳು..!
ನಾಳೆ ಬಿಡುಗಡೆಯಾಗಲಿದೆ ಕುರುಕ್ಷೇತ್ರದ ಹೊಸ ಟ್ರೈಲರ್​
  • News18
  • Last Updated: August 8, 2019, 7:53 PM IST
  • Share this:
ಪ್ರತಿ ಸಿನಿಮಾನೂ ನೋಡೋಕೆ, ನೋಡಲೇಬೇಕು ಎಂದುಕೊಳ್ಳಲು ಒಂದಷ್ಟು ಕಾರಣಗಳಿರುತ್ತವೆ. 'ಕುರುಕ್ಷೇತ್ರ' ಸಿನಿಮಾ ವಿಷಯದಲ್ಲಿ ಅಂತಹ ಕಾರಣಗಳು ಬೇಕಾದಷ್ಟಿವೆ. ಅದರಲ್ಲಿ 9 ಕಾರಣಗಳನ್ನ ಪಟ್ಟಿ ಮಾಡಿದ್ದು, ನಿಮಗಾಗಿ ತಂದಿದ್ದೇವೆ.

ಕಾರಣ:-1 - ಪೌರಾಣಿಕ ಅವತಾರದಲ್ಲಿ ದರ್ಶನ್: ದುಯೋರ್ಧನನಾಗಿ ಡಿ-ಬಾಸ್ ಗತ್ತು !

'ಕುರುಕ್ಷೇತ್ರ' ಸಿನಿಮಾ ಅನೌನ್ಸ್ ಆದಾಗಿನಿಂದ್ಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಸಿತ್ತು. ಕನ್ನಡದಲ್ಲಿ ಇಂತಹದ್ದೊಂದು ಸಿನಿಮಾ ಬರಲಿದೆ ಎಂಬ ಮಾತು ಕೇಳಿದಾಗಲೇ ಕನ್ನಡ ಚಿತ್ರರಸಿಕರು ನೋಡಲೇಬೇಕಾದ ಸಿನಿಮಾದ ಲಿಸ್ಟ್‍ನಲ್ಲಿ ಈ ಸಿನಿಮಾವನ್ನ ಮೊದಲ ಸ್ಥಾನದಲ್ಲಿ ಸೇರಿಸಿಕೊಂಡು ಬಿಟ್ಟರು. ಅದಕ್ಕೆ ಮುಖ್ಯ ಕಾರಣ ದರ್ಶನ್.

ಡಿಬಾಸ್ ಅಂತ್ಲೇ ಕರೆಸಿಕೊಳ್ಳೋ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಕಮರ್ಷಿಯಲ್ ಸಿನಿಮಾಗಳಿಗೆ ಹೆಸರುವಾಸಿ. ಅವರ ಸಿನಿಮಾಗಳಲ್ಲಿ ಏನಿಲ್ಲ ಅಂದರೂ, ಮನರಂಜನೆಗಂತೂ ಮೋಸ ಇರೋದಿಲ್ಲ. ಹೀಗಾಗಿನೇ ದರ್ಶನ್ ಸಿನಿಮಾ ಬಂತು ಅಂದ್ರೆ ಬಾಕ್ಸಾಫಿಸ್ ಶೇಕ್ ಆಗುತ್ತೆ. ಇಂತಹ ದರ್ಶನ್ ಮೊದಲ ಬಾರಿಗೆ ಪೌರಾಣಿಕ ಸಿನಿಮಾದಲ್ಲಿ, ಅದ್ರಲ್ಲೂ ಕೌರವೇಶ್ವರನ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅಂದ್ರೆ, ಹೇಳಬೇಕಾ? ಅದರ ಮೇಲಿನ ನಿರೀಕ್ಷೆ ಮುಗಿಲು ಮುಟ್ಟುತ್ತೆ. 'ಕುರುಕ್ಷೇತ್ರ' ವಿಷಯದಲ್ಲಿ ಆಗಿದ್ದೂ ಅದೇ...! ದರ್ಶನ್‍ರನ್ನ ದುಯೋರ್ಧನನ ಅವತಾರದಲ್ಲಿ ಅದ್ಯಾವಾಗ ನೋಡ್ತಿವಪ್ಪ ಅಂತ ಚಿತ್ರರಸಿಕರು ಬಿಟ್ಟಗಣ್ಣು ಬಿಟ್ಟಂತೆ ಕಾದು ಕುಳಿತರು.

ಕಾರಣ:-2 - ದುಯೋರ್ಧನನ ದೃಷ್ಟಿಯಲ್ಲಿ ಮಹಾಭಾರತ ದರ್ಶನ !

ಮಹಾಭಾರತ ಪ್ರತಿ ಭಾರತೀಯನಲ್ಲೂ ಹಾಸುಹೊಕ್ಕಾಗಿದೆ. ಮಹಾಭಾರತ ಕಥೆ ಕೇಳದವರೇ ಇಲ್ಲ. ಆದರೆ ನಾವೆಲ್ಲರೂ ಕೇಳಿರೋದು, ಅಥವಾ ತೆರೆಮೇಲೆ ಕಂಡಿರೋದು ಧರ್ಮದ ದೃಷ್ಟಿಕೋನದಲ್ಲಿ. ಅದ್ರಲ್ಲೆಲ್ಲ ದುರ್ಯೋಧನನನ್ನು ವಿಲನ್ ಆಗಿ ಬಿಂಬಿಸಲಾಗಿದೆ. ಹಾಗೆ ಕರ್ಣ, ಅರ್ಜುನ, ಭೀಮ, ಧರ್ಮರಾಯನ ಪಾತ್ರಗಳ ದೃಷ್ಟಿಕೋನದಲ್ಲಿ ನೋಡಿ, ಈ ಪಾತ್ರಗಳನ್ನಷ್ಟೇ ಹೀರೋ ಎಂಬಂತೆ ಕಟ್ಟಿಕೊಡಲಾಗಿದೆ.

ಆದರೆ ಮುನಿರತ್ನ ಅವರ 'ಕುರುಕ್ಷೇತ್ರ'ದಲ್ಲಿ ದುಯೋರ್ಧನನ ದೃಷ್ಟಿಕೋನದಿಂದ ಕಥೆ ಕಟ್ಟಲಾಗಿದೆ. ಹಾಗಾದರೆ ಇಲ್ಲಿ ದುರ್ಯೋಧನನ್ನ ಹೇಗೆ ಬಿಂಬಿಸಲಾಗಿದೆ? ಹೀರೋ ರೀತಿನಾ? ಅಥವಾ ಖಳನಾಯಕನಾಗಾ ? ಒಂದು ವೇಳೆ ಖಳನಾಯಕನಾಗಿ ಬಿಂಬಿಸಿದ್ರೆ, ಅದನ್ನ ದರ್ಶನ್ ಹೇಗೆ ನಿರ್ವಹಿಸಿದ್ದಾರೆ? ಈ ಚಿತ್ರ ನೋಡಿ ಬಂದ್ಮೇಲೆ ದುರ್ಯೋಧನನ ಪಾತ್ರ ಜನರ ಮನಸ್ಸಿನಲ್ಲಿ ಹೇಗೆ ಉಳಿಯಲಿದೆ ಎಂಬ ಪ್ರಶ್ನೆಗಳೆಲ್ಲ ಚಿತ್ರರಸಿಕರ ತಲೆಯಲ್ಲಿ ಹುಟ್ಟುತ್ತೆ. ಹೀಗಾಗಿ 'ಕುರುಕ್ಷೇತ್ರ'ವನ್ನ ನೋಡೋಕೆ ತುದಿಗಾಲಲ್ಲಿ ನಿಲ್ಲಿಸಿರೋ ಮತ್ತೊಂದು ಅಂಶ, ದುರ್ಯೋಧನನ ದೃಷ್ಟಿಕೋನದಲ್ಲಿ ಮಹಾಭಾರತವನ್ನ ಹೇಗೆ ಕಟ್ಟಿಕೊಡಲಾಗಿದೆ ಎಂಬುದಾಗಿದೆ.ಕಾರಣ:-3- ವಿಶ್ವದ ಮೊದಲ 3ಡಿ ಪೌರಾಣಿಕ ಸಿನಿಮಾ !

'ಕುರುಕ್ಷೇತ್ರ' ಸಿನಿಮಾ ಮತ್ತೊಂದು ಕಾರಣಕ್ಕೆ ನೋಡ್ಲೇಬೇಕು ಅನ್ನೋ ಆಸೆ ಹುಟ್ಸಿದೆ.. ಅದೇನಂದ್ರೆ ಇದು ವಿಶ್ವದ ಮೊದಲ ಪೌರಾಣಿಕ 3ಡಿ ಸಿನಿಮಾ ಅನ್ನೋದು. 3ಡಿ ತಂತ್ರಜ್ಞಾನದಲ್ಲಿ ಈವರೆಗೂ ಸಾಕಷ್ಟು ಫ್ಯಾಂಟಸಿ ಸಿನಿಮಾಗಳನ್ನ ಚಿತ್ರರಸಿಕರು ನೋಡಿದ್ದಾರೆ. ಆದರೆ ಪೌರಾಣಿಕ ಪಾತ್ರಗಳು, ಕಥೆ ಈ ತಂತ್ರಜ್ಞಾನದಲ್ಲಿ ಹೇಗೆ ಕಾಣುತ್ತೆ? ಎಷ್ಟು ಚಂದದ ಅನುಭವ ನೀಡುತ್ತೆ ಅನ್ನೋದು ಇಲ್ಲಿಯವರೆಗೂ ಪ್ರೇಕ್ಷಕರ ಅನುಭವಕ್ಕೆ ಸಿಕ್ಕಿಲ್ಲ. ಅದು ಈ ಸಿನಿಮಾ ಮೂಲಕ ಸಿಗಲಿದೆ ಎಂಬುದು ಮತ್ತೊಂದು ಹೈಲೈಟ್.

ಕಾರಣ:-4 - ಭಾರಿ ಬಜೆಟ್, ಅದ್ಧೂರಿ ಸೆಟ್ !

'ಕುರುಕ್ಷೇತ್ರ' ಸಿನಿಮಾ, ಕನ್ನಡದ ಭಾರೀ ಬಜೆಟ್‍ನ ಸಿನಿಮಾ ಅಂತ್ಲೇ ಬಿಂಬಿತವಾಗಿದೆ. ಅದರಲ್ಲೂ ಈ ಸಿನಿಮಾ ಬಹುತೇಕ ಸೆಟ್‍ನಲ್ಲೇ ಚಿತ್ರೀಕರಣಗೊಂಡಿದೆ. ಹಾಗೆ 120 ದಿನಗಳ ಲಾಂಗೆಸ್ಟ್ ಶೆಡ್ಯೂಲ್‍ನಲ್ಲಿ ಈ ಸಿನಿಮಾ ಶೂಟ್ ಆಗಿದೆ. ಹೀಗಾಗಿ ದೃಶ್ಯದ ಮೇಲೆ ಅದ್ಧೂರಿತನ ಹೇಗೆ ಮೇಳೈಸಿದೆ? ಪೌರಾಣಿಕ ಸನ್ನಿವೇಶಗಳು ಹೇಗೆ ತೆರೆಯ ಮೇಲೆ ರೂಪುಗೊಂಡಿವೆ ಅನ್ನೋ ಬೆಟ್ಟದಷ್ಟು ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ.

ಕಾರಣ:-5 -ದೊಡ್ಡ ತಾರಾಬಳಗ !

ಮಹಾಭಾರತದಲ್ಲಿ ಸಾಕಷ್ಟು ಪಾತ್ರಗಳು ಬರುತ್ತವೆ. ಹೀಗಾಗಿ ಮಹಾಭಾರತ ಸಿನಿಮಾ ರೂಪ ಪಡೆದಾಗ ದೊಡ್ಡ ತಾರಾಬಳಗವೇ ಚಿತ್ರದಲ್ಲಿರಬೇಕಾಗುತ್ತೆ. 'ಕುರುಕ್ಷೇತ್ರ' ಸಿನಿಮಾ ಅದಕ್ಕೊಂದು ಉದಾಹರಣೆ. ಈ ಸಿನಿಮಾದಲ್ಲಿ ಅರ್ಧ ಸ್ಯಾಂಡಲ್‍ವುಡ್​ ಇದೆಯೆನೋ ಅನಿಸುವಷ್ಟು ದೊಡ್ಡ ತಾರಾಬಳಗವಿದೆ. ರೆಬೆಲ್‍ಸ್ಟಾರ್ ಅಂಬರೀಷ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ಡ್ಯಾನಿಶ್ ಅಕ್ತರ್, ಸೋನು ಸೂದ್, ಶ್ರೀನಾಥ್, ಭಾರತಿ ವಿಷ್ಣುವರ್ಧನ್, ಸ್ನೇಹಾ, ಮೇಘನಾ ರಾಜ್, ಹರಿಪ್ರಿಯಾ, ನಿಖಿಲ್ ಕುಮಾರಸ್ವಾಮಿ ಹೀಗೆ ಹೇಳ್ತಾ ಹೋದ್ರೆ ಪಟ್ಟಿದೊಡ್ಡದಿದೆ.. ಸೋ 'ಕುರುಕ್ಷೇತ್ರ'ದ ಮೂಲಕ ಇಷ್ಟೊಂದು ತಾರೆಯರನ್ನ ಒಟ್ಟಿಗೆ ನೋಡೋದೆ ಹಬ್ಬ.

ಕಾರಣ:-6 - ಅದ್ಭುತ ಗ್ರಾಫಿಕ್ಸ್ : ಕಣ್ಮನ ಸೆಳೆಯೋ ದೃಶ್ಯವೈಭವ !

'ಕುರುಕ್ಷೇತ್ರ' ಸಿನಿಮಾ ಶುರುವಾದಾಗಲೇ ಇದು ಕನ್ನಡದ 'ಬಾಹುಬಲಿ'ಯಾಗಲಿದೆ ಎಂಬ ಭರವಸೆ ಹುಟ್ಟಿಸಿದ್ದ ಸಿನಿಮಾ. ಅದಕ್ಕೆ ತಕ್ಕಂತೆ 'ಬಾಹುಬಲಿ'ಗೆ ಕೆಲಸ ಮಾಡಿದ ವಿಎಫ್‍ಎಕ್ಸ್ ತಂತ್ರಜ್ಞರೇ ಈ ಸಿನಿಮಾಗೂ ಕೆಲಸ ಮಾಡಿದ್ದಾರೆ. ತೆರೆಯ ಮೇಲೊಂದು ಮ್ಯಾಜಿಕ್ ಕ್ರಿಯೇಟ್ ಮಾಡಲು ನೂರಾರು ನುರಿತ ತಂತ್ರಜ್ಞರು ಅವಿರತವಾಗಿ ಶ್ರಮಿಸಿದ್ದಾರೆ. ಅದr ಫಲ ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್​ನನಲ್ಲಿಯೇ ಎದ್ದು ಕಾಣುತ್ತೆ. ಕನ್ನಡ ಚಿತ್ರರಂಗವನ್ನ ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯೊ ಸಿನಿಮಾ ಇದಾಗಲಿದೆ ಎಂಬ ಸೂಚನೆಯನ್ನ ಕೇವಲ ಕೆಲವು ನಿಮಿಷಗಳ ಟ್ರೈಲರ್ ಹೇಳ್ತಿದೆ.

ಕಾರಣ:-7 - ಭೀಷ್ಮನ ಅವತಾರದಲ್ಲಿ ರೆಬೆಲ್ ಸ್ಟಾರ್ : ಇದು ಕಲಿಯುಗ ಕರ್ಣನ ಕೊನೆ ಸಿನಿಮಾ !

ರೆಬೆಲ್‍ಸ್ಟಾರ್ ನಮ್ಮನ್ನಗಲಿ 9 ತಿಂಗಳುಗಳಾಗ್ತಿದೆ. ಆದರೆ ಅವರು ನಮ್ಮೊಡನೆ ದೈಹಿಕವಾಗಿ ಇಲ್ಲದಿದ್ದರೂ, ಸೂರ್ಯಚಂದ್ರ ಇರೋವರೆಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಇದ್ದೇ ಇರ್ತಾರೆ. ಆದರೆ ಅವರನ್ನ ಇನ್ಮುಂದೆ ಬೆಳ್ಳಿತೆರೆ ಮೇಲೆ ನೋಡೋಕೆ ಸಿಗೋದಿಲ್ವಲ್ಲ ಅನ್ನೋ ನೋವು ಅಂಬಿ ಅಭಿಮಾನಿಗಳಿಗೆ ಕಾಡಿತ್ತು. 'ಕುರುಕ್ಷೇತ್ರ' ಮೂಲಕ ಮತ್ತೊಮ್ಮೆ ಅಂಬಿಯನ್ನ ಬೆಳ್ಳಿತೆರೆ ಮೇಲೆ ನೋಡೋ ಅವಕಾಶ ಒದಗಿ ಬರ್ತಿದೆ. ಅದು ಕೂಡ ಭೀಷ್ಮನಂತಹ ಪವರ್​ ಫುಲ್​ ಪಾತ್ರದ ಮೂಲಕ. ಹೀಗಾಗಿ ಅಂಬಿ ಅಭಿಮಾನಿಗಳು 'ಕುರುಕ್ಷೇತ್ರ' ನೋಡೋಕೆ ಕಾಯ್ತಿದ್ದಾರೆ. ಬೆಳ್ಳಿತೆರೆಯ ಮೇಲೆ ಅಂಬಿಯನ್ನ ಭೀಷ್ಮನಾಗಿ ಕಣ್ತುಂಬಿಕೊಳ್ಳೋ ಥ್ರಿಲ್‍ನಲ್ಲಿದ್ದಾರೆ.

ಕಾರಣ:-8 - ಕೃಷ್ಣನ ಪಾತ್ರಕ್ಕೆ ರವಿಮಾಮ ಮಾಡಿದ ತ್ಯಾಗ ಅಷ್ಟಿಷ್ಟಲ್ಲ..!

ಮಹಾಭಾರತದ ಮತ್ತೊಂದು ಪವರ್​ಫುಲ್​ ಪಾತ್ರ ಅಂದರೆ ಅದು ಕೃಷ್ಣನದ್ದು. ಈ ಪಾತ್ರಕ್ಕೆ ರವಿಚಂದ್ರನ್ ಆಯ್ಕೆಯಾಗಿದ್ದಾರೆ ಅಂದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಅರೇ ಇದು ಸಾಧ್ಯಾನಾ ಅಂತ ಮೂಗು ಮುರಿದಿದ್ದರು. ಆದರೆ ರವಿಚಂದ್ರನ್ ಈ ಪಾತ್ರವನ್ನ ಸವಾಲಾಗಿ ತೆಗೆದುಕೊಂಡರು.

ಪಾತ್ರಕ್ಕಾಗಿ ಟ್ರಿಮ್ ಅಂಡ್ ಸ್ಲಿಮ್ ಆದ ರವಿಮಾಮ. ಮೊದಲ ಬಾರಿಗೆ ಗಡ್ಡಮೀಸೆಯನ್ನ ತೆಗೆಸಿ ಕ್ಲೀನ್ ಶೇವ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಇಷ್ಟದ ಬಟರ್ ಚಿಕನ್ ಅನ್ನ ತಿಂಗಳಾನುಗಟ್ಟಲೇ ತ್ಯಜಿಸಿದ್ದಾರೆ. ಈ ಮೂಲಕ ಕೃಷ್ಣನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ತನುಮನವನ್ನೇ ಅರ್ಪಿಸಿದ್ದಾರೆ ಕ್ರೇಜಿಸ್ಟಾರ್. ಹೀಗಾಗಿ ಈ ಪಾತ್ರವನ್ನ ತೆರೆಮೇಲೆ ಕಾಣೋ ಕಾತರ ಕನ್ನಡ ಚಿತ್ರರಸಿಕರಲ್ಲಿದೆ.

ಕಾರಣ;-9 - 5 ಭಾಷೆಗಳಲ್ಲಿ ತೆರೆಗೆ ಬರ್ತಿರೋ ಸಿನಿಮಾ !

'ಕುರುಕ್ಷೇತ್ರ' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ದರ್ಶನ್ ಸಿನಿಮಾವೊಂದು ಇದೇ ಮೊದಲ ಬಾರಿಗೆ 5 ಭಾಷೆಗಳಲ್ಲಿ ತೆರೆಕಾಣ್ತಾ ಇರೋದು.. ಈ ಮೂಲಕ ದರ್ಶನ್ ಅವರ ಮಾರ್ಕೆಟ್ ಕೂಡ ಈ ಸಿನಿಮಾದಿಂದ ಹೆಚ್ಚುತ್ತಿದೆ.

ಒಟ್ಟಾರೆ ಇದಿಷ್ಟು ಹೈಲೈಟ್ಸ್ ಅಷ್ಟೇ. 'ಕುರುಕ್ಷೇತ್ರ' ಸಿನಿಮಾ ನೋಡಲು ಇಂತಹ ಇನ್ನೂ ಹಲವಾರು ಕಾರಣಗಳನ್ನ ಅಭಿಮಾನಿಗಳು ಕೊಡ್ತಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್ ಭರ್ಜರಿಯಾಗಿ ಸದ್ದು ಮಾಡ್ತಿದೆ. ಹಾಡುಗಳು ಹುಚ್ಚು ಹಿಡಿಸಿವೆ. ಮೇಕಿಂಗ್ ಅಂತೂ ವ್ಹಾವ್ ಅನ್ನುವಂತಿದೆ. ಇಷ್ಟೆಲ್ಲಾ ಕಾರಣಗಳು ಒಟ್ಟಾಗಿರೋ 'ಕುರುಕ್ಷೇತ್ರ' ಕನ್ನಡದ ಮಹೋನ್ನತ ಸಿನಿಮಾವಾಗೋದ್ರಲ್ಲಿ ಅನುಮಾನವೇ ಇಲ್ಲ.

(ಆನಂದ್ ಸಾಲುಂಡಿ) 

Amy Jackson: ಅರೆನಗ್ನವಾಗಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿಚ್ಚನ ನಾಯಕಿ..!

First published:August 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ